logo
ಕನ್ನಡ ಸುದ್ದಿ  /  ಜೀವನಶೈಲಿ  /  ರುಚಿಕರವಾದ ಕಡಲೆಕಾಯಿ-ಎಳ್ಳು ಲಾಡು ರೆಸಿಪಿ ಮಾಡುವುದು ತುಂಬಾ ಸಿಂಪಲ್: ಚಳಿಗಾಲದ ಆರೋಗ್ಯಕ್ಕೂ ಬೆಸ್ಟ್ ಈ ಸಿಹಿತಿಂಡಿ

ರುಚಿಕರವಾದ ಕಡಲೆಕಾಯಿ-ಎಳ್ಳು ಲಾಡು ರೆಸಿಪಿ ಮಾಡುವುದು ತುಂಬಾ ಸಿಂಪಲ್: ಚಳಿಗಾಲದ ಆರೋಗ್ಯಕ್ಕೂ ಬೆಸ್ಟ್ ಈ ಸಿಹಿತಿಂಡಿ

Priyanka Gowda HT Kannada

Dec 03, 2024 12:36 PM IST

google News

ರುಚಿಕರವಾದ ಕಡಲೆಕಾಯಿ-ಎಳ್ಳು ಲಾಡು ರೆಸಿಪಿ ಮಾಡುವುದು ತುಂಬಾ ಸಿಂಪಲ್: ಚಳಿಗಾಲದ ಆರೋಗ್ಯಕ್ಕೂ ಬೆಸ್ಟ್ ಈ ಸಿಹಿತಿಂಡಿ

  • ಚಳಿಗಾಲದ ವಿಶೇಷ ಸಿಹಿತಿಂಡಿಗಳಲ್ಲಿ ಕಡಲೆಕಾಯಿ-ಎಳ್ಳು ಲಾಡು ರೆಸಿಪಿಯೂ ಒಂದು. ಕಡಲೆಕಾಯಿ ಮತ್ತು ಎಳ್ಳುವಿನಿಂದ ತಯಾರಿಸಲಾಗುವ ಈ ಲಾಡುಗಳು ರುಚಿಕರವಾಗಿರುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತವೆ. ಈ ರೆಸಿಪಿ ಮಾಡುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ.

ರುಚಿಕರವಾದ ಕಡಲೆಕಾಯಿ-ಎಳ್ಳು ಲಾಡು ರೆಸಿಪಿ ಮಾಡುವುದು ತುಂಬಾ ಸಿಂಪಲ್: ಚಳಿಗಾಲದ ಆರೋಗ್ಯಕ್ಕೂ ಬೆಸ್ಟ್ ಈ ಸಿಹಿತಿಂಡಿ
ರುಚಿಕರವಾದ ಕಡಲೆಕಾಯಿ-ಎಳ್ಳು ಲಾಡು ರೆಸಿಪಿ ಮಾಡುವುದು ತುಂಬಾ ಸಿಂಪಲ್: ಚಳಿಗಾಲದ ಆರೋಗ್ಯಕ್ಕೂ ಬೆಸ್ಟ್ ಈ ಸಿಹಿತಿಂಡಿ

