ಕೊತ್ತಂಬರಿ ಸೊಪ್ಪು ತುಂಬಾ ದಿನಗಳವರಿಗೆ ಕೆಡದಂತೆ ಇಡುವುದು ಹೇಗೆ? ಮನೆಯಲ್ಲಿ ಈ ಸಿಂಪಲ್ ಟಿಪ್ಸ್ ಅನುಸರಿಸಿ
Dec 22, 2024 01:34 PM IST
ಮನೆಯಲ್ಲಿ ಕೊತ್ತಂಬರಿ ಸೊಪ್ಪು ಹೆಚ್ಚು ದಿನಗಳ ಕಾಲ ಕೆಡದಂತೆ ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
- ಮನೆಯಲ್ಲಿ ಕೊತ್ತರಂಬರಿ ಸೊಪ್ಪು ಹೆಚ್ಚು ಕಾಲ ತಡೆಯಲುವುದಿಲ್ಲ, ಬೇಗ ಕೆಡುತ್ತದೆ ಎಂದು ಮಹಿಳೆಯರು ಆಗಾಗ ದೂರುತ್ತಾರೆ. ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪು ಬೇಗ ಕೊಳೆಯುವುದಿಲ್ಲ ಎಂಬುದು ಪ್ಲಸ್ ಪಾಯಿಂಟ್. ಇದರ ಜೊತೆಗೆ ಹೆಚ್ಚುಕಾಲ ಸೊಪ್ಪು ಕೆಡದಂತೆ ತಡೆಯುವ ಸರಳ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ಹಸಿರು ಕೊತ್ತಂಬರಿ ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. ಹಾಗಾಗಿ, ಮಾರುಕಟ್ಟೆಯಿಂದ ಖರೀದಿಸಿದ ಎಲ್ಲಾ ಕೊತ್ತಂಬರಿ ಸೊಪ್ಪನ್ನು ಪ್ರತಿ ಬಾರಿಯೂ ಸಂಪೂರ್ಣವಾಗಿ ಬಳಸಲಾಗುವುದಿಲ್ಲ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೊತ್ತಂಬರಿ ಸೊಪ್ಪು ಹೆಚ್ಚು ಕಾಲ ಕೊಳೆಯುವುದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪು ಬೇಗ ಕೊಳೆಯುತ್ತದೆ. ಕೊತ್ತಂಬರಿ ಸೊಪ್ಪನ್ನು ಶೇಖರಿಸಿಡಲು ನಾನಾ ವಿಧಾನಗಳಿದ್ದರೂ ತಿಂಗಳುಗಟ್ಟಲೆ ತಾಜಾ ಆಗಿ ಇಡಲು ಸಾಧ್ಯವಿಲ್ಲ. ಅದಕ್ಕಾಗಿ ಕೊತ್ತಂಬರಿ ಸೊಪ್ಪಿನ ಪ್ರಿಯರಿಗಾಗಿ ಹೊಸ ಐಡಿಯಾವೊಂದಿದೆ. ಇದನ್ನು ಪಾಲಿಸಿದರೆ ನೀವು ಕೂಡ ಕೊತ್ತಂಬರಿ ಸೊಪ್ಪನ್ನು ಹೆಚ್ಚಿನ ದಿನಗಳ ಕಾಲ ಕೆಡದಂತೆ ಇಡಬಹುದು.
ತಾಜಾ ಕೊತ್ತಂಬರಿ ಸೊಪ್ಪನ್ನು ಹೆಚ್ಚು ಕಾಲ ಸಂಗ್ರಹಿಸಲಾಗುವುದಿಲ್ಲ, ಆದ್ದರಿಂದ ಅದನ್ನು ಒಣಗಿಸಿ ಹೊಸ ರೀತಿಯಲ್ಲಿ ಸಂಗ್ರಹಿಸಬಹುದು. ಹೀಗೆ ಮಾಡುವುದರಿಂದ ತಿಂಗಳುಗಟ್ಟಲೆ ಇಟ್ಟುಕೊಳ್ಳಬಹುದು. ಕೊತ್ತಂಬರಿ ಸೊಪ್ಪಿನ ರುಚಿಯನ್ನು ಬೇಸಿಗೆಯಲ್ಲಿ ಲಭ್ಯವಿಲ್ಲದಿದ್ದಾಗಲೂ ಸವಿಯಬಹುದು. ಹೇಗೆ ಎಂದು ತಿಳಿದುಕೊಳ್ಳೋಣ.
ಕೊತ್ತಂಬರಿ ಸೊಪ್ಪನ್ನು ಒಣಗಿಸುವುದು ಹೇಗೆ
- ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು, ನೀವು ಮೊದಲು ನೀವು ಖರೀದಿಸುವ ಕೊತ್ತಂಬರಿ ಸೊಪ್ಪನ್ನು ತೊಳೆಯಬೇಕು.
