logo
ಕನ್ನಡ ಸುದ್ದಿ  /  ಜೀವನಶೈಲಿ  /  Tds Deduction: ನಿಮ್ಮ ಸಂಬಳದಲ್ಲಿ ಟಿಡಿಎಸ್‌ ಕಟ್‌ ಆಗೋದು ಕಡಿಮೆ ಆಗ್ಬೇಕಾ? ಹಾಗಿದ್ರೆ ಈ ಸಲಹೆ ಪಾಲಿಸಿ

TDS Deduction: ನಿಮ್ಮ ಸಂಬಳದಲ್ಲಿ ಟಿಡಿಎಸ್‌ ಕಟ್‌ ಆಗೋದು ಕಡಿಮೆ ಆಗ್ಬೇಕಾ? ಹಾಗಿದ್ರೆ ಈ ಸಲಹೆ ಪಾಲಿಸಿ

HT Kannada Desk HT Kannada

Jan 09, 2024 07:00 AM IST

ನಿಮ್ಮ ಸಂಬಳದಲ್ಲಿ ಟಿಡಿಎಸ್‌ ಕಡಿತವನ್ನು ಕಡಿಮೆ ಮಾಡಿಕೊಳ್ಳಬೇಕಾ? ಇಲ್ಲಿದೆ 8 ಪ್ರಮುಖ ಸಲಹೆಗಳು.

    • ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಉದ್ಯೋಗಿಗಳಿಗೆ ತಮ್ಮ ಹೂಡಿಕೆ ಮತ್ತು ವೆಚ್ಚಗಳ ವಿವರದ ಆದಾಯ ತೆರಿಗೆ ಘೋಷಣೆಯನ್ನು (ಇನ್‌ಕಮ್‌ ಟ್ಯಾಕ್ಸ್‌ ಡಿಕ್ಲರೇಷನ್‌) ಸಲ್ಲಿಸಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆಗಳೇ ತಮ್ಮ ಉದ್ಯೋಗಿಗಳಿಗೆ ವೇತನ ಪಾವತಿಸುವ ಸಂದರ್ಭದಲ್ಲೇ ಕಡಿತಗೊಳಿಸುವ ಟಿಡಿಎಸ್‌ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿವೆ 8 ಸಲಹೆಗಳು.
ನಿಮ್ಮ ಸಂಬಳದಲ್ಲಿ ಟಿಡಿಎಸ್‌ ಕಡಿತವನ್ನು ಕಡಿಮೆ ಮಾಡಿಕೊಳ್ಳಬೇಕಾ? ಇಲ್ಲಿದೆ 8 ಪ್ರಮುಖ ಸಲಹೆಗಳು.
ನಿಮ್ಮ ಸಂಬಳದಲ್ಲಿ ಟಿಡಿಎಸ್‌ ಕಡಿತವನ್ನು ಕಡಿಮೆ ಮಾಡಿಕೊಳ್ಳಬೇಕಾ? ಇಲ್ಲಿದೆ 8 ಪ್ರಮುಖ ಸಲಹೆಗಳು. (mint)

ಭಾರತದ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಉದ್ಯೋಗಿಗಳ ಸಂಬಳದ ಆದಾಯವು ಮಿತಿಯನ್ನು ಮೀರಿದರೆ, ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಯ ಸಂಬಳದಿಂದ ತೆರಿಗೆಯನ್ನು ( ಟ್ಯಾಕ್ಸ್‌ ಡಿಡಕ್ಟೆಡ್‌ ಆಟ್‌ ಸೋರ್ಸ್‌–ಟಿಡಿಎಸ್) ಕಡಿತಗೊಳಿಸುತ್ತಾರೆ. ಪ್ರತಿ ಹಣಕಾಸು ವರ್ಷ ಕೊನೆಗೊಳ್ಳುವ ಮೊದಲು ಆ ಆರ್ಥಿಕ ವರ್ಷದಲ್ಲಿ ನೌಕರರು ತಾವು ಮಾಡಿದ ಹೂಡಿಕೆ ಮತ್ತು ವೆಚ್ಚಗಳ ವಿವರಗಳಿರುವ ಆದಾಯ ತೆರಿಗೆ ಘೋಷಣೆಯನ್ನು ಸಲ್ಲಿಸಲು ಕೇಳಲಾಗುತ್ತದೆ. ಉದ್ಯೋಗಿಯು ತೋರಿಸುವ ಹೂಡಿಕೆ ಅಥವಾ ಉಳಿತಾಯಗಳ ನಿಜವಾದ ಪುರಾವೆಗಳ ಆಧಾರದ ಮೇಲೆ ಹೆಚ್ಚಿನ ತೆರಿಗೆಗಳನ್ನು ಕಡಿತಗೊಳ್ಳುವುದುದರಿಂದ ತಪ್ಪಿಸಿಕೊಳ್ಳಬಹುದು. ಅಥವಾ ನಿಮ್ಮ ಮುಂದಿನ ವರ್ಷಗಳಲ್ಲಿ ಕಡಿಮೆ ತೆರಿಗೆ ಕಡಿತಗೊಳ್ಳುವಂತೆ ಮಾಡಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನಿಮ್ಮ ಸಂಬಳದ ಮೂಲದಲ್ಲಿ ಟಿಡಿಸ್‌ಅನ್ನು ಕಡಿಮೆ ಮಾಡಿಕೊಳ್ಳಲು 8 ಮಾರ್ಗಗಳಿವೆ. ಅವು ಯಾವುದೆಂದರೆ

