ವಿದ್ಯಾರ್ಥಿಗಳು, ಗೃಹಿಣಿಯರು ಆನ್‌ಲೈನ್‌ನಲ್ಲಿ ಕೈತುಂಬಾ ಹಣ ಗಳಿಸುವುದು ಹೇಗೆ? ನಿಮ್ಮನ್ನು ಲಕ್ಷಾಧಿಪತಿಗಳಾನ್ನಾಗಿ ಮಾಡುವ ವೆಬ್‌ಸೈಟ್‌ಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ವಿದ್ಯಾರ್ಥಿಗಳು, ಗೃಹಿಣಿಯರು ಆನ್‌ಲೈನ್‌ನಲ್ಲಿ ಕೈತುಂಬಾ ಹಣ ಗಳಿಸುವುದು ಹೇಗೆ? ನಿಮ್ಮನ್ನು ಲಕ್ಷಾಧಿಪತಿಗಳಾನ್ನಾಗಿ ಮಾಡುವ ವೆಬ್‌ಸೈಟ್‌ಗಳಿವು

ವಿದ್ಯಾರ್ಥಿಗಳು, ಗೃಹಿಣಿಯರು ಆನ್‌ಲೈನ್‌ನಲ್ಲಿ ಕೈತುಂಬಾ ಹಣ ಗಳಿಸುವುದು ಹೇಗೆ? ನಿಮ್ಮನ್ನು ಲಕ್ಷಾಧಿಪತಿಗಳಾನ್ನಾಗಿ ಮಾಡುವ ವೆಬ್‌ಸೈಟ್‌ಗಳಿವು

Online Jobs for Housewife and Students: ಆನ್‌ಲೈನ್‌ ಮೂಲಕ ಹಣ ಗಳಿಸುವುದು ಹೇಗೆ? ಮನೆಯಲ್ಲಿಯೇ ಕುಳಿತು ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಮಾಡುವ ಕೆಲಸಗಳು ಇವೆಯೇ? ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಬಯಸುವವರಿಗೆ ನೆರವಾಗುವ ವಿವಿಧ ಫ್ರೀಲ್ಯಾನ್ಸಿಂಗ್‌ ವೆಬ್‌ಸೈಟ್‌ಗಳ ವಿವರ ಇಲ್ಲಿದೆ.

ವಿದ್ಯಾರ್ಥಿಗಳು, ಗೃಹಿಣಿಯರು ಆನ್‌ಲೈನ್‌ನಲ್ಲಿ ಕೈತುಂಬಾ ಹಣ ಗಳಿಸುವುದು ಹೇಗೆ?
ವಿದ್ಯಾರ್ಥಿಗಳು, ಗೃಹಿಣಿಯರು ಆನ್‌ಲೈನ್‌ನಲ್ಲಿ ಕೈತುಂಬಾ ಹಣ ಗಳಿಸುವುದು ಹೇಗೆ? (Photo Credit: Canva)

ಬೆಂಗಳೂರು: ಆನ್‌ಲೈನ್‌ ಮೂಲಕ ಹಣ ಗಳಿಸುವುದು ಹೇಗೆ? ಮನೆಯಲ್ಲಿಯೇ ಕುಳಿತು ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಮಾಡುವ ಕೆಲಸಗಳು ಇವೆಯೇ? ಗೃಹಿಣಿಯರು ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡುವುದು ಹೇಗೆ? ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಹೋಗುತ್ತಲೇ ಆನ್‌ಲೈನ್‌ ಮೂಲಕ ಗಳಿಕೆ ಮಾಡುವುದು ಹೇಗೆ? ಹೀಗೆ, ಆನ್‌ಲೈನ್‌ನಲ್ಲಿ ಕಿಸೆ ತುಂಬಿಸುವಂತಹ ಏನಾದರೂ ಕೆಲಸ ಇದೆಯೇ? ಎಂದು ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಎಲ್ಲರೂ ಹುಡುಕುತ್ತ ಇದ್ದಾರೆ.

