Chicken Lollipop: ಹೋಟೆಲ್‌ನಷ್ಟೇ ರುಚಿಯ ಚಿಕನ್ ಲಾಲಿಪಾಪ್ ಅನ್ನ ಮನೆಯಲ್ಲೂ ಮಾಡ್ಬೇಕಾ, ಈ ಸಿಂಪಲ್ ವಿಧಾನ ಅನುಸರಿಸಿ, ಸಖತ್ ಆಗಿರುತ್ತೆ
ಮಾಂಸಾಹಾರ ಪ್ರಿಯರ ಹಿಟ್‌ಲಿಸ್ಟ್‌ನಲ್ಲಿರುವುದು ಚಿಕನ್. ಚಿಕನ್‌ನಿಂದ ವಿವಿಧ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಅದರಲ್ಲೂ ಕಬಾಬ್, ಲಾಲಿಪಾಪ್‌ನಂತಹ ಚಿಕನ್ ಡ್ರೈ ಐಟಂಗಳು ಬಹುತೇಕ ಫೇವರಿಟ್. ಭಿನ್ನ ಟೇಸ್ಟ್ ಹೊಂದಿರುವ ಚಿಕನ್ ಲಾಲಿಪಾಪ್ ಹೋಟೆಲ್‌ನಲ್ಲಿ ತಿಂದಾಗ ಆಹಾ ಎಂದೇನಿಸದೇ ಇರುವುದಿಲ್ಲ. ಅದೇ ರುಚಿಯ ಲಾಲಿಪಾಪ್ ಮನೆಯಲ್ಲೂ ಮಾಡಬಹುದು ನೋಡಿ.
ಭಾರತದ ಮಾಂಸಾಹಾರಿಗಳಲ್ಲಿ ಬಹುತೇಕರ ಫೇವರಿಟ್ ಚಿಕನ್, ಚಿಕನ್ ಖಾದ್ಯಗಳೆಂದರೆ ನಾನ್‌ವೆಜ್ ತಿನ್ನುವವರಿಗೆ ಅಚ್ಚುಮೆಚ್ಚು. ಹಲವರು ಪ್ರತಿನಿತ್ಯ ನಾನ್‌ವೆಜ್ ತಿನ್ನುತ್ತಾರೆ. ಅದರಲ್ಲೂ ಚಿಕನ್‌ನಿಂದ ತಯಾರಿಸುವ ಡ್ರೈ ಐಟಂಗಳ ಹೆಸರು ಕೇಳಿದ್ರ ಬಾಯಲ್ಲಿ ನೀರೂರುತ್ತೆ. ಅದರಲ್ಲೂ ಹೋಟೆಲ್‌ನಲ್ಲಿ ಸಿಗುವ ಚಿಕನ್ ಲಾಲಿಪಾಪ್‌ಗೆ ಪ್ರತ್ಯೇಕ ಪ್ಯಾನ್‌ಬೇಸ್ ಇದೆ.
ಚಿಕನ್ ಲಾಲಿಪಾಪ್ ರುಚಿಯೇ ಅಂಥದ್ದು, ಅದನ್ನ ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಇಂತಹ ವಿಭಿನ್ನ ರುಚಿಯ ಚಿಕನ್ ಸೈಡ್ಸ್ ಅನ್ನ ಮನೆಯಲ್ಲಿ ಮಾಡುವವರು ಕಡಿಮೆ, ಯಾಕಂದ್ರೆ ಅದೇ ರುಚಿ ಬರೋಲ್ಲ ಅನ್ನೋದು ಹಲವರ ದೂರು. ಕೆಲವರು ಖಂಡಿತ ಇದನ್ನು ಟ್ರೈ ಕೂಡ ಮಾಡಿರೊಲ್ಲ. ಆದರೆ ನೀವು ಈ ವಿಧಾನ ಅನುಸರಿಸಿ ಚಿಕನ್ ಲಾಲಿಪಾಪ್ ಮಾಡಿದ್ರೆ ಮನೆಯಲ್ಲೂ ಹೋಟೆಲ್ ರುಚಿಯ ಲಾಲಿಪಾಪ್ ತಯಾರಿಸಬಹುದು.
