ಕೂದಲು ಅತಿಯಾಗಿ ಉದುರಲು ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ಈ ತಪ್ಪುಗಳೇ ಕಾರಣ, ಇನ್ನಾದ್ರೂ ಗಮನ ಹರಿಸಿ-hair care tips 8 mistakes while combing that can cause hair loss reason for hair fall control tips rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೂದಲು ಅತಿಯಾಗಿ ಉದುರಲು ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ಈ ತಪ್ಪುಗಳೇ ಕಾರಣ, ಇನ್ನಾದ್ರೂ ಗಮನ ಹರಿಸಿ

ಕೂದಲು ಅತಿಯಾಗಿ ಉದುರಲು ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ಈ ತಪ್ಪುಗಳೇ ಕಾರಣ, ಇನ್ನಾದ್ರೂ ಗಮನ ಹರಿಸಿ

ಇತ್ತೀಚಿನ ದಿನಗಳಲ್ಲಿ ಪುರುಷರು ಹಾಗೂ ಮಹಿಳೆಯರು ಕೂದಲು ಉದುರುವ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಏನೇ ಸರ್ಕಸ್ ಮಾಡಿದ್ರು ಕೂದಲು ಉದುರುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳು ಕೂಡ ಕಾರಣವಿರಬಹುದು. ಕೂದಲು ಬಾಚುವ ವಿಚಾರದಲ್ಲಿ ನೀವು ಗಮನಿಸಬೇಕಾದ ಅಂಶವಿದು.

ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ಈ ತಪ್ಪುಗಳೇ ಕೂದಲು ಉದುರಲು ಕಾರಣ
ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ಈ ತಪ್ಪುಗಳೇ ಕೂದಲು ಉದುರಲು ಕಾರಣ

ಕಲುಷಿತ ನೀರು, ವಾತಾವರಣ, ಜೀವನಶೈಲಿ, ಆಹಾರ ಹೀಗೆ ಹಲವು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ನಮ್ಮ ಸೌಂದರ್ಯದ ಪ್ರತೀಕ ಎನ್ನುವುದು ಸುಳ್ಳಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲನ್ನು ಕಾಪಾಡಿಕೊಳ್ಳಲು ನಾವು ಹರಸಾಹಸ ಬೇಕಾಗಿದೆ. ಅಷ್ಟೆಲ್ಲಾ ಮಾಡಿದ್ರೂ ಕೂದಲು ಉದುರುವುದು ನಿಲ್ಲುವುದಿಲ್ಲ.

ಕೂದಲು ಉದುರಲು ಆರಂಭವಾಗಲು ತಲೆ ಬಾಚುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳೂ ಕಾರಣವಾಗಬಹುದು. ಕೆಲವರಿಗೆ ಕನ್ನಡಿ ಕಂಡಾಗಲೆಲ್ಲಾ ತಲೆ ಬಾಚುವ ಅಭ್ಯಾಸವಿರುತ್ತದೆ, ಇನ್ನೂ ಕೆಲವರಿಗೆ ದಿನಕ್ಕೆ ಒಂದು ಅಥವಾ ಎರಡು ಬಾರಿ ತಲೆ ಬಾಚುವ ಅಭ್ಯಾಸವಿರುತ್ತದೆ. ಕೆಲವರು ಪ್ರತಿದಿನ ತಲೆ ಬಾಚುವುದಿಲ್ಲ. ಅದೇನೇ ಇದ್ದರೂ ತಲೆ ಬಾಚುವಾಗ ನಾವು ಬಳಸುವ ಬಾಚಣಿಗೆ, ಅದರ ಹಲ್ಲುಗಳು ಹೇಗಿರುತ್ತವೆ ಎಂಬುದು ಕೂಡ ಮುಖ್ಯವಾಗುತ್ತದೆ. ತಲೆ ಬಾಚುವುದು ಒಂದು ಸರಳ ವಿಧಾನ ಎಂದು ನಿಮಗೆ ಅನ್ನಿಸಬಹುದು, ಆದರೆ ಬಾಚುವ ವಿಚಾರವೂ ಕೂದಲು ಉದುರುವುದಕ್ಕೆ ಸಂಬಂಧಿಸಿದ್ದು ಎಂಬುದು ಮಾತ್ರ ಸುಳ್ಳಲ್ಲ. ಕೂದಲು ಬಾಚುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳು ಕೂದಲನ್ನು ದುರ್ಬಲಗೊಳಿಸಿ ಉದುರುವಂತೆ ಮಾಡುತ್ತದೆ. ಹಾಗಾದರೆ ನಾವು ಬಳಸುವ ಬಾಚಣಿಗೆಗೂ ಕೂದಲು ಉದುರುವುದಕ್ಕೂ ಏನಿದೆ ಸಂಬಂಧ ನೋಡಿ.

