logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಗಸೆ ಬೀಜದ ಎಣ್ಣೆಯ 5 ಅದ್ಭುತ ಆರೋಗ್ಯ ಪ್ರಯೋಜನಗಳು; ಕ್ಯಾನ್ಸರ್‌ ಮತ್ತು ಹೃದ್ರೋಗದಿಂದ ರಕ್ಷಣೆ, ಮಲಬದ್ಧತೆ ನಿವಾರಕ, ತ್ವಚೆಗೂ ಉಪಕಾರಿ

ಅಗಸೆ ಬೀಜದ ಎಣ್ಣೆಯ 5 ಅದ್ಭುತ ಆರೋಗ್ಯ ಪ್ರಯೋಜನಗಳು; ಕ್ಯಾನ್ಸರ್‌ ಮತ್ತು ಹೃದ್ರೋಗದಿಂದ ರಕ್ಷಣೆ, ಮಲಬದ್ಧತೆ ನಿವಾರಕ, ತ್ವಚೆಗೂ ಉಪಕಾರಿ

Praveen Chandra B HT Kannada

Oct 13, 2024 01:19 PM IST

google News

ಆಗಸೆ ಬೀಜದ ಎಣ್ಣೆಯ 5 ಅದ್ಭುತ ಪ್ರಯೋಜನಗಳು

    • Top 5 Amazing Flaxseed oil benefits: ಅಗಸೆಬೀಜದ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಎಣ್ಣೆಯ ಬಳಕೆ ಮಾಡಬಹುದು. ಕ್ಯಾನ್ಸರ್‌, ಹೃದ್ರೋಗದಿಂದ ರಕ್ಷಣೆ ನೀಡುವ ಈ ಎಣ್ಣೆಯಿಂದ ಸಾಕಷ್ಟು ಹೆಲ್ತ್‌ ಬೆನಿಫಿಟ್‌ಗಳಿವೆ.
ಆಗಸೆ ಬೀಜದ ಎಣ್ಣೆಯ 5  ಅದ್ಭುತ ಪ್ರಯೋಜನಗಳು
ಆಗಸೆ ಬೀಜದ ಎಣ್ಣೆಯ 5 ಅದ್ಭುತ ಪ್ರಯೋಜನಗಳು

Top 5 Amazing Flaxseed oil benefits: ಲಿನ್ಸೆಡ್ ಎಣ್ಣೆಯನ್ನು ಅಗಸೆಬೀಜದ ಎಣ್ಣೆ ಅಥವಾ ಅಗಸೆ ಎಣ್ಣೆ ಎಂದು ಕರೆಯುತ್ತಾರೆ. ಆಗಸೆ ಬೀಜದ ಎಣ್ಣೆ ಇದೆ ಎಂದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ದಿನನಿತ್ಯದ ಆಹಾರದಲ್ಲಿ ಈ ಎಣ್ಣೆಯನ್ನು ಸಮರ್ಪಕವಾಗಿ ಸೇರಿಸಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಕೆಲವು ಕಡೆ ಈ ಎಣ್ಣೆಯನ್ನು ಹೆರಿಗೆಯ ನಂತರ ತಾಯಂದಿರಿಗೆ ನೀಡಲಾಗುತ್ತದೆ. ಇದು ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಎಣ್ಣೆಯಾಗಿದೆ. ಆಗಸೆ ಬೀಚದ ಕಚ್ಚಾ ಎಣ್ಣೆಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿದರೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹೃದಯದ ಆರೋಗ್ಯದಿಂದ ಮಧುಮೇಹದಿಂದ ಆರೋಗ್ಯ ಕಾಪಾಡುವವರೆಗೆ ಅನೇಕ ಪ್ರಯೋಜನಗಳು ಇವೆ. ಇದರಿಂದ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ಪೋಷಣೆ ದೊರಕುತ್ತದೆ.

ಅಗಸೆಬೀಜದ ಎಣ್ಣೆ

ಲಿನ್ಸೆಡ್ ಎಣ್ಣೆಯು ಆಹಾರದ ಪೂರಕವಾಗಿ ಬೇಡಿಕೆಯಲ್ಲಿರುವ ಖಾದ್ಯ ತೈಲವಾಗಿದೆ . ಅಗಸೆಬೀಜದ ಎಣ್ಣೆಯು ಆಲ್ಫಾ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಒಮೆಗಾ 3 ಕೊಬ್ಬಿನಾಮ್ಲ ಹೊಂದಿರುತ್ತದೆ. ಈ ಎಣ್ಣೆಯನ್ನು ಸೇವಿಸುವುದರಿಂದ ಡೊಕೊಸಾಹೆಕ್ಸೆನೊಯಿಕ್ ಆಮ್ಲವನ್ನು ಐಕೊಸಾಪೆಂಟೆನೊಯಿಕ್ ಆಮ್ಲವಾಗಿ ಪರಿವರ್ತಿರ್ತನೆಯಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಅತ್ಯಗತ್ಯ. ಹೆಚ್ಚುವರಿಯಾಗಿ, ಅಗಸೆಬೀಜದ ಎಣ್ಣೆಯು ಒಲೀಕ್, ಪಾಲ್ಮಿಟಿಕ್, ಲಿನೋಲಿಕ್ ಮತ್ತು ಲಿಗ್ನಾನ್‌ಗಳನ್ನು ಸಹ ಒಳಗೊಂಡಿದೆ.

