ಚಿಕನ್ 65 ತಿಂದಿರುವಿರಿ, ಕ್ಯಾಬೇಜ್ 65 ಸವಿದಿದ್ದೀರಾ; ಬಹಳ ಸಿಂಪಲ್ಲಾಗಿ ತಯಾರಾಗುವ ಈ ರೆಸಿಪಿ ಮಾಡುವುದು ಹೀಗೆ
Dec 16, 2024 01:36 PM IST
ಕ್ಯಾಬೇಜ್ 65 ರೆಸಿಪಿ ಮಾಡುವ ವಿಧಾನ ಇಲ್ಲಿದೆ
ನೀವು ಎಂದಾದರೂ ಕ್ಯಾಬೇಜ್ 65 ರೆಸಿಪಿ ಸವಿದಿದ್ದೀರಾ. ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ ನೋಡಿ. ಬಹಳ ರುಚಿಕರವಾಗಿರುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. ಸ್ನಾಕ್ಸ್ ಆಗಿಯೂ ತಿನ್ನಬಹುದು. ಅನ್ನದ ಜತೆ, ಚಪಾತಿ ಜತೆ ಅಥವಾ ಸೈಡ್ ಡಿಶ್ ಆಗಿಯೂ ಸವಿಯಬಹುದು. ಒಮ್ಮೆ ತಿಂದು ನೋಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಇಲ್ಲಿದೆ ಪಾಕವಿಧಾನ.
ಚಿಕನ್ 65 ರೆಸಿಪಿ ತಿಂದಿರುವಿರಿ. ಆದರೆ, ಎಂದಾದರೂ ಎಲೆಕೋಸಿನ ಗರಿಗರಿಯಾದ ಫ್ರೈ ರೆಸಿಪಿ ಅಥವಾ ಕ್ಯಾಬೇಜ್ 56 ರೆಸಿಪಿ ಟ್ರೈ ಮಾಡಿರುವಿರಾ. ಬಹಳ ರುಚಿಕರವಾಗಿರುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. ಸ್ನಾಕ್ಸ್ ಆಗಿಯೂ ತಿನ್ನಬಹುದು, ಅನ್ನದ ಜತೆ, ಚಪಾತಿ ಜತೆ ಅಥವಾ ಸೈಡ್ ಡಿಶ್ ಆಗಿಯೂ ಸವಿಯಬಹುದು. ಒಮ್ಮೆ ತಿಂದು ನೋಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಈ ರುಚಿಕರವಾದ ಎಲೆಕೋಸು ಹಾಗೂ ಕ್ಯಾಬೇಜ್ 65 ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಎಲೆಕೋಸು 65 ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಮಧ್ಯಮ ಗಾತ್ರದ ಎಲೆಕೋಸು- ಸುಮಾರು 800 ಗ್ರಾಂ, ಅಕ್ಕಿ ಹಿಟ್ಟು- ಕಾಲು ಕಪ್, ಮೈದಾ- ಕಾಲು ಕಪ್, ಮೆಣಸಿನ ಪುಡಿ- ಎರಡು ಟೀ ಚಮಚ, ಜೀರಿಗೆ ಪುಡಿ- 1 ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ- ಒಂದು ಚಿಟಿಕೆ, ಹಸಿ ಮೆಣಸಿನಕಾಯಿ ಸಾಸ್- ಒಂದು ಟೀ ಚಮಚ, ಟೊಮೆಟೊ ಕೆಚಪ್- ಎರಡು ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಕರಿಬೇವಿನ ಎಲೆ- 10 ರಿಂದ 12.
ಮಾಡುವ ವಿಧಾನ: ಮೊದಲು ಎಲೆಕೋಸನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
- ಕತ್ತರಿಸಿದ ಎಲೆಕೋಸನ್ನು ಒಂದು ತಟ್ಟೆಯಲ್ಲಿ ಹಾಕಿ. ಇದಕ್ಕೆ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ, ಹಸಿಮೆಣಸಿನಕಾಯಿ ಸಾಸ್, ಟೊಮೆಟೊ ಕೆಚಪ್, ಉಪ್ಪು ಸೇರಿಸಿ ಮಿಶ್ರಣ ಮಾಡಿ.
- ಕತ್ತರಿಸಿದ ಎಲೆಕೋಸುಗಳನ್ನು ಹಿಸುಕದೆ ನಿಧಾನವಾಗಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಅದರ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಮತ್ತೆ ಮಿಶ್ರಣ ಮಾಡಿ.
- ಸ್ಟೌವ್ ಮೇಲೆ ಪಾತ್ರೆಯನ್ನಿಟ್ಟು ಕರಿಯಲು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಕಲಸಿದ ಎಲೆಕೋಸುಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ.
- ಈ ಎಲೆಕೋಸನ್ನು ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಎಣ್ಣೆಗೆ ಹಾಕಿದ ತಕ್ಷಣ ಸೌಟು ತೆಗೆಯದೆ ಒಂದೆರಡು ನಿಮಿಷ ಬಿಡಿ. ಅದರ ನಂತರ ಉರಿಯನ್ನು ಸ್ವಲ್ಪ ಹೆಚ್ಚಿಸಿ ಫ್ರೈ ಮಾಡಿ.
- ಎಲೆಕೋಸು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ, ಅದನ್ನು ಹೊರತೆಗೆಯಿರಿ. ತಟ್ಟೆಗೆ ಒಂದು ಟಿಶ್ಯೂ ಪೇಪರ್ ಇಟ್ಟು ಕರಿದ ಎಲೆಕೋಸುಗಳನ್ನು ಅದಕ್ಕೆ ಹಾಕಿ. ಎಣ್ಣೆಯನ್ನು ಹೀರಿಕೊಳ್ಳಲು ಇದು ಸಹಾಯಕವಾಗಿದೆ.
- ಇಷ್ಟು ಮಾಡಿದರೆ ಎಲೆಕೋಸು 65 ಸಿದ್ಧ. ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿದರೆ, ನೀವು ಮತ್ತೆ ಮತ್ತೆ ಮಾಡಿ ತಿನ್ನುವಿರಿ. ಖಂಡಿತ ಮನೆಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ. ಮಕ್ಕಳು ಶಾಲೆಯಿಂದ ಬಂದ ತಕ್ಷಣ ಸಂಜೆ ಸ್ನಾಕ್ಸ್‌ಗೂ ಈ ರೆಸಿಪಿ ಮಾಡಿಕೊಡಬಹುದು.
ವಿಭಾಗ