logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೀಟ್‌ರೂಟ್ ವಡೆ ತಿಂಡಿಯ ಖುಷಿಯನ್ನು ಹೆಚ್ಚಿಸುತ್ತೆ, ಆರೋಗ್ಯಕ್ಕೂ ಒಳ್ಳೆಯದು; ಹೀಗೆ ಮನೆಯಲ್ಲಿ ತಯಾರಿಸಿಕೊಳ್ಳಿ

ಬೀಟ್‌ರೂಟ್ ವಡೆ ತಿಂಡಿಯ ಖುಷಿಯನ್ನು ಹೆಚ್ಚಿಸುತ್ತೆ, ಆರೋಗ್ಯಕ್ಕೂ ಒಳ್ಳೆಯದು; ಹೀಗೆ ಮನೆಯಲ್ಲಿ ತಯಾರಿಸಿಕೊಳ್ಳಿ

Raghavendra M Y HT Kannada

Oct 13, 2024 06:04 PM IST

google News

ಮನೆಯಲ್ಲೇ ಸುಲಭವಾಗಿ ಬೀಟ್‌ರೂಟ್ ವಡೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ.

    • ಬೀಟ್‌ರೂಟ್ ವಡೆ: ಬೀಟ್‌ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಲವು ರೀತಿಯ ವಿಧಾನಗಳಲ್ಲಿ ಇದನ್ನು ಬಳಸಬಹುದು. ಬೀಟ್‌ರೂಟ್ ಅನ್ನು ಆಹಾರದಲ್ಲಿ ಅಳವಡಿಸಲು ಒಂದು ಮಾರ್ಗವಾಗಿದ್ದು, ಬೀಟ್‌ರೂಟ್‌ನಿಂದ ತಯಾರಿಸಿದ ವಡೆ ನಿಮ್ಮ ತಿಂಡಿಯ ರುಚಿಯನ್ನು ಹೆಚ್ಚಿಸುತ್ತದೆ. ಇದರ ಸರಳ ಪಾಕವಿಧಾನವನ್ನು ತಿಳಿಯಿರಿ.
ಮನೆಯಲ್ಲೇ ಸುಲಭವಾಗಿ ಬೀಟ್‌ರೂಟ್ ವಡೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ.
ಮನೆಯಲ್ಲೇ ಸುಲಭವಾಗಿ ಬೀಟ್‌ರೂಟ್ ವಡೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ.

ಬೀಟ್‌ರೂಟ್ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿದ್ದರೂ, ಅದರ ರುಚಿ ನಮಗೆ ಇಷ್ಟವಾಗದ ಕಾರಣ ನಾವು ಹೆಚ್ಚು ತಿನ್ನಲು ಹೋಗುವುದಿಲ್ಲ. ಬೀಟ್‌ರೂಟ್ ವಡೆಯನ್ನು ಬೆಳಗಿನ ಉಪಾಹಾರಕ್ಕೆ ಅಥವಾ ತಿಂಡಿಯಾಗಿ ಸೇವಿಸಬಹುದು. ಈ ಆರೋಗ್ಯಕರ ಮತ್ತು ಸರಳ ಪಾಕವಿಧಾನವನ್ನು ಪರಿಶೀಲಿಸಿ.

ಬೀಟ್‌ರೂಟ್ ವಡೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

1 ಕಪ್ ಕಡಲೆ ಬೇಳೆ

1 ಕಪ್ ಬೀಟ್‌ರೂಟ್ ತುರಿ

3 ಹಸಿರು ಮೆಣಸಿನಕಾಯಿ

ಸ್ವಲ್ಪ ಶುಂಠಿ

ಸ್ವಲ್ಪ ಚೆಕ್ಕೆ

1 ಕಡ್ಡಿ ಕರಿಬೇವಿನ ಎಲೆಗಳು

3 ಚಮಚ ಅಕ್ಕಿ ಹಿಟ್ಟು

ಅರ್ಧ ಟೀಚಮಚ ಜೀರಿಗೆ

ಅರ್ಧ ಟೀಚಮಚ ಉಪ್ಪು

ಡೀಪ್ ಫ್ರೈ ಮಾಡಲು ಎಣ್ಣೆ

ಬೀಟ್‌ರೂಟ್ ವಡೆ ಮಾಡುವ ವಿಧಾನ

  • ಮೊದಲು ಕಡಲೆಬೇಳೆಯನ್ನು ನೀರಿನಿಂದ ತೊಳೆದು ನೆನೆಸಿಡಿ. ಬೇಳೆಯನ್ನು ಕನಿಷ್ಠ ನಾಲ್ಕೈದು ಗಂಟೆಗಳ ಕಾಲ ನೆನೆಸಿಡಿ.
  • ಕಡಲೆಯಿಂದ ನೀರ ಬೇರ್ಪಡಿಸಿ. ಇದರಲ್ಲಿ ಸ್ವಲ್ಪ ಕಡಲೆಬೇಳೆಯನ್ನು ಪಕ್ಕಕ್ಕೆ ಇಟ್ಟುಕೊಳ್ಳಿ
  • ಉಳಿದ ಕಡಲೆಬೇಳೆಯನ್ನು ಮಿಕ್ಸರ್‌ಗೆ ಹಾಕಿ ಒರಟಾದ ಪೇಸ್ಟ್‌ ರೀತಿ ಮಾಡಿಕೊಳ್ಳಿ
  • ಚೆಕ್ಕೆ, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
  • ಈ ಪೇಸ್ಟ್ ಅನ್ನು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಂಡು ಅಕ್ಕಿ ಹಿಟ್ಟು, ತುರಿದ ಕರಿಬೇವಿನ ಎಲೆಗಳು, ಜೀರಿಗೆ ಮತ್ತು ಕಡಲೆಕಾಳುಗಳನ್ನು ಸೇರಿಸಿ
  • ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಕೈಯಿಂದ ತಟ್ಟಿ
  • ಒಂದು ಬಾಣಲಿಗೆ ಎಣ್ಣೆಹಾಕಿ ಚೆನ್ನಾಗಿ ಬಿಸಿಯಾದ ಬಳಿಕ ತಟ್ಟಿದ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಸ್ವಲ್ಪ ಹದವಾಗಿ ಎರಡೂ ಕಡೆಗೆ ಚೆನ್ನಾಗಿ ಬೆಂದ ಬಳಿಕ ಹೊರ ತೆಗೆಯಿರಿ.

ರುಚಿ ರುಚಿಯಾದ ಬೀಟ್‌ರೂಟ್ ವಡೆ ಸಿದ್ಧವಾಗಿದೆ. ನೀವು ಇದನ್ನು ಬೆಳಗಿನ ಉಪಾಹಾರಕ್ಕೂ ಸೇವಿಸಬಹುದು, ಸಂಜೆಯ ತಿಂಡಿಗೂ ಸೇವಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