ಪಾಲಕ್ ಪನೀರ್, ಪಾಲಕ್ ಚಿಕನ್ ರೆಸಿಪಿ ತಿಂದಿರಬಹುದು: ಪಾಲಕ್ ಸೀಗಡಿ ಖಾದ್ಯ ತಿಂದಿದ್ದೀರಾ, ಇಂದೇ ಟ್ರೈ ಮಾಡಿ
Nov 13, 2024 12:25 PM IST
ಪಾಲಕ್ ಪನೀರ್, ಪಾಲಕ್ ಚಿಕನ್ ರೆಸಿಪಿ ತಿಂದಿರಬಹುದು: ಪಾಲಕ್ ಸೀಗಡಿ ಖಾದ್ಯ ತಿಂದಿದ್ದೀರಾ, ಇಂದೇ ಟ್ರೈ ಮಾಡಿ
ನೀವು ಪಾಲಕ್ ಪನೀರ್ ಮತ್ತು ಪಾಲಾಕ್ ಚಿಕನ್ ಅನ್ನು ತಿಂದಿರಬಹುದು. ಇದು ಎಷ್ಟು ರುಚಿಕರವಾಗಿರುತ್ತದೋ ಪಾಲಕ್ ಪ್ರಾನ್ಸ್ (ಸೀಗಡಿ) ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಈ ಮಸಾಲೆಯುಕ್ತ ಗ್ರೇವಿ ಸವಿಯಲು ತುಂಬಾ ರುಚಿಯಾಗಿರುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಜತೆಗೆ ಸಮುದ್ರಾಹಾರ ಸೀಗಡಿ ಕೂಡ ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಪಾಲಕ್ ಮತ್ತು ಸೀಗಡಿ ಮೀನನ್ನು ಸೇರಿಸಿ ಒಂದೊಳ್ಳೆಯ ಭಕ್ಷ್ಯ ತಯಾರಿಸಬಹುದು. ನೀವು ಪಾಲಕ್ ಪನೀರ್ ಮತ್ತು ಪಾಲಾಕ್ ಚಿಕನ್ ಅನ್ನು ತಿಂದಿರಬಹುದು. ಇದು ಎಷ್ಟು ರುಚಿಕರವಾಗಿರುತ್ತದೋ ಪಾಲಕ್ ಪ್ರಾನ್ಸ್ (ಸೀಗಡಿ) ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇಲ್ಲಿ ಸರಳವಾದ ಪಾಕವಿಧಾನವನ್ನು ನೀಡಲಾಗಿದೆ. ಇದನ್ನು ತಯಾರಿಸುವುದು ತುಂಬಾನೇ ಸರಳ. ಈ ಮಸಾಲೆಯುಕ್ತ ಗ್ರೇವಿ ತುಂಬಾ ರುಚಿಯಾಗಿರುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಪಾಲಕ್ ಸೀಗಡಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಸೀಗಡಿ- ಅರ್ಧ ಕೆಜಿ, ಪಾಲಕ್ ಸೊಪ್ಪು- ಒಂದು ಕಪ್, ಎಣ್ಣೆ- ಅಗತ್ಯವಿದ್ದಷ್ಟು, ಗರಂ ಮಸಾಲೆ- ಒಂದು ಟೀ ಚಮಚ, ಮೆಣಸಿನಕಾಯಿ- ಎರಡು, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿನ- ಕಾಲು ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಮೆಣಸಿನಪುಡಿ- ಒಂದು ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಈರುಳ್ಳಿ- ಒಂದು, ಜೀರಿಗೆ ಪುಡಿ- ಅರ್ಧ ಟೀ ಚಮಚ.
ಮಾಡುವ ವಿಧಾನ: ಸೀಗಡಿಗಳನ್ನು ಮುಂಚಿತವಾಗಿ ಸ್ವಚ್ಛಗೊಳಿಸಿ. ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ. ಈಗ ಕಡಾಯಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಆ ಎಣ್ಣೆಯಲ್ಲಿ ಸೀಗಡಿಗಳನ್ನು ಫ್ರೈ ಮಾಡಿ. ಇದನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಇದರಿಂದ ನೀರು ಹೊರಬರುವ ತನಕ ಹುರಿಯಿರಿ. ಅದರ ನಂತರ ಅವುಗಳನ್ನು ತೆಗೆದುಕೊಂಡು ಪಕ್ಕಕ್ಕೆ ಇರಿಸಿ.
ಈಗ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಇದಕ್ಕೆ ಈರುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ, ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈ ಮಿಶ್ರಣವನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಅರಿಶಿನ, ಧನಿಯಾ ಪುಡಿ ಮತ್ತು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಪಾಲಕ್ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಜತೆಗೆ ಜೀರಿಗೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸೀಗಡಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಅರ್ಧ ಘಂಟೆಯವರೆಗೆ ಮುಚ್ಚಿ, ಚೆನ್ನಾಗಿ ಬೇಯಿಸಿ. ನಂತರ ಒಲೆ ಆಫ್ ಮಾಡಿದರೆ ಟೇಸ್ಟಿ ಪಾಲಕ್ ಸೀಗಡಿ ರೆಸಿಪಿ ಸಿದ್ಧ.
ಈ ರೆಸಿಪಿ ತುಂಬಾ ರುಚಿಕರವಾಗಿರುತ್ತದೆ. ಬಿಸಿ ಅನ್ನದ ಜೊತೆ ಮಾತ್ರವಲ್ಲ ಚಪಾತಿ, ರೊಟ್ಟಿಯೊಂದಿಗೆ ಕೂಡ ಸೇವಿಸಬಹುದು. ಪಾಲಕ್ ಹಾಗೂ ಸೀಗಡಿ ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶವಿದೆ. ಉತ್ತಮ ಆರೋಗ್ಯ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮವಾಗಿದೆ. ಸೀಗಡಿಯು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಸೆಲೆನಿಯಮ್ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಸ್ವಲ್ಪ ಖಾರವಾಗಿ ಮಾಡಿದರೆ ತುಂಬಾ ರುಚಿಯಾಗಿರುತ್ತದೆ. ಮನೆಮಂದಿಯೆಲ್ಲಾ ಖಂಡಿತಾ ಬಾಯಿಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವಿಲ್ಲ. ಇನ್ಯಾಕೆ ತಡ, ನೀವು ಕೂಡ ಒಮ್ಮೆ ತಯಾರಿಸಿ ನೋಡಿ.