logo
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿ ಉಪವಾಸದ ನಡುವೆ ಆರೋಗ್ಯ ಜೋಪಾನ; ರಕ್ತದಲ್ಲಿನ ಸಕ್ಕರೆ ನಿರ್ವಹಿಸಲು ಈ 5 ಕ್ರಮ ಮರೆಯದೆ ಅನುಸರಿಸಿ

ನವರಾತ್ರಿ ಉಪವಾಸದ ನಡುವೆ ಆರೋಗ್ಯ ಜೋಪಾನ; ರಕ್ತದಲ್ಲಿನ ಸಕ್ಕರೆ ನಿರ್ವಹಿಸಲು ಈ 5 ಕ್ರಮ ಮರೆಯದೆ ಅನುಸರಿಸಿ

Jayaraj HT Kannada

Oct 07, 2024 07:14 AM IST

google News

ನವರಾತ್ರಿ ಉಪವಾಸದ ನಡುವೆ ರಕ್ತದಲ್ಲಿನ ಸಕ್ಕರೆ ನಿರ್ವಹಿಸಲು ಈ 5 ಕ್ರಮ ಮರೆಯದೆ ಅನುಸರಿಸಿ

    • ಡಯಾಬಿಟಿಸ್ ಇರುವವರು ಎಲ್ಲಾ ಆಹಾರವನ್ನು ಇಷ್ಟಬಂದಂತೆ ಸೇವಿಸುವ ಹಾಗಿಲ್ಲ. ಹಬ್ಬದ ಸಮಯದಲ್ಲಿ ಆಹಾರಕ್ರಮ ಅನುಸರಿಸುವುದು ಕಷ್ಟ. ಉಪವಾಸದ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಕೆಲವೊಂದು ಕ್ರಮ ಅನುಸರಿಸಬೇಕಾಗುತ್ತದೆ. ಈ ಸಲ ನಿಮಗೆ ನೆರವಾಗಬಹುದು.
ನವರಾತ್ರಿ ಉಪವಾಸದ ನಡುವೆ ರಕ್ತದಲ್ಲಿನ ಸಕ್ಕರೆ ನಿರ್ವಹಿಸಲು ಈ 5 ಕ್ರಮ ಮರೆಯದೆ ಅನುಸರಿಸಿ
ನವರಾತ್ರಿ ಉಪವಾಸದ ನಡುವೆ ರಕ್ತದಲ್ಲಿನ ಸಕ್ಕರೆ ನಿರ್ವಹಿಸಲು ಈ 5 ಕ್ರಮ ಮರೆಯದೆ ಅನುಸರಿಸಿ (Pixabay)

ನವರಾತ್ರಿ ಸಮಯದಲ್ಲಿ ಹಬ್ಬದ ಸಂಭ್ರಮದ ನಡುವೆ ಪೂಜೆ, ಉಪವಾಸ ವ್ರತ ಸಾಮಾನ್ಯ. ಒಟ್ಟು ಒಂಬತ್ತು ದಿನಗಳ ಕಾಲ ನವರಾತ್ರಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಭಿನ್ನ ವಿಭಿನ್ನ ಆಚರಣೆಗಳಿವೆ. ಇದೇ ಸಮಯದಲ್ಲಿ ದಸರಾ ಸಂಭ್ರಮ ಕೂಡಾ ಮನೆ ಮಾಡುತ್ತದೆ. ಶಾರದೆ ಅಥವಾ ದುರ್ಗೆಯ ಆರಾಧನೆ ಮಾಡುವ ನವರಾತ್ರಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಒಂಬತ್ತು ದಿನಗಳ ಕಾಲವೂ ಉಪವಾಸ ವ್ರತ ಕೈಗೊಳ್ಳುವವರಿದ್ದಾರೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಸಾಮಾನ್ಯರು ಹೇಗೋ ನಿಭಾಯಿಸುತ್ತಾರೆ. ಆದರೆ ಸಕ್ಕರೆ ಖಾಯಿಲೆ ಇದ್ದರೆ ಉಪವಾಸ ಪೂರ್ಣಗೊಳಿಸುವುದು ತುಸು ಕಷ್ಟ.

ಯಾವುದೇ ಹಬ್ಬ ಹರಿದಿನಗಳ ಸಮಯದಲ್ಲೂ ಆರೋಗ್ಯದತ್ತ ಗಮನ ಹರಿಸುವುದು ಮುಖ್ಯ. ಯಾಕೆಂದರೆ ಇವೆಲ್ಲಾ ಮಾಡುವುದು ಆರೋಗ್ಯ ಭಾಗ್ಯಕ್ಕಾಗಿ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚು. ರಕ್ತದಲ್ಲಿ ಸಕ್ಕರೆ ಸಮಸ್ಯೆ ಹೊಂದಿರುವ 10 ಲಕ್ಷಕ್ಕೂ ಹೆಚ್ಚು ಜನರು ಭಾರತದಲ್ಲಿದ್ದಾರೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಆಹಾರ ಸೇವನೆಗೆ ನಿರ್ಬಂಧ ಹಾಕಿಕೊಂಡು ಸೀಮಿತ ಆಹಾರಾಭ್ಯಾಸ ಮಾಡಬೇಕಾಗುತ್ತದೆ. ಆದರೆ ಹಬ್ಬದ ಸಮಯದಲ್ಲಿ ಇದು ಕಷ್ಟ. ಉಪವಾಸದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದಕ್ಕೆ ಅಡ್ಡಿಯಾಗಬಹುದು. ಹೀಗಾಗಿ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ಅನುಸರಿಸಿ.

