ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಬೇಕೆಂದರೆ, ಪೋಸ್ ನೀಡುವಾಗ ಈ 5 ಅಂಶಗಳನ್ನು ಗಮನಿಸಿ
Oct 21, 2024 05:36 PM IST
ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಬೇಕೆಂದರೆ, ಪೋಸ್ ನೀಡುವಾಗ ಈ ಸಲಹೆಗಳನ್ನು ಗಮನಿಸಿ
How to look thinner in Photos: ಫೋಟೋದಲ್ಲಿ ದಪ್ಪ ಕಾಣ್ತಿನಿ ಎಂದು ಕ್ಯಾಮೆರಾಗೆ ಪೋಸ್ ನೀಡದೆ ಇರಬೇಡಿ. ಈ ಎರಡು ಭಂಗಿಯಲ್ಲಿ ನಿಂತರೆ ನೀವು ದಪ್ಪಗಿದ್ದರೂ ಫೋಟೋದಲ್ಲಿ ತೆಳ್ಳಗೆ ಮುದ್ದಾಗಿ ಕಾಣಿಸುವಿರಿ.
How to look thinner in Photos: ಫೋಟೋ ತೆಗೆಸಿಕೊಳ್ಳುವಾಗ ಹೆಣ್ಣು ಮಕ್ಕಳ ಸಾಕಷ್ಟು ನಾಟಕ ಮಾಡ್ತಾರೆ. ನಿನ್ನೆಯಿಂದ ಇವತ್ತು ತುಸು ದಪ್ಪಗಾಗಿದ್ದೇವೆ ಎಂಬ ಫೀಲ್‌ನಲ್ಲಿ ಫೋಟೋ ಬೇಡ ಎನ್ನುತ್ತಾರೆ. ತುಸು ಗುಂಡಗೆ ಇದ್ದವರೂ ಕೂಡ ಕ್ಯಾಮೆರಾ ಕಂಡ್ರೆ ಓಡಿ ಹೋಗುತ್ತಾರೆ. ಈಗಿನ ಮೊಬೈಲ್ ಕ್ಯಾಮೆರಾ ಕಾಲದಲ್ಲಿ ಫೋಟೋ ತೆಗಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ, ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮುನ್ನ ಸಾಕಷ್ಟು ಯೋಚಿಸುತ್ತಾರೆ. ಮುಖ ದಪ್ಪಗೆ ಕಾಣುತ್ತಿದೆಯೇ, ಕೈ ದಪ್ಪಗೆ ಕಾಣಿಸುತ್ತಿದೆಯೇ, ಹೊಟ್ಟೆ ದಪ್ಪಗೆ ಕಾಣುತ್ತಿದೆಯೇ ಎಂದೆಲ್ಲ ಸಾವಿರ ಟೆನ್ಷನ್ ಕೆಲವರಿಗೆ ಇರುತ್ತದೆ.
ಕೊಂಚ ದಪ್ಪಗ ಇರುವವರು ಫೋಟೋಗೆ ಪೋಸ್ ನೀಡುವಾಗ ಹಿಂಜರಿಯಬೇಕಿಲ್ಲ. ಈ ಎರಡು ಸರಳ ಉಪಾಯಗಳನ್ನು ಪಾಲಿಸಿದರೆ ನಿಮ್ಮ ದೇಹ ಯಾವ ಫೋಟೋದಲ್ಲೂ ದಪ್ಪಗೆ ಕಾಣಿಸೋದಿಲ್ಲ. ಈ ಎರಡು ಅದ್ಭುತ ಸಲಹೆಗಳನ್ನು ಪಾಲಿಸಿ, ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಳ್ಳಬಹುದು.