ಸ್ವಚ್ಛ ಮಾಡದ ಬಾಚಣಿಗೆ

ಶುಚಿತ್ವವಿಲ್ಲದ ಬಾಚಣಿಗೆ ಬಳಸುವುದರಿಂದ ಕೂಡ ಕೂದಲು ಉದುರಲು ಆರಂಭವಾಗುತ್ತದೆ. ಕಾಂಪ್ಯಾಕ್ಟ್ ಕೊಳಕು ಬಾಚಣಿಗೆಯನ್ನು ಅಸಹ್ಯವಾಗಿ ಕಾಣುವಂತೆ ಮಾಡಬಹುದು. ಬಾಚಣಿಗೆಯಲ್ಲಿರುವ ಕೊಳೆ ನೆತ್ತಿಗೆ ಅಂಟಬಹುದು. ಇದು ಕೂದಲಿನ ಕಿರುಚೀಲಗಳು ಮುಚ್ಚುವಂತೆ ಮಾಡಬಹುದು, ಸೋಂಕಿನ ಕಾರಣದಿಂದ ಕೂದಲು ಉದುರುವ ಪ್ರಮಾಣ ಏರಿಕೆಯಾಗಬಹುದು. ಹಾಗಾಗಿ ನಿಯಮಿತವಾಗಿ ಬಾಚಣಿಗೆ ಸ್ವಚ್ಛ ಮಾಡುವುದು ಬಹಳ ಅವಶ್ಯಕ.

ಒದ್ದೆ ಕೂದಲನ್ನು ಬಾಚುವುದು

ಹಲವರು ಸ್ನಾನ ಮಾಡಿದ ತಕ್ಷಣ ಕೂದಲು ಬಾಚುತ್ತಾರೆ. ಇದು ಕೂದಲು ಉದುರಲು ಆರಂಭವಾಗಲು ಪ್ರಮುಖ ಕಾರಣವಾಗಿದೆ.

ಅತಿಯಾದ ಒತ್ತಡ

ಕೂದಲು ಬಾಚುವಾಗ ಒತ್ತಿ, ಒತ್ತಡ ಹಾಕಿ ಬಾಚಬಾರದು. ಕೂದಲಿನಲ್ಲಿ ಸಿಕ್ಕು ಇದ್ದಾಗ ಈ ರೀತಿ ಬಾಚುತ್ತೇವೆ. ಇದು ಕೂದಲು ಉದುರಲು ಕಾರಣವಾಗಬಹುದು. ಅತಿಯಾಗಿ ಒತ್ತಡ ಹಾಕಿ ಬಾಚುವುದರಿಂದ ಕೂದಲು ಅರ್ಧಕ್ಕೆ ತುಂಡಾಗುವ ಸಾಧ್ಯತೆಯೂ ಹೆಚ್ಚು.

ಕೂದಲಿನ ಬುಡದವರೆಗೆ ಬಾಚಣಿಕೆ ತಾಗಿಸುವುದು

ಕೂದಲು ಬಾಚುವಾಗ ಬುಡದಿಂದ ಅಂದರ ನೆತ್ತಿಯ ಭಾಗದಿಂದ ಕೂದಲು ಬಾಚುವುದು ತಪ್ಪು. ನೆತ್ತಿಯ ಭಾಗಕ್ಕೆ ಬಾಚಣಿಕೆಯನ್ನು ಅತಿಯಾಗಿ ತಾಕಿಸುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ. ಇದು ಕೂದಲಿನ ಸಂಪೂರ್ಣ ಬೇರಿನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ, ಕೊನೆಗೆ ಕೂದಲು ನಿರಂತರವಾಗಿ ಉದುರಲು ಆರಂಭವಾಗುತ್ತದೆ.

