ಬ್ಯಾಂಕ್, ಯುಪಿಐ ಆಪ್‌ಗಳ ಮೂಲಕವೂ ಬಸ್, ರೈಲು ಟಿಕೆಟ್ ಬುಕ್ ಮಾಡಬಹುದು; ಆಫರ್ ಇರೋ ಕಡೆ ಬುಕ್ ಮಾಡಿದ್ರೆ ಲಾಭ
Oct 29, 2024 11:43 AM IST
ಬ್ಯಾಂಕ್, ಯುಪಿಐ ಆಪ್‌ಗಳ ಮೂಲಕವೂ ಬಸ್, ರೈಲು ಟಿಕೆಟ್ ಬುಕ್ ಮಾಡಬಹುದು
- ಬಸ್, ರೈಲು ಟಿಕೆಟ್ ಬುಕ್ ಮಾಡಲು ಈಗ ಹಲವು ಆಯ್ಕೆಗಳು ಇವೆ. ಬ್ಯಾಂಕ್ ವೆಬ್‌ಸೈಟ್‌ಗಳು, ಬ್ಯಾಂಕಿಂಗ್ ಆಪ್‌ಗಳು, ಗೂಗಲ್ ಪೇ, ಫೋನ್‌ಪೇ ಮುಂತಾದ ಯುಪಿಐ ಆಪ್‌ಗಳ ಮೂಲಕ, ಮೇಕ್ ಮೈ ಟ್ರಿಪ್‌ನಂತಹ ತಾಣಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು.
ದೀಪಾವಳಿ ಹಬ್ಬದ ಸಮಯದಲ್ಲಿ ಬಸ್, ರೈಲು ಟಿಕೆಟ್ ಬುಕ್ ಮಾಡಲು (ಟಿಕೆಟ್ ಎಲ್ಲೂ ಸಿಗುತ್ತಿಲ್ಲ, ಬಸ್ ರೈಲು ಎಲ್ಲಾ ಫುಲ್ ಅಂತಿದ್ರೆ ಏನೂ ಮಾಡಲಾಗದು) ಬಯಸುವವರು ಐಆರ್‌ಸಿಟಿಸಿ, ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ಗಳು, ಆಪ್‌ಗಳ ಮೂಲಕ ಮಾತ್ರವಲ್ಲದೆ ಬ್ಯಾಂಕ್ ವೆಬ್‌ಸೈಟ್‌ಗಳು, ಬ್ಯಾಂಕಿಂಗ್ ಆಪ್‌ಗಳು, ಗೂಗಲ್ ಪೇ, ಫೋನ್‌ಪೇ ಮುಂತಾದ ಯುಪಿಐ ಆಪ್‌ಗಳ ಮೂಲಕ, ಮೇಕ್ ಮೈ ಟ್ರಿಪ್‌ನಂತಹ ತಾಣಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಯಾವ ಕಡೆ ಒಳ್ಳೆಯ ಆಪರ್, ಡಿಸ್ಕೌಂಟ್ ಇದೆ ಎಂದು ತಿಳಿದುಕೊಂಡು ಬುಕ್ ಮಾಡಿದರೆ ಈ ದೀಪಾವಳಿ ಸಮಯದಲ್ಲೂ ತುಸು ಹಣ ಉಳಿತಾಯ ಮಾಡಬಹುದು.
ಬ್ಯಾಂಕ್‌ಗಳ ಆಪ್‌ಗಳ ಮೂಲಕ ಬಸ್, ರೈಲು ಟಿಕೆಟ್ ಬುಕ್ಕಿಂಗ್
ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಆಪ್ ಮುಖಾಂತರ ಸ್ಮಾರ್ಟ್‌ಬೈ ವಿಭಾಗಕ್ಕೆ ಹೋಗಬಹುದು. www.offers.smartbuy.hdfcbank.comನಲ್ಲಿ ಬಸ್ ಅಥವಾ ಟ್ರೇನ್ ಟಿಕೆಟ್ ಬುಕ್ ಮಾಡಬಹುದು. ಈ ವೆಬ್‌ಸೈಟ್‌ನಲ್ಲಿ ಬುಕ್ ಮಾಡಿದರೆ 5% cashback / 5X reward points ದೊರಕುತ್ತದೆ.
ಇದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಯುಪಿಐ ಮೂಲಕ ಟಿಕೆಟ್ ಬುಕ್ ಮಾಡಿದರೆ ಭರ್ಜರಿ ಡಿಸ್ಕೌಂಟ್ ದೊರಕುತ್ತದೆ. ಇದಕ್ಕಾಗಿ https://www.pnbindia.in/Offers-On-UPI.html ಈ ಪುಟಕ್ಕೆ ಭೇಟಿ ನೀಡಿ. ಅಭಿಬಸ್, ಮೇಕ್ ಮೈ ಟ್ರಿಪ್ ಮುಂತಾದ ತಾಣಗಳಲ್ಲಿ ಟಿಕೆಟ್ ಬುಕ್ ಮಾಡಲು ಡಿಸ್ಕೌಂಟ್ ಕೂಪನ್‌ಗಳು ದೊರಕುತ್ತದೆ.
ಕೋಟಕ್ ಮಹೀಂದ್ರ ಬ್ಯಾಂಕ್ ವೆಬ್‌ಸೈಟ್ ಮತ್ತು ಆಪ್‌ನಲ್ಲೂ ಬಸ್, ರೈಲು ಟಿಕೆಟ್ ಆಯ್ಕೆ ಇದೆ.
ಹೀಗೆ ವಿವಿಧ ಬ್ಯಾಂಕ್‌ಗಳಲ್ಲಿರುವ ಯುಪಿಐ ಅಥವಾ ಆಪ್ ಆಧರಿತ ಬಸ್, ರೈಲು ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಪಡೆಯಬಹುದು.
ಗೂಗಲ್ ಪೇ ಮೂಲಕ ಬಸ್, ರೈಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?
ಗೂಗಲ್ ಪೇಯಲ್ಲಿ ಸರ್ಚ್ ಅಥವಾ ಬಿಸಿನೆಸ್ ವಿಭಾಗಕ್ಕೆ ಹೋಗಿ ಬಸ್ ಎಂದು ಹುಡುಕಿದರೆ ವಿವಿಧ ಆಯ್ಕೆಗಳು ದೊರಕುತ್ತವೆ. ಅಂದರೆ, ರೆಡ್‌ಬಸ್, ಗೋಐಬಿಐಬಿಒ, ಅಬೀಬಸ್ ಮುಂತಾದವು ಸಿಗುತ್ತವೆ. ಇವುಗಳನ್ನು ಕ್ಲಿಕ್ ಮಾಡಿ ಬಸ್ ಟಿಕೆಟ್ ಬುಕ್ ಮಾಡಬಹುದು.
ಇದೇ ರೀತಿ ರೈಲು ಟಿಕೆಟ್ ಬುಕ್ ಮಾಡಲು ಗೂಗಲ್ ಪೇ ಬಿಸಿನೆಸ್ ವಿಭಾಗಕ್ಕೆ ಹೋಗಿ. ಅಲ್ಲಿ ಟ್ರಾವೆಲ್ ವಿಭಾಗದಲ್ಲಿ ಆಲ್ ಕ್ಲಿಕ್‌ಮಾಡಿ. ಅಲ್ಲಿ ಟ್ರೈನ್ ಎಂದು ಹುಡುಕಿ. ಕಂಫರ್ಟ್‌ಕಿಟ್ ಲಿಂಕ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ರೈಲು ಟಿಕೆಟ್ ಬುಕ್ ಮಾಡಬಹುದು.
ಫೋನ್‌ಪೇ ಮೂಲಕ ರೈಲು, ಬಸ್ ಟಿಕೆಟ್ ಬುಕ್ ಮಾಡೋದು ಹೇಗೆ?
ಫೋನ್ ಪೇಯಲ್ಲಿ ಟ್ರಾವೆಲ್ ವಿಭಾಗಕ್ಕೆ ಹೋಗಿ.
ಅಲ್ಲಿ ಬಸ್, ಟ್ರೇನ್, ಫ್ಲೈಟ್ ಇತ್ಯಾದಿ ಆಯ್ಕೆಗಳು ದೊರಕುತ್ತವೆ.
ರೈಲು ಟಿಕೆಟ್‌ಗಾದರೆ ಟ್ರೇನ್, ಬಸ್ ಟಿಕೆಟ್‌ಗಾದರೆ ಬಸ್ ವಿಭಾಗ ಕ್ಲಿಕ್ ಮಾಡಿ ಟಿಕೆಟ್ ಬುಕ್ ಮಾಡಿ.