ಚಳಿಗಾಲದ ಸಂಜೆ ವೇಳೆ ಗರಿಗರಿಯಾದ ತಿಂಡಿ ಬೇಕೆನಿಸಿದರೆ ಈ ರೆಸಿಪಿ ಮಾಡಿ ನೋಡಿ: ಇಲ್ಲಿದೆ ಸಬ್ಬಕ್ಕಿ ಪಕೋಡ ಮಾಡುವ ವಿಧಾನ
ಸಬ್ಬಕ್ಕಿ ಪಾಯಸ, ಹಪ್ಪಳ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದರಿಂದ ಪಕೋಡಗಳನ್ನು ಕೂಡ ತಯಾರಿಸಬಹುದು. ಗರಿಗರಿಯಾದ ಮತ್ತು ಕುರುಕುಲಾದ ಸಬ್ಬಕ್ಕಿ ಪಕೋಡ ತಿನ್ನಲು ರುಚಿಕರವಾಗಿರುತ್ತದೆ. ಒಮ್ಮೆ ಈ ಪಕೋಡ ಹೇಗೆ ಮಾಡುವುದು ಎಂದು ತಿಳಿದರೆ ಮತ್ತೆ ಮತ್ತೆ ಮಾಡುವಿರಿ. ಇಲ್ಲಿದೆ ಸಬ್ಬಕ್ಕಿ ಪಕೋಡ ರೆಸಿಪಿ ಮಾಡುವ ವಿಧಾನ.
ಸಂಜೆಯಾದರೆ ಸಾಕು ಚಳಿಗಾಲದಲ್ಲಿ ಪಕೋಡ ತಿನ್ನುವ ಆಸೆ ಹೆಚ್ಚುತ್ತದೆ. ಕಡಲೆ ಹಿಟ್ಟಿನ ಪಕೋಡ ಮಾತ್ರವಲ್ಲದೆ ಆರೋಗ್ಯಕರ ಸಬ್ಬಕ್ಕಿ ಪಕೋಡಗಳನ್ನು ತಿನ್ನಲು ರುಚಿಕರವಾಗಿರುತ್ತದೆ. ಗರಿಗರಿಯಾದ ಮತ್ತು ಕುರುಕುಲಾದ ಸಬ್ಬಕ್ಕಿ ಪಕೋಡ ತಿನ್ನಲು ರುಚಿಕರವಾಗಿರುತ್ತದೆ. ಸಬ್ಬಕ್ಕಿ ಪಾಯಸ, ಹಪ್ಪಳ ಮಾತ್ರವಲ್ಲ ಪಕೋಡವನ್ನು ಕೂಡ ರುಚಿಕರವಾಗಿ ತಯಾರಿಸಬಹುದು. ಒಮ್ಮೆ ಈ ಪಕೋಡ ಹೇಗೆ ಮಾಡುವುದು ಎಂದು ತಿಳಿದರೆ ಮತ್ತೆ ಮತ್ತೆ ಮಾಡುವಿರಿ. ಖಂಡಿತ ಅದು ನಿಮಗೆ ಇಷ್ಟವಾಗುತ್ತದೆ. ಇಲ್ಲಿದೆ ಸಬ್ಬಕ್ಕಿ ಪಕೋಡ ರೆಸಿಪಿ ಮಾಡುವ ವಿಧಾನ.
ಸಬ್ಬಕ್ಕಿ ಪಕೋಡ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ- ಅರ್ಧ ಕಪ್, ಆಲೂಗಡ್ಡೆ- ಎರಡು, ಕಡಲೆಬೇಳೆ- ಕಾಲು ಕಪ್, ಮೆಣಸಿನ ಪುಡಿ- ಎರಡು ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಕೊತ್ತಂಬರಿ ಪುಡಿ- ಕಾಲು ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು.
