ರುಚಿಕರವಾದ ಬೆಳ್ಳುಳ್ಳಿ, ಜೀರಾ ರೈಸ್ ಮಾಡುವ ಸುಲಭ ವಿಧಾನ ಇಲ್ಲಿದೆ, ನೀವೂ ಒಮ್ಮೆ ಟ್ರೈ ಮಾಡಿ-how to make super tasty garlic jira rice at home cooking recipe in kannada smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ರುಚಿಕರವಾದ ಬೆಳ್ಳುಳ್ಳಿ, ಜೀರಾ ರೈಸ್ ಮಾಡುವ ಸುಲಭ ವಿಧಾನ ಇಲ್ಲಿದೆ, ನೀವೂ ಒಮ್ಮೆ ಟ್ರೈ ಮಾಡಿ

ರುಚಿಕರವಾದ ಬೆಳ್ಳುಳ್ಳಿ, ಜೀರಾ ರೈಸ್ ಮಾಡುವ ಸುಲಭ ವಿಧಾನ ಇಲ್ಲಿದೆ, ನೀವೂ ಒಮ್ಮೆ ಟ್ರೈ ಮಾಡಿ

ನೀವು ಸಾಮಾನ್ಯವಾಗಿ ಜೀರಾ ರೈಸ್‌ ತಿಂದಿರುತ್ತೀರ. ಆದರೆ ಬೆಳ್ಳುಳ್ಳಿ ಜೀರಾ ರೈಸ್‌ ತಿಂದಿರಲಿಕ್ಕಿಲ್ಲ. ನಾವು ಇಂದು ಈ ಬೆಳ್ಳುಳ್ಳಿ ಜೀರಾ ರೈಸ್‌ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ನೀವೂ ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ತುಂಬಾ ರುಚಿಯಾಗಿರುತ್ತದೆ.

ಬೆಳ್ಳುಳ್ಳಿ, ಜೀರಾ ರೈಸ್‌ ರೆಸಿಪಿ
ಬೆಳ್ಳುಳ್ಳಿ, ಜೀರಾ ರೈಸ್‌ ರೆಸಿಪಿ (ಯೂಟ್ಯೂಬ್ )

ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ರುಚಿಯನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆಯೂ ಹೆಚ್ಚು. ಇಲ್ಲಿ ನಾವು ಬೆಳ್ಳುಳ್ಳಿ ಜೀರಿಗೆ ಅನ್ನದ ರೆಸಿಪಿ ನೀಡಿದ್ದೇವೆ. ಈ ಪಾಕವಿಧಾನದಲ್ಲಿ ಬೆಳ್ಳುಳ್ಳಿಯನ್ನು ಹುರಿದ ನಂತರ ಬಳಬೇಕು. ಒಮ್ಮೆ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುತ್ತದೆ. ಈ ಬೆಳ್ಳುಳ್ಳಿ ಜೀರಾ ರೈಸ್‌ಅನ್ನು ಯಾವುದೇ ಕರಿ ಇಲ್ಲದೆ ತಿನ್ನಬಹುದು. ಅಥವಾ ಬದಿಯಲ್ಲಿ ಒಳ್ಳೆಯ ಚಿಕನ್ ಕರಿ ಅಥವಾ ಮೊಟ್ಟೆಯ ಕರಿ ಇದ್ದರೆ ಇನ್ನಷ್ಟು ರುಚಿ ಇದಕ್ಕೆ ಸೇರ್ಪಡೆ ಆಗುತ್ತದೆ. ಬಾಸ್ಮತಿ ಅಕ್ಕಿ ಬಳಸಿ ನೀವು ಮಾಡಿದರೆ ಇದರ ರುಚಿ ಹಾಗೂ ಘಮ ಎರಡೂ ಬೇರೆ ಆಗಿರುತ್ತದೆ.

