logo
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day 2024: ಜುಲೈ 30 Vs ಆಗಸ್ಟ್‌ 4 ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಹಿನ್ನಲೆ ಏನು? ಇಲ್ಲಿದೆ ಉತ್ತರ

Friendship Day 2024: ಜುಲೈ 30 vs ಆಗಸ್ಟ್‌ 4 ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಹಿನ್ನಲೆ ಏನು? ಇಲ್ಲಿದೆ ಉತ್ತರ

Reshma HT Kannada

Aug 04, 2024 09:46 PM IST

google News

ಜುಲೈ 30 vs ಆಗಸ್ಟ್‌ 4 ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಹಿನ್ನಲೆ ಏನು? ಇಲ್ಲಿದೆ ಉತ್ತರ

    • ಹಾಲ್‌ಮಾರ್ಕ್‌ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್‌ ಹಾಲ್‌ 1919ರಲ್ಲಿ ಫ್ರೆಂಡ್‌ಶಿಪ್‌ ಡೇ ಆಚರಣೆಗೆ ಕರೆ ನೀಡುತ್ತಾರೆ. ಆದರೆ ಪ್ರಪಂಚದಾದ್ಯಂತ ಬೇರೆ ಬೇರೆ ದಿನಗಳಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಫ್ರೆಂಡ್‌ಶಿಪ್‌ ಇರೋದು ಜುಲೈ 30 ಅಥವಾ ಆಗಸ್ಟ್‌ 4 ಎಂಬ ಗೊಂದಲ ನಿಮ್ಮಲ್ಲೂ ಇದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಜುಲೈ 30 vs ಆಗಸ್ಟ್‌ 4 ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಹಿನ್ನಲೆ ಏನು? ಇಲ್ಲಿದೆ ಉತ್ತರ
ಜುಲೈ 30 vs ಆಗಸ್ಟ್‌ 4 ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಹಿನ್ನಲೆ ಏನು? ಇಲ್ಲಿದೆ ಉತ್ತರ

ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧ ಎಂದರೆ ಅದು ಸ್ನೇಹ. ಸ್ನೇಹ ಎಂಬ ಪದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುರಾಣ ಕಾಲದಿಂದಲೂ ಸ್ನೇಹಕ್ಕಿರುವ ಬೆಲೆ ಬೇರೆ ಯಾವ ಸಂಬಂಧಕ್ಕೂ ಇಲ್ಲ ಎನ್ನಬಹುದು. ಸ್ನೇಹ ಬಂಧವನ್ನು ಸಂಭ್ರಮಿಸುವ ಸುಂದರ ದಿನ ಸ್ನೇಹಿತರ ದಿನಾಚರಣೆ. ಸ್ನೇಹವನ್ನು ಆಚರಿಸುವ, ಸ್ನೇಹಿತರನ್ನು ಸ್ಮರಿಸುವ, ಸ್ನೇಹವನ್ನು ಸಂಭ್ರಮಿಸುವ ಈ ದಿನ ಪ್ರಪಂಚದಾದ್ಯಂತ ಬಹಳ ವಿಶೇಷ. ಸ್ನೇಹಿತರಿಗೆ ಸರ್ಪಸ್ರೈ ನೀಡುವ ಸಲುವಾಗಿ ಈ ದಿನಕ್ಕಾಗಿ ಕಾಯುವವರು ಇದ್ದಾರೆ. ಆದರೆ ಸ್ನೇಹಿತರ ದಿನಾಚರಣೆಯ ಬಗ್ಗೆ ಕೆಲವು ಗೊಂದಲಗಳಿವೆ. ಅದರಲ್ಲಿ ಮುಖ್ಯವಾದುದು ಸ್ನೇಹಿತರ ದಿನಾಚರಣೆ ಯಾವಾಗ ಎಂಬುದು. ಯಾಕೆಂದರೆ ಒಂದೊಂದು ದೇಶದಲ್ಲಿ ಒಂದೊಂದು ದಿನ ಸ್ನೇಹಿತರ ದಿನ ಆಚರಿಸುತ್ತಾರೆ.

ಮೊನ್ನೆ ಜುಲೈ 30ಕ್ಕೆ ಯಾರೋ ಫ್ರೆಂಡ್‌ಶಿಪ್‌ ಡೇ ಅಂತ ವಿಶ್‌ ಮಾಡಿದ್ರು ಈಗ ಮತ್ತೆ ಆಗಸ್ಟ್‌ 4ಕ್ಕೆ ಫ್ರೆಂಡ್‌ಶಿಪ್‌ ಡೇ ಅಂತಾ ಇದಾರೆ, ಏನಿದು ಕಥೆ, ಎಂದು ನಿಮಗೆ ಅನ್ನಿಸಬಹುದು. ಇದು ನಿಜಕ್ಕೂ ಗೊಂದಲ ಮೂಡಿಸುವ ವಿಚಾರವೂ ಹೌದು. ಹಾಗಾದ್ರೆ ನಿಜಕ್ಕೂ ಫ್ರೆಂಡ್‌ಶಿಪ್‌ ಡೇ ಯಾವಾಗ?

