logo
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು ಹೇಗೆ ನೋಡಿ, ಈ ಗಿಡದ ನಿರ್ವಹಣೆಯೂ ಸುಲಭ

ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು ಹೇಗೆ ನೋಡಿ, ಈ ಗಿಡದ ನಿರ್ವಹಣೆಯೂ ಸುಲಭ

Reshma HT Kannada

Nov 07, 2024 11:40 AM IST

google News

ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು

    • ಮೆಂತ್ಯೆ ಸೊಪ್ಪು ಆರೋಗ್ಯಕ್ಕೆ ಬಹಳ ಉತ್ತಮ. ಆ ಕಾರಣಕ್ಕೆ ಭಾರತದಲ್ಲಿ ಬಹುತೇಕರ ಮನೆಗಳಲ್ಲಿ ಹೆಚ್ಚಾಗಿ ಮೆಂತ್ಯೆ ಸೊಪ್ಪಿನ ಖಾದ್ಯಗಳನ್ನ ಮಾಡುತ್ತಿರುತ್ತಾರೆ. ಹಾಗಂತ ಪ್ರತಿಬಾರಿಯೂ ಪೇಟೆಗೆ ಹೋಗಿ ಮೆಂತ್ಯೆಸೊಪ್ಪು ತರಲು ಆಗುವುದಿಲ್ಲ. ಅದಕ್ಕಾಗಿ ಮನೆಯಲ್ಲಿ ಬಹಳ ಸರಳ ವಿಧಾನದಲ್ಲಿ ಮೆಂತ್ಯೆ ಸೊಪ್ಪು ಬೆಳಸಬಹುದು. ಇದರ ನಿರ್ವಹಣೆಯೂ ಕಡಿಮೆ.
ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು
ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು

ಮೆಂತ್ಯೆಸೊಪ್ಪಿನ ಖಾದ್ಯಗಳನ್ನು ಮಾಡಬೇಕು ಎಂದುಕೊಂಡಾಗಲೆಲ್ಲಾ ಪೇಟೆ ಅಥವಾ ಮಾರುಕಟ್ಟೆಗೆ ಓಡಬೇಕು. ಅಲ್ಲಿ ಕೂಡ ತಾಜಾ ಸೊಪ್ಪು ಸಿಗುತ್ತೆ ಅನ್ನೋ ಭರವಸೆ ಇಲ್ಲ. ಇದರೊಂದಿಗೆ ಕೆಲವೊಮ್ಮೆ ಸೊಪ್ಪುಗಳನ್ನ ಬೆಳೆಯುವ ಬಗ್ಗೆ ವೈರಲ್ ಆಗುವ ವಿಡಿಯೊಗಳನ್ನು ನೋಡಿದಾಗ ಯಪ್ಪಾ ದೇವರೆ ಇದನ್ನಾ ನಾವು ತಿಂತಾ ಇರೋದು ಅಂತ ಅನ್ನಿಸುತ್ತೆ. ಈ ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ ಎಂದರೆ ಮನೆಯಲ್ಲೇ ಮೆಂತ್ಯೆ ಸೊಪ್ಪು ಬೆಳೆಸೋದು.

ಮನೆಯಲ್ಲಿ ಬಹಳ ವೇಗ ಹಾಗೂ ಸುಲಭವಾಗಿ ಮೆಂತ್ಯೆ ಸೊಪ್ಪು ಬೆಳೆಸಬಹುದು. ಮೆಂತ್ಯೆ ಗಿಡಗಳ ನಿರ್ವಹಣೆ ಕೂಡ ತುಂಬಾ ಸುಲಭ. ಮೆಂತ್ಯೆ ಗಿಡವನ್ನು ಮನೆಯಲ್ಲಿ ಬೆಳೆಸಲು ನೆರವಾಗುವ ಹಂತ ಹಂತದ ಟಿಪ್ಸ್ ಇಲ್ಲಿದೆ.

ಮನೆಯಲ್ಲಿ ಮೆಂತ್ಯಗಿಡ ಬೆಳೆಸುವುದು ಹೇಗೆ?

* ಮೊದಲು ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ಮೆಂತ್ಯದ ಬೀಜಗಳನ್ನು ತನ್ನಿ. ಈ ಗಿಡವನ್ನು ಕತ್ತರಿಸಿ ನೆಡುವುದರಿಂದ ಪ್ರಯೋಜನವಿಲ್ಲ.

* ಕೆಳಗಡೆ ತೂತು ಇರುವ ಮಡಿಕೆಯೊಂದನ್ನು ಖರೀದಿಸಿ ತನ್ನಿ, ಈ ರೀತಿ ಮಾಡುವುದರಿಂದ ಪಾಟ್‌ನಲ್ಲಿ ನೀರು ನಿಲ್ಲುವುದನ್ನು ತಪ್ಪಿಸಬಹುದು.

* ಮಣ್ಣನ್ನು ಚೆನ್ನಾಗಿ ಹದ ಮಾಡಬೇಕು. ಮೆಂತ್ಯೆ ಬೆಳೆಯುವ ಸಲುವಾಗಿ ಮಣ್ಣು ಬೇಕು ಎಂದು ಕೇಳಿ ತನ್ನಿ.

