logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕನ್ ಕರಿ ತಿಂದು ತಿಂದು ಬೇಸರ ಬಂದಿದ್ರೆ ಈ ಭಾನುವಾರ ಚಿಕನ್ ಕುರ್ಮ ಮಾಡಿ; ಇದು ಅನ್ನಕ್ಕೂ ಸೈ, ಚಪಾತಿಗೂ ಸೈ, ರೆಸಿಪಿ ಇಲ್ಲಿದೆ

ಚಿಕನ್ ಕರಿ ತಿಂದು ತಿಂದು ಬೇಸರ ಬಂದಿದ್ರೆ ಈ ಭಾನುವಾರ ಚಿಕನ್ ಕುರ್ಮ ಮಾಡಿ; ಇದು ಅನ್ನಕ್ಕೂ ಸೈ, ಚಪಾತಿಗೂ ಸೈ, ರೆಸಿಪಿ ಇಲ್ಲಿದೆ

Reshma HT Kannada

Oct 19, 2024 05:22 PM IST

google News

ಚಿಕನ್ ಕುರ್ಮ

    • ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಚಿಕನ್ ಕರಿ ಮಾಡ್ತಾ ಇರ್ತಾರೆ. ಆದರೆ ಯಾವಾಗ್ಲೂ ಅದನ್ನೇ ತಿಂದ್ರೆ ಏನು ರುಚಿ ಇರುತ್ತೆ ಹೇಳಿ. ಹಾಗಾಗಿ ಒಮ್ಮೆ ಚಿಕನ್ ಕುರ್ಮ ಮಾಡಿ ತಿಂದು ನೋಡಿ. ಇದರ ರುಚಿಗೆ ನೀವು ಕಳೆದು ಹೋಗ್ತೀರಾ. ಖಂಡಿತ ಚಿಕನ್ ಕುರ್ಮ, ಚಿಕನ್ ಕರಿ ಎರಡೂ ಒಂದೇ ಅಲ್ಲ ಗೊತ್ತಿರಲಿ. ಮನೆಯಲ್ಲೇ ಸಿಂಪಲ್ ಆಗಿ ಚಿಕನ್ ಕುರ್ಮ ಮಾಡೋದು ಹೇಗೆ ನೋಡಿ. 
ಚಿಕನ್ ಕುರ್ಮ
ಚಿಕನ್ ಕುರ್ಮ

ಚಿಕನ್ ರೆಸಿಪಿ ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುತ್ತೆ, ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಚಿಕನ್ ಕರಿ ಮಾಡುತ್ತಿರುತ್ತಾರೆ. ಆದರೆ ಯಾವಾಗ್ಲೂ ಅದೇ ರುಚಿ ತಿಂದು ಬೇಸರ ಬಂದಿದ್ರೆ ಈ ಭಾನುವಾರ ಚಿಕನ್ ಕುರ್ಮ ಮಾಡಿ. ಚಿಕನ್ ಕರಿ, ಚಿಕನ್ ಕುರ್ಮ ಎರಡೂ ಒಂದೇ ಅಲ್ವಾ ಅಂತ ಯೋಚನೆ ಮಾಡ್ಬೇಡಿ, ಖಂಡಿತ ಈ ಎರಡೂ ಬೇರೆ ಬೇರೆ.

ಚಿಕನ್ ಕುರ್ಮವು ಮೊಘಲ್ ಶೈಲಿಯ ಖಾದ್ಯವಾಗಿದೆ. ಅದೇ ಶೈಲಿಯಲ್ಲಿ ಮಾಡಿದ್ರೆ ಇದರ ರುಚಿಯೂ ಅದ್ಭುತ. ಈ ರೆಸಿಪಿ ಅನ್ನಕ್ಕೂ, ಚಪಾತಿಗೂ ತುಂಬಾನೇ ಹೊಂದುತ್ತೆ. ಹಾಗಾದರೆ ಚಿಕನ್ ಕುರ್ಮ ಮಾಡೋದು ಹೇಗೆ, ಅದಕ್ಕೆ ಏನೆಲ್ಲಾ ಬೇಕು ಎಂಬುದನ್ನು ನೋಡಿಕೊಳ್ಳಿ, ನಾಳೆ ಹೇಗೂ ಭಾನುವಾರ ಮನೆಯಲ್ಲೇ ಈ ರೆಸಿಪಿ ಮಾಡಿ, ಮನೆಯವರಿಗೆಲ್ಲಾ ಖಂಡಿತ ಇಷ್ಟ ಆಗುತ್ತೆ.