45 ಡಿಗ್ರಿ ಕೋನದಲ್ಲಿ ಫೋಟೋಗೆ ಪೋಸ್ ನೀಡಿ
ಫೋಟೋ ತೆಗೆಯುವಾಗ ನೇರವಾಗಿ ನಿಂತು ಪೋಸ್ ನೀಡಿದರೆ ಹೆಚ್ಚು ದಪ್ಪಗೆ ಕಾಣಿಸುವಿರಿ. ಇದರ ಬದಲು ಒಂದು 45 ಡಿಗ್ರಿಯಷ್ಟು ದೇಹವನ್ನು ತಿರುಗಿಸಿ. ಹೀಗೆ ಮಾಡುವುದರಿಂದ ನೀವು ಸ್ಲಿಮ್ ಆಗಿ ಕಾಣುವಿರಿ.
ನಿಮ್ಮ ಕೈಗಳನ್ನು ದೇಹಕ್ಕೆ ತಾಕಿಸಬೇಡಿ
ಪೋಸ್ ನೀಡುವ ಸಮಯದಲ್ಲಿ ಕೈಗಳನ್ನು ದೇಹದ ಹತ್ತಿರಕ್ಕೆ ತರಬೇಡಿ. ಹೀಗೆ ಮಾಡಿದರೆ ಕೈಗಳು ದುಂಡಗೆ ಕಾಣಿಸುತ್ತದೆ. ದೇಹ ಕೂಡ ದೊಡ್ಡದಾಗಿ ಕಾಣಿಸುತ್ತದೆ. ಇದರ ಬದಲು ದೇಹದಿಂದ ತುಸು ದೂರದಲ್ಲಿಟ್ಟುಕೊಂಡು ಪೋಸ ನೀಡಿ. ಅಂದರೆ ನಿಮ್ಮ ಕೈಯನ್ನು ಸೊಂಟದ ಬಳಿ, ಕೂದಲಿನ ಮೇಲೆ, ಗಾಳಿಯ ಮೇಲೆ ಕೈಯಾಡಿಸುವಂತೆ ಪೋಸ್ ನೀಡಬಹುದು.
ಮೆಟ್ಟಿಲ ಮೇಲೆ ಓರೆ ಕುಳಿತುಕೊಳ್ಳಿ
ಮೆಟ್ಟಿಲ ಮೇಲೆ ಕೂತು ಪೋಸ್ ನೀಡುವಾಗ ಕಾಲುಗಳನ್ನು ವಿಸ್ತರಿಸಿ ಅಥವಾ ಓರೆಯಾಗಿ ಇಟ್ಟು ಪೋಸ್ ನೀಡಬಹುದು.
ಕನ್ನಡಿ ಮುಂದೆ ನಿಂತು ಯಾವ ಪೋಸ್‌ನಲ್ಲಿ ಹೆಚ್ಚು ತೆಳ್ಳಗೆ ಕಾಣಿಸುವಿರಿ ಎಂದು ನೋಡಿ. ಬಳಿಕ ಫೋಟೋಗೆ ಅದೇ ಪೋಸ್ ನೀಡಿ.
ನಿಮ್ಮ ಉಡುಗೆ ಮೇಲೆ ಗಮನ ಇರಲಿ
ದಪ್ಪಗೆ ಕಾಣಿಸುವ ಉಡುಗೆ ಬೇಡ. ಸ್ಲಿಮ್ ಆಗಿ ಕಾಣಿಸುವ ಸ್ಲಿಮ್ ಉಡುಗೆ ಧರಿಸಬಹುದು.
ಕ್ಯಾಮೆರಾದ ಆಂಗಲ್ ಮೇಲೆ ಗಮನವಿರಲಿ
ನೀವು ಪೋಸ್ ನೀಡುವಾಗ ಕ್ಯಾಮೆರಾದ ಆಂಗಲ್ ಕೂಡ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿ, ಈ ಕಡೆಯಿಂದ ತೆಗೆಯಿರಿ, ಆ ಕಡೆಯಿಂದ ತೆಗೆಯಿರಿ ಎಂದು ಕ್ಯಾಮೆರಾಮ್ಯಾನ್‌ಗೆ ಹೇಳಬಹುದು.