ಅಗಸೆಬೀಜದ ಎಣ್ಣೆಯ 5 ಉಪಯೋಗಗಳು

  1. ಸೌಂದರ್ಯವರ್ಧಕ: ಸುಕ್ಕು-ಮುಕ್ತ ತ್ವಚೆ ಬೇಕೆಂದರೆ ಇಂದಿನಿಂದಲೇ ಈ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಈ ಎಣ್ಣೆಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ವಯಸ್ಸಿನ ಕಾರಣದ ಸುಕ್ಕುಗಳು ಮತ್ತು ದೇಹದ ಗೆರೆಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಸುಕ್ಕುಗಳಿಂದ ಮುಕ್ತಗೊಳಿಸುತ್ತದೆ.
  2. ಕ್ಯಾನ್ಸರ್‌ನಿಂದ ರಕ್ಷಣೆ: ಈ ಎಣ್ಣೆಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ದೇಹವನ್ನು ಕೆಲವು ರೀತಿಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಈ ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎನ್ನಲಾಗಿದೆ.
  3. ಹೃದಯದ ಆರೋಗ್ಯಕ್ಕೆ ಪೂರಕ: ನೀವು ಹೃದಯದ ಆರೋಗ್ಯ ಉತ್ತಮಪಡಿಸಿಕೊಳ್ಳಲು ಬಯಸಿದರೆ, ಆಹಾರದಲ್ಲಿ ಆಗಸೆಬೀಜದ ಎಣ್ಣೆಯನ್ನು ಸೇರಿಸಬಹುದು. ಇದು ರಕ್ತನಾಳಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
  4. ಸಕ್ಕರೆ ಮಟ್ಟ ನಿಯಂತ್ರಣ: ಆಹಾರದಲ್ಲಿ ಅಗಸೆಬೀಜದ ಎಣ್ಣೆಯನ್ನು ಸೇವಿಸುವುದು ಇನ್ಸುಲಿನ್ ಪ್ರತಿರೋಧಕ್ಕೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.
  5. ಮಲಬದ್ದತೆ ನಿವಾರಣೆ: ಅಗಸೆಬೀಜದ ಎಣ್ಣೆಯು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಅಗಸೆಬೀಜದ ಎಣ್ಣೆಯ ದೈನಂದಿನ ಬಳಕೆಯು ಕರುಳಿನ ಆರೋಗ್ಯ ಸುಧಾರಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಇದನ್ನೂ ಓದಿ: Beard Oil: ಗಡ್ಡ ತೈಲ ಬಳಕೆಯ ಪ್ರಯೋಜನ, ಅಡ್ಡಪರಿಣಾಮ ತಿಳಿಯಿರಿ; ಸೊಂಪದ ಗಡ್ಡಕ್ಕೆ ಗಡ್ಡದ್ದೆಣ್ಣೆ ಆರೈಕೆ

ಅಗಸೆಬೀಜದ ಎಣ್ಣೆಯ ಬಳಕೆ ಹೇಗೆ?

ಅಗಸೆಬೀಜದ ಎಣ್ಣೆಯನ್ನು ಬಳಸಲು ಹಲವು ಮಾರ್ಗಗಳಿವೆ. ಇದನ್ನು ಸಲಾಡ್ ಡ್ರೆಸ್ಸಿಂಗ್, ಡಿಪ್ಸ್, ಚಟ್ನಿಗಳು ಮತ್ತು ಸ್ಮೂಥಿಗಳಲ್ಲಿ ಬಳಸಬಹುದು. ಅಲ್ಲದೆ, ಈ ಎಣ್ಣೆಯನ್ನು ಲಡ್ಡುಗಳಲ್ಲಿ ಬೆರೆಸಿ ಶಿಶುಗಳಿಗೆ ನೀಡಲಾಗುತ್ತದೆ. ರುಚಿಕರವಾಗಿ ತಿನ್ನಲು ಇದು ಉತ್ತಮ ಮಾರ್ಗವಾಗಿದೆ. ಆದರೆ ಈ ಎಣ್ಣೆಯನ್ನು ಕಚ್ಚಾ ರೂಪದಲ್ಲಿ ಬಳಸಿದರೆ ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ವೈದ್ಯರ ಸಲಹೆ ಸೂಚನೆಗಳನ್ನು ಅನುಸರಿಸಿ ಆರೋಗ್ಯ ಸಲಹೆಗಳನ್ನು ಪಾಲಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