1. ಮನೆ ಬಾಡಿಗೆ ಭತ್ಯೆ

ಮನೆ ಬಾಡಿಗೆ ಭತ್ಯೆ ಪಡೆಯಲು ಉದ್ಯೋಗಿಯು ಆಶ್ರಯದಾತನ ಹೆಸರು, ವಿಳಾಸ ಒದಗಿಸಬೇಕಾಗುತ್ತದೆ. ಆರ್ಥಿಕ ವರ್ಷದಲ್ಲಿ ನೀವು ಪಾವತಿಸಿದ ಒಟ್ಟೂ ಬಾಡಿಗೆಯು 1 ಲಕ್ಷ ರೂ. ಕ್ಕಿಂತ ಹೆಚ್ಚಾದಾಗ ಆಶ್ರಯದಾತನ ಪ್ಯಾನ್‌ ವಿವಿರಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಆಶ್ರಯದಾತನ ಪ್ಯಾನ್‌ ಲಭ್ಯವಿಲ್ಲದಿದ್ದರೆ ನಮೂನೆ ಸಂಖ್ಯೆ 60 ರಲ್ಲಿ ಫೋಷಣೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

2. ಆಹಾರ ಕೂಪನ್‌ಗಳು

ನಿಮ್ಮ ಕಂಪನಿಯು ಆಹಾರ ಕೂಪನ್‌ಗಳನ್ನು ಒದಗಿಸದಿದ್ದರೆ, ನೀವು ಕೇಳಿ ಪಡೆಯಬಹುದು. ಮೀಲ್‌ ವೋಚರ್‌ನಲ್ಲಿ ಪ್ರತಿ ಊಟಕ್ಕೆ 50 ರೂ. ವಿನಾಯಿತಿ ಇದೆ. ಅಂದರೆ ತಿಂಗಳ ಕೆಲಸದ ಅವಧಿ 25 ದಿನವಾಗಿದ್ದರೆ, ದಿನಕ್ಕೆ ಎರಡು ಊಟದಂತೆ 100 ರೂ. ಎಂದು ಪರಿಗಣಿಸಿ, ನೀವು 2,500 ರೂ ವರೆಗೆ ತೆರಿಗೆ ವಿನಾಯತಿಯನ್ನು ಪಡೆದುಕೊಳ್ಳಬಹುದು.

3. ಟ್ರಸ್ಟ್‌ ಮತ್ತು ಚಾರಿಟಿಗಳಿಗೆ ನೀಡಿದ ದೇಣಿಗೆಗಳು

ನೀವು ಕೆಲವು ದೇಣಿಗೆಗಳನ್ನು ನೀಡಿದ್ದರೆ ಅದನ್ನೂ ಕೂಡಾ ಟಿಡಿಎಸ್‌ಗೆ ಬಳಸಿಕೊಳ್ಳಬಹುದು. ಅಧಿಕೃತ ಟ್ರಸ್ಟ್‌, ಅಧಿಸೂಚಿತ ದೇವಾಲಯಗಳು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ, ರಾಷ್ಟ್ರೀಯ ರಕ್ಷಣಾ ನಿಧಿ ಮುಂತಾದ ದತ್ತಿ ಸಂಸ್ಥೆಗಳು ಇದರಲ್ಲಿ ಸೇರಿವೆ. ಅವುಗಳಿಗೆ ನೀಡಲಾದ ಹಣಕ್ಕೆ ಉದ್ಯೋಗಿಯು ಎಲ್ಲಾ ವಿವರಗಳಿರುವ ಅಂದರೆ ಹೆಸರು ಮತ್ತು ವಿಳಾಸ ಹೊಂದಿರುವ ರಸೀದಿಯ ರೂಪದಲ್ಲಿರುವ ದೇಣಿಗೆ ಪುರಾವೆಗಳನ್ನು ಸಲ್ಲಿಸಬಹುದು. ಆ ರಸೀದಿಯಲ್ಲಿ ಟ್ರಸ್ಟ್‌ ಅಥವಾ ಸಂಸ್ಥೆಯ ಪ್ಯಾನ್‌ ನಂಬರ್‌, ದಾನಿಯ ಹೆಸರು, ನೋಂದಣಿ ಸಂಖ್ಯೆ ಇರಬೇಕು.

