logo
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ತೂಕ ಇಳಿಸಿಕೊಳ್ಳಲು ನೀವು ತುಂಬಾ ಪ್ರಯತ್ನ ಮಾಡಿಯೂ ಪ್ರಯೋಜನ ಆಗಿಲ್ವ? ಹಾಗಾದ್ರೆ ಈ ರೀತಿ ಟೊಮೆಟೊ ಸಲಾಡ್‌ ಟೈ ಮಾಡಿ ನೋಡಿ

Weight Loss: ತೂಕ ಇಳಿಸಿಕೊಳ್ಳಲು ನೀವು ತುಂಬಾ ಪ್ರಯತ್ನ ಮಾಡಿಯೂ ಪ್ರಯೋಜನ ಆಗಿಲ್ವ? ಹಾಗಾದ್ರೆ ಈ ರೀತಿ ಟೊಮೆಟೊ ಸಲಾಡ್‌ ಟೈ ಮಾಡಿ ನೋಡಿ

Suma Gaonkar HT Kannada

Aug 17, 2024 11:33 AM IST

google News

ಟೊಮ್ಯಾಟೋ ಸಲಾಡ್‌

    • ನೀವು ತೂಕ ಇಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತ ಇಲ್ಲ ಎಂದಾದರೆ ಒಮ್ಮೆ ಈ ಟೊಮೆಟೊ ಸಲಾಡ್‌ ಟ್ರೈ ಮಾಡಿ ನೋಡಿ. ಇದು ನಿಮಗೆ ವರ್ಕೌಟ್ ಆಗಬಹುದು. ಮನೆಯಲ್ಲೇ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೀಡಿದ್ದೇವೆ ನೋಡಿ. 
ಟೊಮ್ಯಾಟೋ ಸಲಾಡ್‌
ಟೊಮ್ಯಾಟೋ ಸಲಾಡ್‌

ತೂಕವನ್ನು ಕಳೆದುಕೊಳ್ಳುವುದು ಸುಲಭವಲ್ಲ. ಇದಕ್ಕೆ ತುಂಬಾ ಪ್ರಯತ್ನ ಬೇಕಾಗುತ್ತದೆ. ಶತಾಯ, ಗತಾಯ ನಾನು ತೂಕ ಇಳಿಸಿಕೊಳ್ಳಲೇ ಬೇಕು ಎಂದು ನೀವು ಹಠ ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದರೆ ಎಂದಿಗೂ ನೀವು ನಿಮ್ಮ ಪ್ರಯತ್ನವನ್ನು ಮಾತ್ರ ಬಿಡಬೇಡಿ. ತೂಕ ಇಳಿಸಿಕೊಳ್ಳಲು ಏನಾದರೂ ಟ್ರೈ ಮಾಡುತ್ತಲೇ ಇರಿ. ಆದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದ ಹಾಗೆ ನೋಡಿಕೊಳ್ಳಿ. ಆರೋಗ್ಯಕರ ಆಹಾರವನ್ನು ತಿನ್ನುವುದು ಉಪಾವಸ ಮಾಡುವುದಕ್ಕಿಂತ ಮುಖ್ಯ. ಪೋಷಕಾಂಶಗಳ ಕೊರತೆ ನಿಮಗೆ ಆಗಬಾರದು.

ನೀವು ಲೈಕೋಪೀನ್, ಪೊಟ್ಯಾಸಿಯಮ್, ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳನ್ನು ಹೋಂದಿರುವ ಈ ಟೊಮೆಟೊ ಸಲಾಡ್ ಟ್ರೈ ಮಾಡಿ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳ ಪಟ್ಟಿ ಇಲ್ಲಿದೆ ಗಮನಿಸಿ.

