logo
ಕನ್ನಡ ಸುದ್ದಿ  /  ಜೀವನಶೈಲಿ  /  ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್: ನಟನ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ

ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್: ನಟನ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ

Priyanka Gowda HT Kannada

Oct 31, 2024 11:19 AM IST

google News

ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್: ನಟನ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ.

  • ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್. ಚಾರ್ಲಿ, ಸೀತಾ ರಾಮನ್ ಸಿನಿಮಾದಲ್ಲಿ ಅತ್ಯದ್ಭುತವಾಗಿ ನಟಿಸಿರುವ ಸಲ್ಮಾನ್‍ಗೆ ಮಲಯಾಳಂ ಚಿತ್ರರಂಗ ಮಾತ್ರವಲ್ಲ ದೇಶದೆಲ್ಲೆಡೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ಅಭಿನಯ ಮಾತ್ರವಲ್ಲ ಫಿಟ್ನೆಸ್‍ಗೂ ಇವರು ಅಪಾರ ಒತ್ತು ನೀಡುತ್ತಾರೆ. ನಟನ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ.

ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್: ನಟನ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ.
ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್: ನಟನ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ.

ದುಲ್ಕರ್ ಸಲ್ಮಾನ್ ಅಂದ್ರೆ ಅದೆಷ್ಟೋ ಹೆಣ್ಣುಮಕ್ಕಳ ಹಾಟ್ ಫೇವರಿಟ್. ಡಿಕ್ಯೂ ಎಂದು ಕರೆಯಲ್ಪಡುವ ಜನಪ್ರಿಯ ಮಲಯಾಳಂ ನಟ. ನೋಡಲು ಎಷ್ಟು ಸುಂದರವಾಗಿದ್ದರೂ, ನಟನೆಯೂ ಅಷ್ಟೇ ಅದ್ಭುತ. ಪ್ರತಿಭೆಯಿಂದಷ್ಟೇ ಜನಪ್ರಿಯವಲ್ಲ, ಫಿಟ್ನೆಸ್‍ಗೂ ಪ್ರಮುಖವಾಗಿ ಒತ್ತು ನೀಡುತ್ತಾರೆ. ಹೀಗಾಗಿ ಇವರು ದೇಶದೆಲ್ಲೆಡೆ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಆಹಾರಪ್ರೇಮಿಯಾಗಿದ್ದರೂ ಕೂಡ ದುಲ್ಕರ್ ಸಲ್ಮಾನ್ ತನ್ನ ವ್ಯಾಯಾಮದ ದಿನಚರಿಗೆ ನಿಷ್ಠನಾಗಿದ್ದಾರೆ. ಫಿಟ್ನೆಸ್‍ಗೆ ಒತ್ತು ನೀಡುವ ದುಲ್ಕರ್ ಸಲ್ಮಾನ್ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುತ್ತಾರೆ. 37ನೇ ವರ್ಷಕ್ಕೆ ಕಾಲಿಟ್ಟಿರುವ ನಟ ದುಲ್ಕರ್ ಅವರ ಫಿಟ್ನೆಸ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ದುಲ್ಕರ್ ಸಲ್ಮಾನ್ ಫಿಟ್ನೆಸ್

ನಟ ದುಲ್ಕರ್ ಸಲ್ಮಾನ್ ತಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಲು ನಿಯಮಿತವಾಗಿ ಜಿಮ್‌ಗೆ ಹೋಗುತ್ತಾರೆ. ಶೂಟಿಂಗ್ ಇರಲಿ ಇಲ್ಲದಿರಲಿ, ಸಲ್ಮಾನ್ ಎಲ್ಲಾ ಸಮಯದಲ್ಲೂ ಫಿಟ್ ಆಗಿರಲು ಇಷ್ಟಪಡುತ್ತಾರೆ. ಅದಕ್ಕಾಗಿ ಅವರು ನಿಯಮಿತವಾಗಿ ಜಿಮ್‌ಗೆ ಹೋಗುತ್ತಾರೆ. ಅವರು ಕಾರ್ಡಿಯೋ (ಟ್ರೆಡ್‌ಮಿಲ್‌ನಲ್ಲಿ ಸ್ಪ್ರಿಂಟ್) ಮತ್ತು ತೂಕದ ತರಬೇತಿ ವ್ಯಾಯಾಮಗಳನ್ನು ಹೆಚ್ಚಾಗಿ ಕೈಗೊಳ್ಳುತ್ತಾರೆ.

