logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿವೃತ್ತಿ ಜೀವನಕ್ಕೆ ಹಣಕಾಸು ಯೋಜನೆ ರೂಪಿಸುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ನಿವೃತ್ತಿ ಜೀವನಕ್ಕೆ ಹಣಕಾಸು ಯೋಜನೆ ರೂಪಿಸುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

Jayaraj HT Kannada

Jun 23, 2024 04:34 PM IST

google News

ನಿವೃತ್ತಿ ಜೀವನಕ್ಕೆ ಹಣಕಾಸು ಯೋಜನೆ ರೂಪಿಸುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

    • ನಿವೃತ್ತಿ ಬದುಕಿಗೆ ಅಗತ್ಯವಿರುವ ಹಣಕಾಸು ಯೋಜನೆಯನ್ನು ವೃತ್ತಿ ಜೀವನದಲ್ಲಿಯೇ ರೂಪಿಸುವುದು ಜಾಣತನ. ನಿವೃತ್ತಿ ಬದುಕಿಗೆ ಬೇಕಾದ ಹೂಡಿಕೆ ಕುರಿತು ಯೋಜನೆ ರೂಪಿಸುವ ಮುನ್ನ ಈ ಅಂಶಗಳನ್ನು ಓದಿಕೊಳ್ಳಿ.
ನಿವೃತ್ತಿ ಜೀವನಕ್ಕೆ ಹಣಕಾಸು ಯೋಜನೆ ರೂಪಿಸುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ
ನಿವೃತ್ತಿ ಜೀವನಕ್ಕೆ ಹಣಕಾಸು ಯೋಜನೆ ರೂಪಿಸುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ (google/CollegeVested)

ವೃತ್ತಿ ಬದುಕಿಗೂ ನಿವೃತ್ತಿ ನಂತರದ ಜೀವನಕ್ಕೂ ತುಂಬಾ ವ್ಯತ್ಯಾಸಗಳಿವೆ. ನಿವೃತ್ತಿಯು ವ್ಯಕ್ತಿಯೊಬ್ಬರ ಜೀವನದಲ್ಲಿ ಮಹತ್ವದ ಪರಿವರ್ತನೆಯಾಗಿದೆ. ವಯಸ್ಸಿನ ಕಾಳಜಿ ಒಂದೆಡೆಯಾದರೆ, ನಿಯಮಿತ ಕೆಲಸ ಮತ್ತು ಮಾಸಿಕ ಆದಾಯ ಬರುವುದು ನಿಲ್ಲುತ್ತದೆ. ನಿವೃತ್ತಿ ಬದುಕಿನಲ್ಲಿ ನೆಮ್ಮದಿಯಿಂದ ಬದುಕುವ ಖುಷಿ ಇದ್ದರೂ, ಆರ್ಥಿಕ ಸ್ವಾತಂತ್ಯ ಇಲ್ಲದಿರುವುದು ಅಷ್ಟೇ ಸತ್ಯ. ನಿವೃತ್ತಿ ನಂತರವೂ ಸ್ವಾಭಿಮಾನಿದಿಂದ ಬದುಕುವಂತಾಗಲೂ, ಜೀವನವನ್ನು ಆನಂದಿಸಲು ಕೆಲವೊಬ್ಬರಿಗೆ ಸಂಪಾದನೆಯ ಅಗತ್ಯವಿರುತ್ತದೆ. ಹೀಗಾಗಿ ವೃತ್ತಿ ಬದುಕಿನ ಸಮಯದಲ್ಲಿ ನಿವೃತ್ತಿ ಜೀವನವನ್ನು ಚೆನ್ನಾಗಿ ಯೋಜಿಸದಿದ್ದರೆ, ಆರ್ಥಿಕ ಸಮಸ್ಯೆ ಎದುರಾಗಬಹುದು. ಆರೋಗ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅನಿಶ್ಚಿತ. ಹೀಗಾಗಿ ದೈಹಿಕ ಹಾಗೂ ಭಾವನಾತ್ಮಕ ಯೋಗಕ್ಷೇಮಕ್ಕಾಗಿ ನಿವೃತ್ತಿ ಬದುಕಿಗೊಂದು ಸ್ಪಷ್ಟ ಯೋಜನೆಯ ಅಗತ್ಯವಿದೆ.