ಬಾಚಣಿಕೆಯ ವಿನ್ಯಾಸ

ಬಾಚಣಿಕೆ ಬೇರೆ ಬೇರೆ ವಿನ್ಯಾಸದಲ್ಲಿ ಇರುವುದನ್ನು ನೀವು ಗಮನಿಸಿರಬಹುದು. ಚೂಪಾದ ಅಥವಾ ಅಸಮ ಹಲ್ಲುಗಳನ್ನು ಹೊಂದಿರುವ ಬಾಚಣಿಗೆಯನ್ನು ಬಳಸುವಾಗ ಅದನ್ನು ಸ್ಥಿರವಾಗಿ ಬಾಚಿಕೊಳ್ಳುವುದು ಸವಾಲಾಗಿದೆ. ನಿಮ್ಮ ಕೂದಲಿಗೆ ಹಾನಿಯಾಗದಂತೆ ನಿಧಾನವಾಗಿ ಬ್ರಷ್ ಮಾಡಲು ಬಯಸಿದರೆ, ಅಗಲವಾದ ಹಲ್ಲಿನ ಬಾಚಣಿಗೆ ಅಥವಾ ಮೃದುವಾದ, ಹೊಂದಿಕೊಳ್ಳುವ ಹಲ್ಲಿರುವ ಬ್ರಷ್‌ಗಳನ್ನು ಆಯ್ಕೆ ಮಾಡಿ.

ಅತಿಯಾದ ಬಾಚಣಿಕೆ ಬಳಕೆ

ಪದೇ ಪದೇ ಬಾಚಣಿಕೆ ಬಳಸುವುದು ಕೂಡ ನೆತ್ತಿಯ ಕಿರಿಕಿರಿಗೆ ಕಾರಣವಾಗಬಹುದು. ಇದರಿಂದ ನೆತ್ತಿಯ ಭಾಗ ದುರ್ಬಲವಾಗಿ ಕೂದಲು ಉದುರಲು ಆರಂಭವಾಗುತ್ತದೆ. ದಿನದಲ್ಲಿ ಒಂದೆರಡು ಬಾರಿ ಅಷ್ಟೇ ಬಾಚಣಿಕೆ ಬಳಸಿ ಕೂದಲು ಬಾಚಬೇಕು.

ರಾಸಾಯನಿಕಗಳು

ಶ್ಯಾಂಪೂಗಳು ಮತ್ತು ಕಂಡಿಷನರ್‌ಗಳಂತಹ ಹೇರ್‌ಕೇರ್ ಪ್ರಾಡಕ್ಟ್‌ಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಬೇಕು. ಅಂತಹ ಉತ್ಪನ್ನಗಳು ರಾಸಾಯನಿಕಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ಅತಿಯಾಗಿ ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದರ ಬದಲು ನೈಸರ್ಗಿಕ ಉತ್ಪನ್ನಗಳನ್ನ ಬಳಸಬಹುದು.

ಸರಿಯಾದ ಬಾಚಣಿಕೆ ಬಳಕೆ

ನಿಮ್ಮ ಕೂದಲಿನ ಪ್ರಕಾರಕ್ಕೆ ಸೂಕ್ತವಾದ ಬಾಚಣಿಗೆಯನ್ನು ಆರಿಸುವುದು ಬಹಳ ಮುಖ್ಯ. ಪ್ರತಿಯೊಬ್ಬರ ಕೂದಲು ವಿಭಿನ್ನವಾಗಿರುತ್ತದೆ. ನೇರ ಕೂದಲಿನವರು, ಗುಂಗುರು ಕೂದಲಿನವರು ಮತ್ತು ರೇಷ್ಮೆಯಂತೆ ನಯವಾದ ಕೂದಲು ಹೀಗೆ ವಿಭಿನ್ನ ವಿನ್ಯಾಸದ ಕೂದಲು ಹೊಂದಿರುತ್ತೇವೆ. ಅವರ ಕೂದಲಿನ ಪ್ರಕಾರಕ್ಕೆ ಸೂಕ್ತವಾದ ಬಾಚಣಿಗೆಯನ್ನು ಬಳಸುವುದು ಬಹಳ ಮುಖ್ಯ. ತಪ್ಪಾದ ಬಾಚಣಿಗೆ ಬಳಕೆಯಿಂದಲೂ ಕೂದಲು ಉದುರುವುದು ಅನಿವಾರ್ಯ.

ಕೂದಲಿನ ವಿಚಾರದಲ್ಲಿ ನೀವು ಮಾಡುವ ಈ ಸರಳ ತಪ್ಪುಗಳೇ ಕೂದಲು ಅತಿಯಾಗಿ ಉದುರಲು ಕಾರಣ. ಕೂದಲಿನ ಆರೋಗ್ಯ ರಕ್ಷಣೆಗೆ ಈ ತಪ್ಪುಗಳನ್ನು ಖಂಡಿತ ಮಾಡದಿರಿ.

mysore-dasara_Entry_Point