logo
ಕನ್ನಡ ಸುದ್ದಿ  /  ಜೀವನಶೈಲಿ  /  ತ್ರಿಪುರ ರಾಜ್ಯದಲ್ಲಿ ಟೊಮೆಟೊ ಚಟ್ನಿ ತಯಾರಿಸೋದು ಹೀಗೆ; ಮೊಸ್ದೆಂಗ್‌ ಸೆರ್ಮಾ ರೆಸಿಪಿ ಇಲ್ಲಿದೆ

ತ್ರಿಪುರ ರಾಜ್ಯದಲ್ಲಿ ಟೊಮೆಟೊ ಚಟ್ನಿ ತಯಾರಿಸೋದು ಹೀಗೆ; ಮೊಸ್ದೆಂಗ್‌ ಸೆರ್ಮಾ ರೆಸಿಪಿ ಇಲ್ಲಿದೆ

HT Kannada Desk HT Kannada

Jan 02, 2024 02:24 PM IST

google News

ಮೊಸ್ದೆಂಗ್‌ ಸೆರ್ಮಾ ರೆಸಿಪಿ

  • Mosdeng Serma Recipe: ದಕ್ಷಿಣ ಭಾರತದಲ್ಲಿ ಟೊಮೆಟೊ ಗೊಜ್ಜು, ಟೊಮೆಟೊ ಚಟ್ನಿ ತಯಾರಿಸುವಂತೆ ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಯಿಂದ ಟೊಮೆಟೊ ಗೊಜ್ಜು ತಯಾರಿಸಲಾಗುತ್ತದೆ. ಮೊಸ್ದೆಂಗ್‌ ಸೆರ್ಮಾ ತಯಾರಿಸುವ ವಿಧಾನ ಹೀಗಿದೆ. 

ಮೊಸ್ದೆಂಗ್‌ ಸೆರ್ಮಾ ರೆಸಿಪಿ
ಮೊಸ್ದೆಂಗ್‌ ಸೆರ್ಮಾ ರೆಸಿಪಿ

Mosdeng Serma Recipe: ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬಹಳ ಭಿನ್ನವಾಗಿದೆ. ಒಂದೇ ಪದಾರ್ಥಗಳನ್ನು ಬಳಸಿದರೂ ಅದನ್ನು ತಯಾರಿಸುವ ರೀತಿ ಬೇರೆ ಬೇರೆ ಹಾಗೂ ಹೆಸರು ಬೇರೆ. ನಾವು ಇಲ್ಲಿ ತಯಾರಿಸುವ ಟೊಮೆಟೊ ಚಟ್ನಿಯನ್ನು ತ್ರಿಪುರಾದಲ್ಲಿ ಮೊಸ್ದೆಂಗ್‌ ಸೆರ್ಮಾ ಎಂದು ಕರೆಯುತ್ತಾರೆ.

ಮೊಸ್ದೆಂಗ್‌ ಸೆರ್ಮಾ ತಯಾರಿಸಲು ಬೇಕಾದ ಪದಾರ್ಥಗಳು

  • ಅಚ್ಚ ಖಾರದ ಪುಡಿ - 1 ಟೇಬಲ್‌ ಸ್ಪೂನ್‌
  • ಟೊಮೆಟೊ - 2
  • ಈರುಳ್ಳಿ - 2
  • ಬೆಳ್ಳುಳ್ಳಿ ಎಸಳು - 1 ಟೇಬಲ್‌ ಸ್ಪೂನ್‌
  • ಸಾಸಿವೆ ಎಣ್ಣೆ - 2 ಟೇಬಲ್‌ ಸ್ಪೂನ್‌
  • ಉಪ್ಪು - ರುಚಿಗೆ ತಕ್ಕಷ್ಟು

ಮೊಸ್ದೆಂಗ್‌ ಸೆರ್ಮಾ ತಯಾರಿಸುವ ವಿಧಾನ

1 ಮೊದಲು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ

2 ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳನ್ನು ಫ್ರೈ ಮಾಡಿಕೊಳ್ಳಿ

3 ಕತ್ತರಿಸಿದ ಈರುಳ್ಳಿ ಹೆಚ್ಚಿ ಅದು ಮೆತ್ತಗಾಗುವರೆಗೂ ಫ್ರೈ ಮಾಡಿ

4 ಅಚ್ಚ ಖಾರದ ಪುಡಿಗೆ ಸ್ವಲ್ಪ ನೀರು ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್‌ ಮಾಡಿ

5 ಈ ಮಿಶ್ರಣವನ್ನು ಈರುಳ್ಳಿ ಜೊತೆ ಸೇರಿಸಿ ಮಿಕ್ಸ್‌ ಮಾಡಿ

6 ನಂತರ ಕತ್ತರಿಸಿದ ಟೊಮೆಟೊ ಸೇರಿಸಿ, ಉಪ್ಪು ಸೇರಿಸಿ 10 ನಿಮಿಷ ಕಡಿಮೆ ಉರಿಯಲ್ಲಿ ಕುಕ್‌ ಮಾಡಿ

7 ಕೊನೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್‌ ಮಾಡಿ

8 ಅನ್ನ, ಚಪಾತಿ, ರೊಟ್ಟಿಯೊಂದಿಗೆ ತಿನ್ನಲು ಈ ಚಟ್ನಿ ಬಹಳ ಚೆನ್ನಾಗಿರುತ್ತದೆ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