logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಜ್ವರ, ಶೀತ ಬರುತ್ತದೆಯೇ: ಈ ಬಗ್ಗೆ ವೈದ್ಯರು ಹೇಳುವುದೇನು, ಇಲ್ಲಿದೆ ಮಾಹಿತಿ

ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಜ್ವರ, ಶೀತ ಬರುತ್ತದೆಯೇ: ಈ ಬಗ್ಗೆ ವೈದ್ಯರು ಹೇಳುವುದೇನು, ಇಲ್ಲಿದೆ ಮಾಹಿತಿ

Priyanka Gowda HT Kannada

Nov 23, 2024 11:00 AM IST

google News

ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಜ್ವರ, ಶೀತ ಬರುತ್ತದೆಯೇ: ಈ ಬಗ್ಗೆ ವೈದ್ಯರು ಹೇಳುವುದೇನು, ಇಲ್ಲಿದೆ ಮಾಹಿತಿ

  • ಚಳಿಗಾಲದ ತಿಂಗಳುಗಳಲ್ಲಿ ಕಿತ್ತಳೆ ಹಣ್ಣುಗಳನ್ನು ತಿನ್ನಬಾರದು ಎಂದು ತುಂಬಾ ಜನರು ಭಾವಿಸುತ್ತಾರೆ. ಇದನ್ನು ತಿನ್ನುವುದರಿಂದ ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಬರುತ್ತಾ? ಚಳಿಗಾಲದ ಋತುವಿನಲ್ಲೇ ಸಿಗುವ ಈ ಕಿತ್ತಳೆ ಹಣ್ಣನ್ನು ಬಹುತೇಕರು ದೂರವಿಡುತ್ತಾರೆ. ಈ ಬಗ್ಗೆ ತಜ್ಞರು ಹೇಳುವುದು ಏನು ಎಂಬುದು ಇಲ್ಲಿದೆ.

ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಜ್ವರ, ಶೀತ ಬರುತ್ತದೆಯೇ: ಈ ಬಗ್ಗೆ ವೈದ್ಯರು ಹೇಳುವುದೇನು, ಇಲ್ಲಿದೆ ಮಾಹಿತಿ
ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಜ್ವರ, ಶೀತ ಬರುತ್ತದೆಯೇ: ಈ ಬಗ್ಗೆ ವೈದ್ಯರು ಹೇಳುವುದೇನು, ಇಲ್ಲಿದೆ ಮಾಹಿತಿ

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಈ ಋತುವಿನಲ್ಲಿಯೇ ಹುಳಿ-ಸಿಹಿ ರುಚಿ ಹೊಂದಿರುವ ಕಿತ್ತಳೆ ಹಣ್ಣುಗಳು ಹೆಚ್ಚಾಗಿ ಬರುತ್ತವೆ. ಆದರೆ, ಈ ಹಣ್ಣುಗಳನ್ನು ತಿನ್ನಲು ಯೋಚನೆ ಮಾಡುವವರೇ ಹೆಚ್ಚು. ಯಾಕೆಂದರೆ, ಈ ಚಳಿಗಾಲದ ಋತುವಿನಲ್ಲಿ ಈ ಹಣ್ಣು ತಿನ್ನುವುದರಿಂದ ಜ್ವರ, ಶೀತ ಅಥವಾ ಕೆಮ್ಮು ಉಂಟಾಗುತ್ತದೆ ಎಂದು ಹೆದರುವವರೇ ಹೆಚ್ಚು. ಈ ಸೀಸನ್‌ನಲ್ಲಿ ತುಂಬಾ ಜನರು ಶೀತ, ಗಂಟಲು ನೋವಿನಿಂದ ತೊಂದರೆ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಇದನ್ನು ತಿನ್ನುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆಯು ಹೆಚ್ಚಾಗುತ್ತದೆ ಎಂದು ಜನರು ಭಾವಿಸಿದ್ದಾರೆ. ಇದು ನಿಜವೇ ಎಂಬುದು ಪ್ರತಿಯೊಬ್ಬರೂ ತಿಳಿಯಲೇಬೇಕಾಗಿದೆ. ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳು ತಿನ್ನಬಹುದೇ ಎಂಬುದಕ್ಕೆ ವೈದ್ಯರು ಕೊಟ್ಟ ವಿವರಣೆ ಇಲ್ಲಿದೆ.

