ಇಲ್ಲಿದೆ ಮಟನ್ ಗೋಲಿ ಬಿರಿಯಾನಿ ರೆಸಿಪಿ, ಹೆಸರಷ್ಟೇ ಅಲ್ಲ, ರುಚಿಯೂ ಡಿಫ್ರೆಂಟ್; ಮಾಂಸಾಹಾರ ಪ್ರಿಯರಿಗಿದು ಫೇವರಿಟ್ ಆಗೋದು ಪಕ್ಕಾ
Oct 26, 2024 01:30 PM IST
ಮಟನ್ ಗೋಲಿ ಬಿರಿಯಾನಿ
- ಮಟನ್ ಬಿರಿಯಾನಿ ಮನೆಯಲ್ಲಿ ಮಾಡೋದು ಕಡಿಮೆ, ಆದ್ರೆ ಹೋಟೆಲ್‌ನಲ್ಲಿ ತಿಂದಾಗ ಅದರ ರುಚಿಗೆ ನೀವು ಫಿದಾ ಆಗಿರಬಹುದು. ಮಟನ್‌ನಿಂದ ಹೋಟೆಲ್‌ಗಿಂತಲೂ ವಿಶೇಷವಾದ ಬಿರಿಯಾನಿ ಮಾಡಬಹುದು. ಅದುವೇ ಮಟನ್ ಗೋಲಿ ಬಿರಿಯಾನಿ. ಇದನ್ನು ಮಾಡೋದು ಹೇಗೆ, ಇದಕ್ಕೆಲ್ಲಾ ಏನೆಲ್ಲಾ ಬೇಕು ಎಂಬುದನ್ನು ನೋಡಿ.
ಮಟನ್ ಬಿರಿಯಾನಿ ಎಂದಾಕ್ಷಣ ಮಾಂಸಾಹಾರಿಗಳ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ. ಹಾಗಂತ ಯಾವಾಗಲೂ ಒಂದೇ ರುಚಿಯ ಮಟನ್ ಬಿರಿಯಾನಿ ತಿಂದರೆ ಏನು ಚೆಂದ ಹೇಳಿ. ಇದಕ್ಕಾಗಿ ಮಟನ್‌ನಿಂದ ಏನಾದ್ರೂ ಸ್ಪೆಷಲ್ ಆಗಿರುವ ಖಾದ್ಯ ಮಾಡಬೇಕು ಅಂತಿದ್ರೆ ಮಟನ್ ಗೋಲಿ ಬಿರಿಯಾನಿ ಮಾಡಬಹುದು. ಇದು ಹೋಟೆಲ್‌ನಲ್ಲಿ ಸಿಗುವ ಮಟನ್ ಬಿರಿಯಾನಿಗಿಂತಲೂ ಭಿನ್ನವಾಗಿರುವುದು ಸುಳ್ಳಲ್ಲ. ಇದರ ರುಚಿಗೆ ಮಟನ್ ಇಷ್ಟಪಡದವರೂ ಕೂಡ ಫಿದಾ ಆಗ್ತಾರೆ.
ಮಟನ್ ಗೋಲಿ ಬಿರಿಯಾನಿ ಒಮ್ಮೆ ತಿಂದ್ರೆ ನಿಮಗೆ ಮತ್ತೆ ಮತ್ತೆ ಬೇಕು ಅನ್ನಿಸುತ್ತೆ. ಬೋನ್‌ಲೆಸ್ ಮಟನ್ ತುಂಡುಗಳನ್ನ ಮಾತ್ರ ಬಳಸಿ ಮಾಡುವ ಈ ಬಿರಿಯಾನಿಯ ಸ್ವಾದವನ್ನ ಸವಿದವರೇ ಬಲ್ಲರು. ಇದನ್ನು ಮನೆಯಲ್ಲಿ ಸಖತ್ ಸಿಂಪಲ್ ಆಗಿ ಮಾಡಿಕೊಳ್ಳಬಹುದು. ಹಾಗಾದರೆ ಮಟನ್ ಗೋಲಿ ಬಿರಿಯಾನಿ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.
