Friendship Day 2024: ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day 2024: ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

Friendship Day 2024: ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಜಗತ್ತಿನ ಅತಿ ಸುಂದರ ಸಂಬಂಧ ಎಂದರೆ ಅದು ಸ್ನೇಹ. ಪುರಾಣ ಕಾಲದಿಂದ ಇಂದಿನವರೆಗೆ ನಾವು ಹಲವು ಬೆಸ್ಟ್‌ ಫ್ರೆಂಡ್ಸ್‌ಗಳನ್ನ ನೋಡಿದ್ದೇವೆ. ಸ್ನೇಹ ಎಂಬ ಸಂಬಂಧಕ್ಕೆ ಮಿಗಿಲಾದುದಿಲ್ಲ. ಇಂತಹ ಸುಂದರ ಸಂಬಂಧವನ್ನು ಸಂಭ್ರಮಿಸಲು ಒಂದು ದಿನವಿದೆ. ಅದುವೇ ಫ್ರೆಂಡ್‌ಶಿಪ್‌ ಡೇ. ಭಾರತದಲ್ಲಿ ಫ್ರೆಂಡ್‌ಶಿಪ್‌ ಯಾವಾಗ? ಈ ದಿನದ ಇತಿಹಾಸ, ಹಿನ್ನೆಲೆ ತಿಳಿಯಿರಿ.

ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನದ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಈ ಪ್ರಪಂಚದಲ್ಲಿ ಸ್ವಾರ್ಥ, ದುರಾಸೆ ಇಲ್ಲದ ಒಂದೇ ಒಂದು ಸುಂದರ, ನಿಷ್ಕಲ್ಮಶ ಸಂಬಂಧ ಎಂದರೆ ಅದು ಸ್ನೇಹ. ಸ್ನೇಹದಲ್ಲಿ ನಾನು ಎಂಬ ಅಹಂ ಇಲ್ಲ, ನನ್ನದು ಎಂಬ ದುರಾಸೆ ಇಲ್ಲ. ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ ಎಂಬ ಭಾವವಷ್ಟೇ ಸ್ನೇಹಕ್ಕೆ ಅಡಿಪಾಯ. ಇಂತಹ ಸುಂದರ ಸಂಬಂಧವನ್ನು ಸಂಭ್ರಮಿಸಲೂ ಒಂದು ದಿನವಿದೆ. ಈ ದಿನವನ್ನು ಫ್ರೆಂಡ್‌ಶಿಪ್‌ ಡೇ ಎಂದು ಕರೆಯುತ್ತಾರೆ.

ಸ್ನೇಹಿತರ ದಿನವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಹಾಗಾದರೆ ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನವನ್ನು ಆಚರಿಸುವ ಉದ್ದೇಶವೇನು, ಈ ದಿನದ ಇತಿಹಾಸ ಹಿನ್ನೆಲೆಯೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಫ್ರೆಂಡ್‌ಶಿಪ್‌ ಡೇ ಯಾವಾಗ?

ಪ್ರತಿ ವರ್ಷ ಆಗಸ್ಟ್‌ ಮೊದಲ ಭಾನುವಾರ (ಇಂದು) ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ 4ರಂದು ಫ್ರೆಂಡ್‌ಶಿಪ್‌ ಡೇ ಇದೆ.

ಸ್ನೇಹಿತರ ದಿನ ಆರಂಭಿಸಿದವರು

20ನೇ ಶತಮಾನದ ಆರಂಭದಲ್ಲಿ ಹಾಲ್‌ಮಾರ್ಕ್‌ ಕಾರ್ಡ್‌ಗಳು ಮತ್ತು ಅದರ ಸೃಷ್ಟಿಕರ್ತ ಜಾಯ್ಸ್‌ ಹಾಲ್‌ ಸ್ನೇಹವನ್ನು ಸ್ಮರಿಸಲು ಒಂದು ದಿನ ಬೇಕು ಎಂಬ ಉದ್ದೇಶದಿಂದ ಈ ದಿನದ ಆಚರಣೆಯ ಪ್ರಸ್ತಾಪ ಮಾಡಿದರು ಎಂದು ಹೇಳಲಾಗುತ್ತದೆ. ಇದು ಅಂತರರಾಷ್ಟ್ರೀಯ ಸ್ನೇಹಿತರ ದಿನವಾಗಿ ಮುಂದುವರಿಯಿತು ಎಂಬುದು ಕೆಲವರು ಕಡೆ ಉಲ್ಲೇಖವಾಗಿದೆ.

