logo
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day: ಸ್ನೇಹ ಇಂದಿಗೂ ಎಂದೆಂದಿಗೂ; ಉತ್ತಮ ಸ್ನೇಹಿತರೆನ್ನಿಸಿಕೊಳ್ಳಲು ಈ 5 ಟಿಪ್ಸ್‌ ಪಾಲಿಸಲು ಮರೆಯದಿರಿ

Friendship Day: ಸ್ನೇಹ ಇಂದಿಗೂ ಎಂದೆಂದಿಗೂ; ಉತ್ತಮ ಸ್ನೇಹಿತರೆನ್ನಿಸಿಕೊಳ್ಳಲು ಈ 5 ಟಿಪ್ಸ್‌ ಪಾಲಿಸಲು ಮರೆಯದಿರಿ

HT Kannada Desk HT Kannada

Aug 04, 2024 09:46 PM IST

google News

ಬೆಸ್ಟ್‌ ಫ್ರೆಂಡ್ಸ್‌ ಆಗಲು ಇಲ್ಲಿದೆ 5 ಟಿಪ್ಸ್‌

    • Friends Forever: ಸ್ನೇಹಿತರೆಂದರೆ ಯಾರು, ಅವರೊಂದಿಗೆ ನಮ್ಮ ವರ್ತನೆ ಹೇಗಿರಬೇಕು, ಅವರನ್ನು ಗೌರವಿಸುವುದು ಮತ್ತು ಅವರಿಂದ ಗೌರವ ಪಡೆಯುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಉತ್ತಮ ಸ್ನೇಹಿತರನ್ನು ಪಡೆಯಲು ಐದು ಟಿಪ್ಸ್‌ ಇಲ್ಲಿದೆ.
ಬೆಸ್ಟ್‌ ಫ್ರೆಂಡ್ಸ್‌ ಆಗಲು ಇಲ್ಲಿದೆ 5 ಟಿಪ್ಸ್‌
ಬೆಸ್ಟ್‌ ಫ್ರೆಂಡ್ಸ್‌ ಆಗಲು ಇಲ್ಲಿದೆ 5 ಟಿಪ್ಸ್‌

ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ.

ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ.

ಶಾಲಾ ದಿನಗಳಿಂದ ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ. ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು‌ ಸ್ನೇಹಿತರೊಂದಿಗೆ ಮಾತ್ರ.

ಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು.

ಜೀವನದಲ್ಲಿ ಪ್ರತಿ ವ್ಯಕ್ತಿಗೂ ಸ್ನೇಹಿತರ ಅಗತ್ಯವಿದೆ, ಸಮಸ್ಯೆಗಳನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ಸ್ನೇಹಿತರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಒತ್ತಡ ಅಥವಾ ಆತಂಕ ಕಡಿಮೆಯಾಗುತ್ತದೆ. ಸಮಸ್ಯೆಗಳಿಂದ ಹೊರಬರಲು ಸ್ನೇಹಿತರು ನೀಡುವ ಸಲಹೆ ಅತ್ಯಮೂಲ್ಯವಾಗಿರುತ್ತದೆ. ಈ ಸಲಹೆಗಳು ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ ನಿಜವಾದ ಸ್ನೇಹಿತರು ಎಂದಿಗೂ ತಪ್ಪು ದಾರಿಗೆ ಹೋಗಲು ಬಿಡುವುದಿಲ್ಲ ಸರಿಯಾದ ದಾರಿಯನ್ನೇ ತೋರುತ್ತಾರೆ. ಪ್ರತಿಯೊಬ್ಬರಿಗೂ ಇಂತಹ ಗೆಳೆಯರ ಅಗತ್ಯವಿದೆ.

ಸ್ನೇಹಿತರೆಂದರೆ ಯಾರು ಅವರೊಂದಿಗೆ ನಾವು ಹೇಗೆ ಇರಬೇಕು ಅವರನ್ನು ಗೌರವಿಸುವುದು ಮತ್ತು ಗೌರವ ಪಡೆಯುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಉತ್ತಮ ಸ್ನೇಹಿತರನ್ನು ಪಡೆಯಲು ಬೇಕಾಗಿರುವ ಐದು ಮಾರ್ಗಗಳು ಇಲ್ಲಿವೆ.

ಪ್ರತಿಯೊಬ್ಬರಿಗೂ ಆರೋಗ್ಯಕರ ಸ್ನೇಹದ ಹಂಬಲವಿರುತ್ತದೆ ಹೀಗಾಗಿ ನಮ್ಮ ಸ್ನೇಹಿತರಿಗೆ ನಾವು ಉತ್ತಮ ಸ್ನೇಹಿತರಾಗುವುದು ಹೇಗೆ ಎಂಬುದರತ್ತ ಹೆಚ್ಚು ಗಮನ ಹರಿಸಬೇಕು.