ಆನ್‌ಲೈನ್‌ ವಂಚನೆಯ ಕುರಿತು ಎಚ್ಚರವಿರಲಿ

ಈ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಗೂಗಲ್‌ನಲ್ಲಿ work from home jobs for students, online part time jobs for students in mobile, online jobs for students, online jobs for housewife ಎಂದೆಲ್ಲ ಹುಡುಕಿದಾಗ ನಿಮ್ಮನ್ನು ಮೋಸಗೊಳಿಸಲು ಸಾಕಷ್ಟು ಲಿಂಕ್‌ಗಳು ಇರುತ್ತವೆ. ಡೇಟಾ ಎಂಟ್ರಿ ಜಾಬ್‌ ಮಾಡಿ ತಿಂಗಳಿಗೆ 50 ಸಾವಿರ ರೂಪಾಯಿ ಗಳಿಸಿ, ಮೊಬೈಲ್‌ನಲ್ಲಿ ಇಮೇಲ್‌ ಕಳುಹಿಸುವ ಕೆಲಸ ಮಾಡಿ ದಿನಕ್ಕೆ 2000 ರೂಪಾಯಿ ಗಳಿಸಿ ಎಂದೆಲ್ಲ ಜಾಬ್‌ ಆಫರ್‌ಗಳು ಕಾಣಿಸಬಹುದು. ಇವುಗಳಲ್ಲಿ ಬೆರಳೆಣಿಕೆಯ ಕೆಲವು ಜಾಬ್‌ಗಳು ನಿಮಗೆ ತಿಂಗಳಿಗೆ ಕೆಲವು ಸಾವಿರ ರೂಪಾಯಿ ಗಳಿಸಲು ನೆರವಾಗಬಹುದು. ಬಹುತೇಕ ವಂಚನೆ ಸ್ವರೂಪ ಹೊಂದಿವೆ. ಹೀಗಾಗಿ, ಇಂತಹ ಜಾಬ್‌ ಆಫರ್‌ಗಳಿಗೆ ಬೀಳದೆ ನಂಬಿಕಸ್ಥ ಆನ್‌ಲೈನ್‌ ಜಾಬ್‌ಗಳ ಕುರಿತು ಮಾತ್ರ ಗಮನ ನೀಡಿ. ಕೆಲವೊಂದು ಮೋಸದ ವೆಬ್‌ಸೈಟ್‌ಗಳು ನಿಮ್ಮಿಂದ ಹಣ ಕಸಿದುಕೊಳ್ಳಬಹುದು. ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕಬಹುದು. ಆನ್‌ಲೈನ್‌ ಮೋಸದ ಜಾಲಕ್ಕೆ ನೀವು ಬೀಳಬಹುದು. ಹೀಗಾಗಿ ಜಾಗೃತೆ ಇರಲಿ.

ಆನ್‌ಲೈನ್‌ನಲ್ಲಿ ಹಣ ಗಳಿಸಲು ಇರುವ ಅವಕಾಶಗಳು

ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ಆನ್‌ಲೈನ್‌ನಲ್ಲಿ ಕೆಲಸ ಮಾಡಲು ಬಯಸುವವರಿಗೆ ನೆರವಾಗುವ ಕೆಲವೊಂದು ಫ್ರೀಲ್ಯಾನ್ಸ್‌ ವೆಬ್‌ಸೈಟ್‌ಗಳ ಲಿಂಕ್‌ ಇಲ್ಲಿ ನೀಡಲಾಗಿದೆ.

ಫ್ರಿಲಾನ್ಸರ್‌.ಇನ್‌: ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತ ಇರುವ ಸಾಕಷ್ಟು ವಿದ್ಯಾರ್ಥಿಗಳು, ಗೃಹಿಣಿಯರು, ಗಿಗ್‌ ವರ್ಕರ್‌ಗಳು, ಪಾರ್ಟ್‌ ಟೈಮ್‌ ವರ್ಕರ್‌ಗಳು ಇದರಲ್ಲಿ ಕೆಲಸ ಮಾಡುತ್ತಾರೆ. ಇದರಲ್ಲಿ ಫುಲ್‌ ಟೈಮ್‌ ಕೆಲಸ ಮಾಡುತ್ತ ಕೈತುಂಬಾ ಹಣ ಸಂಪಾದನೆ ಮಾಡುವವರು ಇದ್ದಾರೆ. ಫ್ರೀಲ್ಯಾನ್ಸರ್‌ ವೆಬ್‌ಸೈಟ್‌ಗೆ ಲಿಂಕ್‌: www.freelancer.in