ಜೀರಾ ರೈಸ್ ರೆಸಿಪಿಗೆ ಬೇಕಾಗುವ ಪದಾರ್ಥಗಳು

ಬಾಸ್ಮತಿ ಅಕ್ಕಿ - ಒಂದು ಕಪ್

ಉಪ್ಪು - ರುಚಿಗೆ ತಕ್ಕಷ್ಟು

ದಾಲ್ಚಿನ್ನಿ - ಸಣ್ಣ ತುಂಡು

ಜೀರಿಗೆ - ಒಂದು ಚಮಚ

ಬೆಳ್ಳುಳ್ಳಿ ಎಸಳು - ಆರು

ಕೊತ್ತಂಬರಿ ಪುಡಿ - ಎರಡು ಚಮಚ

ಕಾಳುಮೆಣಸಿನ ಪುಡಿ - ಅರ್ಧ ಚಮಚ

ಮೆಣಸಿನಕಾಯಿ - ಎರಡು

ತುಪ್ಪ - ಒಂದು ಚಮಚ

ಒಣ ಮೆಣಸಿನಕಾಯಿ - ಎರಡು

ಎಣ್ಣೆ - ಒಂದು ಚಮಚ

ಬೆಳ್ಳುಳ್ಳಿ ಜೀರಾ ರೈಸ್ ಮಾಡುವ ವಿಧಾನ

1. ಬೆಳ್ಳುಳ್ಳಿ ಜೀರಾ ರೈಸ್‌ ಮಾಡಲು ಬಾಸ್ಮತಿ ಅಕ್ಕಿ ಅತ್ಯುತ್ತಮ ಆಯ್ಕೆಯಾಗಿದೆ. ಸರಿಯಾದ ಹದದಲ್ಲಿ ಬೆಂದರೆ ಇದರ ರುಚಿ ತುಂಬಾ ಇಷ್ಟವಾಗುತ್ತದೆ

2. ಈ ಅಕ್ಕಿಯನ್ನು 20 ನಿಮಿಷಗಳ ಕಾಲ ಮೊದಲೇ ತೊಳೆದು ನೆನೆಸಿಡಿ.

3. ಅದರ ನಂತರ, ಈ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಕುದಿಯಲು ಬೇಕಾದಷ್ಟು ನೀರು ಸೇರಿಸಿ. 90 ರಷ್ಟು ಬೇಯಿಸಿ.

4. ನಂತರ ತಟ್ಟೆಯಲ್ಲಿ ಹಾಕಿ ನೀರು ಬಸಿಯಿರಿ

5. ಈಗ ಒಲೆಯ ಮೇಲೆ ಶೇಂಗಾ ಎಣ್ಣೆ ಹಾಕಿ.

6. ಒಂದು ಚಮಚ ತುಪ್ಪ ಮತ್ತು ಎಣ್ಣೆಯನ್ನು ಸೇರಿಸಿ .

7. ಎಣ್ಣೆಯಲ್ಲಿ ದಾಲ್ಚಿನ್ನಿ ಮತ್ತು ಜೀರಿಗೆ ಸೇರಿಸಿ ಫ್ರೈ ಮಾಡಿ.

8. ನಂತರ ಕರಿಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

9. ಬೆಳ್ಳುಳ್ಳಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ.

10. ಅದರ ನಂತರ ಹಸಿರು ಮೆಣಸಿನ ಪುಡಿ ಸೇರಿಸಿ ಮತ್ತು ಫ್ರೈ ಮಾಡಿ.

11. ಜೊತೆಗೆ ಕರಿಮೆಣಸು, ಕಾಳುಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.

12. ಮೊದಲೇ ಬೇಯಿಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಮತ್ತು ಅದನ್ನು ಮಿಕ್ಸ್‌ ಮಾಡಿ.

13. ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ.

15. ಇದು ಮೊಟ್ಟೆಯ ಕರಿ, ಪನೀರ್ ಕರಿ ಅಥವಾ ಚಿಕನ್ ಕರಿಯೊಂದಿಗೆ ರುಚಿಯಾಗಿರುತ್ತದೆ.

16. ಚೋಲೆ ಮಸಾಲಾ ಮತ್ತು ದಾಲ್ ತಡ್ಕಾ ಕೂಡ ಇದಕ್ಕೆ ಉತ್ತಮ ಕಾಂಬಿನೇಷನ್. ಇದು ತುಂಬಾ ಆರೋಗ್ಯಕರ ಆಹಾರವಾಗಿದೆ.

ನೀವು ಬಯಸಿದರೆ ಈ ಬೆಳ್ಳುಳ್ಳಿ ಜೀರಾ ರೈಸ್‌ಗೆ ಸ್ವಲ್ಪ ಹೆಚ್ಚು ಬೆಳ್ಳುಳ್ಳಿ ಸೇರಿಸಬಹುದು. ಬೆಳ್ಳುಳ್ಳಿಯ ವಾಸನೆಯು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ನಾವು ಬಳಸುವುದೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಇದು ಉತ್ತಮ ಲಂಚ್ ಬಾಕ್ಸ್ ರೆಸಿಪಿ ಕೂಡ ಆಗಿದೆ. ರಾತ್ರಿ ಊಟಕ್ಕೆ ಏನಾದರೂ ಒಂದು ಸಿಂಪಲ್ ಆಗಿರುವುದನ್ನು ಮಾಡಿ ತಿನ್ನೋಣ ಎಂದು ಅಂದುಕೊಂಡಿದ್ದರೆ ಇದನ್ನೇ ಟ್ರೈ ಮಾಡಿ. ಇದು ಖಾರವಾಗಿರಬೇಕೆಂದು ಬಯಸಿದರೆ ಹಸಿಮೆಣಸು ಸೇರಿಸಿ.