ಮಕ್ಕಳಿಗೆ ಸಂಜೆ ತಿಂಡಿ ಏನು ಕೊಡುವುದು ಎಂಬ ಚಿಂತೆಯಿದ್ದರೆ ಮಾಡಿ ಚೀಸಿ ಎಗ್ ರೋಸ್ಟ್ ರೆಸಿಪಿ: ಮಕ್ಕಳು ಬಾಯಿಚಪ್ಪರಿಸಿಕೊಂಡು ತಿಂತಾರೆ
Nov 08, 2024 07:34 PM IST
ಮಕ್ಕಳಿಗೆ ಸಂಜೆ ತಿಂಡಿ ಏನು ಕೊಡುವುದು ಎಂಬ ಚಿಂತೆಯಿದ್ದರೆ ಮಾಡಿ ಚೀಸಿ ಎಗ್ ರೋಸ್ಟ್ ರೆಸಿಪಿ: ಮಕ್ಕಳು ಬಾಯಿಚಪ್ಪರಿಸಿಕೊಂಡು ತಿಂತಾರೆ
ಮೊಟ್ಟೆಯಿಂದ ಮಾಡಿದ ಭಕ್ಷ್ಯಗಳು ತುಂಬಾ ರುಚಿಕರವಾಗಿರುತ್ತವೆ. ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಚೀಸೀ ಎಗ್ ರೋಸ್ಟ್ ರೆಸಿಪಿಯನ್ನು ಮಕ್ಕಳಿಗೆ ಇಷ್ಟವಾಗುವಂತೆ ಮಾಡಬಹುದು. ಈ ಪಾಕವಿಧಾನವನ್ನು ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಮೊಟ್ಟೆಯ ಭಕ್ಷ್ಯಗಳು ತುಂಬಾ ರುಚಿಯಾಗಿರುತ್ತವೆ. ಇವುಗಳಿಂದ ತಯಾರಿಸಿದ ಪಾಕವಿಧಾನಗಳನ್ನು ಬೇಯಿಸುವುದು ಸುಲಭ. ಮೊಟ್ಟೆಯಿಂದ ಹಲವು ಬಗೆಯ ಖಾದ್ಯಗಳನ್ನು ಬೇಗನೆ ತಯಾರಿಸಬಹುದು. ನಿಮಗೆ ತ್ವರಿತವಾಗಿ ಏನಾದರೂ ತಯಾರಿಸಬೇಕು ಎಂದಾದರೆ ಈ ಪಾಕವಿಧಾನವನ್ನು ಪ್ರಯತ್ನಿಸಬಹುದು. ಮೊಟ್ಟೆಯ ಚೀಸೀ ಎಗ್ ರೋಸ್ಟ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಬಹುದು. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳಿವೆ. ಈ ಖಾದ್ಯವು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಚೀಸೀ ಎಗ್ ರೋಸ್ಟ್ ಅನ್ನು ಮಕ್ಕಳು ಕೂಡ ಬಾಯಿಚಪ್ಪರಿಸಿಕೊಂಡು ತಿಂತಾರೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚೀಸೀ ಎಗ್ ರೋಸ್ಟ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಬೇಯಿಸಿದ ಮೊಟ್ಟೆ- ನಾಲ್ಕು, ಚೀಸ್- ಕಾಲು ಕಪ್, ಕರಿಮೆಣಸು ಪೇಸ್ಟ್- ಒಂದೂವರೆ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – ಅರ್ಧ ಟೀ ಚಮಚ, ಮೆಣಸಿನ ಪುಡಿ – ಅರ್ಧ ಟೀ ಚಮಚ, ಅರಿಶಿನ ಪುಡಿ- ಕಾಲು ಟೀ ಚಮಚ, ಚಾಟ್ ಮಸಾಲ- ಅರ್ಧ ಟೀ ಚಮಚ, ಗರಂ ಮಸಾಲಾ ಪುಡಿ- ಅರ್ಧ ಟೀ ಚಮಚ, ಜೀರಿಗೆ ಪುಡಿ- ಅರ್ಧ ಟೀ ಚಮಚ, ಕಡಲೆ ಹಿಟ್ಟು- ಒಂದು ಟೀ ಚಮಚ, ಮೊಸರು- ಎರಡು ಟೀ ಚಮಚ, ಬೆಣ್ಣೆ- ಒಂದು ಟೀ ಚಮಚ, ನಿಂಬೆ ರಸ- ಅರ್ಧ ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಕರಿಮೆಣಸು ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ, ಚಾಟ್ ಮಸಾಲ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ, ಕಡಲೆಹಿಟ್ಟು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇನ್ನೊಂದೆಡೆ 4 ಮೊಟ್ಟೆಗಳನ್ನು ಬೇಯಿಸಿ ಅವುಗಳ ಸಿಪ್ಪೆ ತೆಗೆಯಿರಿ. ಬೇಯಿಸಿದ ಮೊಟ್ಟೆಗಳನ್ನು ಚಾಕುವಿನಿಂದ ಲಂಬವಾಗಿ ಕತ್ತರಿಸಿ. ಈ ಮೊಟ್ಟೆಗಳನ್ನು ಕರಿಮೆಣಸು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮ್ಯಾರಿನೇಟ್ ಮಾಡಿ. ನಂತರ ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಡಿ. ಅದರ ಮೇಲೆ ಬೆಣ್ಣೆ ಹಾಕಿ ಮೊಟ್ಟೆಗಳನ್ನು ಕತ್ತರಿಸಿ ಸೇರಿಸಿ. ಮೇಲೆ ಮತ್ತೆ ಸ್ವಲ್ಪ ಬೆಣ್ಣೆಯನ್ನು ಹಾಕಿ. ಕಡಿಮೆ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. ನಂತರ ಮೊಟ್ಟೆಯನ್ನು ತಿರುಗಿಸಿ, ಸ್ವಲ್ಪ ಬೆಣ್ಣೆ ಸೇರಿಸಿ. ಇನ್ನೊಂದು ಬದಿಯಲ್ಲಿ 2-3 ನಿಮಿಷ ಬೇಯಿಸಿ.
ಇಷ್ಟಾದ ನಂತರ ಪ್ರತಿ ಮೊಟ್ಟೆಯ ಮೇಲೆ ಚೀಸ್ ಸ್ಲೈಸ್ ಇರಿಸಿ. ಈ ಚೀಸೀ ಎಗ್ ರೋಸ್ಟ್ ಅನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ. ಮೇಲೆ ನಿಂಬೆ ರಸ ಮತ್ತು ಚಾಟ್ ಮಸಾಲೆಯನ್ನು ಸಿಂಪಡಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಸಿಂಪಡಿಸಿ, ಹಸಿರು ಚಟ್ನಿಯೊಂದಿಗೆ ಬಿಸಿಯಾಗಿ ಬಡಿಸಿ. ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ. ಬಹಳ ಬೇಗ ಸಿದ್ಧವಾಗುವುದರಿಂದ ಬ್ಯಾಚುಲರ್ಸ್‌ಗಳು ಕೂಡ ಇದನ್ನು ಪ್ರಯತ್ನಿಸಬಹುದು.