ಅಪ್‌ವರ್ಕ್‌ (upwork): ಇದು ಕೂಡ ಎಲ್ಲಾ ಬಗೆಯ ಫ್ರೀಲ್ಯಾನ್ಸಿಂಗ್‌ ಜಾಬ್‌ಗಳನ್ನು ಹೊಂದಿರುವ ತಾಣ. ಇಲ್ಲಿ ಕೂಡ ಉದ್ಯೋಗ ನೀಡವವರು ಮತ್ತು ಉದ್ಯೋಗ ಮಾಡುವವರ ನಡುವಿನ ಕೊಂಡಿಯಾಗಿ ಅಪ್‌ವರ್ಕ್‌ ಕೆಲಸ ಮಾಡುತ್ತದೆ.

ಪೀಪಲ್‌ ಫಾರ್‌ ಅವರ್‌: ಫ್ರೀಲ್ಯಾನ್ಸಿಂಗ್‌ ಉದ್ಯೋಗ ಹುಡುಕಾಟ ನಡೆಸುವವರಿಗೆ ಈ ವೆಬ್‌ ತಾಣವೂ ಸಾಕಷ್ಟು ಉದ್ಯೋಗಾವಕಾಶ ನೀಡಬಹುದು. ಈ ತಾಣದಲ್ಲೂ ನೀವು ಹೆಸರು ನೋಂದಾಯಿಸಿಕೊಳ್ಳಬಹುದು.

ಗುರು.ಕಾಂ: ಭಾರತೀಯರಿಗೆ ಫ್ರೀಲ್ಯಾನ್ಸ್‌ ಉದ್ಯೋಗ ದೊರಕಿಸಿಕೊಡಲು ನೆರವಾಗುವ ಇನ್ನೊಂದು ತಾಣ ಗುರು.ಕಾಂ. ಇಲ್ಲಿಯೂ ನೀವು ಪ್ರೊಫೈಲ್‌ ರಚಿಸಬಹುದು. ಇವಿಷ್ಟು ಮಾತ್ರವಲ್ಲದೆ fiverr, toptal, 99designs, flexjobs ಸೇರಿದಂತೆ ಹಲವು ಪ್ರಮುಖ ವೆಬ್‌ತಾಣಗಳು ಮನೆಯಲ್ಲಿಯೇ ಕುಳಿತು ಫ್ರೀಲ್ಯಾನ್ಸಿಂಗ್‌ ಉದ್ಯೋಗ ಮಾಡಲು ಬಯಸುವವರಿಗೆ ಅವಕಾಶಗಳನ್ನು ಒದಗಿಸುತ್ತವೆ.

ಈ ಅಂಶಗಳನ್ನು ಗಮನಿಸಿ

ಫ್ರೀಲ್ಯಾನ್ಸಿಂಗ್‌ ಉದ್ಯೋಗವೆಂದರೆ ಆನ್‌ಲೈನ್‌ನಲ್ಲಿ ಸುಲಭವಾಗಿ ಹಣ ಗಳಿಸುವ ವಿಧಾನವಲ್ಲ. ಆಫ್‌ಲೈನ್‌ನಲ್ಲಿ ಹೇಗೆ ಕಷ್ಟಪಟ್ಟು ದುಡಿಯುವಿರೋ ಅಷ್ಟೇ ಕಷ್ಟಪಟ್ಟು ಇಲ್ಲೂ ದುಡಿಯಬೇಕಾಗುತ್ತದೆ. ಈ ರೀತಿಯ ಫ್ರೀಲ್ಯಾನ್ಸಿಂಗ್‌ ವೆಬ್‌ಸೈಟ್‌ಗಳಲ್ಲಿ ನೀವು ಮಾಡಿದ ಕೆಲಸಕ್ಕೆ ಕ್ಲಯೆಂಟ್‌ಗಳು ಲೈಕ್‌ ಅಥವಾ ಡಿಸ್‌ಲೈಕ್‌ ನೀಡಬಹುದು. ನಿಮಗೆ ಸ್ಟಾರ್‌ ರೇಟಿಂಗ್‌ ಹೆಚ್ಚು ದೊರಕಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಲಯೆಂಟ್‌ಗಳಿಂದ ಪ್ರಾಜೆಕ್ಟ್‌ಗಳು ದೊರಕುತ್ತವೆ. ಆನ್‌ಲೈನ್‌ನಲ್ಲಿ ನಂಬಿಕಸ್ಥ ಉದ್ಯೋಗಿಯಾಗಿ ಬೆಳೆಯುತ್ತ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಬಹುದು.

