logo
ಕನ್ನಡ ಸುದ್ದಿ  /  ಜೀವನಶೈಲಿ  /  Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ಗೆ ಆನ್‌ಲೈನ್‌-ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ಗೆ ಆನ್‌ಲೈನ್‌-ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Praveen Chandra B HT Kannada

Sep 19, 2024 01:14 PM IST

google News

Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ ವಿವರ ಇಲ್ಲಿದೆ

    • Railway Monthly Pass: ಪ್ರತಿನಿತ್ಯ ರೈಲಲ್ಲಿ ಪ್ರಯಾಣಿಸುವವರು ನಿರ್ದಿಷ್ಟು ಸ್ಥಳದಿಂದ ನಿಗದಿತ ಸ್ಥಳಕ್ಕೆ ಸೀಸನ್‌ ಟಿಕೆಟ್ಸ್‌ (Season tickets) ಮಾಡುವ ಮೂಲಕ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಭಾರತೀಯ ರೈಲ್ವೆಯ ಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ರೈಲು ಪಾಸ್‌ಗಳ ವಿವರ ಇಲ್ಲಿದೆ.
Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ ವಿವರ ಇಲ್ಲಿದೆ
Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ ವಿವರ ಇಲ್ಲಿದೆ (qz)

Railway Monthly Pass: ಬಸ್‌ ಬಸ್‌ನಂತೆಯೇ ರೈಲು ಪಾಸ್‌ ಮಾಡಬಹುದೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರುತ್ತದೆ. ನೀವು ಪ್ರತಿನಿತ್ಯ ರೈಲಲ್ಲಿ ಪ್ರಯಾಣಿಸುವರಾಗಿದ್ದರೆ ಖಂಡಿತವಾಗಿಯೂ ಸೀಸನ್‌ ಟಿಕೆಟ್ಸ್‌ (Season tickets) ಎಂಬ ರೈಲ್ವೆ ಪಾಸ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಹಣ ಉಳಿತಾಯ ಮಾಡಬಹುದಾಗಿದೆ. ನಿರ್ದಿಷ್ಟ ಎರಡು ಸ್ಟೇಷನ್‌ಗಳ ನಡುವೆ ಎಷ್ಟು ಬಾರಿ ಬೇಕಾದರೂ ಹೋಗಿಬರಬಹುದು. ಕೆಲಸ ಅಥವಾ ಶಿಕ್ಷಣದ ಉದ್ದೇಶಕ್ಕಾಗಿ ಪ್ರತಿನಿತ್ಯ ರೈಲನ್ನು ಅವಲಂಬಿಸುವವರಿಗೆ ಈ ಎಂಎಸ್‌ಟಿ (ಮಂತ್ಲಿ ಸೀಸನ್‌ ಟಿಕೆಟ್‌) ಸೂಕ್ತವಾಗಿದೆ. ಪ್ರತಿದಿನ ಟಿಕೆಟ್‌ ಖರೀದಿಸುವುದಕ್ಕೆ ಹೋಲಿಸಿದರೆ ಎಂಎಸ್‌ಟಿಯಿಂದ ಸಾಕಷ್ಟು ಲಾಭವಾಗುತ್ತದೆ. ತ್ರೈಮಾಸಿಕ ಅವಧಿಯ ಪಾಸ್‌ಗೆ ಕ್ಯುಎಸ್‌ಟಿ ಎಂದು ಕರೆಯಲಾಗುತ್ತದೆ.

ಎಂಎಸ್‌ಟಿ: ಮಾಸಿಕ ರೈಲು ಪಾಸ್‌ ಪಡೆಯುವುದು ಹೇಗೆ?

ರೈಲು ಟಿಕೆಟ್‌ ಕೌಂಟರ್‌ಗೆ ಹೋಗಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಮಂತ್ಲಿ ಸೀಸನ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ನೀಡಬೇಕು.

ಆನ್‌ಲೈನ್‌ ಮೂಲಕ ರೈಲು ಪ್ರಯಾಣದ ಮಾಸಿಕ ಪಾಸ್‌ ಪಡೆಯುವುದು ಹೇಗೆ?

ಯುಟಿಎಸ್‌ ಮೊಬೈಲ್‌ ಟ್ರ್ಯಾಕಿಂಗ್‌ ಮೂಲಕ ಸೀಸನ್‌ ಟಿಕೆಟ್‌ ಬುಕ್‌ ಮಾಡಬಹುದು. ಯುಟಿಎಸ್‌ ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಸೀಸನ್‌ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ಲಗ್ಗತ್ತಿಸಬೇಕು. ಜತೆಗೆ, ನಿಗದಿತ ಮಾಹಿತಿ ನೀಡಬೇಕು. ಅಂದರೆ, ಹೆಸರು, ವಿಳಾಸ, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಪ್ರಯಾಣ ಎಂಬ ವಿವರಗಳನ್ನು ನಮೂದಿಸಬೇಕು.

