logo
ಕನ್ನಡ ಸುದ್ದಿ  /  ಜೀವನಶೈಲಿ  /  Highest Retirement Age: ಇಸ್ರೇಲ್‌ನಿಂದ ಡೆನ್ಮಾರ್ಕ್‌ವರೆಗೆ; ಯಾವ ದೇಶದಲ್ಲಿ ಎಷ್ಟಿದೆ ಉದ್ಯೋಗಿಗಳ ನಿವೃತ್ತಿ ವಯಸ್ಸು

Highest Retirement Age: ಇಸ್ರೇಲ್‌ನಿಂದ ಡೆನ್ಮಾರ್ಕ್‌ವರೆಗೆ; ಯಾವ ದೇಶದಲ್ಲಿ ಎಷ್ಟಿದೆ ಉದ್ಯೋಗಿಗಳ ನಿವೃತ್ತಿ ವಯಸ್ಸು

Raghavendra M Y HT Kannada

Feb 05, 2024 06:02 PM IST

google News

ಭಾರತ ಸೇರಿದಂತೆ ಯಾವ ಯಾವ ದೇಶದಲ್ಲಿ ನಿವೃತ್ತಿಯ ವಯಸ್ಸು ಎಷ್ಟಿದೆ ಅನ್ನೋದನ್ನು ತಿಳಿಯಿರಿ

  • Highest Retirement Age: ಭಾರತದಲ್ಲಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸು 60 ವರ್ಷವಿದೆ. ಆದರೆ ಭಾರತ ಸೇರಿದಂತೆ ದೇಶದಿಂದ ದೇಶಕ್ಕೆ ನಿವೃತ್ತಿಯ ವಯಸ್ಸಿನಲ್ಲಿ ವ್ಯತ್ಯಾಸವಿದೆ.

ಭಾರತ ಸೇರಿದಂತೆ ಯಾವ ಯಾವ ದೇಶದಲ್ಲಿ ನಿವೃತ್ತಿಯ ವಯಸ್ಸು ಎಷ್ಟಿದೆ ಅನ್ನೋದನ್ನು ತಿಳಿಯಿರಿ
ಭಾರತ ಸೇರಿದಂತೆ ಯಾವ ಯಾವ ದೇಶದಲ್ಲಿ ನಿವೃತ್ತಿಯ ವಯಸ್ಸು ಎಷ್ಟಿದೆ ಅನ್ನೋದನ್ನು ತಿಳಿಯಿರಿ

Highest Retirement Age in World: ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಹೆಚ್ಚಿಸುವ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಳೆದ ವರ್ಷ ಫ್ರಾನ್ಸ್‌ನಾದ್ಯಂತ ದೊಡ್ಡ ಪ್ರತಿಭಟನೆ ನಡೆದಿದ್ದವು. ಅಧ್ಯಕ್ಷ ಎಮ್ಯಾನುವೇಲ್ ಮ್ಯಾಕ್ರನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಭಾರತದಲ್ಲಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸು 60 ವರ್ಷವಿದೆ. ಅದೇ ಖಾಸಗಿ ವಲಯದ ಉದ್ಯೋಗಿಗಳ ನಿವೃತ್ತಿಯ ವಯಸ್ಸು 58 ರಿಂದ 60 ವರ್ಷದವರೆಗೆ ಇದೆ. ಆದರೆ ಭಾರತಕ್ಕೆ ಹೋಲಿಸಿದರೆ ಇತರೆ ದೇಶಗಳಲ್ಲಿ ನಿವೃತ್ತಿಯ ವಯಸ್ಸಿನಲ್ಲಿ ಭಾರಿ ಅಂತರವಿದೆ. ಯಾವ ದೇಶದಲ್ಲಿ ನಿವೃತ್ತಿಯ ವಯಸ್ಸು ಎಷ್ಟಿದೆ. ಅಲ್ಲಿನ ಕಾನೂನು ಏನು ಹೇಳುತ್ತದೆ ಅನ್ನೋದನ್ನ ತಿಳಿಯೋಣ.

ಕೆಲವು ದೇಶಗಳು ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬ ಮಾತನ್ನು ನಂಬುತ್ತವೆ.ಯಾಕೆಂದರೆ ಅಲ್ಲಿನ ನಾಗರಿಕರು ತಮ್ಮ ವೃದ್ಧಾಪ್ಯದಲ್ಲೂ ಸಮಾಜಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ. ಬೇರೆ ದೇಶಗಳಲ್ಲಿ ಹೋಲಿಸಿದರೆ ಭಾರತದಲ್ಲಿ ಕಡಿಮೆ ನಿವೃತ್ತಿಯ ವಯಸ್ಸಿದೆ. ಹೀಗಾಗಿ ಅತಿ ಹೆಚ್ಚು ನಿವೃತ್ತಿಯ ವಯಸ್ಸು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ. ನಿವೃತ್ತಿಯ ವಯಸ್ಸು 65 ಕ್ಕಿಂತ ಹೆಚ್ಚಿರುವ ದೇಶಗಳನ್ನು ನೋಡೋಣ.