ಚಿಕನ್ ಕುರ್ಮ

ಬೇಕಾಗುವ ಸಾಮಗ್ರಿಗಳು: ಚಿಕನ್ - ಒಂದು ಕೆಜಿ, ಟೊಮೆಟೊ - 2, ಈರುಳ್ಳಿ - 2, ಮೊಸರು - ಒಂದು ಕಪ್, ತೆಂಗಿನಕಾಯಿ ಪೇಸ್ಟ್ - 2 ಚಮಚ, ಎಳ್ಳಿನ ಪೇಸ್ಟ್ - ಎರಡು ಚಮಚ, ಕೊತ್ತಂಬರಿ ಸೊಪ್ಪು - ಎರಡು ಚಮಚ, ಎಣ್ಣೆ - ಅಗತ್ಯ ಇರುವಷ್ಟು, ಖಾರದಪುಡಿ - ಒಂದು ಚಮಚ, ಗರಂ ಮಸಾಲಾ - ಒಂದು ಚಮಚ, ಅರಿಸಿನ - ಅರ್ಧ ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಹಸಿಮೆಣಸು - ನಾಲ್ಕು, ಉಪ್ಪು - ರುಚಿಗೆ

ಚಿಕನ್ ಕುರ್ಮ ಮಾಡುವ ವಿಧಾನ

ಮೊದಲು ಚಿಕನ್ ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಬೌಲ್‌ಗೆ ಹಾಕಿ. ಚಿಕನ್ ತುಂಡುಗಳಿಗೆ ಅರಿಸಿನ, ಉಪ್ಪು ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಸಿಮೆಣಸಿನಕಾಯಿಯನ್ನು ಪೇಸ್ಟ್ ಮಾಡಿ, ಆ ಪೇಸ್ಟ್ ಅನ್ನೂ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅರ್ಧ ಗಂಟೆಯವರೆಗೆ ಮ್ಯಾರಿನೇಟ್ ಮಾಡಿ. ಈಗ ಬಾಣಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆಗೆ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಅದರ ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಚೂರುಗಳನ್ನು ನುಣ್ಣಗೆ ಕತ್ತರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ ಟೊಮೆಟೊ ನುಣ್ಣಗಾಗುವವರೆಗೂ ಬೇಯಿಸಿ. ನಂತರ ತೆಂಗಿನಕಾಯಿ ಪೇಸ್ಟ್ ಮತ್ತು ಎಳ್ಳು ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣಕ್ಕೆ ಹಿಂದೆ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತು ನಿಮಿಷ ಮುಚ್ಚಿ ಬೇಯಿಸಿ. ಚಿಕನ್ ತುಂಡುಗಳಿಂದ ನೀರು ಬಿಡುತ್ತದೆ. ಆಗ ಕೊತ್ತಂಬರಿ ಪುಡಿ, ಖಾರದಪುಡಿ, ಗರಂ ಮಸಾಲ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೆ ಹತ್ತು ನಿಮಿಷ ಕವರ್ ಮಾಡಿ ಬೇಯಿಸಿ. ಕಡಿಮೆ ಉರಿಯಲ್ಲಿ ಬೇಯಿಸಿದರೆ ಅದು ತಿರುವಿ ಹಾಕದೆ ಬೇಯುತ್ತದೆ. ಅದಕ್ಕೆ ಒಂದು ಲೋಟ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಪುನಃ 20 ನಿಮಿಷ ಬೇಯಿಸಿ. ಇದು ದಪ್ಪ ಪೇಸ್ಟ್ ರೀತಿ ಆಗುತ್ತದೆ. ಇದಕ್ಕೆ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ, ಈಗ ನಿಮ್ಮ ಮುಂದೆ ಚಿಕನ್ ಕುರ್ಮ ತಿನ್ನಲು ಸಿದ್ಧ.

ಚಿಕನ್ ಕರಿ ಬೇಜಾರಾದವರು ಆಗಾಗ ಚಿಕನ್ ಕುರ್ಮಾವನ್ನು ಮಾಡಿ ನೋಡಿ. ಇದನ್ನು ಚಪಾತಿಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಅನ್ನದೊಂದಿಗೆ ಕೂಡ ಇದು ಹೊಂದಿಕೆಯಾಗುತ್ತದೆ. ಘೀ ರೈಸ್‌ಗೂ ಚಿಕನ್ ಕುರ್ಮಾ ಒಳ್ಳೆ ಕಾಂಬಿನೇಷನ್ ಆಗುತ್ತೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