ಆನ್‌ಲೈನ್‌ನಲ್ಲಿ ಹಲವು ಫ್ರಿಲ್ಯಾನ್ಸಿಂಗ್‌ ವೆಬ್‌ಸೈಟ್‌ಗಳು ಇವೆ. ಹಾಗಂತ ಎಲ್ಲವನ್ನೂ ಈಗ ಬಳಸಲು ಹೋಗಬೇಡಿ. ಫ್ರೀಲ್ಯಾನ್ಸರ್‌.ಇನ್‌, ಗುರು.ಕಾಂ, ಅಪ್‌ವರ್ಕ್‌ ಮುಂತಾದ ಪ್ರಮುಖ ವೆಬ್‌ ತಾಣಗಳಲ್ಲಿ ಆರಂಭದಲ್ಲಿ ಪ್ರೊಫೈಲ್‌ ಮಾಡಿ. ಇವುಗಳಲ್ಲಿ ಲಭ್ಯಗಳಿರುವ ಜಾಬ್‌ಗಳಿಗೆ ಅರ್ಜಿ ಸಲ್ಲಿಸ್ತಾ ಇರಿ. ಆರಂಭದಲ್ಲಿ ಸಣ್ಣಪುಟ್ಟ ಪ್ರಾಜೆಕ್ಟ್‌ ಸಿಗಬಹುದು. ನಿಮ್ಮ ಪರಿಣತಿ, ಆನ್‌ಲೈನ್‌ ಫ್ರಿಲ್ಯಾನ್ಸಿಂಗ್‌ ಪ್ರಸೆನ್ಸ್‌, ನಿಮ್ಮ ಫೋರ್ಟ್‌ಫೋಲಿಯೊ, ನೀವು ಹಿಂದೆ ಕೆಲಸ ಮಾಡಿದ ಅನುಭವಗಳು, ಅವುಗಳಿಗೆ ದೊರಕಿರುವ ಸ್ಟಾರ್‌ಗಳಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ನಿಮಗೆ ಆನ್‌ಲೈನ್‌ನಲ್ಲಿ ದೊರಕಬಹುದು. ಒಂದು ರಾತ್ರಿ ಬೆಳಗಾಗುವುದರೊಳಗೆ ನೀವು ಲಕ್ಷಾಧಿಪತಿ ಆಗ್ತಿನಿ ಅಂತ ಕನಸು ಕಾಣಬೇಡಿ. ಆರಂಭದಲ್ಲಿ ಸರಿಯಾದ ಎಫರ್ಟ್‌ ಹಾಕಿ, ಖಂಡಿತಾ ಫ್ರಿಲ್ಯಾನ್ಸಿಂಗ್‌ನಲ್ಲಿ ನಿಮಗೆ ಯಶಸ್ಸು ದೊರಕುತ್ತದೆ.

ನಿಮ್ಮಲ್ಲಿ ಸರಿಯಾದ ಸ್ಕಿಲ್ಸ್‌ ಇದ್ದರೆ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ನಿಮಗೆ ಬೇಡಿಕೆ ಇರುತ್ತದೆ. ಎಲ್ಲರಲ್ಲಿಯೂ ವಿಶೇಷವಾದ ಪ್ರತಿಭೆ ಇರುತ್ತದೆ. ಆದರೆ, ಕೆಲವರು ಮಾತ್ರ ತಮ್ಮ ಪ್ರತಿಭೆಯನ್ನು ಗುರುತಿಸಿ ಬಳಸಿ ಹಣ ಸಂಪಾದನೆ ಮಾಡುತ್ತಾರೆ.

Whats_app_banner