ಹೈಡ್ರೇಟೆಡ್ ಆಗಿರಿ

ವ್ರತಾಚರಣೆ ಸಮಯದಲ್ಲಿ ಜಲಸಂಚಯನ ಅತ್ಯಗತ್ಯ. ನಿರ್ಜಲೀಕರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿ ಆಯಾಸ ಆಗಬಹುದು. ಹೀಗಾಗಿ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಗಿಡಮೂಲಿಕೆ ಚಹಾ ಅಥವಾ ನಿಂಬೆ ಮತ್ತು ಪುದೀನ ಹಾಕಿದ ನೀರನ್ನು ಕುಡಿಯಿರಿ. ಸಕ್ಕರೆ ಹಾಕಿದ ಜ್ಯೂಸ್‌ ಬೇಡ.

ಊಟಕ್ಕೆ ಏನೇನು ಸೇವಿಸುವಿರಿ ಎಂದು ಮೊದಲೇ ನಿರ್ಧರಿಸಿ

ಮಧುಮೇಹ ನಿರ್ವಹಿಸಲು ಆಹಾರ ಯೋಜನೆ ತುಂಬಾ ಮುಖ್ಯ. ದೇಹಕ್ಕೆ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಹೇರಳವಾಗಿರುವ ಸಮತೋಲಿತ ಊಟ ಬೇಕು. ಇದಕ್ಕಾಗಿ ನಿಮ್ಮ ಊಟದ ಯೋಜನೆಯನ್ನು ಮೊದಲೇ ರೂಪಿಸಿ. ಹಣ್ಣು, ತರಕಾರಿ, ಧಾನ್ಯಗಳು ಮತ್ತು ನೇರ ಪ್ರೋಟೀನ್‌ ಇರುವ ಸಂಪೂರ್ಣ ಆಹಾರಗಳ ಮೇಲೆ ಗಮನವಿರಲಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿ ಇರಿಸಿಕೊಳ್ಳಲು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸಿಹಿತಿಂಡಿ ಮತ್ತು ಕರಿದ ತಿಂಡಿಗಳು ಬೇಡ.

ಆರೋಗ್ಯಕರ ತಿಂಡಿ ಮಾತ್ರವೇ ತಿನ್ನಿ

ಹಬ್ಬವೆಂದಾಗ ಬಗೆಬಗೆಯ ತಿಂಡಿ ತಿನಿಸುಗಳು ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲರಿ ತಿಂಡಿಗಳೂ ಇರಬಹುದು. ಆದರೆ ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುವ ಆರೋಗ್ಯಕರ ತಿಂಡಿ ಮಾತ್ರವೇ ತಯಾರಿಸಿ. ನಟ್ಸ್, ಧಾನ್ಯಗಳು ಮತ್ತು ಹುರಿದ ಕಡಲೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಇರುವ ಅತ್ಯುತ್ತಮ ಆಹಾರ. ಸೇಬು, ಬೆರ್ರಿ ಅಥವಾ ಕಿತ್ತಳೆ ಕೂಡಾ ಒಳ್ಳೆಯದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಿ

ವ್ರತಾಚರಣೆ ನಡುವೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರಿಶೀಲಿಸುವುದು ಅತ್ಯಗತ್ಯ. ಸೀಮಿತ ಹಾಗೂ ವಿಭಿನ್ನ ಆಹಾರಗಳು ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದನ್ನು ಪರೀಕ್ಷಿಸುವುದು ಮುಖ್ಯ.

ದೈಹಿಕ ಚಟುವಟಿಕೆ

ಉಪವಾಸ ವ್ರತ ಕೈಗೊಂಡರೆ ನಿಮ್ಮ ದೇಹದ ಸಹಜ ಶಕ್ತಿಯ ಮಟ್ಟ ಕುಂದಬಹುದು. ಹೀಗಾಗಿ ಕೆಲವೊಂದು ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದು. ನಡಿಗೆ, ಯೋಗಾಸನ ಸೇರಿದಂತೆ ಸರಳ ವ್ಯಾಯಾಮಗಳನ್ನು ಮಾಡಿ. ದೇಹವನ್ನು ಸಕ್ರಿಯವಾಗಿಟ್ಟುಕೊಳ್ಳಿ. ಇದು ನಿಮ್ಮ ಮನಸ್ಥಿತಿಯನ್ನು ಇನ್ನೂ ಉತ್ತಮವಾಗಿಸಿ ದೇಹದ ಶಕ್ತಿಯನ್ನು ಸುಧಾರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