IRCTC: ರೈಲು ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲು ಐಆರ್‌ಸಿಟಿಸಿ ಪಾಸ್‌ವರ್ಡ್ ಮರೆತಿರಾ? ಡೋಂಟ್‌ವರಿ, ಈ ಟ್ರಿಕ್ಸ್ ಅನುಸರಿಸಿ
IRCTC: ಐಆರ್‌ಸಿಟಿಸಿ ಎಂಬ ವೆಬ್‌ಸೈಟ್ ಮೂಲಕ ಭಾರತೀಯ ರೈಲ್ವೆಯು ಟ್ರೇನ್ ಟಿಕೆಟ್ ಬುಕ್ಕಿಂಗ್ ಸುಲಭವಾಗಿಸಿದೆ. ರೈಲು ಟಿಕೆಟ್, ಬುಕ್ಕಿಂಗ್, ಸ್ಟೇಟಸ್ ಪರಿಶೀಲನೆ ಸೇರಿದಂತೆ ಹಲವು ಕೆಲಸಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಡಬಹುದಾಗಿದೆ. ಐಆರ್‌ಸಿಟಿಸಿ ಪಾಸ್‌ವರ್ಡ್ ರಿಸೆಟ್ ಮಾಡೋದು ಹೇಗೆ ಎಂದು ತಿಳಿಯೋಣ.
IRCTC: ಮೊದಲೆಲ್ಲ ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ರೈಲು ನಿಲ್ದಾಣಗಳಲ್ಲಿ ಉದ್ದದ ಕ್ಯೂನಲ್ಲಿ ಸರತಿಯಲ್ಲಿ ನಿಲ್ಲಬೇಕಿತ್ತು. ಈಗ ಆನ್‌ಲೈನ್‌ನಲ್ಲಿ ಸುಲಭವಾಗಿ ರೈಲು ಟಿಕೆಟ್ ಮಾಡುತ್ತಾರೆ. ಹೀಗಿದ್ದರೂ ಸಾಕಷ್ಟು ರೈಲು ನಿಲ್ದಾಣಗಳಲ್ಲಿ ಕ್ಯೂ ಇದ್ದೇ ಇರುತ್ತದೆ. ತತ್ಕಾಲ್ ಸೇರಿದಂತೆ ರೈಲು ಟಿಕೆಟ್ ಬುಕ್ಕಿಂಗ್ ಮಾಡುವ ಸಮಯದಲ್ಲಿ ಕೆಲವರಿಗೆ ಪಾಸ್‌ವರ್ಡ್ ಮರೆತು ಹೋಗುತ್ತದೆ. ವರ್ಷಕ್ಕೆ ಒಂದೆರಡು ಬಾರಿ ರೈಲು ಬಳಸುವವರಿಗೆ ಈ ಮರೆವಿನ ಕಾಯಿಲೆ ಹೆಚ್ಚು. ಈ ರೀತಿ ಪಾಸ್‌ವರ್ಡ್ ಮರೆಯುವವರು ತಮ್ಮ ಕ್ರೋಮ್ ಬ್ರೌಸರ್‌ನಲ್ಲಿ ಸೇವ್ ಮಾಡಿಟ್ಟುಕೊಂಡರೆ ಮುಂದಿನ ಬಾರಿ ಬಳಕೆಗೆ ಬರುತ್ತದೆ. ಆದರೆ, ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಪ್ರಯಾಣಿಸುವವರು ಕ್ರೋಮ್‌ನಲ್ಲಿ ಪಾಸ್‌ವರ್ಡ್ ಹಿಸ್ಟರಿ ರಿಸೆಟ್ ಕೊಟ್ಟಿದ್ದರೆ ಮತ್ತೆ ರಿಸೆಟ್ ಮಾಡಬೇಕಾಗುತ್ತದೆ. ದಸರಾ ಬಳಿಕ ದೀಪಾವಳಿಗೆ ಊರಿಗೆ ಹೋಗಲು ಮತ್ತು ಊರಿಂದ ವಾಪಸ್ ಬರಲು ರೈಲು ಟಿಕೆಟ್ ಮಾಡಲು ಈಗ ಸಾಕಷ್ಟು ಜನರು ಪ್ರಯತ್ನಿಸುತ್ತಿರಬಹುದು. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಮೂಲಕ ಸುಲಭವಾಗಿ ಪಾಸ್‌ವರ್ಡ್ ರಿಸೆಟ್ ಮಾಡಬಹುದು.