ನಿರಂತರ ಸಂಪರ್ಕ

ಸ್ನೇಹಿತರೊಂದಿಗೆ ಸತತ ಸಂಪರ್ಕದಲ್ಲಿರಬೇಕು. ಸ್ನೇಹಿತರು ಕೆಲವೊಮ್ಮೆ ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಗಳಿಂದ ಅವರು ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದೇ ಇರಬಹುದು. ಆದರೂ ನೀವು ಅವರನ್ನು ಬಿಟ್ಟು ಕೊಡದೆ ನೀವೇ ಪದೇ ಪದೇ ಸಂಪರ್ಕಿಸುವುದು ನಿಜವಾದ ಸ್ನೇಹ. ಇದರಿಂದ ಅವರಿಗೆ ನಿಮ್ಮ ಮೇಲೆ ನಂಬಿಕೆ ಉಂಟಾಗಲಿದೆ. ಜೊತೆಗೆ ನೀವು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂಬುದು ಅವರಿಗೆ ಅರಿವಾಗುತ್ತದೆ.

ಒಳ್ಳೆಯ ಕೇಳುಗನಾಗಿ

ನಿಮ್ಮ ಸ್ನೇಹಿತರು ಯಾವುದೋ ಒಂದು ವಿಷಯದ ಬಗ್ಗೆ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಬೇಕೆಂದು ಬಯಸಿರುತ್ತಾರೆ, ಅಂತಹ ಸಂದರ್ಭದಲ್ಲಿ ಅವರಿಗೆ ಸಮಯ ನೀಡಬೇಕು. ಅವರ ಮಾತುಗಳನ್ನು ಆಲಿಸಬೇಕು. ನಂತರ ಅದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ನೀಡಬೇಕು ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಉತ್ತಮ ಗೆಳೆಯರಾಗಿ.

ಮೆಚ್ಚುಗೆ ವ್ಯಕ್ತಪಡಿಸುವುದು

ನಿಮ್ಮ ಗೆಳೆಯರು ನಿಮಗೆ ಅವರ ಸಂತೋಷದ ವಿಷಯಗಳನ್ನು ಹಂಚಿಕೊಂಡಾಗ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ. ಅವರ ಯಶಸ್ಸಿನಲ್ಲಿ ಸಹಭಾಗಿಯಾಗಿ‌. ಅವರ ಸಂತೋಷದಲ್ಲಿ ಸಂಭ್ರಮದಲ್ಲಿ ಸದಾ ಜೊತೆಯಾಗಿರಿ.

ಸಂವಹನ

ಸಂವಹನವು ಪ್ರತಿ ಸಂಬಂಧದ ಅಡಿಪಾಯ ಮತ್ತು ಸ್ನೇಹಕ್ಕೆ ಒಂದು ರೂಪವನ್ನು ನೀಡಲಿದೆ. ಸ್ನೇಹಕ್ಕೆ ಮುಖ್ಯವಾಗಿ ಬೇಕಿರುವುದು ಸಂವಹನ. ಸ್ನೇಹಿತರೊಂದಿಗೆ ನಾವು ಎಲ್ಲವನ್ನು ಅವರಿಗೆ ತಿಳಿಸಿಕೊಡಲು ಸಂವಹನದ ಅಗತ್ಯವಿದೆ. ಸ್ನೇಹಿತರೊಂದಿಗೆ ಸಂವಹನ ನಡೆದಷ್ಟು ಸ್ನೇಹ ಗಟ್ಟಿಯಾಗಲಿದೆ. ಸ್ನೇಹಕ್ಕೆ ಸ್ಪಷ್ಟತೆಯು ಬರಲಿದೆ.

ಸಂತೋಷದಿಂದಿರಿ

ನೀವು ಸ್ನೇಹಿತರನ್ನು ಭೇಟಿಯಾದಾಗ ಅಥವಾ ಫೋನ್‌ನಲ್ಲಿ ಮಾತನಾಡುವಾಗ ನಿಮ್ಮ ಹಳೆಯ ನೆನಪುಗಳನ್ನು ಮತ್ತೆ ಮತ್ತೆ ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ನೀವು ಹೆಚ್ಚು ಸಂತೋಷ ಮತ್ತು ನಗುವನ್ನು ಕಾಣಲು ಸಾಧ್ಯವಾಗುತ್ತದೆ. ಸ್ನೇಹಿತರನ್ನು ಭೇಟಿಯಾದಾಗ ಅವರೊಂದಿಗೆ ಹೆಚ್ಚು ಸಂತೋಷದಿಂದ ನಗುನಗುತ ಕಾಲವನ್ನು ಕಳೆಯಿರಿ. ಅವರಲ್ಲೂ ಸಹ ಅದೇ ಸಂತೋಷ ಇರುವಂತೆ ನಡೆದುಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