ಸ್ನಾನ ಮಾಡುವಾಗ ಎಷ್ಟು ಕೂದಲು ಉದುರುವುದು ಸಹಜ; ಹೆಚ್ಚು ಕೂದಲು ಉದುರುತ್ತಿದ್ರೆ ಕೂಡಲೇ ಈ ವಿಚಾರಗಳತ್ತ ಗಮನ ಹರಿಸಿ
Nov 18, 2024 11:52 AM IST
ಸ್ನಾನ ಮಾಡುವಾಗ ಎಷ್ಟು ಕೂದಲು ಉದುರುವುದು ಸಹಜ
- ಕೂದಲು ಉದುರುವ ಸಮಸ್ಯೆ ದೊಡ್ಡವರು, ಮಕ್ಕಳು, ವಯಸ್ಕರು ಎಲ್ಲರನ್ನೂ ಕಾಡುತ್ತಿದೆ. ತಲೆ ಸ್ನಾನ ಮಾಡುವಾಗ ಹಾಗೂ ತಲೆ ಬಾಚುವಾಗ ಹೆಚ್ಚು ಕೂದಲು ಉದುರುತ್ತದೆ. ಹಾಗಾದರೆ ಸ್ನಾನ ಮಾಡುವಾಗ ಎಷ್ಟು ಕೂದಲು ಉದುರಿದ್ರೆ ಸಹಜ, ಕೂದಲು ಉದುರುವುದನ್ನು ತಡೆಯುವುದಕ್ಕೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾರ್ವಕಾಲಿಕವಾಗಿದೆ. ಇದು ಎಲ್ಲರ ವಯಸ್ಸಿನವರನ್ನೂ ಕಾಡುತ್ತಿದೆ. ಕೂದಲು ಹೆಚ್ಚಾಗಿ ಉದುರುವುದು ತಲೆ ಬಾಚುವಾಗ ಹಾಗೂ ಸ್ನಾನ ಮಾಡುವಾಗ. ತಲೆ ಸ್ನಾನ ಮಾಡುವ ಸಂದರ್ಭ ಸಹಜವಾಗಿ ಕೂದಲು ಉದುರುತ್ತದೆ. ಆದರೆ ಅತಿಯಾಗಿ ಕೂದಲು ಉದುರೋದು ನೀವು ಯಾವುದೋ ಸಮಸ್ಯೆಯಿಂದ ಬಳಲುತ್ತಿರುವುದನ್ನು ಸೂಚಿಸಬಹುದು.
ಹಾಗಾದರೆ ಸ್ನಾನ ಮಾಡುವಾಗ ಎಷ್ಟು ಕೂದಲು ಉದುರಿದ್ರೆ ಸಹಜ. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಕೂದಲು ಉದುರುತ್ತಾ ಇದ್ದರೆ ಅದರ ನಿವಾರಣೆಗೆ ಪರಿಹಾರವೇನು ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ, ಕೂದಲ ಕಾಳಜಿ ಮಾಡುವವರು ಗಮನಿಸಿ.
ಸಾಮಾನ್ಯವಾಗಿ ಕೂದಲು ಉದುರಲು ಆರಂಭವಾದಾಗ ದಿನಕ್ಕೆ 50 ರಿಂದ 100 ರಷ್ಟು ಕೂದಲಿನ ಎಳೆ ಉದುರುತ್ತದೆ. ಇದನ್ನು ಸಹಜ ಪ್ರಕ್ರಿಯೆ ಎಂದು ಪರಿಗಣಿಸಬಹುದು. ಆದರೆ ಕೆಲವರಿಗೆ ತಲೆಸ್ನಾನ ಮಾಡುವಾಗ ಇದಕ್ಕಿಂತಲೂ ಹೆಚ್ಚು ಕೂದಲು ಉದುರುಬಹುದು.
ಆದರೆ ಒಮ್ಮೆ ಸ್ನಾನ ಮಾಡುವಾಗ 100–150ಕ್ಕಿಂತಲೂ ಹೆಚ್ಚು ಕೂದಲು ಉದುರಲು ಆರಂಭಿಸಿದರೆ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಒತ್ತಡ, ಕೂದಲನ್ನು ಸರಿಯಾಗಿ ಪೋಷಿಸದೇ ಇರುವುದು, ಹಾರ್ಮೋನುಗಳ ಬದಲಾವಣೆ ಇವು ನಿಮ್ಮ ಕೂದಲು ಹೆಚ್ಚು ಉದುರಲು ಕಾರಣವಾಗಿರಬಹುದು.
ಕೂದಲು ಉದುರಲು ಕಾರಣ ಹಾಗೂ ತಡೆಗಟ್ಟಲು ಟಿಪ್ಸ್
ಸೌಮ್ಯ ಥರದ ಶ್ಯಾಂಪೂ: ಕೂದಲು ಉದುರುವುದನ್ನು ತಡೆಯಲು ಮೈಲ್ಡ್ ಅಥವಾ ಸೌಮ್ಯ ಗುಣದ ಶ್ಯಾಂಪೂ ಬಳಸಬೇಕು. ಕಠಿಣ ಹಾಗೂ ರಾಸಾಯನಿಕ ಅಂಶವುಗಳ್ಳ ಶ್ಯಾಂಪೂಗಳು ನೆತ್ತಿಯ ಭಾಗವನ್ನ ಒಣಗಿಸಿ, ನೈಸರ್ಗಿಕ ಎಣ್ಣೆ ಅಂಶವನ್ನು ಸುಲಭವಾಗಿ ತೆಗೆದುಹಾಕುತ್ತದೆ. ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಕೂದಲ ತುದಿ ಸೀಳುವುದನ್ನು ತಡೆಯಲು ಸಲ್ಫೇಟ್-ಮುಕ್ತವಾದ ಹೆಚ್ಚು ನೈಸರ್ಗಿಕ ಶ್ಯಾಂಪೂಗಳನ್ನು ಬಳಸಿ.