ಐಆರ್‌ಸಿಟಿಸಿ ಪಾಸ್‌ವರ್ಡ್ ಬದಲಾವಣೆ ಹೇಗೆ?
ಎರಡು ವಿಧಾನಗಳ ಮೂಲಕ ಪಾಸ್‌ವರ್ಡ ಬದಲಾಯಿಸಬಹುದು. ಇಮೇಲ್ ಅಥವಾ ಮೊಬೈಲ್ ಸಂಖ್ಯೆ ಮೂಲಕ ಸುಲಭವಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ವೆಬ್‌ಸೈಟ್‌ನಲ್ಲಿ ಅಥವಾ ಆಪ್‌ನಲ್ಲಿ ಪಾಸ್‌ವರ್ಡ್ ಬದಲಾಯಿಸಬಹುದು.
ಇಮೇಲ್ ಮೂಲಕ ಪಾಸ್‌ವರ್ಡ್ ಬದಲಾವಣೆ
- ಮೊದಲಿಗೆ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಫರ್ಗೆಟ್ ಪಾಸ್‌ವರ್ಡ್ ಕ್ಲಿಕ್ ಮಾಡಿ.
- ಈ ಸಮಯದಲ್ಲಿ ನಿಮ್ಮ ಯೂಸರ್‌ನೇಮ್ ನಮೂದಿಸಲು ಕಾಲಂ ಕಾಣಿಸಿಕೊಳ್ಳುತ್ತದೆ.
- ಯೂಸರ್ ನೇಮ್ ನೆನಪಿಸಿಕೊಂಡು ಬರೆಯಿರಿ.
- ಇದಾದ ಬಳಿಕ ಸೆಕ್ಯುರಿಟಿ ಕೊಶ್ಚನ್ ಕೇಳಲಾಗುತ್ತದೆ. ಅಕೌಂಟ್ ಮಾಡುವ ಸಮಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ನೀಡಿರುತ್ತೀರಿ. ಅದನ್ನು ನೆನಪಿಸಿಕೊಂಡು ಬರೆಯಿರಿ.
- ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದ ಬಳಿಕ ಇಮೇಲ್ ತೆರೆಯಿರಿ. ಅಲ್ಲಿ ಪಾಸ್‌ವರ್ಡ್ ರಿಸೆಟ್ ಲಿಂಕ್ ಬರುತ್ತದೆ. ಸ್ಟ್ರಾಂಗ್ ಪಾಸ್‌ವರ್ಡ್ ನಮೂದಿಸಿ.
ಮೊಬೈಲ್ ಸಂಖ್ಯೆ ಮೂಲಕ ಐಆರ್‌ಸಿಟಿಸಿ ಪಾಸ್‌ವರ್ಡ್ ರಿಸೆಟ್ ಹೇಗೆ?
- ಮೇಲಿನಂತೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಫರ್ಗೆಟ್ ಫಾಸ್‌ವರ್ಡ್ ಲಿಂಕ್ ಕ್ಲಿಕ್ ಮಾಡಿ.
- ಯೂಸರ್ ನೇಮ್ ಕ್ಲಿಕ್ ಮಾಡಿ. ಕ್ಯಾಪ್ಚಾ ಕೋಡ್‌ಬರೆಯಿರಿ.
- ಪಾಸ್‌ವರ್ಡ್ ರಿಕವರಿ ಪುಟಕ್ಕೆ ರಿಡೈರೆಕ್ಟ್ ಆಗುತ್ತದೆ. ಅಲ್ಲಿ ನೀವು ಮೊಬೈಲ್‌ಸಂಖ್ಯೆ ನಮೂದಿಸಿ.
- ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ನಮೂದಿಸಿ. ಬಳಿಕ ಹೊಸ ಪಾಸ್‌ವರ್ಡ್ ಬರೆಯುವ ಆಯ್ಕೆ ಕಾಣುತ್ತದೆ. ಕ್ಯಾಪ್ಚಾ ನಮೂದಿಸಿ ಸಬ್‌ಮಿಟ್ ಮಾಡಿ.
- ಪಾಸ್‌ವರ್ಡ್ ನೀಡುವಾಗ ವಿಶೇಷ ಮತ್ತು ಕಠಿಣ ಪಾಸ್‌ವರ್ಡ್ ನೀಡಿ. ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಹೆಸರು 123 ಎಂದೆಲ್ಲ ನೀಡಬೇಡಿ.