logo
ಕನ್ನಡ ಸುದ್ದಿ  /  ಜೀವನಶೈಲಿ  /  ಡಿಫ್ರೆಂಟ್‌ ರುಚಿಯ ಚಿಕನ್ ರೆಸಿಪಿ ಮಾಡ್ಬೇಕು ಅಂತಿದ್ರೆ ಮದ್ರಾಸ್ ಚಿಕನ್ ಕರಿ ಮಾಡಿ; ಅನ್ನ, ಚಪಾತಿ ಜೊತೆ ತಿನ್ನಲು ಸೂಪರ್ ಆಗಿರುತ್ತೆ

ಡಿಫ್ರೆಂಟ್‌ ರುಚಿಯ ಚಿಕನ್ ರೆಸಿಪಿ ಮಾಡ್ಬೇಕು ಅಂತಿದ್ರೆ ಮದ್ರಾಸ್ ಚಿಕನ್ ಕರಿ ಮಾಡಿ; ಅನ್ನ, ಚಪಾತಿ ಜೊತೆ ತಿನ್ನಲು ಸೂಪರ್ ಆಗಿರುತ್ತೆ

Reshma HT Kannada

Nov 20, 2024 01:25 PM IST

google News

ಮದ್ರಾಸ್ ಚಿಕನ್ ಕರಿ

    • ನೀವೆಷ್ಟೇ ಚಿಕನ್ ಪ್ರಿಯರಾದ್ರೂ ಒಂದೇ ರುಚಿಯ ಚಿಕನ್ ಕರಿ ತಿಂತಾ ಇದ್ರೆ ಖಂಡಿತ ಬೇಸರ ಬರುತ್ತೆ. ಅನ್ನಕ್ಕೂ ರೋಟಿ, ಚಪಾತಿಗೂ ಹೊಂದುವ ಸ್ಪೆಷಲ್ ಆಗಿರೋ ಚಿಕನ್ ಕರಿ ಟ್ರೈ ಮಾಡ್ಬೇಕು ಅಂತಿದ್ರೆ ಮದ್ರಾಸ್ ಚಿಕನ್ ಕರಿ ಮಾಡಿ. ಇದನ್ನ ಬಹಳ ಸರಳ ವಿಧಾನದಲ್ಲಿ ಮಾಡಬಹುದು. ಇದರ ರುಚಿಯೂ ಅದ್ಭುತ. ಮದ್ರಾಸ್ ಚಿಕನ್ ಕರಿ ರೆಸಿಪಿ ಇಲ್ಲಿದೆ ನೋಡಿ.
ಮದ್ರಾಸ್ ಚಿಕನ್ ಕರಿ
ಮದ್ರಾಸ್ ಚಿಕನ್ ಕರಿ

ಆಹಾರ ಪ್ರಿಯರು ಹೊಸ ಹೊಸ ರುಚಿಗಳನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಆಯ್ಕೆಗಳು ಹಲವು. ನೀವು ಚಿಕನ್ ಪ್ರಿಯರಾಗಿದ್ದರೆ ಆಗಾಗ ಹೊಸ ರುಚಿ ಟ್ರೈ ಮಾಡಬೇಕು ಅಂತ ನಿಮಗೆ ಅನ್ನಿಸಬಹುದು. ಹಾಗಂತ ಯಾವಾಗ್ಲೂ ಹೋಟೆಲ್‌ಗೆ ಹೋಗಿ ತಿನ್ನೋಕೆ ಆಗೊಲ್ಲ. ಅದು ದುಬಾರಿ ಕೂಡ.

ಮನೆಯಲ್ಲೇ ಸಖತ್ ರುಚಿಯಾಗಿರುವ ಡಿಫ್ರೆಂಟ್ ಆಗಿರುವ ಚಿಕನ್ ಖಾದ್ಯ ಮಾಡಬಹುದು. ಅದುವೇ ಮದ್ರಾಸ್ ಚಿಕನ್ ಕರಿ. ನೀವು ಯಾವಾಗ್ಲೂ ಆಂಧ್ರ ಸ್ಟೈಲ್ ಚಿಕನ್ ಮಾಡುವವರಾಗಿದ್ರೆ ಒಮ್ಮೆ ಮದ್ರಾಸ್ ಶೈಲಿಯ ಚಿಕನ್ ಕರಿಯನ್ನೂ ಟ್ರೈ ಮಾಡಿ. ಇದು ಅನ್ನ, ರೋಟಿ ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಖಾರ ಕೊಂಡ ಕಡಿಮೆ ಹಾಕಿ ಮಾಡಿದ್ರೆ ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಹಾಗಾದರೆ ಮದ್ರಾಸ್ ಚಿಕನ್ ಕರಿ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ ನೋಡಿ.