ಚಿಕನ್ ಲಾಲಿಪಾಪ್‌ಗೆ ಬೇಕಾಗುವ ಸಾಮಗ್ರಿಗಳು
ಮೂಳೆ ಇರುವ ಕೋಳಿ – ಅರ್ಧ ಕೆಜಿ, ಮೊಟ್ಟೆ – 1, ಈರುಳ್ಳಿ – 1 ದೊಡ್ಡದು, ಕಾರ್ನ್ ಫ್ಲೋರ್ – ಕಾಲು ಕಪ್, ಸ್ಟಿಂಗ್ ಆನಿಯನ್ – ಸ್ವಲ್ಪ, ಮೈದಾಹಿಟ್ಟು – 3 ಟೇಬಲ್ ಚಮಚ, ಬೆಳ್ಳುಳ್ಳಿ – 5 ಎಸಳು, ಶುಂಠಿ – ಸ್ವಲ್ಪ, ಸೋಯಾ ಸಾಸ್ – 2 ಟೇಬಲ್ ಚಮಚ, ಟೊಮೆಟೊ ಕೆಚಪ್ – 2 ಟೇಬಲ್ ಚಮಚ, ಸ್ಕಿಜ್ವಾನ್ ಸಾಸ್ – 3 ಚಮಚ, ವಿನೇಗರ್ – 2 ಚಮಚ, ಕಾಳುಮೆಣಸಿನ ಪುಡಿ – ಚಿಟಿಕೆ, ಸಕ್ಕರೆ– ಬೇಕಿದ್ದರೆ, ಖಾರದಪುಡಿ – ಅಗತ್ಯಕ್ಕೆ ತಕ್ಕಷ್ಟು, ಉಪ್ಪು – ರುಚಿಗೆ, ಎಣ್ಣೆ – ಕರಿಯಲು
ಚಿಕನ್ ಲಾಲಿಪಾಪ್ ಮಾಡುವ ವಿಧಾನ
ಮೊದಲು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಈರುಳ್ಳಿ, ಸ್ಪ್ರಿಂಗ್ ಆನಿಯನ್, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕತ್ತರಿಸಿ ರುಬ್ಬಿಕೊಳ್ಳಿ. ಲಾಲಿಪಾಪ್ ಪಾಕವಿಧಾನದ ಪ್ರಕಾರ ತೊಳೆದ ಚಿಕನ್ ತಯಾರಿಸಿ. ನಂತರ ಒಂದು ಬೌಲ್‌ನಲ್ಲಿ ಚಿಕನ್ ಜೊತೆಗೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ವಿನೆಗರ್, ಕರಿಮೆಣಸಿನ ಪುಡಿ, ಖಾರದಪುಡಿ ಮತ್ತು ಅಗತ್ಯ ಪ್ರಮಾಣದ ಉಪ್ಪನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಇನ್ನೊಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಮೆಣಸಿನ ಪುಡಿ, ಒಂದು ಮೊಟ್ಟೆ ಮತ್ತು ಚಿಟಿಕೆ ಉಪ್ಪನ್ನು ಮಿಕ್ಸ್ ಮಾಡಿ. ನಂತರ ಮ್ಯಾರಿನೇಟ್ ಮಾಡಿಟ್ಟುಕೊಂಡಿದ್ದ ಚಿಕನ್ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಈ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಫ್ರೈ ಮಾಡಿ. ಚಿಕನ್ ತುಂಡಿನ ಎರಡೂ ಮಗ್ಗಲುಗಳು ಬೇಯುವಂತೆ ಹುರಿದುಕೊಳ್ಳಿ. ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಮತ್ತು ಪರಿಮಳ ಬರುವವರೆಗೆ ಹುರಿಯಿರಿ. ನಂತರ ಸೋಯಾ ಸಾಸ್, ಟೊಮೆಟೊ ಕೆಚಪ್, ವಿನೆಗರ್ ಮತ್ತು ಒಂದು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಕಾರ್ನ್ ಫ್ಲೋರ್ ಅನ್ನು ನೀರಿನಲ್ಲಿ ಕರಗಿಸಿ ಮತ್ತು ಬಾಣಲೆಗೆ ಸುರಿಯಿರಿ ಮತ್ತು ಬೆರೆಸಿ. ಈ ಮಸಾಲಾ ಸ್ವಲ್ಪ ಗಟ್ಟಿಯಾದಾಗ, ಅದಕ್ಕೆ ಹುರಿದಕೊಂಡ ಚಿಕನ್ ತುಂಡುಗಳನ್ನ ಹಾಕಿ. ಸುಮಾರು ಒಂದು ನಿಮಿಷ ಚೆನ್ನಾಗಿ ಬೆರೆಸಿ, ಈಗ ಈ ಮಿಶ್ರಣವು ಚಿಕನ್ ತುಂಡುಗಳಿಗೆ ಚೆನ್ನಾಗಿ ಹಿಡಿದುಕೊಂಡಿರುತ್ತದೆ. ನಂತರ ಅದರಲ್ಲಿ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಹಾಕಿ ಕಲಕಿ ಸ್ಟವ್ ಆಫ್ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಚಿಕನ್ ಲಾಲಿಪಾಪ್ ತಿನ್ನಲು ಸಿದ್ಧ, ಇದನ್ನು ಒಮ್ಮೆ ಮನೆಯಲ್ಲಿ ಮಾಡಿ ಮತ್ತೆ ಮತ್ತೆ ಬೇಕು ಅಂತ ಕೇಳಿ ತಿಂತಾರೆ ನಿಮ್ಮ ಮನೆಯವರು. ಟ್ರೈ ಮಾಡಿ.