ಸ್ನೇಹಿತರ ದಿನ ಯಾವಾಗ?

ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕರಾದ ಜಾಯ್ಸ್ ಹಾಲ್ ಅವರು ಸ್ನೇಹವನ್ನು ಗೌರವಿಸುವ ಮತ್ತು ಆಚರಿಸುವ ಸ್ನೇಹಿತರ ದಿನದ ಆಚರಣೆಯನ್ನು ಜಾರಿಗೆ ತಂದರು. ಜನರು ತಮ್ಮ ಸ್ನೇಹಿತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಒಂದು ದಿನವನ್ನು ರಚಿಸುವುದು ಇದರ ಉದ್ದೇಶವಾಗಿತ್ತು. ನಂತರದ ದಿನಗಳಲ್ಲಿ ಇದು ರಾಷ್ಟ್ರವ್ಯಾಪಿಯಾಗಿ ಬೆಳೆಯಿತು. ಇದು ವಿಶ್ವವ್ಯಾಪಿ ಪಸರಿಸಿ, ಸ್ನೇಹಿತರ ದಿನವನ್ನು ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲು ಆರಂಭಿಸಲಾಯಿತು.

2011ರಲ್ಲಿ, ವಿಶ್ವಸಂಸ್ಥೆಯು ಜುಲೈ 30 ರಂದು ಅಂತರರಾಷ್ಟ್ರೀಯ ಸ್ನೇಹ ದಿನ ಎಂದು ಗುರುತಿಸಿತು. ದೇಶಗಳು, ಸಂಸ್ಕೃತಿ, ಜನರು ನಡುವೆ ಸ್ನೇಹ ಸಂಬಂಧ ವೃದ್ಧಿಸುವ ಉದ್ದೇಶದಿಂದ ಈ ದಿನದ ಆಚರಣೆಯನ್ನು ಜಾರಿಗೆ ತರಲಾಯಿತು. ಒಟ್ಟಾರೆ ಪ್ರಪಂಚದಾದ್ಯಂತ ಒಗ್ಗಟ್ಟು ಸಾಧಿಸುವ ಉದ್ದೇಶವನ್ನೂ ಹೊಂದಿದೆ ಅಂತರರಾಷ್ಟ್ರೀಯ ಸ್ನೇಹಿತರ ದಿನ.

ಅದೇನೇ ಇದ್ದರೂ ಭಾರತ ಸೇರಿದಂತೆ ಹಲವು ಇತರ ದೇಶಗಳು ಆಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2024 ರಲ್ಲಿ ಆಗಸ್ಟ್‌ 4 ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಕುತೂಹಲಕಾರಿಯಾಗಿ ಮೆಕ್ಸಿಕೊ, ಈಕ್ವೆಡಾರ್‌ನಂತಹ ಹಲವಾರು ದೇಶಗಳು ಫೆಬ್ರವರಿ 14 ರಂದು ಸ್ನೇಹ ದಿನವನ್ನು ಆಚರಿಸುತ್ತವೆ. ಸಿಂಗಾಪುರದಲ್ಲಿ ಏಪ್ರಿಲ್ ಮೂರನೇ ವಾರದಲ್ಲಿ ಸ್ನೇಹ ದಿನವನ್ನು ಆಚರಿಸುತ್ತಾರೆ.

ಸ್ನೇಹಿತರ ದಿನವನ್ನು ಯಾವ ದಿನವೇ ಆಚರಿಸಲಿ, ಆದರೆ ಈ ಆಚರಣೆಯ ಹಿಂದಿನ ಉದ್ದೇಶ ಮಾತ್ರ ಸ್ವಷ್ಟ. ಸ್ನೇಹಿತರ ದಿನದ ಆಚರಣೆಯ ಭಾವ ಮಾತ್ರ ಬದಲಾಗುವುದಿಲ್ಲ. ನಮ್ಮೆಲ್ಲಾ ಕಷ್ಟಕ್ಕೆ ಹೆಗಲಾಗಿ, ನೋವಿಗೆ ನೋವಾಗಿ, ನಲಿವಿಗೆ ನಲಿವಾಗಿ ಜೊತೆಗಿರುವ ನಿಸ್ವಾರ್ಥ ಸಂಬಂಧ ಸ್ನೇಹ ಸಂಬಂಧ. ಈ ಸಂಬಂಧಕ್ಕೆ ಗೌರವ ನೀಡುವುದು, ಸ್ನೇಹಿತರನ್ನು ನೆನೆಯುವುದು, ಉಡುಗೊರೆ ನೀಡುವುದು ಮಾಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಬಹುದು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