ಟೊಮೆಟೊ ಸಲಾಡ್‌ಗೆ ಬೇಕಾಗುವ ಪದಾರ್ಥಗಳು
2 ಮಧ್ಯಮ ಗಾತ್ರದ ಟೊಮ್ಯಾಟೊ

1 ಸೌತೆಕಾಯಿ

1 ಸಣ್ಣ ಕೆಂಪು ಈರುಳ್ಳಿ, ತೆಳುವಾಗಿ ಕತ್ತರಿಸಿ

1 ಚಮಚ ಆಲಿವ್ ಆಯ್ಲ್

1 ಚಮಚ ನಿಂಬೆ ರಸ

ರುಚಿಗೆ ಉಪ್ಪು ಮತ್ತು ಮೆಣಸು

ತಾಜಾ ತುಳಸಿ ಎಲೆಗಳು

ಇವಿಷ್ಟು ಇದ್ದರೆ ಸಾಕು. ಇದನ್ನು ಬೇಯಿಸುವ ಅವಶ್ಯಕತೆ ಇಲ್ಲ ಹಾಗೇ ತಿನ್ನಬಹುದು. ಇದನ್ನು ಮಾಡುವ ವಿಧಾನ ಏನಿಲ್ಲ. ಸಿಂಪಲ್ಲಾಗಿ ಎಲ್ಲವನ್ನು ಕಟ್ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿ ತಿನ್ನಿ.

ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ:
ಟೊಮೆಟೊಗಳು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಹೆಚ್ಚಿನ ನೀರಿನ ಅಂಶ ಕೂಡ ಇರುತ್ತದೆ. ಈ ನೀರಿನ ಅಂಶ ನಿಮ್ಮನ್ನು ಸದಾ ಹೈಡ್ರೇಟ್ ಆಗಿ ಇರುವಂತೆ ಮಾಡುತ್ತದೆ. ಹಾಗೆ ಇದ್ದಾಗ ನಿಮ್ಮ ದೇಹದಲ್ಲಿ ಶಕ್ತಿಯ ಕೊರತೆ ಆಗುವುದಿಲ್ಲ. ನಿಮಗೆ ಮತ್ತೆ ಮತ್ತೆ ಏನಾದರೂ ತಿನ್ನಬೇಕು ಎಂಬ ಬಯಕೆ ಆದರೆ ಆ ಬಯಕೆಯನ್ನು ಇದು ತಡೆಗಟ್ಟುತ್ತದೆ. ಸರಿಯಾದ ಜಲಸಂಚಯನವು ದೇಹಕ್ಕೆ ಅವಶ್ಯವಾಗಿರುತ್ತದೆ.

ಅಧ್ಯಯನದ ಪ್ರಕಾರ ಟೊಮ್ಯಾಟೋಸ್ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನ ಉತ್ತಮವಾದ ಮೂಲವಾಗಿದೆ. ಇವೆರಡೂ ಅಂಶಗಳು ನಿಮ್ಮ ದೇಹವನ್ನು ಸೇರುತ್ತದೆ. ಆದರೆ ಇದನ್ನು ನೀವು ಬೇಯಿಸಿ ತಿಂದರೆ ಕೆಲವು ಬದಲಾವಣೆ ಆಗುತ್ತದೆ. ಆ ಕಾರಣದಿಂದ ಪ್ರತಿಯೊಂದನ್ನೂ ಬೇಯಿಸದೆಯೇ ತಿನ್ನಬೇಕು. ಆಗ ಮಾತ್ರ ತೂಕ ಇಳಿಕೆ ಸಾಧ್ಯ.

ಬೇಯಿಸುವುದಾದರೆ

ಮಧ್ಯಮ ಶಾಖದ ಮೇಲೆ ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕಟ್ ಮಾಡಿ ಹಾಕಿ. ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು 5 ನಿಮಿಷ ಬೇಯಿಸಿ. ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಮಿಕ್ಸ್‌ ಮಾಡಿ. ಹ್ಯಾಂಡ್ ಬ್ಲೆಂಡರ್ ಬಳಸಿ ಅದನ್ನು ಮಿಕ್ಸ್‌ ಮಾಡಿ. ತಾಜಾ ತುಳಸಿ ಅಥವಾ ಪುದೀನಾ ಎಲೆಗಳನ್ನು ಇದರ ಮೇಲೆ ಇಡಿ. ತಯಾರಿ ಸಮಯ: 10 ನಿಮಿಷಗಳು ಮಾತ್ರ ಆಗಿರುತ್ತದೆ.

ಆ ಕಾರಣಕ್ಕಾಗಿ ಇದನ್ನು ಮಾಡಿಕೊಳ್ಳುವುದು ಕಷ್ಟ ತುಂಬಾ ಸಮಯ ಹಾಳಾಗುತ್ತದೆ ಎನ್ನುವ ಪ್ರಮೇಯವೂ ಇರುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