Street Food: ನೀವು ಭೋಜನಪ್ರಿಯರಾ, ಭಾರತದ 5 ಖ್ಯಾತ ನಗರಗಳ ಸ್ಟ್ರೀಟ್‌ ಫುಡ್‌ನತ್ತ ಒಮ್ಮೆ ಕಣ್ಣಾಡಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Street Food: ನೀವು ಭೋಜನಪ್ರಿಯರಾ, ಭಾರತದ 5 ಖ್ಯಾತ ನಗರಗಳ ಸ್ಟ್ರೀಟ್‌ ಫುಡ್‌ನತ್ತ ಒಮ್ಮೆ ಕಣ್ಣಾಡಿಸಿ

Street Food: ನೀವು ಭೋಜನಪ್ರಿಯರಾ, ಭಾರತದ 5 ಖ್ಯಾತ ನಗರಗಳ ಸ್ಟ್ರೀಟ್‌ ಫುಡ್‌ನತ್ತ ಒಮ್ಮೆ ಕಣ್ಣಾಡಿಸಿ

Food: ನಾಲಗೆಗೆ ರುಚಿ ಕೊಡುವ ತಿಂಡಿ ಸಿಕ್ಕರೆ ಯಾರು ತಾನೇ ಬೇಡ ಅಂತಾರೆ. ಬಹುತೇಕ ಎಲ್ಲಾ ನಗರಗಳಲ್ಲೂ ಸಂಜೆ ಆದರೆ ಸಾಕು ರಸ್ತೆ ಬದಿಗಳಲ್ಲಿ ವಿವಿಧ ತಿಂಡಿಗಳು ಸವಿಯಲು ಸಿಗುತ್ತವೆ. ಭಾರತದ 5 ಪ್ರಮುಖ ನಗರಗಳ ಸ್ಟ್ರೀಡ್‌ ಫುಡ್‌ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬೆಂಗಳೂರು, ಅಮೃತ್‌ಸರ್‌, ದೆಹಲಿ, ಚೆನ್ನೈ, ಕೊಲ್ಕತ್ತಾದ ಸ್ಟ್ರೀಟ್‌ ಫುಡ್‌ಗಳು
ಬೆಂಗಳೂರು, ಅಮೃತ್‌ಸರ್‌, ದೆಹಲಿ, ಚೆನ್ನೈ, ಕೊಲ್ಕತ್ತಾದ ಸ್ಟ್ರೀಟ್‌ ಫುಡ್‌ಗಳು (PC: @mekutanu, @Veeronika13wani, @rohini_sgh)

Food: ಊಟದ ವಿಚಾರ ಬಂದಾಗ ಎಲ್ಲರಿಗೂ ತಮ್ಮ ತಮ್ಮ ಫೇವರೆಟ್‌ ಫುಡ್‌ ನೆನಪಾಗುತ್ತದೆ. ಮನೆಯಲ್ಲಿ ಪ್ರತಿದಿನ ಅಡುಗೆ ಮಾಡಿ ತಿನ್ನೋದು ಇರೋದೇ ಬಿಡಿ. ಆದರೆ ನೀವು ಪ್ರತಿ ಸಂಜೆ ರಸ್ತೆ ಬದಿ ತಿಂಡಿಗಳನ್ನು ತಿನ್ನೋದು ಬೇರೆ ರೀತಿಯದ್ದೇ ಖುಷಿ ಕೊಡುತ್ತದೆ. ಭಾರತದ ಪ್ರತಿ ರಾಜ್ಯದಲ್ಲೂ ಪ್ರತಿ ನಗರದಲ್ಲೂ ಒಂದೊಂದು ರೀತಿಯ ಫುಡ್‌ ಫೇಮಸ್‌ ಆಗಿರುತ್ತದೆ. ಬೆಂಗಳೂರು ಸೇರಿದಂತೆ ಭಾರತದ 5 ಪ್ರಮುಖ ನಗರಗಳಲ್ಲಿ ಯಾವೆಲ್ಲಾ ತಿಂಡಿ ಫೇಮಸ್‌ ಅಂತ ಒಮ್ಮೆ ಕಣ್ಣಾಡಿಸೋಣ.