ಮಟನ್ ಗೋಲಿ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು: ಮಟನ್ - ಅರ್ಧ ಕೆಜಿ, ಬಾಸುಮತಿ ಅಕ್ಕಿ – ಮುಕ್ಕಾಲು ಕೆಜಿ, ಈರುಳ್ಳಿ – 2, ದಾಲ್ಚಿನ್ನಿ – 1 ಸಣ್ಣ ತುಂಡು, ಮೊಟ್ಟೆ – 1, ಲವಂಗ – 3, ತುಪ್ಪ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2ಚಮಚ, ಉಪ್ಪು – ರುಚಿಗೆ, ಜೋಳದ ಹಿಟ್ಟು 4 ಚಮಚ, ಬಿರಿಯಾನಿ ಎಲೆ – 4, ಎಣ್ಣೆ – 4ಚಮಚ, ಉಪ್ಪು – ರುಚಿಗೆ, ಶಜೀರಾ – ಅರ್ಧ ಚಮಚ, ಸೋಂಪು – 1 ಚಮಚ, ಖಾರದಪುಡಿ – 1 ಚಮಚ, ಅರಿಸಿನ ಪುಡಿ – ಅರ್ಧ ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಬ್ರೆಡ್ ಪುಡಿ – 2 ಚಮಚ, ಬಿರಿಯಾನಿ ಮಸಾಲ – 1 ಚಮಚ, ಕೊತ್ತಂಬರಿ ಪುಡಿ – 1ಚಮಚ, ಪುದಿನಾ – ಸ್ವಲ್ಪ
ಗೋಲಿ ಬಿರಿಯಾನಿ ಮಾಡುವ ವಿಧಾನ
ಮೊದಲು ಮಟನ್ ಮಾಂಸವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಇದನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಶುಂಠಿ–ಬೆಳ್ಳುಳ್ಳಿ, ಮೊಟ್ಟೆಯ ಹಳದಿ ಭಾಗ, ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮಾಂಸದ ಉಂಡೆಯಂತೆ ಮಾಡಿ ಒಂದು ಗಂಟೆ ಮ್ಯಾರಿನೇಟ್ ಮಾಡಿ. ಈಗ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ, ಡೀಪ್ ಫ್ರೈ ಮಾಡುವಷ್ಟು ಎಣ್ಣೆ ಹಾಕಿ ಬಿಸಿಗೆ ಇಡಿ. ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್ ಹಾಕಿ, ಅದಕ್ಕೆ ಮೂರು ಚಮಚ ನೀರು ಹಾಕಿ ಮಿಶ್ರಣ ಮಾಡಿ. ಮೊದಲೇ ಮ್ಯಾರಿನೇಟ್ ಮಾಡಿಟ್ಟುಕೊಂಡು ಉಂಡೆಯನ್ನು ಕಾರ್ನ್ ಫ್ಲೋರ್ ನೀರಿನಲ್ಲಿ ಅದ್ದಿ, ಇದನ್ನು ಬ್ರೆಡ್ ಕ್ರಂಪ್ಸ್‌ನಲ್ಲಿ ಹೊರಳಿಸಿ. ನಂತರ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಈಗ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ತುಪ್ಪವನ್ನು ಹಾಕಿ. ಲವಂಗ, ಏಲಕ್ಕಿ, ದಾಲ್ಚಿನ್ನಿ, ಸೋಂಪು, ಶಜೀರಾ, ಏಲಕ್ಕಿ ಹಾಕಿ ಹುರಿಯಿರಿ. ಬಿರಿಯಾನಿ ಎಲೆಯನ್ನೂ ಸೇರಿಸಿ. ಈಗ ಅದಕ್ಕೆ ಮೊದಲೇ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಗತ್ಯ ಇರುವಷ್ಟು ನೀರು ಉಪ್ಪು ಸೇರಿಸಿ, ಕುದಿಯಲು ಬಿಡಿ. ಇನ್ನೊಂದು ಬಟ್ಟಲನ್ನು ಒಲೆಯ ಮೇಲೆ ಇಟ್ಟು ಬಾಣಲೆಗೆ ಎಣ್ಣೆ ಹಾಕಿ. ಆ ಎಣ್ಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಮೆಣಸಿನಕಾಯಿ, ಬಿರಿಯಾನಿ ಮಸಾಲಾ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಹಾಗೂ ಮೊದಲೇ ಫ್ರೈ ಮಾಡಿಟ್ಟುಕೊಂಡಿರುವ ಉಂಡೆಯನ್ನು ಅನ್ನಕ್ಕೆ ಸೇರಿಸಿ. ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು ಉದುರಿಸಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿ. ಕುಕ್ಕರ್‌ನಲ್ಲಿ ಕೂಡ ಈ ಬಿರಿಯಾನಿ ಮಾಡಬಹುದು. ಈಗ ನಿಮ್ಮ ಮುಂದೆ ರುಚಿಯಾದ ಮಟನ್ ಗೋಲಿ ಬಿರಿಯಾನಿ ತಿನ್ನಲು ಸಿದ್ಧವಾಗುತ್ತದೆ.
ಸಾಮಾನ್ಯ ಬಿರಿಯಾನಿಗೆ ಹೋಲಿಸಿದರೆ ಮಟನ್ ಗೋಲಿ ಬಿರಿಯಾನಿ ತುಂಬಾ ರುಚಿಯಾಗಿರುತ್ತದೆ. ಇವುಗಳಲ್ಲಿ ಮೂಳೆಗಳಿಲ್ಲದ ಮಾಂಸವನ್ನು ಮಾತ್ರ ಬಳಸುತ್ತೇವೆ. ಆದ್ದರಿಂದ ಅವುಗಳನ್ನು ಚೆನ್ನಾಗಿ ತಿನ್ನಬಹುದು. ಮಕ್ಕಳಿಗೂ ಇಷ್ಟವಾಗುತ್ತದೆ. ಮಕ್ಕಳು ಕಡಿಮೆ ಮೆಣಸಿನಕಾಯಿ ತಿನ್ನಲು ಇಷ್ಟಪಡುತ್ತಾರೆ. ಈ ಮಟನ್ ಗೋಲಿ ಬಿರಿಯಾನಿಯ ರುಚಿ ನಿಮಗೆ ಇಷ್ಟವಾದರೆ ಇನ್ನೊಂದು ಬಿರಿಯಾನಿ ಮಾಡುವ ಯೋಚನೆಯೇ ಬರುವುದಿಲ್ಲ. ಒಮ್ಮೆ ಈ ಮಟನ್ ಗೋಲಿ ಬಿರಿಯಾ ಟ್ರೈ ಮಾಡಿ ನೋಡಿ.