logo
ಕನ್ನಡ ಸುದ್ದಿ  /  ಜೀವನಶೈಲಿ  /  Morning Habits: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಬೆಳಗಿನ ದಿನಚರಿಗಳಿವು, ನಿಮ್ಮಲ್ಲೂ ಈ ಅಭ್ಯಾಸಗಳಿದ್ರೆ ಇಂದೇ ಬದಲಾಗಿ

Morning Habits: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಬೆಳಗಿನ ದಿನಚರಿಗಳಿವು, ನಿಮ್ಮಲ್ಲೂ ಈ ಅಭ್ಯಾಸಗಳಿದ್ರೆ ಇಂದೇ ಬದಲಾಗಿ

Reshma HT Kannada

Sep 11, 2024 06:41 AM IST

google News

ಆರೋಗ್ಯ ಕೆಡಿಸುವ ಬೆಳಗಿನ ದಿನಚರಿಗಳು

    • ಬೆಳಗಿನ ಹೊತ್ತು ನಾವು ಪಾಲಿಸುವ ಕೆಲವು ದಿನಚರಿಗಳು ನಮ್ಮಿಡಿ ದಿನವನ್ನು ಹಾಳು ಮಾಡುವುದು ಮಾತ್ರವಲ್ಲ, ನಮ್ಮ ಆರೋಗ್ಯ ಚಕ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತತೆ. ಇದು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಒಂದೇ ಬದಲಾಗಿ, ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಕೆಡಿಸುವ ಬೆಳಗಿನ ದಿನಚರಿಗಳು
ಆರೋಗ್ಯ ಕೆಡಿಸುವ ಬೆಳಗಿನ ದಿನಚರಿಗಳು

ಬೆಳಗಿನ ನಮ್ಮ ದಿನಚರಿಯೂ ನಮ್ಮಿಡಿ ದಿನ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆ ಕಾರಣಕ್ಕೆ ಬೆಳಿಗ್ಗೆ ಎದ್ದಾಗಿನಿಂದಲೇ ನಾವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಗಿನ ಹೊತ್ತು ನಾವು ಪಾಲಿಸುವ ದಿನಚರಿಯು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳ ಪ್ರಮಾಣವು ಹೆಚ್ಚಾಗಿದೆ.

ಸ್ಥಿರವಾದ ಬೆಳಗಿನ ದಿನಚರಿಯು ನಿಮ್ಮ ದಿನ ಎಷ್ಟು ಉತ್ಪಾದಕ ಮತ್ತು ಯಶಸ್ವಿಯಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆದರೆ ನಮ್ಮ ಈ ಅಭ್ಯಾಸಗಳು ಇಡಿ ದಿನದ ಮೇಲೆ ಮಾತ್ರವಲ್ಲದೇ ಆರೋಗ್ಯ ಚಕ್ರದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಇದರಿಂದ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ಹಾಗಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಂತಹ ಅಭ್ಯಾಸಗಳು ಯಾವುದು ನೋಡಿ, ಈ ಅಭ್ಯಾಸಗಳನ್ನ ನೀವೂ ಪಾಲಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟು ಬಿಡಿ.

