ಭಾರತೀಯ ರೈಲ್ವೆ ಹಳಿಗಳ ನಡುವೆ ಅಂತರ ಎಷ್ಟಿರುತ್ತೆ; ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಎಂದರೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ರೈಲ್ವೆ ಹಳಿಗಳ ನಡುವೆ ಅಂತರ ಎಷ್ಟಿರುತ್ತೆ; ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಎಂದರೇನು?

ಭಾರತೀಯ ರೈಲ್ವೆ ಹಳಿಗಳ ನಡುವೆ ಅಂತರ ಎಷ್ಟಿರುತ್ತೆ; ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಎಂದರೇನು?

Indian Railways: ಭಾರತೀಯ ರೈಲ್ವೆ ಹಳಿಗಳ ನಡುವೆ ಎಷ್ಟು ಅಂತರ ಇರುತ್ತದೆ, ಬೆಂಗಳೂರು ಮೆಟ್ರೋ ರೈಲಿನ ಬೋಗಿ ಸಾಮಾನ್ಯ ರೈಲು ಸಂಚರಿಸುವ ಹಳಿಗಳ ಮೇಲೆ ಸಂಚರಿಸಲು ಆಗದು ಏಕೆ? ಯಾಕೆ ಹೀಗೆ? ಅದರ ಹಿಂದಿನ ಕಾರಣವೇನು? ಇಲ್ಲಿದೆ ವಿವರ.

ಭಾರತೀಯ ರೈಲ್ವೆ
ಭಾರತೀಯ ರೈಲ್ವೆ

Indian Railways: ಜಗತ್ತಿನಲ್ಲಿ ಭಾರತದ ರೈಲ್ವೆ ಎರಡನೇ ಅತಿ ದೊಡ್ಡ ರೈಲು ಜಾಲ ಎನಿಸಿಕೊಂಡಿದೆ. ಭಾರತದ ಜನರು ಪ್ರಯಾಣಕ್ಕೆ ಹೆಚ್ಚಾಗಿ ರೈಲನ್ನೇ ಅವಲಂಬಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಅತ್ಯುತ್ತಮ ಮತ್ತು ಆರಾಮದಾಯಕ ಸಾರಿಗೆ ವ್ಯವಸ್ಥೆಯಾಗಿದೆ. ಆದರೆ, ಭಾರತೀಯ ರೈಲ್ವೆಯ ಕೆಲವು ಹಳಿಗಳು ಅಗಲವಾಗಿವೆ. ರೈಲ್ವೆ ಹಳಿಗಳ ನಡುವೆ ಎಷ್ಟು ಅಂತರ ಇರುತ್ತದೆ, ಬೆಂಗಳೂರು ಮೆಟ್ರೋ ರೈಲಿನ ಬೋಗಿ ಸಾಮಾನ್ಯ ರೈಲು ಸಂಚರಿಸುವ ಹಳಿಗಳ ಮೇಲೆ ಸಂಚರಿಸಲು ಆಗದು ಏಕೆ? ಯಾಕೆ ಹೀಗೆ? ಅದರ ಹಿಂದಿನ ಕಾರಣವೇನು? ಇಲ್ಲಿದೆ ವಿವರ.

ರೈಲ್ ಗೇಜ್

ಎರಡು ಹಳಿಗಳ ಒಳಭಾಗಗಳ ನಡುವಿನ ಸ್ಪಷ್ಟವಾದ ಕನಿಷ್ಠ ಲಂಬ ಅಂತರವನ್ನೇ ರೈಲ್ವೆ ಗೇಜ್ ಎನ್ನುತ್ತೇವೆ. ಅಂದರೆ, ಯಾವುದೇ ರೈಲ್ವೆ ಮಾರ್ಗದಲ್ಲಿ ಎರಡು ಹಳಿಗಳ ನಡುವಿನ ಅಂತರವನ್ನು ರೈಲ್ವೆ ಗೇಜ್ ಎಂದು ಕರೆಯಲಾಗುತ್ತದೆ. ವಿಶ್ವದ ರೈಲ್ವೆಯ ಸರಿಸುಮಾರು ಶೇ 60 ರಷ್ಟು ಅಂದರೆ 1,435 ಮಿಮೀ ಪ್ರಮಾಣಿತ ಗೇಜ್ ಅನ್ನು ಬಳಸುತ್ತದೆ. ಭಾರತದಲ್ಲಿ 4 ವಿಧದ ರೈಲ್ವೆ ಗೇಜ್‌ಗಳನ್ನು ಬಳಸಲಾಗುತ್ತದೆ. ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಮತ್ತು ಸ್ಟ್ಯಾಂಡರ್ಡ್ ಗೇಜ್ (ದೆಹಲಿ ಮೆಟ್ರೋಗೆ). ಒಂದೊಂದಾಗಿಯೇ ಅವುಗಳ ವಿವರವನ್ನು ಈ ಮುಂದೆ ತಿಳಿಯುತ್ತಾ ಹೋಗೋಣ.

