ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ

ಆರ್‌ಬಿಐ ನಿಯಮ ಪ್ರಕಾರ, ಕ್ರೆಡಿಟ್ ಕಾರ್ಡ್‌ ಬಿಲ್ ಪಾವತಿ ವಹಿವಾಟು ಬಿಬಿಪಿಎಸ್ ಮೂಲಕ ನಡೆಯಬೇಕು. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು. ಯಾಕೆಂದರೆ, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ. ವಿವರ ಇಲ್ಲಿದೆ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ (ಸಾಂಕೇತಿಕ)
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1 ರಿಂದ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು, 34 ಬ್ಯಾಂಕುಗಳ ಪೈಕಿ 8 ಮಾತ್ರ ಬಿಬಿಪಿಎಸ್‌ ಸೇರ್ಪಡೆ ಕಾರಣ (ಸಾಂಕೇತಿಕ)

ನವದೆಹಲಿ/ ಬೆಂಗಳೂರು: ನೀವು ಕ್ರೆಡಿಟ್ ಕಾರ್ಡ್‌ ಬಳಕೆದಾರರಾಗಿದ್ದರೆ ಇದು ನಿಮಗೆ ಸಂಬಂಧಿಸಿದ್ದ ಸುದ್ದಿ. ಜುಲೈ 1 ರಿಂದ ಕೆಲವು ಪ್ಲಾಟ್‌ಫಾರ್ಮ್‌ಗಳ ಮೂಲಕ ಕ್ರೆಡಿಟ್ ಕಾರ್ಡ್‌ ಬಿಲ್ ಪಾವತಿಸುವುದು ಕಷ್ಟವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಜಾರಿಗೊಳಿಸಿದ ಹೊಸ ನಿಯಮಗಳನ್ನು ಬ್ಯಾಂಕಿಂಗ್ ಸೇವೆ ಸಂಸ್ಥೆಗಳು ಅನುಸರಿಸುವಲ್ಲಿ ವಿಳಂಬ ಉಂಟಾಗಿರುವುದು ಈ ಆತಂಕಕ್ಕೆ ಕಾರಣ.

ಇದೇ ತಿಂಗಳ 30ನೇ ತಾರೀಕಿನ ಬಳಿಕ ಎಲ್ಲ ಕ್ರೆಡಿಟ್ ಕಾರ್ಡ್ ಪಾವತಿಗಳು ಭಾರತ್ ಬಿಲ್ ಪಾವತಿ ವ್ಯವಸ್ಥೆ (Bharat Bill Payment System) ಅಥವಾ ಬಿಬಿಪಿಎಸ್‌ (BBPS) ಮೂಲಕವೇ ನಡೆಯಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ. ಸದ್ಯದ ಮಾಹಿತಿ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಏಕ್ಸಿಸ್ ಬ್ಯಾಂಕ್‌ಗಳು ಇನ್ನೂ ಬಿಬಿಪಿಎಸ್‌ ಜೊತೆಗೆ ತಮ್ಮ ಜಾಲವನ್ನು ಸೇರ್ಪಡೆಗೊಳಿಸಿಲ್ಲ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಥರ್ಡ್-ಪಾರ್ಟಿ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸುವುದನ್ನು ಮುಂದಿನ ತಿಂಗಳಿನಿಂದ ನಿಲ್ಲಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಬಯಸಿದೆ. ಈ ಎಲ್ಲಾ ಬಿಲ್ ಪಾವತಿಗಳನ್ನು ಕೇಂದ್ರೀಯ ಬಿಲ್ ಪಾವತಿ ಜಾಲವಾದ ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್‌)ಗೆ ಸೇರಿಸುವ ಉಪಕ್ರಮ ಇದು. ಆದರೆ, 34 ಬ್ಯಾಂಕುಗಳ ಪೈಕಿ ಕೇವಲ 8 ಬ್ಯಾಂಕುಗಳಷ್ಟೇ ಈ ವ್ಯವಸ್ಥೆಗೆ ಸೇರ್ಪಡೆಯಾಗಿವೆ. ಹೀಗಾಗಿ ಇದರ ತತ್‌ಕ್ಷಣದ ಜಾರಿ ಕಷ್ಟವಾಗಬಹುದು.