ಬೆಂಗಳೂರು

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯದ ಜನರು ನೆಲೆಸಿದ್ದಾರೆ. ವಿದೇಶದಿಂದ ಕೂಡಾ ಅನೇಕರು ಇಲ್ಲಿ ವಿದ್ಯಾಭ್ಯಾಸ, ಹಾಗೂ ಕೆಲಸಕ್ಕಾಗಿ ಬಂದಿದ್ದಾರೆ. ಈ ಜನರ ನಾಲಗೆ ತಣಿಸಲೆಂದೇ ಬೆಂಗಳೂರಿನಲ್ಲಿ ಸ್ಟ್ರೀಟ್‌ ಫುಡ್‌ ಶಾಪ್‌ಗಳಲ್ಲಿ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಲಾಗುತ್ತದೆ. ವಿವಿ ಪುರಂನ ತಿಂಡಿಬೀದಿ, ಕೋರಮಂಗಲದ ಈಟ್‌ ಸ್ಟ್ರೀಟ್‌, ವಸಂತನಗರದ ಲೋಫರ್ಸ್ ಲೇನ್, ಹೆಚ್‌ಎಸ್‌ಆರ್‌ ಲೇ ಔಟ್‌ನ ಫುಡ್‌ ಸ್ಟ್ರೀಟ್‌, ವಿಲ್ಸನ್‌ ಗಾರ್ಡನ್‌ ಫುಡ್‌ ಸ್ಟ್ರೀಟ್‌ ಹೀಗೆ ಬೆಂಗಳೂರಿನ ಒಂದೊಂದು ಏರಿಯಾದಲ್ಲಿ ನೀವು ವಿಧವಿಧವಾದ ಆಹಾರಗಳನ್ನು ಸವಿಯಬಹುದು. ಭೇಲ್‌ಪೂರಿ, ಪೊಟ್ಯಾಟೋ ಟ್ವಿಸ್ಟರ್‌, ಮೆಕ್ಸಿಕನ್ ಚಾಟ್, ಸ್ಯಾಂಡ್‌ವಿಚ್‌, ಮೊಮೊಸ್, ದೊನ್ನೆ ಬಿರಿಯಾನಿ, ಫ್ರೈಡ್ ಚಿಕನ್, ಷವರ್ಮಾ, ವಡಾ ಪಾವ್‌, ವೆರೈಟಿ ದೋಸೆ, ರಾಜಸ್ಥಾನಿ ತಿಂಡಿಗಳು, ಮಸಾಲಾ ಪಾಪಡ್‌ ಹಾಗೂ ಅನೇಕ ತಿಂಡಿಗಳನ್ನು ನೀವು ಸವಿಯಬಹುದು.

ಅಮೃತಸರ

ಪಂಜಾಬ್‌ನ ಅಮೃತಸರವು ಆಕರ್ಷಕ ಪ್ರವಾಸಿ ತಾಣ ಮಾತ್ರವಲ್ಲ, ಪಂಜಾಬಿ ಪಾಕಪದ್ಧತಿಯ ಶ್ರೀಮಂತ ಸುವಾಸನೆಗಳನ್ನು ಪ್ರದರ್ಶಿಸುವ ಪಾಕಶಾಲೆಯ ಸ್ವರ್ಗವಾಗಿದೆ. ಶುದ್ಧ ತುಪ್ಪದೊಂದಿಗೆ ಪ್ರೀತಿ ಬೆರೆಸಿ ತಯಾರಿಸಲಾಗುವ ವಿವಿಧ ಆಹಾರಗಳು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಕಬಾಬ್‌, ಚಿಕನ್‌ ಟಿಕ್ಕಾ, ಮಖಾನ್‌ ಫಿಶ್‌, ಕುಲ್ಚಾಗಳು ಇನ್ನಷ್ಟು ತಿನ್ನುವಂತೆ ನಿಮ್ಮನ್ನು ಕೈ ಬೀಸಿ ಕರೆಯದೆ ಇರದು.

ಕೊಲ್ಕತ್ತಾ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ನೀವು ಸಾಕಷ್ಟು ಸ್ಟ್ರೀಟ್‌ ಫುಡ್‌ ಎಂಜಾಯ್‌ ಮಾಡಬಹುದು. ಇಲ್ಲಿನ ಪುಚ್ಕಾ, ಆಲೂಕಾಬ್ಲಿ, ಚುರ್‌ಮುರ್‌ ಸೇರಿದಂತೆ ಹೊಸ ಹೊಸ ರುಚಿಗಳನ್ನು ನೀವು ಸವಿಯಬಹುದು.

ದೆಹಲಿ

ಭಾರತದ ರಾಜಧಾನಿ ದೆಹಲಿಯಲ್ಲಿ ಕೂಡಾ ನೀವು ವೆರೈಟಿ ಸ್ಟ್ರೀಟ್‌ ಫುಡ್‌ ಸವಿಯಬಹುದು. ಚೋಲೆ ಬತೂರ, ಬಟರ್‌ ಚಿಕನ್‌, ನಿಹಾರಿ, ದೌಲತ್‌ ಕಿ ಚಾಟ್‌, ಮೋತ್‌ ಕಚೋರಿ, ಕೇಸರಿ ಲಸ್ಸಿ ಹೀಗೆ ವಿವಿಧ ರೀತಿಯ, ನಾಲಗೆಗೆ ಹಿತ ಕೊಡುವ ತಿಂಡಿಗಳನ್ನು ತಿನ್ನಬಹುದು.

ಚೆನ್ನೈ

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಕೂಡಾ ನೀವು ನಾಲಗೆ ತಣಿಸುವ ಅನೇಕ ರೀತಿಯ ತಿಂಡಿಗಳನ್ನು ಟೇಸ್ಟ್‌ ಮಾಡಬಹುದು. ಮುರುಕ್ಕು, ಮೈಸೂರು ದೋಸೆ, ಮೊಹಿಂಗಾ, ಕೊತ್ತು ಪರಾಟದಂಥ ತಿಂಡಿಗಳನ್ನು ತಿನ್ನಬಹುದು. ಇಲ್ಲಿನ ಮರೀನಾ ಬೀಚ್‌ನಲ್ಲಿ ನೀವು ತಿಂಡಿಬೀದಿಯನ್ನು ನೋಡಬಹುದು.

ಈ ನಗರಗಳಿಗೆ ಹೋದಲ್ಲಿ ಈ ಸ್ಟ್ರೀಟ್‌ ಫುಡ್‌ಗಳ ಟೇಸ್ಟ್‌ ಮಾಡೋದು ಮರೀಬೇಡಿ.

Whats_app_banner