- ತೊಳೆದ ಕೊತ್ತಂಬರಿ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಇದನ್ನೂ ಓದಿ: ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಉತ್ರಮ ನಿದ್ರೆಗೂ ಸಹಕಾರಿ ಬಿರಿಯಾನಿ ಎಲೆಗಳು, ಇಲ್ಲಿದೆ ವಿವರ
- ಕೊತ್ತಂಬರಿ ಸೊಪ್ಪಿನಿಂದ ಎಲ್ಲಾ ನೀರು ಆರಿದ ನಂತರ ಎಲೆಗಳನ್ನು ಮೈಕ್ರೋವೇವ್ ನಲ್ಲಿ ಹಾಕಿ ಎರಡು ಮೂರು ಬಾರಿ ಆಕಡೆ ಇಕಡೆ ತಿರುಗಿಸಬೇಕು.
- ನಿಮ್ಮ ಬಳಿ ಮೈಕ್ರೋವೇವ್ ಇಲ್ಲದಿದ್ದರೆ, ಕೊತ್ತಂಬರಿ ಸೊಪ್ಪನ್ನು ಕಡಾಯಿ ಅಥವಾ ಬಾಣಲೆಯಲ್ಲಿ ಫ್ರೈ ಮಾಡಿ. ಕೊತ್ತಂಬರಿ ಸೊಪ್ಪನ್ನು ಕಡಿಮೆ ಉರಿಯಲ್ಲಿ ಮಾತ್ರ ಹುರಿಯಿರಿ. ಹೀಗೆ ಮಾಡುವುದರಿಂದ ಕೊತ್ತಂಬರಿ ಸೊಪ್ಪು ಸಂಪೂರ್ಣವಾಗಿ ಒಣಗುತ್ತದೆ. ಹೆಚ್ಚಿನ ಶಾಖವು ಕೊತ್ತಂಬರಿಯನ್ನು ಕೆಡಿಸುತ್ತದೆ ಎಂಬುದನ್ನು ಮರೆಯಬೇಡಿ.
- ಎಲೆಗಳು ಚೆನ್ನಾಗಿ ಆರಿದ ನಂತರ ಮಿಕ್ಸರ್ ಜಾರ್ ನಲ್ಲಿ ರುಬ್ಬಿ ಪುಡಿಮಾಡಿಕೊಳ್ಳಿ
ಇದನ್ನೂ ಓದಿ: ತಿಂಗಳಾದರೂ ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ: ಇಲ್ಲಿದೆ ಟಿಪ್ಸ್
- ನಂತರ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಬೇಕು
- ತಿಂಗಳ ನಂತರವೂ ಈ ಪುಡಿ ಹಸಿರು ಕೊತ್ತಂಬರಿ ಸೊಪ್ಪಿನ ರುಚಿಯನ್ನು ನೀಡುತ್ತದೆ. ಕೊತ್ತಂಬರಿ ಸೊಪ್ಪು ಸಿಗದಿದ್ದಾಗ ಈ ಪುಡಿಯನ್ನು ಬಳಸಬಹುದು.
- ಕೊತ್ತಂಬರಿ ಪುಡಿಯನ್ನು ಸಾಂಬರ್, ಪಾನಿ ಪುರಿ, ರಸಂ ಅಥವಾ ಸಾರು ಮುಂತಾದ ಯಾವುದೇ ಆಹಾರದಲ್ಲಿ ಬಳಸಬಹುದು.
- ಹಸಿ ಕೊತ್ತಂಬರಿ ಸೊಪ್ಪು ಆಹಾರಕ್ಕೆ ಪರಿಮಳವನ್ನು ನೀಡುವಂತೆಯೇ ಈ ಪುಡಿಯು ತಾಜಾ ಪರಿಮಳ ಮತ್ತು ರುಚಿಯನ್ನು ನೀಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬೆಂಡೆಕಾಯಿ ಸ್ಲೋ ಪಾಯಿಸನ್ ಆಗುತ್ತಾ, ಈ ಸೀಸನ್‌ನಲ್ಲಿ ತಿನ್ನೋದು ಆರೋಗ್ಯಕ್ಕೆ ಅಪಾಯನಾ; ಇಲ್ಲಿದೆ ತಜ್ಞರ ಉತ್ತರ
ಕೊತ್ತಂಬರಿ ಸೊಪ್ಪಿನ ಆರೋಗ್ಯ ಪ್ರಯೋಜನಗಳು
- ಕೊತ್ತಂಬರಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್‌ಗಳು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತ ರಚನೆಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.
- ರಕ್ತ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಕೊತ್ತಂಬರಿ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ವಿವಿಧ ಅಂಗಗಳಿಗೆ ಸರಿಯಾದ ಆಮ್ಲಜನಕ ಪೂರೈಕೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
- ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಹಸಿವನ್ನು ನಿಯಂತ್ರಿಸುತ್ತೆ.
- ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿಣಾಂಶ ಹೇರಳವಾಗಿದ್ದು, ಇದು ಕೂದಲಿಗೆ ಅಗತ್ಯವಾಗಿದೆ. ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
- ಕೊತ್ತಂಬರಿ ಸೊಪ್ಪು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಸುಕ್ಕುಗಳು ಮತ್ತು ವರ್ಣದ್ರವ್ಯದಂತಹ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ.
- ಕೊತ್ತಂಬರಿ ಸೊಪ್ಪಿನಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರು ಇರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ನೀರಿನ ಕೊರತೆಯಿಂದ ರಕ್ಷಿಸುತ್ತದೆ.