ಬಿಬಿಪಿಎಸ್ ಮತ್ತು ಟಾಪ್ 10 ಬ್ಯಾಂಕ್

ಭಾರತದ ಟಾಪ್ 10 ಬ್ಯಾಂಕುಗಳು (ಆರ್‌ಬಿಐ ಏಪ್ರಿಲ್‌ ದತ್ತಾಂಶ ಪ್ರಕಾರ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ, ಬಿಬಿಪಿಎಸ್ ಜೊತೆಗೆ ಜೋಡಣೆ)

ಬ್ಯಾಂಕ್‌ಕ್ರೆಡಿಟ್ ಕಾರ್ಡ್‌ ಸಂಖ್ಯೆಬಿಬಿಪಿಎಸ್ ಜೊತೆಗೆ ಜೋಡಣೆ 
ಎಚ್‌ಡಿಎಫ್‌ಸಿ ಬ್ಯಾಂಕ್‌20.8 ಕೋಟಿಆಗಿಲ್ಲ
ಎಸ್‌ಬಿಐ ಕಾರ್ಡ್‌19 ಕೋಟಿಆಗಿದೆ
ಐಸಿಐಸಿಐ ಬ್ಯಾಂಕ್17 ಕೋಟಿಆಗಿಲ್ಲ
ಏಕ್ಸಿಸ್ ಬ್ಯಾಂಕ್14.2 ಕೋಟಿಆಗಿಲ್ಲ
ಕೊಟಾಕ್ ಮಹಿಂದ್ರಾ ಬ್ಯಾಂಕ್‌6 ಕೋಟಿಆಗಿದೆ
ಯೆಸ್ ಬ್ಯಾಂಕ್ 4.8 ಕೋಟಿಆಗಿಲ್ಲ
ಇಂಡಸ್ ಇಂಡ್ ಬ್ಯಾಂಕ್2.9 ಕೋಟಿಆಗಿದೆ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 2.6 ಕೋಟಿಆಗಿಲ್ಲ
ಬ್ಯಾಂಕ್ ಆಫ್ ಬರೋಡಾ ಕಾರ್ಡ್2.5 ಕೋಟಿಆಗಿದೆ
ಫೆಡರಲ್ ಬ್ಯಾಂಕ್‌0.96 ಕೋಟಿಆಗಿದೆ

ಟಾಪ್ ಹತ್ತು ಬ್ಯಾಂಕುಗಳ ದತ್ತಾಂಶ ಗಮನಿಸಿದರೆ ಕೇವಲ 5 ಬ್ಯಾಂಕುಗಳು ಮಾತ್ರವೇ ಬಿಬಿಪಿಎಸ್ ಜೊತೆಗೆ ಜೋಡಣೆಯಾಗಿದೆ. ಒಟ್ಟು 34 ಬ್ಯಾಂಕುಗಳ ಪೈಕಿ ಕೇವಲ 8 ಬ್ಯಾಂಕ್‌ಗಳು ಬಿಬಿಪಿಎಸ್‌ನಲ್ಲಿ ಕ್ರೆಡಿಟ್ ಕಾರ್ಡ್‌ಗಳ ವಹಿವಾಟು ನಡೆಸುತ್ತಿವೆ.

ಈವರೆಗೆ, ಕೇವಲ 8 ಬ್ಯಾಂಕ್‌ಗಳು BBPS ನಲ್ಲಿ ಬಿಲ್ ಪಾವತಿಯನ್ನು ಸಕ್ರಿಯಗೊಳಿಸಿವೆ. ಆದರೆ, ಒಟ್ಟು 34 ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಅನುಮತಿಸಲಾಗಿದೆ. ಪಾವತಿ ಉದ್ಯಮವು ಈ ಜೋಡಣೆ ಗಡುವನ್ನು 90 ದಿನಗಳವರೆಗೆ ವಿಸ್ತರಿಸಲು ಒತ್ತಾಯಿಸಿದೆ.

ಏನಿದು ಬಿಬಿಪಿಎಸ್‌

ಭಾರತೀಯ ಬಿಲ್ ಪಾವತಿ ವ್ಯವಸ್ಥೆ ಎಂದರೇನು? ಇದು ಸಹಜ ಕುತೂಹಲದ ಪ್ರಶ್ನೆ. ಇದು ಭಾರತದ ಬಿಲ್ ಪಾವತಿಯ ಸಮಗ್ರ ವ್ಯವಸ್ಥೆಯಾಗಿದ್ದು, ಇದು ಗ್ರಾಹಕರಿಗೆ ಆನ್‌ಲೈನ್ ಬಿಲ್ ಪಾವತಿ ಸೇವೆಯನ್ನು ಒದಗಿಸುತ್ತದೆ. ಬಿಲ್ ಪಾವತಿಗೆ ಇದು ಪರಸ್ಪರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ ಇಂಟರ್‌ಆಪರೇಬಲ್ ವೇದಿಕೆಯಾಗಿದೆ. ಈ ವ್ಯವಸ್ಥೆಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಂದರೆ ಎನ್‌ಪಿಸಿಐಯಲ್ಲಿ ಕಾರ್ಯನಿರ್ವಹಿಸುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.