ಬ್ರಾಡ್ ಗೇಜ್

ಬ್ರಾಡ್ ಗೇಜ್ ಎಂಬುದನ್ನು ವೈಡ್ ಗೇಜ್ ಅಥವಾ ದೊಡ್ಡ ಲೈನ್ ಎಂದೂ ಕರೆಯುತ್ತಾರೆ. ಈ ರೈಲ್ವೇ ಗೇಜ್‌ಗಳಲ್ಲಿ ಎರಡು ಹಳಿಗಳ ನಡುವಿನ ಅಂತರ 1676 ಮಿಮೀ (5 ಅಡಿ 6 ಇಂಚು) ಆಗಿದೆ. ಉಳಿದ ಗೇಜ್, ಸ್ಟ್ಯಾಂಡರ್ಡ್ ಗೇಜ್ ಅಥವಾ 1,435 ಮಿಮೀ (4 ಅಡಿ 8½ ಇಂಚುಗಳು) ಗಿಂತ ಅಗಲವಾದ ಗೇಜ್ ಅನ್ನು ಬ್ರಾಡ್ ಗೇಜ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ನಿರ್ಮಿಸಿದ ಮೊದಲ ರೈಲು ಮಾರ್ಗವು 1853 ರಲ್ಲಿ ಬೋರ್ ಬಂದರ್‌ನಿಂದ (ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಥಾಣೆಗೆ ಬ್ರಾಡ್ ಗೇಜ್ ಮಾರ್ಗವಾಗಿದೆ. ಬ್ರಾಡ್ ಗೇಜ್ ರೈಲು ಮಾರ್ಗವನ್ನು ಕ್ರೇನ್‌ಗಳಿಗಾಗಿ ಬಂದರುಗಳಲ್ಲಿ ಬಳಸಲಾಗುತ್ತದೆ. ಇದು ಉತ್ತಮ ಸ್ಥಿರತೆಯನ್ನು ಹೊಂದಿರುತ್ತದೆ.

ಸ್ಟ್ಯಾಂಡರ್ಡ್ ಗೇಜ್

ಈ ರೈಲ್ವೇ ಗೇಜ್‌ನಲ್ಲಿ ಎರಡು ಹಳಿಗಳ ನಡುವಿನ ಅಂತರವು 1435 ಮಿಲಿ ಮೀಟರ್​ ಅಂದರೆ 4 ಅಡಿ 8½ ಇಂಚು ಆಗಿದೆ. ಭಾರತದಲ್ಲಿ, ಸ್ಟ್ಯಾಂಡರ್ಡ್ ಗೇಜ್ ಅನ್ನು ಮೆಟ್ರೋ, ಮೊನೊರೈಲ್ ಮತ್ತು ಟ್ರಾಮ್​​ನಂತಹ ನಗರ ರೈಲು ಸಾರಿಗೆ ವ್ಯವಸ್ಥೆಗಳಿಗೆ ಮಾತ್ರ ಬಳಸಲಾಗುತ್ತದೆ. 2010 ರವರೆಗೆ ಭಾರತದಲ್ಲಿನ ಏಕೈಕ ಸ್ಟ್ಯಾಂಡರ್ಡ್ ಗೇಜ್ ಲೈನ್ ಕೋಲ್ಕತ್ತಾ (ಕಲ್ಕತ್ತಾ) ಟ್ರಾಮ್ ಸಾರಿಗೆ ವ್ಯವಸ್ಥೆಯಾಗಿತ್ತು. ಭಾರತೀಯ ಗೇಜ್‌ಗೆ ಹೋಲಿಸಿದರೆ ಸ್ಟ್ಯಾಂಡರ್ಡ್ ಗೇಜ್‌ಗೆ ರೋಲಿಂಗ್ ಸ್ಟಾಕ್ ಪಡೆಯುವುದು ಸುಲಭವಾದ ಕಾರಣ ನಗರ ಪ್ರದೇಶಗಳಲ್ಲಿ ಬರುವ ಎಲ್ಲಾ ಮೆಟ್ರೋ ಮಾರ್ಗಗಳನ್ನು ಸ್ಟ್ಯಾಂಡರ್ಡ್ ಗೇಜ್‌ನಲ್ಲಿ ಮಾತ್ರ ಮಾಡಲಾಗುತ್ತದೆ. 2016ರ ವೇಳೆಗೆ ದೆಹಲಿ ಮೆಟ್ರೋ, ರಾಪಿಡ್ ಮೆಟ್ರೋ ರೈಲು ಗುರ್ಗಾಂವ್, ಬೆಂಗಳೂರು ಮೆಟ್ರೋ ಮತ್ತು ಮುಂಬೈ ಮೆಟ್ರೋ ಕಾರ್ಯಾಚರಣೆಯಲ್ಲಿವೆ. ಇವು ಭಾರತೀಯ ರೈಲ್ವೆಗೆ ಒಳಪಡುವುದಿಲ್ಲ.