ಫ್ರೆಂಡ್‌ಶಿಪ್‌ ಡೇ ಇತಿಹಾಸ

ಸ್ನೇಹಿತರ ದಿನದ ಇತಿಹಾಸವನ್ನು ಕೆದಕುತ್ತಾ ಹೊರಟರೆ ನಮಗೆ ಹಲವು ಕಥೆಗಳು ಲಭ್ಯವಾಗುತ್ತವೆ. ಇದರಿಂದ ಯಾವುದು ಫ್ರೆಂಡ್‌ಶಿಪ್‌ ಆಚರಣೆಯ ನಿಜವಾದ ಹಿನ್ನೆಲೆ ಎಂಬುದು ತಿಳಿಯುವುದು ಕಷ್ಟಸಾಧ್ಯವಾದರೂ ಈ ಆಚರಣೆ ಮಾತ್ರ ನಮ್ಮೆಲ್ಲರಿಗೂ ನಮ್ಮ ಸುಂದರ ಸ್ನೇಹವನ್ನು ಸಂಭ್ರಮಿಸಲು ಅನುವು ಮಾಡಿಕೊಟ್ಟ ಖುಷಿ ನೀಡುವುದು ಮಾತ್ರ ಸುಳ್ಳಲ್ಲ.

1980ರ ದಶಕದಲ್ಲಿ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಜನಪ್ರಿಯವಾದವು ಎಂದು ಹೇಳಲಾಗುತ್ತದೆ. ಗ್ವಾಲೆಮಾಲಾದಲ್ಲಿ ಮಾಯನ್‌ ಭಾರತೀಯರು ಮತ್ತು ರೈತರು ಕಣ್ಮರೆಯಾದಾಗ ಭಾರಿ ಪ್ರತಿಭಟನೆ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಈ ಬ್ಯಾಂಡ್‌ಗಳನ್ನು ಬಳಸಲಾಗಿತ್ತು. ಇದನ್ನು ರಾಜಕೀಯ ರ್ಯಾಲಿಗಳಲ್ಲೂ ಬಳಸಲಾಗುತ್ತಿತ್ತು. ಈ ಬ್ಯಾಂಡ್‌ಗಳ ಮೂಲವು ಮಧ್ಯ ಹಾಗೂ ದಕ್ಷಿಣ ಅಮೆರಿಕದ ಸ್ಥಳೀಯ ಜನರಿಗೆ ಸಲ್ಲುತ್ತದೆ. ಆದರೆ ಇದರ ಇತಿಹಾಸವು ಕ್ರಿಸ್ತಪೂರ್ವ 481 ರಿಂದ 221ರವರೆಗೆ ಚೀನಾದಲ್ಲಿ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ. ಈ ಫ್ರೆಂಡ್‌ಶಿಪ್‌ ಬ್ಯಾಂಡ್‌ ಎನ್ನುವುದು ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ನಂಬಿಕೆ ಇದೆ.

ಇದರ ಜೊತೆಗೆ ಫ್ರೆಂಡ್‌ಶಿಪ್‌ ಬ್ಯಾಂಡ್‌ ಹಿಂದೆ ಪ್ರಸಿದ್ಧ, ಆಸಕ್ತಿದಾಯಕ ಜಾನಪದ ಕತೆಯಿದೆ. ಸ್ನೇಹದ ಸಂಕೇತವಾಗಿ ನೀವು ಸ್ನೇಹಿತರ ಮಣಿಕಟ್ಟಿನ ಮೇಲೆ ಬ್ಯಾಂಡ್‌ ಕಟ್ಟುವಾಗ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಬೇಕು. ಹಿಂದೂ ಧರ್ಮದಲ್ಲಿ ಕಟ್ಟಿಗೆ ಕಟ್ಟುವ ಪವಿತ್ರ ದಾರಗಳಂತೆ ಇದನ್ನೂ ಸವೆಯುವವರೆಗೂ ತೆಗೆದು ಹಾಕಬಾರದು ಮತ್ತು ಅದು ಬಿದ್ದಾಗ ನೀವು ಅಂದುಕೊಂಡ ಆಸೆ ನೆರವೇರುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನೊಂದು ಇತಿಹಾಸದ ಪ್ರಕಾರ ಫ್ರೆಂಡ್‌ಶಿಪ್‌ ಡೇ ಪರಿಕಲ್ಪನೆಯನ್ನು ಮೊದಲು 1958ರಲ್ಲಿ ಪರುಗ್ವೆಯಲ್ಲಿ ಪ್ರಸ್ತಾಪಿಸಲಾಯಿತು. ಅಂದಿನಿಂದ ಈ ದಿನವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಿತು ಮತ್ತು 1997ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು ಎನ್ನಲಾಗುತ್ತದೆ.