4. ಪ್ರಯಾಣ ಭತ್ಯೆ

ನಿಮ್ಮ ಸಂಬಳದಲ್ಲಿ ಪ್ರಯಾಣ ಭತ್ಯೆಯು ಒಳಗೊಂಡಿರದಿದ್ದರೆ, ಅದನ್ನು ಸೇರಿಸಲು ನೀವು ನಿಮ್ಮ ಉದ್ಯೋಗದಾತರಿಗೆ ವಿನಂತಿಸಬಹುದು. ತೆರಿಗೆ ಪಾವತಿಸುವ ಪ್ರತಿಯೊಬ್ಬ ನಾಗರಿಕನು ವಿನಾಯಿತಿಯನ್ನು ಕ್ಲೈಮ್ ಮಾಡುವ ಮೊದಲು ಪ್ರಯಾಣ ಭತ್ಯೆ ವೆಚ್ಚಗಳನ್ನು ಭರಿಸಬಹುದಾಗಿದೆ.

5. ವೈದ್ಯಕೀಯ ವಿಮಾ ಪ್ರೀಮಿಯಂ ಮತ್ತು ಕ್ಲೈಮ್

ಪ್ರತಿ ಆರ್ಥಿಕ ವರ್ಷದಲ್ಲಿ ಉದ್ಯೋಗಿಯು ಯಾವುದೇ ಆರೋಗ್ಯ ತಪಸಣಾ ರಸೀದಿಗಳು ಅಥವಾ ಬಿಲ್‌ಗಳನ್ನು ಸಹ ಟಿಡಿಎಸ್‌ ಕಡಿಮೆ ಮಾಡಿಕೊಳ್ಳಲು ಪ್ರಸ್ತುತ ಪಡಿಸಬಹುದು. ವಿಮಾ ಕಂಪನಿಗಳಿಂದ 80ಡಿ ತೆರಿಗೆ ಪ್ರಮಾಣ ಪತ್ರವನ್ನು ಒದಗಿಸಬಹುದು.

6. ನಿವೇಶನ ಆಸ್ತಿಗಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ

ನಿವೇಶನ ಆಸ್ತಿಗಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಯನ್ನು ನೀಡಬಹುದು. ಸಾಲ ನೀಡಿದವರ ಹೆಸರು, ವಿಳಾಸ ಮತ್ತು ಪ್ಯಾನ್ ಸೇರಿದಂತೆ ವಿವರಗಳು, ಸಾಲವನ್ನು ಪಡೆದ ದಿನಾಂಕ, ಇನ್ಸ್ಟಾಲ್‌ಮೆಂಟ್‌ ಮೊತ್ತ ಮತ್ತು ಬಡ್ಡಿದರದಂತಹ ವಿವರಗಳನ್ನು ಹೊಂದಿರುವ ಬ್ಯಾಂಕ್ ಅಥವಾ ಅಧಿಕೃತ ಸಂಸ್ಥೆ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

7. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)

ಹಣಕಾಸು ವರ್ಷದಲ್ಲಿ ಉದ್ಯೋಗಿಯು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಠೇವಣಿ ಮಾಡಿದ ಮೊತ್ತಕ್ಕೆ ಠೇವಣಿ ರಸೀದಿಯ ಪ್ರತಿ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಹೇಳಿಕೆಯ ಪ್ರತಿಗಳನ್ನು ಸಲ್ಲಿಸಬಹುದು.

8. ಸೆಕ್ಷನ್ 80C ಪ್ರಯೋಜನಗಳ ಮೂಲಕ ಟಿಡಿಎಸ್‌ ಉಳಿಸಿಕೊಳ್ಳಬಹುದು

ಸಂಬಳದ ಮೇಲೆ ಟಿಡಿಎಸ್‌ ಅನ್ನು ಉಳಿಸಲು ನೀವು ಸೆಕ್ಷನ್ 80C ಅಡಿಯಲ್ಲಿ ನೀವು ಮಾಡುವು ಹೂಡಿಕೆ (ಅಂದರೆ NSC, ULIP, PPF ಮುಂತಾದವುಗಳು) ಸಂಪೂರ್ಣ ಮೊತ್ತವನ್ನು ಟಿಡಿಎಸ್‌ ಉಳಿಸಿಕೊಳ್ಳಲು ಬಹಳಸಬಹುದು. ಸಂಬಳದಿಂದ ನಿಮ್ಮ ಟಿಡಿಎಸ್‌ ಅಥವಾ ತೆರಿಗೆ ಹೊರೆಣೆಯನ್ನು ಕಡಿಮೆ ಮಾಡಲು ಹೆಚ್ಚು ಆದ್ಯತೆಯ ಮಾರ್ಗಗಳಲ್ಲಿ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (PPF) ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಸಾರ್ವಜನಿಕ ಭವಿಷ್ಯ ನಿಧಿ (PPF) ನಿಮಗೆ ವಾರ್ಷಿಕ ಸುಮಾರು 1.5 ಲಕ್ಷ ರೂಪಾಯಿಗಳ ತೆರಿಗೆ ರಿಯಾಯಿತಿಯನ್ನು ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು