ಒನ್‌ಪ್ಲಸ್ 12ಆರ್, ಬಡ್ಸ್ 3 ಮಾರಾಟ ಆರಂಭ; ಬೆಲೆ, ರಿಯಾಯ್ತಿ ಮಾಹಿತಿ ಇಲ್ಲಿದೆ -OnePlus 12R Sale
Feb 08, 2024 11:03 PM IST
ಒನ್‌ಪ್ಲಸ್ 12ಆರ್ ಸ್ಮಾರ್ಟ್‌ಫೋನ್ ಮತ್ತು ಒನ್‌ಪ್ಲಸ್ ಬಡ್ಸ್ 3 ಮಾರಾಟ ಆರಂಭವಾಗಿದೆ. ಫೋನ್ ಬೆಲೆ, ರಿಯಾಯ್ತಿ ಮಾಹಿತಿ ಇಲ್ಲಿದೆ
OnePlus 12R Sale: ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 12ಆರ್ ಮತ್ತು ಒನ್‌ಪ್ಲಸ್ ಬಡ್ಸ್ 3 ಮಾರಾಟ ಪ್ರಾರಂಭವಾಗಿದೆ. ಹಲವು ಆಫರ್‌ಗಳೊಂದಿಗೆ ಬರುತ್ತಿರುವ ಫೋನ್ ಮತ್ತು ಬಡ್ಸ್ ಬೆಲೆ ಸೇರಿ ಇತರೆ ಮಾಹಿತಿ ತಿಳಿಯಿರಿ.
OnePlus 12R Sale in India: ಭಾರತೀಯ ಮಾರುಕಟ್ಟೆಯಲ್ಲಿ ವನ್‌ಪ್ಲಸ್ 12ಆರ್ (OnePlus 12R) ಮತ್ತು ವನ್‌ಪ್ಲಸ್ ಬಡ್ಸ್ 3 (OnePlus Buds) ಮಾರಾಟ ಪ್ರಾರಂಭವಾಗಿದೆ. ಹಲವು ಆಫರ್‌ಗಳೊಂದಿಗೆ ಬರುತ್ತಿರುವ ಫೋನ್ ಮತ್ತು ಬಡ್ಸ್ ಬೆಲೆ ಸೇರಿ ಇತರೆ ಮಾಹಿತಿ ತಿಳಿಯಿರಿ.
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಒನ್‌ಪ್ಲಸ್ ಭಾರತದಲ್ಲಿ ಒನ್‌ಪ್ಲಸ್ 12ಆರ್ ಮತ್ತು ಒನ್‌ಪ್ಲಸ್ ಬಡ್ಸ್ 3 ಮಾರಾಟವನ್ನು ಪ್ರಾರಂಭಿಸಿದೆ. ಫೆಬ್ರವರಿ 6 ರಿಂದಲ್ಲೇ ಹೊಸ ಸ್ಮಾರ್ಟ್‌ಫೋನ್ ಮಾರಾಟ ಆರಂಭವಾಗಿದ್ದು, ಸೇಲ್ ಆಫರ್ ಅನ್ನು ಕೂಡ ಘೋಷಣೆ ಮಾಡಿದೆ.
ಒನ್‌ಪ್ಲಸ್ ಇತ್ತೀಚೆಗಷ್ಟೇ ಒನ್‌ಪ್ಲಸ್ 12 ಸರಣಿ, ಒನ್‌ಪ್ಲಸ್ ಬಡ್ಸ್ 3 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಪೈಕಿ ಒನ್‌ಪ್ಲಸ್ 12 ಫೋನ್ ಕೆಲವು ದಿನಗಳ ಹಿಂದೆಯೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಕೆಲವೊಂದು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತಿರುವ ಒನ್‌ಪ್ಲಸ್ 12ಆರ್ ಮತ್ತು ಬಡ್ಸ್ 3 ಅನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದಾಗಿದೆ.
ಒನ್‌ಪ್ಲಸ್ 12ಆರ್ ಮತ್ತು ಒನ್‌ಪ್ಲಸ್ ಬಡ್ಸ್ 3 ಬೆಲೆ, ಇತರೆ ಮಾಹಿತಿ
ಒನ್‌ಪ್ಲಸ್ 12ಆರ್ ಮತ್ತು ಒನ್‌ಪ್ಲಸ್ ಬಡ್ಸ್ 3 ಈ ಎರಡೂ ಸಾಧನಗಳು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಲಭ್ಯವಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಇತರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಅನೇಕ ಆಫ್‌ಲೈನ್ ಸ್ಟೋರಿಗಳ ಮೂಲಕ ಈ ಗ್ಯಾಡ್ಜೆಟ್‌ಗಳನ್ನು ಖರೀದಿಸಬಹುದಾಗಿದೆ. ಒನ್‌ಪ್ಲಸ್ 12ಆರ್ ಬೆಲೆ 39,999 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಒನ್‌ಪ್ಲಸ್ ಬಡ್ಸ್ 3 ಬೆಲೆ 5,499 ರೂಪಾಯಿಯಿಂದ ಶುರುವಾಗಲಿದೆ. ಅನೇಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ವಿವಿಧ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇಕಡಾ 10 ರವರೆಗೆ ರಿಯಾಯ್ತಿಗಳನ್ನು ನೀಡುತ್ತಿವೆ.
ಒನ್‌ಪ್ಲಸ್ 12ಆರ್ ಮತ್ತು ಒನ್‌ಪ್ಲಸ್ ಬಡ್ಸ್ 3 ವೈಶಿಷ್ಟ್ಯಗಳು
ಒನ್‌ಪ್ಲಸ್ 12ಆರ್ ಸ್ಮಾರ್ಟ್ಪೋನ್ 6.78 ಇಂಚಿನ ಅಲ್ಮೋಡ್ ಪ್ರೊಎರ್ಸ್‌ಡಿಆರ್ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದಿದೆ. ಇದು ಗ್ರಾಫಿಕ್-ಇಟೆನ್ಸಿವ್ ಗೇಮಿಂಗ್‌ಗಾಗಿ ಆಡ್ರೆನೊ 740 ಜಿಪಿಯು ಜೊತೆಗೆ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 2 ಚಿಪ್‌ಸೆಟ್ ಅನ್ನು ಹೊಂದಿದೆ.
ಛಾಯಾಗ್ರಹಣಕ್ಕಾಗಿ ಒನ್‌ಪ್ಲಸ್ 12ಆರ್ ಸ್ಮಾರ್ಟ್‌ಫೋನ್‌ನಲ್ಲಿ 50MP ಸೋನಿ IMX890 ಮೇನ್ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 16MP ಸೆಲ್ಫ್ ಕ್ಯಾಮೆರಾದೊಂದಿಗೆ ಬರುತ್ತಿದೆ. ಈ ಸ್ಮಾರ್ಟ್‌ನಲ್ಲಿ 5500mAh ಬ್ಯಾಟರಿ ಸಾಮರ್ಥ್ಯವಿದೆ. ಇದು 100 W SUPERVOOC ಚಾರ್ಜರ್ ಸಪೋರ್ಟ್ ಇದೆ. ಒನ್‌ಪ್ಲಸ್ 12ಆರ್ ಸ್ಮಾರ್ಟ್ ಫೋನ್ 2 ಸ್ಟೋರೇಂಜ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಒಂದು 8GB RAM, 128GB ಇಂಟರ್ನಲ್ ಸ್ಟೋರೇಜ್, ಇನ್ನೊಂದು 16GB RAM, 256GB ಸ್ಟೋರೇಜ್ ವೇರಿಯೆಂಟ್ ಇದೆ. (This copy first appeared in Hindustan Times Kannada website. To read more like this please logon to kannada.hindustantime.com).