Mutton Masala fry: ನಾನ್‌ ವೆಜ್‌ ಪ್ರಿಯರಿಗಾಗಿ ಇಲ್ಲಿದೆ ಮಟನ್ ಟಿಕ್ಕಾ ಮಸಾಲಾ ಫ್ರೈ, ಈ ರೆಸಿಪಿ ನಿಮ್ಮ ಬಾಯಲ್ಲಿ ನೀರೂರಿಸೋದು ಪಕ್ಕಾ-food non veg recipes how to make mutton tikka masala fry at home mutton tikka masala fry recipe mutton recipes rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mutton Masala Fry: ನಾನ್‌ ವೆಜ್‌ ಪ್ರಿಯರಿಗಾಗಿ ಇಲ್ಲಿದೆ ಮಟನ್ ಟಿಕ್ಕಾ ಮಸಾಲಾ ಫ್ರೈ, ಈ ರೆಸಿಪಿ ನಿಮ್ಮ ಬಾಯಲ್ಲಿ ನೀರೂರಿಸೋದು ಪಕ್ಕಾ

Mutton Masala fry: ನಾನ್‌ ವೆಜ್‌ ಪ್ರಿಯರಿಗಾಗಿ ಇಲ್ಲಿದೆ ಮಟನ್ ಟಿಕ್ಕಾ ಮಸಾಲಾ ಫ್ರೈ, ಈ ರೆಸಿಪಿ ನಿಮ್ಮ ಬಾಯಲ್ಲಿ ನೀರೂರಿಸೋದು ಪಕ್ಕಾ

ನಾನ್‌ವೆಜ್ ಪ್ರಿಯರು ನೀವಾಗಿದ್ರೆ ಮಟನ್ ನಿಮ್ಮ ಫೇವರಿಟ್ ಆಗಿರೋದು ಖಂಡಿತ. ಮಟನ್‌ ಕರಿ, ಮಟನ್‌ ಚಾಪ್ಸ್‌, ಮಟನ್ ಸುಕ್ಕಾ ಅಂತೆಲ್ಲಾ ನೀವು ತಿಂದಿರುತ್ತೀರಿ, ಆದ್ರೆ ಮಟನ್‌ನಿಂದ ಸ್ಪೆಷಲ್ ಆಗಿ ಮಟನ್‌ ಟಿಕ್ಕಾ ಮಸಾಲ ಫ್ರೈ ಕೂಡ ಮಾಡಬಹುದು. ಇದನ್ನು ಮಾಡೋದು ತುಂಬಾ ಸುಲಭ, ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡಿ ತಿನ್ನಬೇಕು ಅನ್ನಿಸೋದು ಖಂಡಿತ.

ಮಟನ್ ಟಿಕ್ಕಾ ಮಸಾಲಾ ಫ್ರೈ
ಮಟನ್ ಟಿಕ್ಕಾ ಮಸಾಲಾ ಫ್ರೈ

ನೀವು ಮಟನ್ ಪ್ರಿಯರಾಗಿದ್ದು, ಇದರಿಂದ ಏನಾದ್ರೂ ಸ್ಪೆಷಲ್ ರೆಸಿಪಿ ಮಾಡಬೇಕು ಅಂತಿದ್ರೆ ಮಟನ್ ಟಿಕ್ಕಾ ಮಸಾಲ ಫ್ರೈ ಟ್ರೈ ಮಾಡಿ. ಇದು ಸಖತ್ ಟೇಸ್ಟಿ ಹಾಗೂ ಹೊಸ ರುಚಿಯ ಖಾದ್ಯ. ಮಟನ್‌ ಬಿರಿಯಾನಿ, ಮಟನ್ ಸಾರು, ಮಟನ್ ಸುಕ್ಕಾ ಅಂತೆಲ್ಲಾ ತಿಂದು ಬೇಸರ ಆದವರು ಈ ರೆಸಿಪಿ ಒಮ್ಮೆ ಟ್ರೈ ಮಾಡಬಹುದು, ಇದನ್ನು ಮನೆಯಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದು. ಇದರ ರುಚಿಯೂ ಅದ್ಭುತ.

ಅರ್ಧ ಕೆಜಿ ಮಟನ್ ಹಾಗೂ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಈ ವಿಶೇಷ ರೆಸಿಪಿ ತಯಾರಿಸಬಹುದು. ಇದನ್ನ ಒಮ್ಮೆ ಮಾಡಿ ತಿಂದ್ರೆ ಮತ್ತೆ ಮತ್ತೆ ತಿನ್ನುತ್ತಲೇ ಇರಬೇಕು ಎನ್ನಿಸುವಂತಹ ರೆಸಿಪಿ. ಬಿರಿಯಾನಿ ಅಥವಾ ಖಾಲಿ ವೈಟ್‌ ರೈಸ್‌ ಜೊತೆ ನೆಂಜಿಕೊಳ್ಳಲು ಈ ರೆಸಿಪಿ ಸಖತ್ ಕಾಂಬಿನೇಷನ್ ಆಗುವುದರಲ್ಲಿ ಅನುಮಾನವಿಲ್ಲ. ಹಾಗಾದ್ರೆ ಮಟನ್ ಟಿಕ್ಕಾ ಮಸಾಲ ಫ್ರೈ ಮಾಡುವುದು ಹೇಗೆ ನೋಡಿ.

ಮಟನ್ ಟಿಕ್ಕಾ ಮಸಾಲಾ ಫ್ರೈಗೆ ಬೇಕಾಗುವ ಪದಾರ್ಥಗಳು

ಮೂಳೆಗಳಿಲ್ಲದ ಮಟನ್ ಮಾಂಸ - ಅರ್ಧ ಕೆಜಿ, ಉಪ್ಪು - ರುಚಿಗೆ, ಬೆಣ್ಣೆ - ಒಂದು ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ, ಹಸಿಮೆಣಸು - ಎರಡು, ನೀರು - ಅಗತ್ಯವಿರುವಷ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಮೊಸರು - ಅರ್ಧ ಕಪ್, ಖಾರದಪುಡಿ - ಒಂದು ಚಮಚ, ಅರಿಶಿನ - ಅರ್ಧ ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಮಟನ್ ಮಸಾಲಾ - ಒಂದು ಚಮಚ, ಗರಂ ಮಸಾಲಾ - ಒಂದು ಚಮಚ, ಕಸೂರಿ ಮೇತಿ - ಒಂದು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಎಣ್ಣೆ - ಒಂದು ಚಮಚ, ಕಾಳುಮೆಣಸಿನ ಪುಡಿ - ಕಾಲು ಚಮಚ, ಕಾಶ್ಮೀರಿ ಮೆಣಸಿನ ಪುಡಿ - ಅರ್ಧ ಚಮಚ

ಮಟನ್ ಟಿಕ್ಕಾ ಮಸಾಲಾ ಫ್ರೈ ಮಾಡುವ ವಿಧಾನ

ಮಟನ್ ಟಿಕ್ಕಾ ಮಸಾಲಾ ಫ್ರೈ ಮಾಡಲು ಮೊದಲು ಮೂಳೆಗಳಿಲ್ಲದ ಮಟನ್ ಮಾಂಸವನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರ್‌ನಲ್ಲಿ ಹಾಕಿ. ಕುಕ್ಕರ್‌ಗೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು, ಅರಿಶಿನ, ಹಸಿಮೆಣಸು, ಕಾಶ್ಮೀರಿ ಮೆಣಸಿನಕಾಯಿ, ಮಟನ್ ಮಸಾಲಾ, ಕೊತ್ತಂಬರಿ ಪುಡಿ ಸೇರಿಸಿ ಮತ್ತು ಕುಕ್ಕರ್‌ಗೆ ಅಗತ್ಯವಿದಷ್ಟು ನೀರು ಸೇರಿ ಮುಚ್ಚಳ ಮುಚ್ಚಿ. ನಾಲ್ಕು ಸೀಟಿ ಬರುವವರೆಗೆ ಬೇಯಿಸಿ. ಆಗ ಮಟನ್ ಮೃದುವಾಗಿರುತ್ತದೆ. ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಂದು ಚಮಚ ಎಣ್ಣೆ ಮತ್ತು ಒಂದು ಚಮಚ ಬೆಣ್ಣೆಯನ್ನು ಹಾಕಿ. ಕುಕ್ಕರ್‌ನಲ್ಲಿ ಬೇಯಿಸಿದ ಮಟನ್ ಅನ್ನು ನೀರಿನೊಂದಿಗೆ ಇದಕ್ಕೆ ಸೇರಿಸಿ. ನೀರು ಕಡಿಮೆಯಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ನೀರು ಕಡಿಮೆಯಾದಾಗ ಕಾಳುಮೆಣಸಿನ ಪುಡಿ, ಕಸೂರಿ ಮೇತಿ ಸೇರಿಸಿ. ಉಪ್ಪಿನ ರುಚಿಗೆ ಕಡಿಮೆಯಾಗಿದ್ದರೆ ಮತ್ತೆ ಸ್ವಲ್ಪ ಹಾಕಿ. ಇದನ್ನು ಪುನಃ ಕಡಿಮೆ ಉರಿಯಲ್ಲಿ ಅರ್ಧ ಗಂಟೆ ಬೇಯಿಸಿ. ಇದು ಚೆನ್ನಾಗಿ ಬೆಂದಿದೆ ಎಂದಾಗ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಅಷ್ಟೇ ಟೇಸ್ಟಿ ಮಟನ್ ಟಿಕ್ಕಾ ಮಸಾಲಾ ಫ್ರೈ ರೆಡಿ. ಬಿರಿಯಾನಿ ಜೊತೆ ತಿಂದರೆ ಅದರ ರುಚಿ ಅಗಾಧವಾಗಿರುತ್ತದೆ. ಇದನ್ನು ಸೈಡ್ಸ್ ರೂಪದಲ್ಲೂ ತಿನ್ನಬಹುದು. ಇದರ ರುಚಿಗೆ ನಿಮ್ಮ ಮನೆಮಂದಿಯೆಲ್ಲಾ ಫಿದಾ ಆಗೋದು ಖಂಡಿತ.

ಮಟನ್ ಮಾಂಸ ತಂಪು ಎನ್ನುವ ಕಾರಣಕ್ಕೆ ಬಹಳಷ್ಟು ಜನಕ್ಕೆ ಚಿಕನ್‌ಗಿಂತ ಮಟನ್ ಮಾಂಸವೇ ಹೆಚ್ಚು ಇಷ್ಟವಾಗುತ್ತದೆ. ಮಟನ್ ಖಾದ್ಯಗಳನ್ನು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವುದು ಕಡಿಮೆ ಅಂತಾದ್ರೂ ಹೊರಗಡೆ ಇದರ ಖಾದ್ಯಗಳ ಬೆಲೆ ದುಬಾರಿಯಾಗಿರುವ ಕಾರಣ ಮನೆಯಲ್ಲೇ ರುಚಿ ರುಚಿಯಾಗಿ ಸುಲಭವಾಗಿ ಮಾಡಬಹುದಾದ ಖಾದ್ಯಗಳನ್ನು ನೀವು ಪ್ರಯತ್ನಿಸಬಹುದು.

mysore-dasara_Entry_Point