ಮೀಟರ್ ಗೇಜ್

ಎರಡು ಟ್ರ್ಯಾಕ್‌ಗಳ ನಡುವಿನ ಅಂತರ 1,000 ಮಿಮೀ (3 ಅಡಿ 3 3/8 ಇಂಚು) ಆಗಿದೆ. ಇವು ವೆಚ್ಚ ಕಡಿಮೆಗೊಳಿಸುತ್ತದೆ. ನೀಲಗಿರಿ ಮೌಂಟೇನ್ ರೈಲ್ವೆ ಹೊರತುಪಡಿಸಿ ಎಲ್ಲಾ ಮೀಟರ್ ಗೇಜ್ ಮಾರ್ಗಗಳನ್ನು ಯುನಿಗೇಜ್ ಯೋಜನೆಯಡಿಯಲ್ಲಿ ಬ್ರಾಡ್ ಗೇಜ್ ಆಗಿ ಪರಿವರ್ತಿಸಬಹುದು.

ನ್ಯಾರೋ ಗೇಜ್

ನ್ಯಾರೋ ಗೇಜ್ ಅಥವಾ ಸಣ್ಣ ಗೆರೆ ಎನ್ನುತ್ತಾರೆ. ಇದರಲ್ಲಿ ಎರಡು ಹಳಿಗಳ ನಡುವಿನ ಅಂತರ ಇರಲಿದೆ. ಒಂದು 2 ಅಡಿ 6 ಇಂಚುಗಳು (762 ಮಿಮೀ) ಮತ್ತು ಎರಡನೇಯದ್ದು 2 ಅಡಿ (610 ಮಿಮೀ) ಇಂಚು. 2015ರಲ್ಲಿ 1,500 ಕಿಮೀ ನ್ಯಾರೋ ಗೇಜ್ ರೈಲು ಮಾರ್ಗವಿತ್ತು. ಇದು ಒಟ್ಟು ಭಾರತೀಯ ರೈಲು ಜಾಲದ ಸುಮಾರು ಶೇ 2ರಷ್ಟಿದೆ. ಪ್ರಸ್ತುತ ನ್ಯಾರೋ ಗೇಜ್​​ಗಳನ್ನು ದೊಡ್ಡ ಮಾರ್ಗಗಳಾಗಿ ಪರಿವರ್ತಿಸಲಾಗುತ್ತಿದೆ. ಸಣ್ಣ ಬೋಗಿಗಳಿರುವ ರೈಲುಗಳು ಇನ್ನು ಮುಂದೆ ಕಡಿಮೆ ಇರಲಿವೆ.

ಮೆಟ್ರೋ ರೈಲು ಮತ್ತು ಸಾಮಾನ್ಯ ರೈಲು ನಡುವಿನ ವ್ಯತ್ಯಾಸವೇನು?

ಮೆಟ್ರೋ ರೈಲು ಮತ್ತು ಸಾಮಾನ್ಯ ರೈಲು ಜಾಲಗಳು ಎರಡೂ ಭಿನ್ನ. ಈ ಆದರೆ ಇವೆರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮೆಟ್ರೊ ರೈಲುಗಳನ್ನು ಸ್ವತಂತ್ರ ರೈಲು ಮಾರ್ಗಗಳ ಮೇಲೆ ಓಡಿಸಲು ವಿನ್ಯಾಸಗೊಳಿಸಲಾಗಿದೆ. ಮೆಟ್ರೋ ರೈಲುಗಳನ್ನು ನಗರದೊಳಗೆ ಬಳಸಲು ವಿನ್ಯಾಸಗೊಳಿಸಲಾಗಿದೆ, ಆದರೆ ಸಾಮಾನ್ಯ ರೈಲುಗಳನ್ನು ದೂರದ ಪ್ರಯಾಣಕ್ಕಾಗಿ ಬಳಸಬಹುದು. ಮೆಟ್ರೋ ರೈಲುಗಳು ಸ್ವತಂತ್ರ ರೈಲು ಮಾರ್ಗಗಳಲ್ಲಿ ಚಲಿಸುತ್ತವೆ, ಆದರೆ ಸಾಮಾನ್ಯ ರೈಲುಗಳು ಇತರ ರೈಲುಗಳೊಂದಿಗೆ ಹಳಿಗಳನ್ನು ಹಂಚಿಕೊಳ್ಳುತ್ತವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.