ಅಲಾರಂ ಸ್ನೂಜ್ ಮಾಡುವುದು

ಹಲವರು ಬೆಳಿಗ್ಗೆ ಬೇಗ ಅಥವಾ ಒಂದು ನಿರ್ದಿಷ್ಟ ಸಮಯಕ್ಕೆ ಏಳಬೇಕು ಎಂದು ಅಲಾರಂ ಇಟ್ಟಿರುತ್ತಾರೆ. ಆದರೆ ಪ್ರತಿ ಬಾರಿಯೂ ಅದನ್ನೂ ಸ್ನೂಜ್ ಮಾಡಿ ಮತ್ತೆ ಮಲಗುತ್ತಾರೆ. ಕೆಲವು ಬಾರಿ ಸ್ನೂಜ್ ಮಾಡಿ ಎದ್ದೇಳುವುದು ನಿಜಕ್ಕೂ ನಿಮ್ಮಲ್ಲಿ ನಿದ್ದೆ ಎಳೆಯುವಂತೆ ಮಾಡುತ್ತದೆ, ಈ ಅಭ್ಯಾಸ ಬಹಳ ಅಪಾಯಕಾರಿ. ಇದರಿಂದ ನಿಮ್ಮ ದಿನವಿಡಿ ನೀವು ಆಕ್ಟಿವ್ ಆಗಿರಲು ಸಾಧ್ಯವೇ ಇಲ್ಲ. ಒಮ್ಮೆ ಅಲಾರಂ ಹೊಡೆದ ತಕ್ಷಣಕ್ಕೆ ನೀವು ಎದ್ದು ಬಿಡಿ, ಅಲಾರಂ ಆಫ್ ಮಾಡಿ ಮಲಗುವುದು, ಸ್ನೂಜ್ ಮಾಡುವುದು ಇಂತಹ ಅಭ್ಯಾಸಕ್ಕೆ ಕಡಿವಾಣ ಹಾಕಿ.

ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುವುದು

ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಅಭ್ಯಾಸವಿದೆ. ಇನ್ನೂ ಕೆಲವರು ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಜೊತೆಗೆ ಅತಿಯಾಗಿ ಕಾಫಿ ಟೀ ಕುಡಿಯುವುದರಿಂದ ನಿದ್ದೆಯ ಸಮಸ್ಯೆ, ಮೂಡ್‌ ಸ್ವಿಂಗ್‌ ಹಾಗೂ ಆತಂಕದಂತಹ ಸಮಸ್ಯೆಗಳು ಹೆಚ್ಚಾಗಬಹುದು. ಇವು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತ‌ವೆ. ಆ ಕಾರಣಕ್ಕೆ ಕಾಫಿ, ಟೀ ಕುಡಿಯುವ ವಿಚಾರದಲ್ಲಿ ಜಾಗೃತೆ ವಹಿಸಿ.

ಬೆಳಗಿನ ಉಪಾಹಾರ ತಪ್ಪಿಸುವುದು

ಹಲವರು ಬೆಳಗಿನ ಉಪಾಹಾರ ಬಿಡುವುದರಿಂದ ತೂಕ ಕಡಿಮೆಯಾಗುತ್ತೆ ನಂಬಿರುತ್ತಾರೆ. ಆದರೆ ಬೆಳಗಿನ ಉಪಾಹಾರ ತಿನ್ನದೇ ಇರುವುದು ನಾವು ಅತಿಯಾಗಿ ತಿನ್ನಲು ಕಾರಣವಾಗುತ್ತದೆ, ಮಾತ್ರವಲ್ಲ ಇದರಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತದೆ. ಇದರೊಂದಿಗೆ ಮಧುಮೇಹ, ಹೃದಯ ಸಮಸ್ಯೆಗಳು ನಿಮ್ಮನ್ನು ಕಾಡಲು ಆರಂಭಿಸಬಹುದು. ಬೆಳಗಿನ ಹೊತ್ತು ನಾವು ಆರೋಗ್ಯಕರ ಉಪಾಹಾರ ಸೇವಿಸುವುದು ಬಹಳ ಮುಖ್ಯವಾಗಿದೆ.

ಜಡ ಜೀವನಶೈಲಿ

ನಿರಂತರವಾಗಿ ಕುಳಿತುಕೊಳ್ಳುವುದು ನಿಮ್ಮಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಜಡ ಜೀವನಶೈಲಿಯಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಬೆಳಗಿನ ಹೊತ್ತು ಕನಿಷ್ಠ ಅರ್ಧ ಗಂಟೆ ಹೊತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗುವುದರಿಂದ ತೂಕ ಹೆಚ್ಚಾಗುವುದು ಮತ್ತು ಬೊಜ್ಜು, ಹೃದಯಾಘಾತ, ಪಾರ್ಶ್ವವಾಯು, ಕೆಲವು ರೀತಿಯ ಕ್ಯಾನ್ಸರ್, ಆಸ್ತಮಾ, ಉಸಿರಾಟದ ತೊಂದರೆಗಳು, ಆಸ್ಟಿಯೊಪೊರೋಸಿಸ್, ಒತ್ತಡದ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆರೋಗ್ಯ ಸ್ಥಿರವಾಗಿರಲು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡಿ.