ಯೋಗ ಮತ್ತು ಧ್ಯಾನ: ಯೋಗ ಮತ್ತು ಧ್ಯಾನವು ಸಲ್ಮಾನ್ ಅವರ ಫಿಟ್‌ನೆಸ್‌ನ ಇತರ ಪ್ರಮುಖ ಅಂಶಗಳಾಗಿವೆ. ಅದು ಅವರ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯ, ತ್ವಚೆ ಮತ್ತು ಕೂದಲಿನ ಆರೈಕೆಗೂ ಸಹಾಯಕವಾಗಿದೆ. ಇದು ಅವರಿಗೆ ಶಾಂತವಾಗಿರಲು ಸಹಾಯ ಮಾಡುತ್ತದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ರಕ್ತ ಪರಿಚಲನೆ ಮತ್ತು ಗಮನವನ್ನು ಉತ್ತೇಜಿಸುತ್ತದೆ.

ದುಲ್ಕರ್ ಅವರ ಜೀವನಶೈಲಿ

ನಟ ದುಲ್ಕರ್ ಸಲ್ಮಾನ್ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ. ಸ್ಟಾರ್ ನಟ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಾರೆ. ಅದು ಅವರ ಒಟ್ಟಾರೆ ಫಿಟ್‌ನೆಸ್‌ಗೆ ಕೊಡುಗೆ ನೀಡುತ್ತದೆ. ವರದಿಗಳ ಪ್ರಕಾರ, ಅವರು ಪ್ರತಿ ರಾತ್ರಿ ಕನಿಷ್ಠ ಏಳು ಗಂಟೆಗಳ ನಿದ್ದೆ ಮಾಡುವುದಾಗಿ ತಿಳಿಸಿದ್ದಾರೆ. ಆಹಾರದ ಕಡುಬಯಕೆಗಳನ್ನು ನಿರ್ವಹಿಸಲು ಆರೋಗ್ಯಕರ ಪರ್ಯಾಯಗಳನ್ನು ಆರಿಸಿಕೊಳ್ಳುತ್ತಾರೆ. ಸಕ್ಕರೆ ಅಂಶವನ್ನು ಸೇವಿಸುವುದಿಲ್ಲ. ದೇಹವನ್ನು ಹೈಡ್ರೀಕರಿಸುವತ್ತ ಹೆಚ್ಚು ಗಮನ ಕೊಡುತ್ತಾರೆ. ದೇಹದಿಂದ ಟಾಕ್ಸಿನ್ ಹೊರಹಾಕಲು ದಿನವಿಡೀ ಎರಡರಿಂದ ಮೂರು ಲೀಟರ್ ನೀರು ಕುಡಿಯುತ್ತಾರೆ.

ಆಹಾರ ಪದ್ಧತಿ ಹೀಗಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಲ್ಮಾನ್ ಅವರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸಲು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ದೈನಂದಿನ ಉಪಹಾರವಾಗಿ ಇಡ್ಲಿ, ಅವಕಾಡೊ ಮತ್ತು ಮೊಟ್ಟೆಗಳನ್ನು ಸೇವಿಸುತ್ತಾರೆ. ಊಟ ಮತ್ತು ಭೋಜನಕ್ಕೆ, ನಟ ಬಹಳಷ್ಟು ಪ್ರೋಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿರುವ ಆಹಾರ ಸೇವಿಸುತ್ತಾರೆ. ಮುಖ್ಯವಾಗಿ ಮನೆಯಲ್ಲೇ ತಯಾರಿಸಿದ ಅಥವಾ ಮನೆಯೂಟವನ್ನೇ ಹೆಚ್ಚು ಇಷ್ಟಪಡುತ್ತಾರೆ.

ಅಲ್ಲದೆ, ಜಿಮ್‍ಗೆ ಹೋಗುವ ಮುನ್ನ ಅಥವಾ ದೇಹ ದಂಡಿಸುವ ಮುನ್ನ ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ನಂತರ ಪ್ರೋಟೀನ್ ಶೇಕ್ ಕುಡಿಯುತ್ತಾರೆ. ವರದಿಗಳ ಪ್ರಕಾರ, ಸಲ್ಮಾನ್ ವಾರದಲ್ಲಿ ಒಂದು ಅಥವಾ ಎರಡು ದಿನ ತಮ್ಮ ಡಯೆಟ್ ಅನ್ನು ಮೊಟಕುಗೊಳಿಸುತ್ತಾರೆ. ಸಲ್ಮಾನ್‌ಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಅದನ್ನು ತಿನ್ನಲು ಇಷ್ಟಪಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