ಪ್ರೋಟೀನ್ ಸಮೃದ್ಧವಾಗಿರುವ ಕಡಲೆಕಾಯಿ ಮೊಸರು ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ; ತೂಕ ಇಳಿಕೆಗೂ ಬೆಸ್ಟ್ ರೆಸಿಪಿಯಿದು
ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಕಡಲೆಕಾಯಿ ಮೊಸರು ಚಟ್ನಿಯು ದೋಸೆ,ಇಡ್ಲಿ, ವಡೆ,ಚಪಾತಿ ಮುಂತಾದ ಭಕ್ಷ್ಯಗಳಲ್ಲಿ ನೆಂಜಿಕೊಂಡು ತಿನ್ನಲು ಬಳಸಬಹುದು. ಈ ಚಟ್ನಿಯಲ್ಲಿ ಹೆಚ್ಚಿನ ಪ್ರೋಟೀನ್ ಇದೆ. ತೂಕ ಇಳಿಸಿಕೊಳ್ಳಲು ಬಯಸುವವರೂ ಇದನ್ನು ತಿನ್ನಬಹುದು. ಈ ಕಡಲೆಕಾಯಿ ಮೊಸರು ಚಟ್ನಿ ರೆಸಿಪಿ ಮಾಡುವ ವಿಧಾನ ಹೇಗೆ ಎಂಬುದು ಇಲ್ಲಿದೆ.
ಕಡಲೆಕಾಯಿ ಮತ್ತು ಮೊಸರು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇವೆರಡನ್ನು ಸೇರಿಸಿ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು. ಕಡಲೆಕಾಯಿ ಮೊಸರು ಚಟ್ನಿಯನ್ನು ದೋಸೆ, ಇಡ್ಲಿ, ವಡೆ, ಚಪಾತಿ ಮುಂತಾದ ಭಕ್ಷ್ಯಗಳಲ್ಲಿ ನೆಂಜಿಕೊಂಡು ತಿನ್ನಲು ಬಳಸಬಹುದು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಇದನ್ನು ತಮ್ಮ ಆಹಾರಕ್ರಮದಲ್ಲಿ ಸಹ ತೆಗೆದುಕೊಳ್ಳಬಹುದು. ತೂಕ ನಷ್ಟಕ್ಕೆ ಪ್ರೋಟೀನ್ ಉಪಯುಕ್ತವಾಗಿದೆ. ಕೊತ್ತಂಬರಿ ಸೊಪ್ಪು ಇದಕ್ಕೆ ಉತ್ತಮ ಪರಿಮಳವನ್ನು ತರುತ್ತದೆ. ಈ ಕಡಲೆಕಾಯಿ ಮೊಸರು ಚಟ್ನಿ ರೆಸಿಪಿ ಮಾಡುವ ವಿಧಾನ ಹೇಗೆ ಎಂಬುದು ಇಲ್ಲಿದೆ.
ಕಡಲೆಕಾಯಿ ಮೊಸರು ಚಟ್ನಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಹುರಿದ ಕಡಲೆಕಾಯಿ- ಒಂದು ಕಪ್, ಮೊಸರು- ಒಂದು ಕಪ್, ಕೊತ್ತಂಬರಿ ಸೊಪ್ಪು- ಒಂದು ಹಿಡಿಯಷ್ಟು, ಶುಂಠಿ- ಒಂದು ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ- ಒಂದು ಟೀ ಚಮಚ.
ಮಾಡುವ ವಿಧಾನ: ಮೊದಲು ಸ್ಟೌವ್ ಮೇಲೆ ಬಾಣಲೆ ಇಟ್ಟು ಅದರಲ್ಲಿ ಕಡಲೆಕಾಯಿಯನ್ನು ಹುರಿದುಕೊಳ್ಳಿ. ಅದನ್ನು ಕಡಿಮೆ ಉರಿಯಲ್ಲಿ ಹುರಿದರೆ, ಅದು ಒಳಗಿನಿಂದ ಚೆನ್ನಾಗಿ ಬೇಯುತ್ತದೆ. ಕಡಲೆಕಾಯಿ ಹುರಿದ ನಂತರ, ಅದನ್ನು ತಣ್ಣಗಾಗಿಸಿ ಕಡಲೆಕಾಯಿಯನ್ನು ಪಕ್ಕಕ್ಕೆ ಇರಿಸಿ. ನಂತರ ಮಿಕ್ಸಿ ಜಾರ್‌ನಲ್ಲಿ ಹುರಿದ ಕಡಲೆಕಾಯಿಯನ್ನು ಹಾಕಿ. ಅದರ ನಂತರ ಮೊಸರು ಹಾಕಿ. ಆ ಜಾರ್‌ನಲ್ಲಿ ಕತ್ತರಿಸಿದ ಮೆಣಸಿನಕಾಯಿ, ಸ್ವಲ್ಪ ಶುಂಠಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಚಿಟಿಕೆ ಉಪ್ಪು ಸೇರಿಸಿ, ಮಿಕ್ಸರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ತುಂಬಾ ರುಚಿಯಾಗಿರುವ ಕಡಲೆಕಾಯಿ ಮೊಸರು ಚಟ್ನಿ ರೆಡಿ.
ಈ ಚಟ್ನಿಯು ಒಗ್ಗರಣೆ ಇಲ್ಲದಿದ್ದರೂ ಚೆನ್ನಾಗಿರುತ್ತದೆ. ನಿಮಗೆ ಒಗ್ಗರಣೆ ಬೇಕು ಎಂದಾದರೆ, ಅದನ್ನು ತಯಾರಿಸಿ ಚಟ್ನಿಗೆ ಮಿಶ್ರಣ ಮಾಡಬಹುದು. ಒಗ್ಗರಣೆಗಾಗಿ, ಮೊದಲು ಬಾಣಲೆಯಲ್ಲಿ ಒಂದು ಚಮಚ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ ಸ್ವಲ್ಪ ಸಾಸಿವೆ, ಸ್ವಲ್ಪ ಜೀರಿಗೆ, ಕಾಳುಮೆಣಸು ಮತ್ತು ಸ್ವಲ್ಪ ಕರಿಬೇವು ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ನಂತರ ಇದನ್ನು ಚಟ್ನಿಗೆ ಸೇರಿಸಬಹುದು. ತುಂಬಾ ರುಚಿಕರವಾಗಿರುತ್ತದೆ.
ತೂಕ ನಷ್ಟಕ್ಕೆ ಸಹಕಾರಿ ಕಡಲೆಕಾಯಿ ಮೊಸರು ಚಟ್ನಿ
ಕಡಲೆಕಾಯಿ ಮತ್ತು ಮೊಸರಿನೊಂದಿಗೆ ಮಾಡಿದ ಈ ಚಟ್ನಿಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ತೂಕ ನಷ್ಟಕ್ಕೆ ಪ್ರೋಟೀನ್ ತುಂಬಾ ಸಹಾಯಕವಾಗಿದೆ. ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಇದು ಹೆಚ್ಚು ಆಹಾರವನ್ನು ತಿನ್ನುವುದನ್ನು ತಡೆಯುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಪ್ರೋಟೀನ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ, ಸ್ನಾಯುಗಳ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ.
ವಿಭಾಗ