Curd Rice Recipe: ಮೊಸರನ್ನ ಮಾಡುವುದು ಹೇಗೆ? ದಕ್ಷಿಣ ಭಾರತೀಯ ಶೈಲಿಯಲ್ಲಿ ಮನೆಯಲ್ಲೇ ಮಾಡಿ ರುಚಿಕರ ಕರ್ಡ್ ರೈಸ್
Nov 25, 2024 11:30 AM IST
Curd Rice Recipe: ಮೊಸರನ್ನ ಮಾಡುವುದು ಹೇಗೆ? ದಕ್ಷಿಣ ಭಾರತೀಯ ಶೈಲಿಯಲ್ಲಿ ಮನೆಯಲ್ಲೇ ಮಾಡುವ ವಿಧಾನ
- Curd Rice Recipe: ಸಾಕಷ್ಟು ಜನರಿಗೆ ಮಧ್ಯಾಹ್ನದ ಊಟಕ್ಕೆ ಮೊಸರನ್ನ ಇರಲೇಬೇಕು. ದಕ್ಷಿಣ ಭಾರತೀಯ ಶೈಲಿಯಲ್ಲಿ ಅಂದ್ರೆ ನಮ್ಮ ಕರ್ನಾಟಕ ಶೈಲಿಯಲ್ಲಿ ಮೊಸರನ್ನ ಮಾಡುವುದು ಹೇಗೆ ಎಂಬ ವಿವರ ಇಲ್ಲಿ ನೀಡಲಾಗಿದೆ.
Curd Rice Recipe: ಕರ್ನಾಟಕದಲ್ಲಿ ಮೊಸರನ್ನ ಬಲು ಜನಪ್ರಿಯ ಆಹಾರ. ಮೊಸರನ್ನ ಇಷ್ಟಪಡದೆ ಇರುವವರು ಸಿಗೋದು ಅಪರೂಪ ಎನ್ನಬಹುದು. ಮೊಸರನ್ನ ತಿಂದರೆ ಹೊಟ್ಟೆಗೆ ತಂಪು, ಮೃಷ್ಣಾನ್ನ ಸವಿದ ಸಂತೃಪ್ತಿ ಸಿಗಬೇಕಾದರೆ ತುಸುವಾದರೂ ಮೊಸರನ್ನ ಇರಲೇಬೇಕು ಎಂದು ಕೆಲವರು ಹೇಳುತ್ತಾರೆ. ಮೊಸರನ್ನ ಹೇಗೆ ಬೇಕಾದರೂ ಮಾಡಬಹುದು. ಮೊಸರನ್ನದ ಕುರಿತು ವೈವಿಧ್ಯಮಯ ರೆಸಿಪಿಗಳು ಇರಬಹುದು. ಅನ್ನಕ್ಕೆ ಮೊಸರು ಹಾಕಿ ತುಸು ಉಪ್ಪು ಹಾಕಿ ಸೇವಿಸಿದರೂ ಅದು ಮೊಸರನ್ನ. ಅನ್ನ ಮತ್ತು ಮೊಸರು ಜತೆಗೆ ಒಗ್ಗರಣೆ ಕೊಟ್ಟರೂ ಮೊಸರನ್ನ. ಆ ಮೊಸರನ್ನಕ್ಕೆ ತುಸು ದಾಳಿಂಬಿ ಇತ್ಯಾದಿಗಳನ್ನು ಹಾಕಿದರೆ ಮೊಸರನ್ನ ಇನ್ನಷ್ಟು ರಿಚ್ ಆಗುತ್ತದೆ.
ಮೊಸರನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು
ಮೊಸರನ್ನ ಮಾಡಲು ಇರಲೇಬೇಕಾದ ಅಗತ್ಯ ವಸ್ತು "ಮೊಸರು". ಹುಳಿಯಾಗದ ಮೊಸರು ಇರಲಿ. ಜತೆಗೆ ಹಾಲು ಕೂಡ ಇರಲಿ. ಮೊಸರನ್ನ ಇನ್ನಷ್ಟು ಟೇಸ್ಟ್ ಆಗಲು ತುಸು ಬೆಣ್ಣೆ ಇರಲಿ. ಇದು ಮೊಸರನ್ನದ ರುಚಿ ಹೆಚ್ಚಿಸುತ್ತದೆ. ಒಗ್ಗರಣೆ ಹಾಕಲು ಕರಿಬೇವಿನ ಎಲೆಗಳು ಬೇಕು. ಒಳ್ಳೆಯ ಗುಣಮಟ್ಟದ ಇಂಗು ಬೇಕು. ಶುಂಠಿ ಇರಲಿ. ಇಂಗು ಜತೆ ಶುಂಠಿ ಸೇರಿದರೆ ವಾಹ್ ಎನಿಸುವ ಪರಿಮಳ, ಸ್ವಾದ ದೊರಕತುತದೆ. ಒಗ್ಗರಣೆ ಹಾಕಲು ಎಣ್ಣೆ ಬೇಕು. ಚಟಪಟ ಒಗಗರಣೆಗೆ ಸಾಸಿವೆ ಮತ್ತು ಉದ್ದಿನ ಬೇಳೆ ಇರಲಿ. ಇದರೊಂದಿಗೆ ಹಸಿ ಮೆಣಸಿನ ಕಾಯಿ. ದಾಳಿಂಬೆ, ದ್ರಾಕ್ಷಿ ಜತೆಗೆ ಮಾವು, ಸೌತೆಕಾಯಿ, ಕ್ಯಾರೆಟ್‌ನಂತಹ ತರಕಾರಿಗಳನ್ನು ಲಭ್ಯತೆಗೆ ತಕ್ಕಂತೆ ಬಳಸಬಹುದು. ಕೊತ್ತಂಬರಿ ಸೊಪ್ಪು ಹಾಕಿದ್ರೆ ಪರಿಮಳ ಚೆನ್ನಾಗಿರುತ್ತದೆ.
- ಮೊಸರು
- ಹಾಲು
- ಬೆಣ್ಣೆ
- ಕರಿಬೇವಿನ ಎಲೆಗಳು
- ಇಂಗು
- ಶುಂಠಿ
- ಎಣ್ಣೆ
- ಸಾಸಿವೆ
- ಉದ್ದಿನ ಬೇಳೆ
- ಹಸಿ ಮೆಣಸಿನ ಕಾಯಿ
- ದಾಳಿಂಬೆ
- ದ್ರಾಕ್ಷಿ
- ಮಾವು, ಸೌತೆಕಾಯಿ, ಕ್ಯಾರೆಟ್ (ಇದ್ದರೆ ಬಳಸಿ)
- ಕೊತ್ತಂಬರಿ ಸೊಪ್ಪು
ಇದನ್ನೂ ಓದಿ: ಚಳಿಗಾಲದ ಸಂಜೆ ವೇಳೆ ಗರಿಗರಿಯಾದ ತಿಂಡಿ ಬೇಕೆನಿಸಿದರೆ ಈ ರೆಸಿಪಿ ಮಾಡಿ ನೋಡಿ: ಇಲ್ಲಿದೆ ಸಬ್ಬಕ್ಕಿ ಪಕೋಡ ಮಾಡುವ ವಿಧಾನ
ಮೊಸರನ್ನ ಮಾಡುವ ವಿಧಾನ
- ಮೊದಲಿಗೆ ಅಕಿಯನ್ನು ಮೂರು ಬಾರಿ ಚೆನ್ನಾಗಿ ತೊಳೆಯಿರಿ. ಡಬಲ್ ನೀರು ಹಾಕಿ ಐದು ವಿಷಲ್ ಹಾಕಿಸಿ. ಒಂದು ಗ್ಲಾಸ್ ನೀರು ಹೆಚ್ಚು ಹಾಕಿದ್ರೂ ತೊಂದರೆ ಇಲ್ಲ. ಯಾಕೆಂದರೆ ಮೊಸರನ್ನಕ್ಕೆ ಅನ್ನ ಮೆತ್ತಗೆ ಇರಬೇಕು.
- ಅನ್ನ ರೆಡಿಯಾದ ಬಳಿಕ ಮ್ಯಾಶ್ ಮಾಡಿ. ಬಳಿಕ ತುಸು ಬಿಸಿ ಹಾಲು ಸೇರಿಸಿ.
- ಬಳಿಕ ಒಂದೆರಡು ಚಮಚ ಬೆಣ್ಣೆ ಸೇರಿಸಿ. ಇನ್ನೂ ಗಟ್ಟಿಗಟ್ಟಿ ದ್ದರೆ ತುಸು ನೀರು ಸೇರಿಸಿ. ಅನ್ನ ತಣ್ಣಗಾಗಲಿ
- ತಣ್ಣಗಾದ ಬಳಿಕ ಮೊಸರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಲೇಟಾಗಿ ತಿನ್ನೋದಾದ್ರೆ ತುಸು ಹೆಚ್ಚು ಉಪ್ಪು ಹಾಕಿ. ಅಕ್ಕಿ ಹುಳಿಯಾದಗ ಉಪ್ಪು ಕಡಿಮೆಯಾಗುತ್ತದೆ.
- ಮೇಲೆ ತಿಳಿಸಿದ ಮೇಲೋಗರ ಐಟಂಗಳನ್ನು ಅಂದರೆ ದಾಳಿಂಬೆ, ಮಾವಿನಕಾಯಿ, ಸೌತೆಕಾಯಿ, ಕ್ಯಾರೆಟ್ ಚೂರುಗಳನ್ನು ಹಾಕಿ ಮಿಕ್ಸ್ ಮಾಡಿ.
- ಇದಾದ ಬಳಿಕ ಸಾಸಿವೆ ಮತ್ತು ಉದ್ದಿನ ಬೇಳೆಯನ್ನು ಎಣ್ಣೆಯಲ್ಲಿ ಕಾಯಸಿ, ಕರಿಬೇವಿನ ಸೊಪ್ಪುಗಳನ್ನು ಹಾಕಿ ಚಟಪಟ ಒಗ್ಗರಣೆ ನೀಡಿ.
- ಕೊನೆಗೆ ಕತ್ತರಿಸಿದ ತುಸು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಮೊಸರನ್ನದ ಮೇಲೆ ಹಾಕಿ. ಬೇಕಿದ್ರೆ ದ್ರಾಕ್ಷಿ, ಸೇಬು ಇತ್ಯಾದಿಗಳನ್ನೂ ಹಾಕಬಹುದು.
ಇದನ್ನೂ ಓದಿ: ಪ್ರೋಟೀನ್ ಸಮೃದ್ಧವಾಗಿರುವ ಕಡಲೆಕಾಯಿ ಮೊಸರು ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ; ತೂಕ ಇಳಿಕೆಗೂ ಬೆಸ್ಟ್ ರೆಸಿಪಿಯಿದು
ವಿಭಾಗ