ನೀರು ಕುಡಿಯದೇ ಇರುವುದು

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲೇ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇಂದು ದಿನದಲ್ಲಿ ಕನಿಷ್ಠ 3 ಲೀಟರ್‌ನಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದು ಕಡಿಮೆಯಾದರೇ ತಲೆನೋವು, ತಲೆತಿರುಗುವಿಕೆ, ಗುಳಿಬಿದ್ದ ಕಣ್ಣುಗಳು, ಕಡಿಮೆ ರಕ್ತದೊತ್ತಡ, ಹೆಚ್ಚಿದ ಹೃದಯ ಬಡಿತ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಕರುಳನ್ನು ಶುದ್ಧೀಕರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ಸೋಂಕಿನ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ. ಆರೋಗ್ಯ ಚೆನ್ನಾಗಿರಲು ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ 1 ರಿಂದ 2 ಲೋಟ ನೀರು ಕುಡಿಯಬೇಕು.

ಧೂಮಪಾನ

ಹಲವು ಧೂಮ‍‍ಪಾನಿಗಳಿಗೆ ಬೆಳಗೆದ್ದ ತಕ್ಷಣ ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ಇದರಿಂದ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಸಮಸ್ಯೆ ಉಂಟಾಗುತ್ತದೆ. ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯು ಇತ್ಯಾದಿಗಳು ಧೂಮಪಾನದ ಕೆಲವು ಅಡ್ಡಪರಿಣಾಮಗಳಾಗಿವೆ. ಧೂಮಪಾನದ ಬದಲಿಗೆ, ವ್ಯಾಯಾಮದ ದಿನಚರಿಯನ್ನು ಸೇರಿಸಿ, ಸರಳವಾದ ನಡಿಗೆ ಕೂಡ ಧೂಮಪಾನದಿಂದ ದೂರವಿರಲು ನಿಮಗೆ ಸಹಾಯ ಮಾಡುತ್ತದೆ.

ಪೋನ್ ನೋಡುವುದು

ಹಲವರಿಗೆ ಅಂದರೆ ಶೇ 80 ರಷ್ಟು ಜನರಿಗೆ ಈ ಅಭ್ಯಾಸವಿದೆ. ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯಲ್ಲೇ ಮಲಗಿಕೊಂಡು ಫೋನ್ ನೋಡುತ್ತಿರುತ್ತಾರೆ. ಆದರೆ ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದು ನಿಮ್ಮ ಸಮಯವನ್ನು ಹಾಳು ಮಾಡುವ ಜೊತೆಗೆ ನಿಮ್ಮ ಆರೋಗ್ಯಕ್ಕೂ ತೊಂದರೆ ಉಂಟು ಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಫೋನ್ ನೋಡುವುದು ಮನಸ್ಸಿನಲ್ಲಿ ಒತ್ತಡ, ಆತಂಕ ಹುಟ್ಟು ಹಾಕುತ್ತದೆ. ಇದು ನಮ್ಮ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ದಿನ ಹಾಗೂ ಆರೋಗ್ಯ ಚಕ್ರ ಎರಡೂ ಚೆನ್ನಾಗಿರಬೇಕು ಅಂದ್ರೆ ನೀವು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ. ಈ ಅಭ್ಯಾಸಗಳು ಒಂದೇ ಬಾರಿಗೆ ಸಮಸ್ಯೆ ಮಾಡದೇ ಇದ್ದರೂ ನಿಧಾನಕ್ಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲು ಆರಂಭವಾಗುತ್ತದೆ. ಇದರಿಂದ ಮಧುಮೇಹ, ಕೊಲೆಸ್ಟ್ರಾಲ್‌ನಂತಹ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