ಚಳಿಗಾಲ ಪ್ರಾರಂಭವಾದ ತಕ್ಷಣ ಜನರು ತಮ್ಮ ಆಹಾರದಲ್ಲಿ ರುಚಿಕರವಾದ ಮತ್ತು ಬೆಚ್ಚಗಿನ ಸಿಹಿ ತಿಂಡಿಯನ್ನು ಸವಿಯಲು ಇಷ್ಟಪಡುತ್ತಾರೆ. ಚಳಿಗಾಲದ ವಿಶೇಷ ಸಿಹಿತಿಂಡಿಗಳಲ್ಲಿ ಕಡಲೆಕಾಯಿ-ಎಳ್ಳು ಲಾಡು ರೆಸಿಪಿಯೂ ಒಂದು. ಕಡಲೆಕಾಯಿ ಮತ್ತು ಎಳ್ಳುವಿನಿಂದ ತಯಾರಿಸಲಾಗುವ ಈ ಲಾಡುಗಳು ರುಚಿಕರವಾಗಿರುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತವೆ. ಈ ಲಾಡು ವಿಶೇಷತೆಯೆಂದರೆ ನೀವು ಅವುಗಳನ್ನು ತಯಾರಿಸಿ ಹಲವಾರು ದಿನಗಳವರೆಗೆ ಸಂಗ್ರಹಿಸಬಹುದು. ಕಡಲೆಕಾಯಿ-ಎಳ್ಳು ಲಾಡು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಡಲೆಕಾಯಿ-ಎಳ್ಳು ಲಾಡು ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಕಡಲೆಕಾಯಿ-ಎಳ್ಳು -1 ಕಪ್, ಬಾದಾಮಿ- ಅರ್ಧ ಕಪ್, ಏಲಕ್ಕಿ ಪುಡಿ- 1 ಟೀ ಚಮಚ, ಸಕ್ಕರೆ ಪುಡಿ- 2 ಕಪ್, ತುಪ್ಪ- ಅರ್ಧ ಕಪ್, ಬಿಸಿ ಹಾಲು- 2 ಟೀ ಚಮಚ.

ತಯಾರಿಸುವ ವಿಧಾನ: ಕಡಲೆಕಾಯಿ-ಎಳ್ಳು ಲಾಡು ತಯಾರಿಸಲು ಮೊದಲು ಎಳ್ಳನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ. ಅವುಗಳ ಬಣ್ಣವು ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಪಾತ್ರೆಗೆ ಎಳ್ಳನ್ನು ಹಾಕಿ. ಬಳಿಕ ಕಡಲೆಕಾಯಿಯನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ. ಈಗ ಎರಡೂ ವಸ್ತುಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒರಟಾಗಿ ರುಬ್ಬಿ ಒಂದು ಬಟ್ಟಲಿನಲ್ಲಿ ಹಾಕಿಡಿ. ಈಗ ಬಾದಾಮಿಯನ್ನು ಮಿಕ್ಸಿಗೆ ಸೇರಿಸಿ ಅವುಗಳನ್ನು ಒರಟಾಗಿ ರುಬ್ಬಿಕೊಳ್ಳಿ. ಇದರ ನಂತರ, ಬಾಣಲೆಗೆ ಅರ್ಧ ಕಪ್ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ತುಪ್ಪ ಬಿಸಿಯಾದಾಗ, ಒರಟಾಗಿ ರುಬ್ಬಿದ ಬಾದಾಮಿಯನ್ನು ಸೇರಿಸಿ, ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಇದರ ನಂತರ, ಕಡಲೆಕಾಯಿಯ ಒರಟಾದ ಪುಡಿಯನ್ನು ಬಾಣಲೆಗೆ ಸೇರಿಸಿ, ಅದನ್ನು ಹುರಿಯಿರಿ. ಈಗ ಈ ಮಿಶ್ರಣಕ್ಕೆ ಒರಟಾಗಿ ರುಬ್ಬಿದ ಎಳ್ಳಿನ ಬೀಜಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ತಣ್ಣಗಾದ ನಂತರ, ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ 2 ಟೀ ಚಮಚ ಬಿಸಿ ಹಾಲು ಸೇರಿಸಿ ಕೈಗಳಿಂದ ಮಿಶ್ರಣ ಮಾಡಿ.

ಲಾಡು ತಯಾರಿಸಲು ಮಿಶ್ರಣವು ಸಿದ್ಧವಾದಾಗಾ ನಿಮ್ಮ ಕೈಯಲ್ಲಿ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಒತ್ತಿ, ಲಾಡುಗಳನ್ನು ಕಟ್ಟಿ. ಎಲ್ಲಾ ಲಾಡುಗಳನ್ನು ಮಾಡಿದ ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಸಿಹಿಗಾಗಿ ಇಲ್ಲಿ ಸಕ್ಕರೆಯನ್ನು ಉಪಯೋಗಿಸಲಾಗಿದೆ. ಸಕ್ಕರೆ ಬದಲು ಬೆಲ್ಲವನ್ನು ಕೂಡ ಉಪಯೋಗಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