2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಂಟರ್‌ನ್ಯಾಷನಲ್‌ ಡೇ ಆಫ್‌ ಫ್ರೆಂಡ್‌ಶಿಪ್‌ ಅನ್ನು ಘೋಷಿಸಿತ್ತು. ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಕೆಲವು ದೇಶಗಳಲ್ಲಿ ಜುಲೈ 30 ರಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ.

1935ರಲ್ಲಿ, ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನ ಎಂದು ಗೊತ್ತುಪಡಿಸಿತು, ಸ್ನೇಹ ಬಂಧದ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿತು ಎಂದೂ ಹೇಳಲಾಗುತ್ತದೆ.

ಹೀಗೆ ಸ್ನೇಹಿತರ ದಿನಕ್ಕೆ ಒಂದೊಂದು ಇತಿಹಾಸವಿದೆ. ಅಲ್ಲದೇ ಅನೇಕ ದೇಶಗಳು ವಿಭಿನ್ನ ದಿನಾಂಕಗಳಲ್ಲಿ ಫ್ರೆಂಡ್‌ಶಿಪ್ ಡೇ ಅನ್ನು ಆಚರಿಸಲು ಪ್ರಾರಂಭಿಸಿದವು.

2024ರ ಫ್ರೆಂಡ್‌ಶಿಪ್‌ ಡೇ ಥೀಮ್‌

ಗಡಿಗಳನ್ನೂ ಮೀರಿ ಸ್ನೇಹ ಸಂಬಂಧ ಬೆಳೆಸುವುದು 2024ರ ಫ್ರೆಂಡ್‌ಶಿಪ್‌ ಡೇ ಥೀಮ್‌ ಆಗಿದೆ. ಅಂದರೆ ಸ್ನೇಹ ಎನ್ನುವುದು ದೇಶ, ಭಾಷೆಯ ಗಡಿಗಳನ್ನೂ ಮೀರಿಸುವಂಥದ್ದು ಎಂಬುದಾಗಿದೆ.

ರಾಷ್ಟ್ರೀಯ ಸ್ನೇಹಿತರ ದಿನದ ಮಹತ್ವ

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಸ್ನೇಹಿತರು ನಮಗಾಗಿ ಜೀವ ಕೊಡಲು ಸಿದ್ಧರಿರುತ್ತಾರೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಜಾತಿ, ಧರ್ಮ ನೋಡದೆ ನಮ್ಮೊಂದಿಗೆ ಇರುವ ಒಂದು ಸುಂದರ ಸಂಬಂಧ ಸ್ನೇಹ. ಇಂತಹ ಸುಮಧರ ಸಂಬಂಧವನ್ನು ಸ್ಮರಿಸುವ ದಿನ ಇದಾಗಿದೆ. ಸ್ನೇಹವನ್ನು ಗೌರವಿಸುವ ದಿನವೂ ಹೌದು. ಕೃಷ್ಣ-ಕುಚೇಲ ಸೇರಿದಂತೆ ಜಗತ್ತಿನ ಸಾಕಷ್ಟು ಸುಂದರ ಸ್ನೇಹ ಸಂಬಂಧಗಳನ್ನು ನೆನಪಿಸುವ ದಿನವೂ ಇದಾಗಿದೆ.

ಈ ದಿನ ಸ್ನೇಹಿತರಿಗೆ ಫ್ರೆಂಡ್‌ಶಿಪ್‌ ಕಟ್ಟುವ ಮೂಲಕ, ಗಿಫ್ಟ್‌ ನೀಡುವ ಮೂಲಕ ಸಂಭ್ರಮಿಸಬಹುದು. ಜೊತೆಗೆ ಈಗಿನ ಕಾಲಕ್ಕೆ ತಕ್ಕಂತೆ ಸ್ನೇಹಿತರ ಜೊತೆ ಪಾರ್ಟಿ, ಪಿಕ್ನಿಕ್‌ ಮಾಡಿ ಕೂಡ ಈ ದಿನವನ್ನು ಸಂಭ್ರಮಿಸಬಹುದು.

Whats_app_banner