ಮದ್ರಾಸ್ ಚಿಕನ್ ಕರಿ ರೆಸಿಪಿ

ಬೇಕಾಗುವ ಪದಾರ್ಥಗಳು: ಚಿಕನ್ – ಅರ್ಧ ಕೆಜಿ, ಈರುಳ್ಳಿ - 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಟೊಮೆಟೊ – 2, ಲವಂಗ - ಮೂರು, ಅರಿಸಿನ - ಅರ್ಧ ಟೀ ಚಮಚ, ಕರಿಮೆಣಸು - ಅರ್ಧ ಚಮಚ, ದಾಲ್ಚಿನ್ನಿ - ಸಣ್ಣ ತುಂಡು, ಏಲಕ್ಕಿ - ನಾಲ್ಕು, ಅನಾನಸ್ ಮೊಗ್ಗು - ಒಂದು, ಬಿರಿಯಾನಿ ಎಲೆಗಳು - ಎರಡು, ಕರಿಬೇವು - ಒಂದು ಮುಷ್ಟಿ, ಉಪ್ಪು - ರುಚಿಗೆ, ಸೋಂಪು ಪುಡಿ, ಜೀರಿಗೆ - ಅರ್ಧ ಚಮಚ, ಖಾರದಪುಡಿ - ಒಂದು ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ

ಮದ್ರಾಸ್ ಚಿಕನ್ ಮಾಡುವ ವಿಧಾನ

ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಸಿನ ಸೇರಿಸಿ ಚೆನ್ನಾಗಿ ಕಲಸಿ ಅರ್ಧ ಗಂಟೆ ಬಿಡಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆ, ಸೋಂಪು, ಮೆಣಸು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ

ಕತ್ತರಿಸಿದ ಈರುಳ್ಳಿ ಸೇರಿಸಿ ಕೆಂಬಣ್ಣ ಬರುವವರೆಗೂ ಫ್ರೈ ಮಾಡಿ. ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಲವಂಗ, ದಾಲ್ಚಿನ್ನಿ, ಸೋಂಪು ಹೂವು, ಏಲಕ್ಕಿ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಇದಕ್ಕೆ ಟೊಮೆಟೊ ಪೇಸ್ಟ್ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಈಗ ಒಲೆ ಆಫ್ ಮಾಡಿ ಮತ್ತು ಎಲ್ಲವನ್ನೂ ತಣ್ಣಗಾಗಲು ಬಿಡಿ.

ಮಿಶ್ರಣವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ದಪ್ಪ ತಳದ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಅದಕ್ಕೆ ಬಿರಿಯಾನಿ ಎಲೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಇದಕ್ಕೆ ಮ್ಯಾರಿನೇಟ್ ಮಾಡಿಟ್ಟ ಚಿಕನ್ ಸೇರಿಸಿ ಮತ್ತು ಮಿಶ್ರಣ ಮಾಡಿ. ಮಚ್ಚಳ ಮುಚ್ಚಿ ಬೇಯಿಸಿ. ಇದಕ್ಕೆ ಮೊದಲೇ ರುಬ್ಬಿದ ಮಸಾಲಾ ಪೇಸ್ಟ್ ಅನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯ ಇರುವಷ್ಟು ನೀರು ಸೇರಿಸಿ. ಈ ಸಾರು ದಪ್ಪವಾಗಿದ್ದರೆ ಚೆನ್ನಾಗಿರುತ್ತದೆ. ಎಣ್ಣೆ ಮೇಲಕ್ಕೆ ತೇಲುವವರೆಗೆ ಬೇಯಿಸಿ. ಚಿಕ್ಕ ಉರಿಯಲ್ಲಿ ಬೇಯಿಸಿದರೆ ಚಿಕನ್ ತುಂಡುಗಳು ಚೆನ್ನಾಗಿ ಬೇಯುತ್ತವೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಅಷ್ಟೇ, ರುಚಿಯಾದ ಮದ್ರಾಸ್ ಚಿಕನ್ ಕರಿ ರೆಡಿ

ಮದ್ರಾಸ್ ಚಿಕನ್ ಕರಿಯನ್ನು ನೀವು ನಿಮ್ಮ ಮನೆಯಲ್ಲೂ ಒಮ್ಮೆ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುತ್ತದೆ. ಹೊಸ ರುಚಿ ಟ್ರೈ ಮಾಡುವವರು ಇದನ್ನು ಒಮ್ಮೆ ಮಾಡಿ ನೋಡಿ, ನಿಮ್ಮ ಮನೆಯಲ್ಲಿ ಖಂಡಿತ ಎಲ್ಲರೂ ಇಷ್ಟಪಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