* ಮಿಶ್ರಣ ಮಾಡಿದ ಮಣ್ಣನ್ನು ಕುಂಡಕ್ಕೆ ತುಂಬಿಸಿ, ಮೇಲ್ಭಾಗದಲ್ಲಿ ಮೆಂತ್ಯೆ ಬೀಜಗಳನ್ನು ಹರಡಿ.

* ಮೆಂತ್ಯೆ ಬೀಜಗಳನ್ನು ನಿಧಾನಕ್ಕೆ ಕೈಗಳಿಂದ ಒತ್ತಿ

* ಈಗ ಬೀಜಗಳ ಮೇಲೆ ತೆಳುವಾಗಿ ಮಣ್ಣನ್ನು ಹರಡಿ. ಸ್ವಲ ನೀರು ಸೇರಿಸಿ.

* ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಮೇಥಿ ಗಿಡವನ್ನು ಇಡಬೇಕು. ಈ ಗಿಡಕ್ಕೆ ಪ್ರತಿದಿನ 4-6 ರಿಂದ ಗಂಟೆಗಳ ಸೂರ್ಯನ ಬೆಳಕು ಅವಶ್ಯವಿದೆ.

* ಮೆಂತ್ಯೆ ಗಿಡ ಚೆನ್ನಾಗಿ ಬೆಳೆಯಬೇಕು ಎಂದರೆ 3/4 ರಷ್ಟು ಮಾತ್ರ ಕತ್ತರಿಸಬೇಕು.

ಮೆಂತ್ಯದ ಗಿಡ ಬೇಗ ಬೆಳೆಯಲು ಸಲಹೆ

* ಮೆಂತ್ಯದ ಗಿಡ ತ್ವರಿತವಾಗಿ ಬೆಳೆಯಲು, ಪ್ರತಿದಿನ ಕೆಲವು ಗಂಟೆಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ. ಗಿಡಕ್ಕೆ ಬೆಳಕು ಬೀಳುವುದು ಬಹಳ ಮುಖ್ಯ.

* ಮೆಂತ್ಯದ ಗಿಡಕ್ಕೆ ಅತಿಯಾಗಿ ನೀರು ಹಾಕಬೇಡಿ. ಹೆಚ್ಚು ನೀರು ಹಾಕುವುದರಿಂದ ಗಿಡ ಕೊಳೆಯುತ್ತದೆ. ಶೀಲಿಂಧ್ರ ರೋಗಗಳಿಗೂ ತುತ್ತಾಗುತ್ತದೆ.

* ಮೆಂತ್ಯದ ಗಿಡವನ್ನು ಚೆನ್ನಾಗಿ ಗಾಳಿಯ ಹರಡಿರುವ ಪ್ರದೇಶದಲ್ಲಿ ಇರಿಸಬೇಕು.

* ಮೆಂತ್ಯೆ ಎಲೆಯನ್ನು ಕೈ ಅಥವಾ ಉಗುರಿನಿಂದ ಕತ್ತರಿಸಬೇಡಿ. ಮೆಂತ್ಯ ಗಿಡ ಕತ್ತರಿಸಲು ಕತ್ತರಿ ಬಳಸಿ.

* ಮೆಂತ್ಯ ಸಸ್ಯಗಳಿಗೆ ಪ್ರತಿ 2-3 ವಾರಗಳಿಗೊಮ್ಮೆ ಸಮತೋಲಿತ ದ್ರವ ಗೊಬ್ಬರವನ್ನು ನೀಡಬೇಕು. ರಸಗೊಬ್ಬರ ಸೂಚನೆಗಳನ್ನು ಮುಂಚಿತವಾಗಿ ಓದಿ ಅಥವಾ ಸಲಹೆಗಳಿಗಾಗಿ ತೋಟಗಾರಿಕೆ ತಜ್ಞರನ್ನು ಕೇಳಿ.

* ಕೀಟಗಳು ಬಾರದಂತೆ ಇರಲು ಆಗಾಗ ಗಿಡಗಳನ್ನು ಗಮನಿಸುತ್ತಿರಿ.

ಮೆಂತ್ಯವು ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಬೆಳೆಯುವ ಸಸ್ಯವಾಗಿದೆ. ನೀವು ಸಸ್ಯಹಾರಿಗಳಾಗಿದ್ದರೆ ನಿಮ್ಮ ಕೈತೋಟದಲ್ಲಿ ಮೆಂತ್ಯೆಕ್ಕೆ ಒಂದು ಜಾಗಟ ಕೊಡಲೇಬೇಕು. ಇದು ಆಹಾರ ಖಾದ್ಯಗಳಿಗೆ ವಿಶಿಷ್ಟ ಪರಿಮಳ ನೀಡುವ ಜೊತೆಗೆ ಮಧುಮೇಹದಂತಹ ಸಮಸ್ಯೆ ಇರುವವರಿಗೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