logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಂದಾದರೂ ಸಿಹಿ ಗೆಣಸಿನ ಗುಲಾಬ್ ಜಾಮೂನ್ ಸವಿದಿದ್ದೀರಾ; ಇದರ ರುಚಿ ಸವಿದರೆ ಮತ್ತೆ ಮತ್ತೆ ತಿನ್ನುವಿರಿ, ಇಲ್ಲಿದೆ ರೆಸಿಪಿ

ಎಂದಾದರೂ ಸಿಹಿ ಗೆಣಸಿನ ಗುಲಾಬ್ ಜಾಮೂನ್ ಸವಿದಿದ್ದೀರಾ; ಇದರ ರುಚಿ ಸವಿದರೆ ಮತ್ತೆ ಮತ್ತೆ ತಿನ್ನುವಿರಿ, ಇಲ್ಲಿದೆ ರೆಸಿಪಿ

Priyanka Gowda HT Kannada

Dec 12, 2024 03:34 PM IST

google News

ಸಿಹಿ ಗೆಣಸಿನ ಗುಲಾಬ್ ಜಾಮೂನ್ ರೆಸಿಪಿ

  • ನೀವು ಗುಲಾಬ್ ಜಾಮೂನ್‌ಗಳನ್ನು ತಿಂದಿರಬಹುದು. ಆದರೆ, ಸಿಹಿ ಗೆಣಸಿನಿಂದ ತಯಾರಿಸಲಾಗುವ ರುಚಿಕರವಾದ ಗುಲಾಬ್ ಜಾಮೂನ್‍ಗಳನ್ನು ಎಂದಾದರೂ ಸವಿದಿದ್ದೀರಾ. ಈ ಜಾಮೂನ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇಲ್ಲಿದೆ ಸಿಹಿಗೆಣಸಿನ ಗುಲಾಬ್ ಜಾಮೂನ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಸಿಹಿ ಗೆಣಸಿನ ಗುಲಾಬ್ ಜಾಮೂನ್ ರೆಸಿಪಿ
ಸಿಹಿ ಗೆಣಸಿನ ಗುಲಾಬ್ ಜಾಮೂನ್ ರೆಸಿಪಿ (PC: Canva)

ಚಳಿಗಾಲದಲ್ಲಿ ಕೆಲವೊಮ್ಮೆ ಏನಾದರೂ ಸಿಹಿ-ತಿಂಡಿ ತಿನ್ನಬೇಕು ಎಂಬ ಬಯಕೆಯುಂಟಾಗುತ್ತದೆ. ಈ ವೇಳೆ ಕೆಲವರು ಗುಲಾಬ್ ಜಾಮೂನ್ ಅನ್ನು ಮಾಡಿ ತಿನ್ನಬಹುದು. ಬಹುತೇಕರು ಗುಲಾಬ್ ಜಾಮೂನ್ ಅನ್ನು ಹಾಲು ಪುಡಿಯಿಂದ ತಯಾರಿಸುತ್ತಾರೆ. ಆದರೆ, ಸಿಹಿಗೆಣಸಿನಿಂದಲೂ ಜಾಮೂನ್ ಮಾಡಬಹುದು. ಇದು ತುಂಬಾ ಟೇಸ್ಟಿಯಾಗಿರುತ್ತೆ ಹಾಗೂ ಮೃದುವಾಗಿರುತ್ತದೆ. ನೀವು ಒಮ್ಮೆ ಸಿಹಿಗೆಣಸಿನಿಂದ ತಯಾರಿಸಲಾಗುವ ಈ ರೆಸಿಪಿಯನ್ನು ಪ್ರಯತ್ನಿಸಿ ನೋಡಿ. ಖಂಡಿತ ನಿಮಗೆ ಇಷ್ಟವಾಗುತ್ತದೆ. ಹಾಗಿದ್ದರೆ ಸಿಹಿಗೆಣಸಿನ ಗುಲಾಬ್ ಜಾಮೂನ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಿಹಿ ಗೆಣಸು ಗುಲಾಬ್ ಜಾಮೂನ್ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸು (ದೊಡ್ಡ)- 1, ಹಾಲಿನ ಪುಡಿ- ಅರ್ಧ ಕಪ್, ಮೈದಾ ಹಿಟ್ಟು- 2 ಟೀ ಚಮಚ, ಬೇಕಿಂಗ್ ಪೌಡರ್- 2 ಚಿಟಿಕೆ, ತುಪ್ಪ- 1 ಚಮಚ, ಹಾಲು- 1 ರಿಂದ 2 ಚಮಚ.