ನಿವೃತ್ತಿ ಯೋಜನೆ ಎಂದರೆ ಇದರಲ್ಲಿ ಹಲವು ಅಂಶಗಳು ಸೇರುತ್ತವೆ. ವಾಸಕ್ಕೊಂದು ಸೂರು, ಅಗತ್ಯ ವೈದ್ಯಕೀಯ ವಿಮೆ, ಎಸ್ಟೇಟ್ ಯೋಜನೆ ಮತ್ತು ವಿಲ್, ಇತರ ಹಣಕಾಸು ಸಂಪನ್ಮೂಲಗಳು ಇರುವುದು ಬಹಳ ಮುಖ್ಯ. ಇದಕ್ಕಾಗಿ ವೃತ್ತಿ ಜೀವನದಲ್ಲೇ ಸಮಗ್ರವಾಗಿ ಯೋಚಿಸುವುದು ಉತ್ತಮ. ಸಂಪಾದನೆ ಇರುವಾಗಲೇ ನಿವೃತ್ತಿ ಹಣಕಾಸು ಯೋಜನಾ ಪ್ರಕ್ರಿಯೆಯನ್ನು ಆರಂಭಿಸುವುದು ಉತ್ತಮ. ಇದಕ್ಕಾಗಿ ಸಾಧ್ಯವಾದಷ್ಟು ಬೇಗ ಯೋಜನೆಗಳನ್ನು ರೂಪಿಸಿ.

ಉಳಿತಾಯ ಕಾರ್ಯಕ್ರಮವನ್ನು ನೀವು ಹೇಗೆ ಕಾರ್ಯಗತಗೊಳಿಸುತ್ತೀರಿ?

ನಿವೃತ್ತಿ ಯೋಜನೆ ಕುರಿತು ವೃತ್ತಿಪರರ ವರ್ತನೆಗಳು ಮತ್ತು ಕ್ರಿಯೆಗಳು ಜೀವನದ ವಿವಿಧ ಹಂತಗಳಲ್ಲಿ ಬದಲಾಗುತ್ತವೆ. ಸಂಪಾದನೆಯ ಆರಂಭಿಕ ವರ್ಷಗಳಲ್ಲಿ ನಿವೃತ್ತಿ ಯೋಜನೆ ಅಮೂರ್ತವೆಂದು ತೋರಬಹುದು. ಆದರೆ ಬದುಕು ಸಾಗಿದಂತೆ, ಜೀವನದಲ್ಲಿ ಅನುಭವ ಹೆಚ್ಚಿದಂತೆ ಆರಂಭಿಕ ಉಳಿತಾಯವು ಮುಂದಿನ ಮೂವತ್ತಕ್ಕೂ ಹೆಚ್ಚು ವರ್ಷಗಳವರೆಗೆ ನೆರವಾಗಲಿದೆ ಎಂಬ ಅಭಿಪ್ರಾಯ ಮೂಡುತ್ತದೆ.

ವೃತ್ತಿ ಬದುಕಿನ ಮಧ್ಯಮ ಅವಧಿಯಲ್ಲಿ ಆದಾಯ ಹೆಚ್ಚಾಗುತ್ತದೆ. ಆಗ ನಿವೃತ್ತಿ ಯೋಜನೆಗಾಗಿ ಹಣವನ್ನು ಮೀಸಲಿಡುವುದು ನಿರ್ಣಾಯಕ. ಇದರಲ್ಲಿ ವೈದ್ಯಕೀಯ ವಿಮೆ ಮಾಡಿಸುವುದು ಅತ್ಯಂತ ಮಹತ್ವದ್ದಾಗಿದೆ. ನಿವೃತ್ತಿಗೆ ಒಂದು ದಶಕಕ್ಕೂ ಮೊದಲು, ಪ್ರಾಥಮಿಕ ಮೂಲದಿಂದ ಆದಾಯವು ನಿಂತ ನಂತರ ನಿಯಮಿತ ಆದಾಯಕ್ಕಾಗಿ ಹೂಡಿಕೆಗಳನ್ನು ಸುಗಮಗೊಳಿಸುವುದು ಉತ್ತಮ. ನಿವೃತ್ತಿ ಸಮಯದಲ್ಲಿ, ಉಳಿತಾಯಗಳು ಆರೋಗ್ಯಕರ ಮತ್ತು ಶಾಂತಿಯುತ ಜೀವನಕ್ಕೆ ನೆರವಾಗುತ್ತದೆ.

ಎಲ್ಲಿ ಹೂಡಿಕೆ ಮಾಡಬೇಕು?

ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಸಾಮಾನ್ಯ ಪ್ರಶ್ನೆ. ಬ್ಯಾಂಕ್‌ನಲ್ಲಿ ಫಿಕ್ಸ್‌ಡ್ ಡೆಪಾಸಿಟ್ ಹೂಡಿಕೆ ಮಾಡಬೇಕೇ ಅಥವಾ ಈಕ್ವಿಟಿ ಷೇರುಗಳು ಉತ್ತಮವೇ ಎಂಬ ಪ್ರಶ್ನೆಗಳು ಇರುತ್ತವೆ. ನಿವೃತ್ತಿ ಬದುಕಿಗಾಗಿ ದೀರ್ಘಕಾಲೀನ ಕಾರ್ಯತಂತ್ರದ ಅಗತ್ಯವಿದೆ. ನಿವೃತ್ತಿ ಯೋಜನೆಯನ್ನು ಮಾರುಕಟ್ಟೆ ಅಪಾಯಕ್ಕೆ ಒಡ್ಡಬಾರದು ಎಂಬ ಸಾಮಾನ್ಯ ಮಿಥ್ಯೆ ಚಾಲ್ತಿಯಲ್ಲಿದೆ. ಇದಕ್ಕಾಗಿ ಇಂಡೆಕ್ಸ್ ಸ್ಟಾಕ್‌ಗಳು, ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳು ಅಥವಾ ಮ್ಯೂಚುವಲ್ ಫಂಡ್‌ಗಳ ವೈವಿಧ್ಯಮಯ ಪೋರ್ಟ್ ಫೋಲಿಯೊ ಒಂದು ಸರಳ ತಂತ್ರವಾಗಿದೆ. ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಬಹುದು. ಮಾರುಕಟ್ಟೆ ಅಪಾಯವನ್ನು ನಿಭಾಯಿಸಲು ಮಾರುಕಟ್ಟೆ ಸೈಕಲ್‌ ಗಮನಿಸಿಕೊಂಡು ಹೂಡಿಕೆ ಮಾಡಿ. ಹೆಚ್ಚಿನ ಜನರು ಬ್ಯಾಂಕ್ ಸ್ಥಿರ ಠೇವಣಿಗಳು (FD), ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಮುಂತಾದ ಸ್ಥಿರ ಆದಾಯದ ಸೆಕ್ಯುರಿಟಿಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ.

ಹಣಕಾಸಿನ ಕನಿಷ್ಠ ಜ್ಞಾನವಿದ್ದವರೂ ಕೂಡಾ ಬ್ಯಾಂಕ್ ಸ್ಥಿರ ಠೇವಣಿಯನ್ನು ನಿರ್ವಹಿಸಬಹುದು. ತುರ್ತು ನಿಧಿಗಳಿಗೆ ಇದು ಅತ್ಯಗತ್ಯ. ಭವಿಷ್ಯ ನಿಧಿಗಳು ಇಇಇ ಪ್ರಯೋಜನಗಳನ್ನು ನೀಡುವುದರಿಂದ ಮೊದಲ ಸಂಬಳದಿಂದಲೇ ನಿವೃತ್ತಿ ಯೋಜನೆ ಆರಂಭಿಸಲು ಉತ್ತಮ ಆಯ್ಕೆಯಾಗಿದೆ.

ಸ್ವತ್ತುಗಳು ಮತ್ತು ಅಪಾಯ ನಿರ್ವಹಣೆ

ಇದ್ದ ಬದ್ದ ಎಲ್ಲಾ ಕ್ಷೇತ್ರಗಳಲ್ಲೂ ಹೂಡಿಕೆ ಮಾಡುವ ಬದಲಿಗೆ, ಕಡಿಮೆ ಹೂಡಿಕೆಗಳನ್ನು ನಿಭಾಯಿಸುವುದು ಮಹತ್ವದ್ದಾಗಿದೆ. ಕೇವಲ 2-3 ಬ್ಯಾಂಕ್ ಖಾತೆಗಳು ಮತ್ತು ಕೆಲವು ಫೋಲಿಯೊಗಳು ಮತ್ತು ಸ್ಟಾಕ್‌ಗಳನ್ನು ನಿರ್ವಹಿಸುವುದು ಸ್ವತ್ತುಗಳ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

(ಈ ಬರಹದ ಮೂಲ ಇಂಗ್ಲೀಷ್‌ ಲೇಖನವನ್ನು ಕೆಜೆ ಸೋಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಹಣಕಾಸು ಮತ್ತು ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಕಲ್ಪಕಂ ಗೋಪಾಲಕೃಷ್ಣನ್ ಬರೆದಿದ್ದಾರೆ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರದ್ದಾಗಿದೆ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