  • ಎಂಎಸ್‌ಟಿ ಪಾಸ್‌ನ ವ್ಯಾಲಿಟಿಡಿ ಒಂದು ತಿಂಗಳು ಇರುತ್ತದೆ.
  • ಟಿಕೆಟ್‌ನಲ್ಲಿ ನಮೂದಿಸಿರುವ ಸ್ಟೇಷನ್‌ಗಳ ನಡುವೆ ಮಾತ್ರ ಪ್ರಯಾಣಿಸಲು ಅವಕಾಶ ಇರುತ್ತದೆ.
  • ಪ್ರತಿನಿತ್ಯ ಟಿಕೆಟ್‌ ಖರೀದಿಸುವುದಕ್ಕೆ ಹೋಲಿಸಿದರೆ ಎಂಎಸ್‌ಟಿ ದರ ತುಂಬಾ ಕಡಿಮೆ ಇರುತ್ತದೆ.
  • ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಲೀಪರ್‌ ಅಥವಾ ಸೆಕೆಂಡ್‌ ಕ್ಲಾಸ್‌ ಪಾಸ್‌ ಪಡೆಯಬಹುದು. ಯಾವ ಕ್ಲಾಸ್‌ನ ಪಾಸ್‌ ಇರುವುದೋ ಅದರಲ್ಲಿಯೇ ಪ್ರಯಾಣಿಸಬೇಕು.

ಸೀಸನ್‌ ಟಿಕೆಟ್‌ ಪಾಸ್‌ ಮೂಲಕ ಗರಿಷ್ಠ ಪ್ರಯಾಣ ದೂರ 150 ಕಿ.ಮೀ. ಆಗಿದೆ. ಸೆಕೆಂಡ್‌ ಕ್ಲಾಸ್‌ ಮಾಸಿಕ ಸೀಸನ್‌ ಟಿಕೆಟ್‌ ದರವು ಪ್ರತಿದಿನದ ಟಿಕೆಟ್‌ ದರದ 15 ಪಟ್ಟು ಇರುತ್ತದೆ. ಒಬ್ಬ ಪ್ರಯಾಣಿಕರಿಗೆ ಒಂದು ಸೀಸನ್‌ ಟಿಕೆಟ್‌ ಮಾತ್ರ ನೀಡಲಾಗುತ್ತದೆ. ಎಲ್ಲಾದರೂ ಸೂಪರ್‌ಫಾಸ್ಟ್‌ ರೈಲುಗಳಲ್ಲಿ ಪ್ರಯಾಣಿಸುವುದಾದರೆ ಅದಕ್ಕೆ ಪ್ರತ್ಯೇಕ ಸಪ್ಲಿಮೆಂಟರಿ ಟಿಕೆಟ್‌ ಖರೀದಿಸಬೇಕು. ಪ್ರತಿನಿತ್ಯ ಸೂಪರ್‌ಫಾಸ್ಟ್‌ ರೈಲಲ್ಲಿ ಪ್ರಯಾಣಿಸುವವರು ಅದಕ್ಕೆ ಪ್ರತ್ಯೇಕ ಎಂಎಸ್‌ಟಿ ಖರೀದಿಸಬೇಕು.

ಸೀಸನ್‌ ಟಿಕೆಟ್‌ ಹೊಂದಿರುವವರು ಪ್ರತಿದಿನ ಪ್ರಯಾಣದ ಸಮಯದಲ್ಲಿ ಐಡೆಂಟೆಟಿ ಕಾರ್ಡ್‌ ಹೊಂದಿರಬೇಕು. ಸೀಸನ್‌ ಟಿಕೆಟ್‌ನಲ್ಲಿ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಐಡೆಟೆಂಟಿ ಕಾರ್ಡ್‌ ಸಂಖ್ಯೆ, ಕಾರ್ಡ್‌ ನೀಡಿದ ದಿನ, ಕಾರ್ಡ್‌ ವ್ಯಾಲಿಡಿಟಿ, ಸ್ಟೇಷನ್‌ಗಳ ಹೆಸರು, ರೈಲು ಪ್ರಯಾಣದ ದರ್ಜೆ ವಿವರ ಇತ್ಯಾದಿಗಳನ್ನು ಹೊಂದಿರುತ್ತದೆ.

ವಿದ್ಯಾರ್ಥಿಗಳಿಗೆ ರೈಲು ಪಾಸ್‌ನಲ್ಲಿ ಡಿಸ್ಕೌಂಟ್‌ ಎಷ್ಟಿದೆ?

ಸೀಸನ್‌ ಟಿಕೆಟ್‌ನಲ್ಲಿ ಮಾಸಿಕ ಅಥವಾ ತ್ರೈಮಾಸಿಕ ಟಿಕೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ರೈಲ್ವೆಯು ದರ ವಿನಾಯಿತಿ ನೀಡುತ್ತದೆ. ಇದರೊಂದಿಗೆ ವೃತ್ತಿಪರ/ವೊಕೆಷನಲ್‌ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಪದವಿ ತನಕ ಉಚಿತ ಎಂಎಸ್‌ಟಿ ಟಿಕೆಟ್‌ ದೊರಕುತ್ತದೆ. ವಿದ್ಯಾರ್ಥಿಗಳಿಗೆ 12ನೇ ತರಗತಿಯವರೆಗೆ ಉಚಿತ ಇರುತ್ತದೆ. ಯಾರಿಗೆಲ್ಲ ರೈಲು ಪಾಸ್‌ ಉಚಿತ ಎಂದು ತಿಳಿಯಲು ಭಾರತೀಯ ರೈಲ್ವೆಯನ್ನು ಸಂಪರ್ಕಿಸಬಹುದು ಅಥವಾ ರೈಲ್ವೆ ಟಿಕೆಟ್‌ ಕೌಂಟರ್‌ಗಳಲ್ಲಿ ವಿಚಾರಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