ತಣ್ಣೀರು ಬಳಸಿ: ತಲೆಸ್ನಾನಕ್ಕೆ ಬಿಸಿ ನೀರು ಬಳಸುವುದು ಕೂಡ ಕೂದಲು ಉದುರುವ ಪ್ರಮಾಣ ಹೆಚ್ಚಲು ಕಾರಣವಾಗಬಹುದು. ಇದು ಕೂದಲಿನ ಹೊರಪೊರೆಯನ್ನು ತಡೆಯುತ್ತದೆ. ಇದರಿಂದ ಕೂದಲು ಸೀಳಲು ಆರಂಭವಾಗುತ್ತದೆ. ನಂತರ ನಿಧಾನಕ್ಕೆ ಕೂದಲು ಉದುರುತ್ತದೆ. ತಣ್ಣೀರು ಸ್ನಾನ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದರೆ ಕೋಣೆಯ ಉಷ್ಣಾಂಶದ ನೀರನ್ನು ತಲೆಸ್ನಾನಕ್ಕೆ ಬಳಸುವುದು ಉತ್ತಮ.
ಕೂದಲ ಸಿಕ್ಕು ಬಿಡುಸುವುದು: ಸ್ನಾನಕ್ಕೂ ಮೊದಲು ಕೂದಲಿನ ಸಿಕ್ಕು ಬಿಡಿಸುವ ಅಭ್ಯಾಸ ಮಾಡಿ. ಇದರಿಂದ ಕೂದಲ ಸ್ನಾನ ಸುಲಭವಾಗುತ್ತದೆ. ಮಾತ್ರವಲ್ಲ ಇದರಿಂದ ತಲೆಸ್ನಾನ ಮಾಡುವಾಗ ಕೂದಲನ್ನು ಎಳೆಯುವ ಪ್ರಸಂಗವೂ ಬರುವುದಿಲ್ಲ.
ಸ್ನಾನ ಮಾಡುವಾಗ ವಹಿಸಬೇಕಾದ ಎಚ್ಚರಿಕೆ: ತಲೆಸ್ನಾನ ಮಾಡುವ ಸಂದರ್ಭ ನೆತ್ತಿಯನ್ನು ಬಲವಾಗಿ ಉಜ್ಜಬೇಡಿ. ಕೂದಲನ್ನು ಎಳೆಯುಉವುದು ಮುಂತಾದ ನೆತ್ತಿಗೆ ಹಾನಿಯಾಗುವ ಕೆಲಸ ಮಾಡಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ.
ಕಂಡಿಷನಿಂಗ್ ಉತ್ಪನ್ನಗಳು: ಕಂಡೀಷನರ್ ಕೂದಲಿನ ಎಳೆಯಲ್ಲಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಸೀಳುವುದನ್ನು ಕಡಿಮೆ ಮಾಡುತ್ತದೆ. ಬಾಚಣಿಕೆಯನ್ನು ನೆತ್ತಿಗೆ ತಾಕಿಸಿಬೇಡಿ, ಕೂದಲಿನ ಮಧ್ಯ ಹಾಗೂ ತುದಿಗೆ ಭಾಗವನ್ನು ಬಾಚಿ.
ಅಗಲ ಹಲ್ಲಿನ ಬಾಚಣಿಗೆ ಬಳಕೆ: ತಲೆಸ್ನಾನದ ನಂತರ ಕೂದಲು ಬಾಚುವ ಅಭ್ಯಾಸ ಒಳ್ಳೆಯದಲ್ಲ, ಒಂದು ವೇಳೆ ಬಾಚಲೇಬೇಕು ಅಂತಿದ್ದರೆ ಅಗಲ ಹಲ್ಲಿನ ಬಾಚಣಿಕೆ ಬಳಸಿ. ಇದರಿಂದ ಕೂದಲು ಅತಿಯಾಗಿ ಉದುರುವುದನ್ನು ತಡೆಯಬಹುದು.
ಹೀಟಿಂಗ್ ಪರಿಕರಗಳು: ಬ್ಲೋ ಡ್ರೈಯರ್, ಫ್ಲಾಟ್ ಐರನ್‌ಗಳು ಮತ್ತು ಕರ್ಲಿಂಗ್ ವಾಂಡ್‌ಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳ ಬಳಕೆಯು ಅತಿಯಾಗಿ ಕೂದಲು ಉದುರಲು ಕಾರಣವಾಗುತ್ತದೆ. ಇವುಗಳ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.
ಈ ಮೇಲಿನ ಅಂಶಗಳು ಅತಿಯಾಗಿ ಕೂದಲು ಉದುವುದರನ್ನು ತಡೆಯಲು ಸಹಾಯ ಮಾಡುತ್ತವೆ. ಈ ಅಂಶಗಳನ್ನು ಪಾಲಿಸಿದ ನಂತರವೂ ಕೂದಲು ಉದುರುತ್ತಿದೆ ಎಂದರೆ ನೀವು ತಪ್ಪದೇ ವೈದ್ಯರ ಬಳಿ ತೋರಿಸಬೇಕು, ನಿಮ್ಮ ಕೂದಲು ಉದುರಲು ಕಾರಣ ಬೇರೆಯದೇ ಆಗಿರುತ್ತದೆ ಎಂದು ಅರ್ಥ.
ವಿಭಾಗ