ರೆಸಿಪಿ ಮಾಡುವ ವಿಧಾನ: ಸಬ್ಬಕ್ಕಿ ಪಕೋಡ ಮಾಡುವ ಮೊದಲು ಸಾಬೂದನವನ್ನು (ಸಬ್ಬಕ್ಕಿ) ನೆನೆಸಿಡುವ ಅಗತ್ಯವಿಲ್ಲ. ಸಬ್ಬಕ್ಕಿಯನ್ನು ನುಣ್ಣಗೆ ಪುಡಿಮಾಡಿ, ಅದನ್ನು ಪಕ್ಕಕ್ಕೆ ಇರಿಸಿ. ಈಗ ಆಲೂಗಡ್ಡೆಯನ್ನು ಒಂದು ಬೌಲ್ ನೀರಿನಲ್ಲಿ ಕುದಿಸಿ, ನಂತರ ಅದರ ಸಿಪ್ಪೆಯನ್ನು ತೆಗೆದುಹಾಕಿ. ಈ ಆಲೂಗಡ್ಡೆಯನ್ನು ಇನ್ನೊಂದು ಬಟ್ಟಲಿನಲ್ಲಿ ಸೇರಿಸಿ, ಅವುಗಳನ್ನು ಕೈಗಳಿಂದ ಮ್ಯಾಶ್ ಮಾಡಿ. ಅದಕ್ಕೆ ಮೊದಲೇ ಪುಡಿ ಮಾಡಿದ ಸಬ್ಬಕ್ಕಿ ಪುಡಿಯನ್ನು ಹಾಕಿ.
ಕಡಲೆಬೇಳೆಯನ್ನು ಮಿಕ್ಸರ್‌ಗೆ ಹಾಕಿ ಒರಟಾಗಿ ರುಬ್ಬಿಕೊಳ್ಳಿ. ಜತೆಗೆ ಹಸಿರು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈ ಸಂಪೂರ್ಣ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಈಗ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ, ಆಳವಾಗಿ ಕರಿಯಲು ಸಾಕಷ್ಟು ಎಣ್ಣೆಯನ್ನು ಸೇರಿಸಿ.
ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ ಉಂಡೆಗಳಂತೆ ಮಾಡಿ ಬಿಡಿ. ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ರುಚಿಕರವಾದ ಸಬ್ಬಕ್ಕಿ ಪಕೋಡ ಸವಿಯಲು ಸಿದ್ಧ. ಅವು ಗರಿಗರಿಯಾಗಿದ್ದು ಹಾಗೂ ಕುರುಕಲು ಆಗಿರುವುದರಿಂದ ನೀವು ಹೆಚ್ಚು ತಿನ್ನಲು ಬಯಸುತ್ತೀರಿ. ಸಾಯಂಕಾಲ ಚಹಾ ಜತೆ ಬಿಸಿಬಿಸಿಯಾಗಿ ತಿಂದರೆ ರುಚಿ ಇನ್ನಷ್ಟು ಹೆಚ್ಚಿರುತ್ತದೆ. ಪುದೀನಾ ಚಟ್ನಿಯಲ್ಲಿ ಅದ್ದಿ ತಿಂದರೆ ರುಚಿಯೇ ಬೇರೆ.
ಕಡಲೆ ಹಿಟ್ಟಿನಿಂದ ಪಕೋಡ ಮಾಡಿ ಬೇಜಾರಾದರೆ ಈ ರೀತಿ ಸಬ್ಬಕ್ಕಿಯಿಂದ ಪಕೋಡ ಮಾಡಿ ನೋಡಿ. ನಿಮಗೆ ಇದು ತುಂಬಾ ಇಷ್ಟವಾಗುತ್ತದೆ. ಇವುಗಳನ್ನು ಮಾಡುವುದು ಕೂಡ ತುಂಬಾ ಸುಲಭ. ಸಬ್ಬಕ್ಕಿಯನ್ನು ನೆನೆಸುವ ಅಗತ್ಯವಿಲ್ಲ. ಹೀಗಾಗಿ ನಿಮಗೆ ಬೇಕು ಎಂದೆನಿಸಿದಾಗ ಮಾಡಬಹುದು. ಕೇವಲ ಆಲೂಗಡ್ಡೆಯನ್ನು ಕುದಿಸಿದರೆ ಆಯ್ತು. ಒಮ್ಮೆ ಈ ರೆಸಿಪಿಯನ್ನು ಮಾಡಿದರೆ ಮತ್ತೆ ಮತ್ತೆ ಮಾಡಿ ತಿನ್ನುವಿರಿ. ಮನೆಗೆ ಸಂಜೆ ವೇಳೆಗೆ ಅತಿಥಿಗಳು ಬಂದರೆ ಅವರಿಗೂ ಮಾಡಿ ಕೊಡಬಹುದು.
ವಿಭಾಗ