ಕಿತ್ತಳೆ ಹಣ್ಣು ಏಕೆ ತಿನ್ನಬೇಕು?

ಚಳಿಗಾಲದಲ್ಲಿ ಜ್ವರ, ಶೀತ, ಕೆಮ್ಮುವಿನಿಂದ ಬಳಲುವುದು ಸಾಮಾನ್ಯ. ಆದರೆ ಈ ಋತುವಿನಲ್ಲಿ ಆರೋಗ್ಯವಾಗಿರಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ವಿಶೇಷವಾಗಿ ಈ ಸೀಸನ್‌ನಲ್ಲಿ ಸಿಗುವ ಹಣ್ಣುಗಳು, ತರಕಾರಿಗಳನ್ನು ಪ್ರತಿದಿನ ತಿನ್ನಬೇಕು. ಪ್ರತಿ ಋತುಮಾನದ ಹಣ್ಣುಗಳು, ತರಕಾರಿಗಳು ಅದರದ್ದೇ ಆದಂತಹ ಉದ್ದೇಶಗಳನ್ನು ಹೊಂದಿರುತ್ತವೆ. ಚಳಿಗಾಲದಲ್ಲಿ ಬರುವ ಸೀಜನಲ್ ಫ್ರೂಟ್ಸ್‌ನಲ್ಲಿ ಅಥವಾ ಋತುಮಾನದ ಹಣ್ಣಿನಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಈ ಸೀಸನ್‍ನಲ್ಲಿ ಇದನ್ನು ತಿನ್ನುವುದು ತುಂಬಾ ಒಳ್ಳೆಯದು. ಇದು ಚಳಿಗಾಲದ ಸೂಪರ್ ಫ್ರೂಟ್ ಆಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್, ಆಂಟಿಸ್ ಇನ್ಫ್ಲಮೆಟರಿ, ಆ್ಯಂಟಿ ವೈರಾಣುಗಳು ಇರುತ್ತವೆ.

ಪ್ರತಿರೋಧ ಶಕ್ತಿ ಹೆಚ್ಚಾಗುತ್ತದೆ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿ ಇವೆ. ಇದನ್ನು ಪ್ರತಿದಿನ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿತ್ತಳೆ ಹಣ್ಣನ್ನು ಹೆಚ್ಚು ತಿನ್ನುವುದರಿಂದ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವರದಿಗಳು ಹೇಳುತ್ತವೆ. ಕಿತ್ತಳೆಯಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ವಿಟಮಿನ್ ಸಿ ಸೇವನೆಯು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಚಳಿಗಾಲದಲ್ಲಿ ಕಾಡುವ ಕಾಯಿಲೆಗಳಿಂದ ರಕ್ಷಿಸುವಲ್ಲಿ ಸಹಕಾರಿಯಾಗಿದೆ.

ತೂಕ ಕಡಿಮೆಯಾಗಲು ಸಹಕಾರಿ

ಕಿತ್ತಳೆ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹಸಿವು ಅಥವಾ ಅತಿಯಾಗಿ ತಿನ್ನುವುದನ್ನು ನಿವಾರಿಸುತ್ತದೆ. ಇದರಲ್ಲಿ ಉತ್ತಮ ಫೈಬರ್ ಕೂಡ ಇರುತ್ತದೆ, ಇದು ಜೀರ್ಣಕಾರಿ ಆರೋಗ್ಯವನ್ನು ಪ್ರೋತ್ಸಾಹಿಸುತ್ತದೆ.

ಕಿತ್ತಳೆ ಹಣ್ಣು ತಿನ್ನಬೇಕಾದ ಸಮಯ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಇರುತ್ತದೆ. ಇದು ಚರ್ಮಕ್ಕೆ ತುಂಬಾನೇ ಪ್ರಯೋಜನಕಾರಿ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಚರ್ಮ ಮೃದುವಾಗಿ ಇರುತ್ತದೆ. ಕಿತ್ತಳೆ ಹಣ್ಣನ್ನು ಮಧ್ಯಾಹ್ನ 12 ಗಂಟೆಗೆ ತಿನ್ನಬೇಕು. ಮಧ್ಯಾಹ್ನ 12 ಗಂಟೆಗೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಕಿತ್ತಳೆ ಹಣ್ಣು ತಿಂದರೆ ಸಾಕು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