ಐಸ್‌ಲ್ಯಾಂಡ್, ಇಸ್ರೇಲ್, ನಾರ್ವೆಯಲ್ಲಿ ಅತಿ ಹೆಚ್ಚು ನಿವೃತ್ತಿಯ ವಯಸ್ಸು

ಐಸ್‌ಲ್ಯಾಂಡ್ - ಈ ದೇಶದಲ್ಲಿ ನಿವೃತ್ತಿಯ ಸರಾಸರಿ ವಯಸ್ಸು 67 ವರ್ಷ. ಇದು ಅಚ್ಚರಿ ಎನಿಸಿದರೂ ಸತ್ಯ. 40 ವರ್ಷಗಳ ಸೇವೆಯ ನಂತರ ಖಾಸಗಿ ವಲಯದಲ್ಲಿ 67ನೇ ವಯಸ್ಸಿಗೆ ನಿವೃತ್ತಿಯಾಗುತ್ತಾರೆ. ಆ ನಂತರ ಇಲ್ಲಿನ ನಾಗರಿಕರು ಪಿಂಚಣಿಗೆ ಅರ್ಹರಾಗಿರುತ್ತಾರೆ. ಐಸ್‌ಲ್ಯಾಂಡ್‌ನಲ್ಲಿ ಪಿಂಚಣಿ ಪಡೆಯಬೇಕಾದರೆ ಪಿಂಚಣಿ ನಿಧಿಯ ಸದಸ್ಯರಾಗಿರಬೇಕು. ವೇತನದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಪಾವತಿಸಬೇಕು. ಉದ್ಯೋಗಿಗಳು ತಮ್ಮ ವೇತನದಲ್ಲಿ ಶೇಕಡಾ 4 ರಷ್ಟು ಪಿಂಚಣಿಗಾಗಿ ನೀಡಿದರು ಉದ್ಯೋಗದಾತರು ಶೇಕಡಾ 11.5 ರಷ್ಟು ಪಾಲನ್ನು ನೀಡುತ್ತಾರೆ.

ಇಸ್ರೇಲ್ - 2004 ರಿಂದ ಇಸ್ರೇಲ್‌ನಲ್ಲಿ ಉದ್ಯೋಗಿಗಳ ನಿವೃತ್ತಿಯನ್ನು 65 ರಿಂದ 67ಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರ ನಿವೃತ್ತಿಯ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚಿಸಲಾಗಿದೆ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ರಾಷ್ಟ್ರೀಯ ವಿಮಾ ಸಂಸ್ಥೆಯಿಂದ ನಾಗರಿಕ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ನಾರ್ವೆ - ಈ ದೇಶದಲ್ಲಿ 2011 ರಿಂದ ಸಾಮಾನ್ಯ ನಿವೃತ್ತಿಯ ವಯಸ್ಸು 67 ವರ್ಷಗಳು. ಸಾರ್ವಜನಿಕ ಪಿಂಚಣಿ ಯೋಜನೆಯು ಆಕ್ಚುರಿಯಲ್ ನ್ಯೂಟ್ರಾಲಿಟಿಯ ಆಧಾರದ ಮೇಲೆ 62-75 ವರ್ಷಗಳ ವರೆಗೆ ಕೆಲಸ ಮಾಡುವ ಆಯೋಜನೆಯನ್ನು ಪರಿಚಿಯಿಸಿದೆ.

ನೆದರ್‌ಲ್ಯಾಂಡ್ಸ್‌ನಲ್ಲಿ 2020 ರಿಂದ ನಿವೃತ್ತಿಯ ವಯಸ್ಸನ್ನು 66 ವರ್ಷ 4 ತಿಂಗಳಾಗಿತ್ತು. ಆದರೆ 2024ರಲ್ಲಿ ಹೊಸದಾಗಿ ಶಾಸನವನ್ನು ರೂಪಿಸುವ ಮೂಲಕ ಈ ಮಿತಿಯನ್ನು 67 ವರ್ಷಕ್ಕೆ ಹೆಚ್ಚಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಸರಾಸರಿ ನಿವೃತ್ತಿಯ ವಯಸ್ಸು 66 ವರ್ಷಗಳಿವೆ. 1960ರ ಜುಲೈ 1 ಕ್ಕಿಂತ ಮೊದಲು ಜನಿಸಿದ ಆಸೀಸ್ ಜನರು ನಿವೃತ್ತಿಯ ಪ್ರಯೋಜನಗಳನ್ನು ಪಡೆಯಲು ಕನಿಷ್ಠ 55 ವರ್ಷ ಪೂರೈಸಿರಬೇಕು. 1964ರ ಜೂನ್ 30ರ ನಂತರ ಜನಿಸಿದವರು ಕನಿಷ್ಠ ವಯಸ್ಸು 60 ವರ್ಷ ಆಗಿದ್ದಾಗ ಅಂತಹ ಉದ್ಯೋಗಿಗಳು ಪಿಂಚಣಿಗೆ ಅರ್ಹರಾಗಿರರುತ್ತಾರೆ.

ಐರ್ಲೆಂಡ್‌ನಲ್ಲಿ 67, ಯುಕೆಯಲ್ಲಿ ಪ್ರಸ್ತುತ 66 (76ಕ್ಕೆ ಏರಿಸುವ ನಿರೀಕ್ಷೆ ಇದೆ), ಅಮೆರಿಕದಲ್ಲಿ 66 ವರ್ಷ 8 ತಿಂಗಳು, ಜಮರ್ನಿಯಲ್ಲಿ 65 ವರ್ಷ, ಡೆನ್ಮಾರ್ಕ್‌ನಲ್ಲಿ 66 ವರ್ಷ (2023ರ ವೇಳೆಗೆ 68ಕ್ಕೆ ಹೆಚ್ಚಾಗುವ ಸಾಧ್ಯತೆ), ಪೋರ್ಚುಗಲ್‌ನಲ್ಲಿ 66. 5 ತಿಂಗಳು, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಚಿಲಿ, ಫಿನ್‌ಲ್ಯಾಂಡ್, ಜಪಾನ್, ಮೆಕ್ಸಿಕೊ, ನ್ಯೂಜಿಲೆಂಡ್, ಪೋಲೆಂಡ್, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್‌ನಲ್ಲಿ ನಿವೃತ್ತಿಯ ವಯಸ್ಸು ಕ್ರಮವಾಗಿ 65 ವರ್ಷವಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