ರೆಸಿಪಿ ತಯಾರಿಸುವ ವಿಧಾನ

ಮೊದಲ ಹಂತ- ಸಿಹಿ ಗೆಣಸಿನಿಂದ ಗುಲಾಬ್ ಜಾಮೂನ್ ಮಾಡಲಿಗೆ ದಪ್ಪ ಗಾತ್ರದ 1 ದೊಡ್ಡ ಸಿಹಿ ಗೆಣಸನ್ನು ತೆಗೆದುಕೊಳ್ಳಬೇಕು. ಈಗ ಆಲೂಗಡ್ಡೆಯನ್ನು ನೀರಿನಲ್ಲಿ ಬೇಯಿಸುವ ರೀತಿಯಲ್ಲಿಯೇ ಸಿಹಿ ಗೆಣಸನ್ನು ಬೇಯಿಸಿ. ಅದು ತಣ್ಣಗಾದಾಗ ಅದರ ಸಿಪ್ಪೆ ತೆಗೆದು, ಕೈಗಳಿಂದ ಅಥವಾ ತುರಿಯುವಿಕೆಯ ಸಹಾಯದಿಂದ ಸಿಹಿ ಗೆಣಸನ್ನು ಮ್ಯಾಶ್ ಮಾಡಿ. ಸಿಹಿ ಗೆಣಸಿನಲ್ಲಿ ಯಾವುದೇ ಉಂಡೆ ಇರಬಾರದು.

ಎರಡನೇ ಹಂತ- ಈಗ ಸಿಹಿಗೆಣಸಿಗೆ ಅರ್ಧ ಕಪ್ ಹಾಲಿನ ಪುಡಿ, 2 ಚಮಚ ಮೈದಾ ಹಿಟ್ಟು ಮತ್ತು 2 ಚಿಟಿಕೆ ಬೇಕಿಂಗ್ ಪೌಡರ್, 1 ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ಮೆದುವಾಗಿಬಾರದು ಹಾಗೂ ತುಂಬಾ ಗಟ್ಟಿಯಾಗಿರಬಾರದು. ಅದು ದಪ್ಪವಾಗಿದ್ದರೆ 1 ರಿಂದ 2 ಚಮಚ ಹಾಲನ್ನು ಬಳಸಬಹುದು. ತುಂಬಾ ಮೃದುವಾದ ಮತ್ತು ನಯವಾದ ಹಿಟ್ಟನ್ನು ತಯಾರಿಸಬೇಕು. ಅದನ್ನು ಹೊಂದಿಸಲು 15 ನಿಮಿಷಗಳ ಕಾಲ ಹಾಗೆಯೇ ಮುಚ್ಚಿಡಿ.

ಮೂರನೇ ಹಂತ- ಈ ಗುಲಾಬ್ ಜಾಮೂನ್‌ಗೆ ಸಿರಪ್ ತಯಾರಿಸಿ. ಇದಕ್ಕಾಗಿ 1 ಕಪ್ ಸಕ್ಕರೆ ಮತ್ತು 1 ಕಪ್ ನೀರು ಸೇರಿಸಿ ಕುದಿಸಿ. ರುಚಿಗೆ ಹಸಿರು ಏಲಕ್ಕಿಯನ್ನು ಸೇರಿಸಬಹುದು. ಮಧ್ಯಮ ಉರಿಯಲ್ಲಿ ಸಿರಪ್ ತಯಾರಿಸಿ. ಸಿರಪ್ ಅನ್ನು ತುಂಬಾ ದಪ್ಪವಾಗಿ ಮಾಡಬಾರದು.

ನಾಲ್ಕನೇ ಹಂತ- ಈಗ ಗುಲಾಬ್ ಜಾಮೂನ್ ಉಂಡೆಗಳನ್ನು ತಯಾರಿಸಿ. ಸಣ್ಣ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಉಂಡೆ ಕಟ್ಟಿ. ಹಿಟ್ಟಿನಿಂದ ಎಲ್ಲಾ ಗುಲಾಬ್ ಜಾಮೂನ್ಗಳನ್ನು ತಯಾರಿಸಿ ಉಂಡೆ ಕಟ್ಟಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಉರಿಯನ್ನು ಕಡಿಮೆ ಮಾಡಿ ಗುಲಾಬ್ ಜಾಮೂನ್ಗಳನ್ನು ಚೆನ್ನಾಗಿ ಫ್ರೈ ಮಾಡಿ.

ಐದನೇ ಹಂತ- ಎಲ್ಲಾ ಗುಲಾಬ್ ಜಾಮೂನ್‍ಗಳನ್ನು ಈ ರೀತಿ ಫ್ರೈ ಮಾಡಿ. ಅವು ಕಂದು ಬಣ್ಣಕ್ಕೆ ಬಂದಾಗ ಹೊರತೆಗೆಯಿರಿ. ಈಗ ಕರಿದ ಗುಲಾಬ್ ಜಾಮೂನ್‍ಗಳನ್ನು ಸಿದ್ಧಪಡಿಸಿದ ಸಕ್ಕರೆ ಸಿರಪ್‍ನಲ್ಲಿ ಹಾಕಿ ಸುಮಾರು ಅರ್ಧ ಗಂಟೆಯಿಂದ 1 ಗಂಟೆ ಕಾಲ ಹಾಗೆ ಬಿಡಿ. ಸಿರಪ್ ಅನ್ನು ಗುಲಾಬ್ ಜಾಮೂನ್‌ ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ ಸಿಹಿ ಗೆಣಸಿನಿಂದ ತಯಾರಿಸಿದ ಟೇಸ್ಟಿ ಮತ್ತು ಸೂಪರ್‌ಸಾಫ್ಟ್ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