Best Smartphones: ಒಳ್ಳೆಯ ಕ್ಯಾಮೆರಾ ಇರೋ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ; 25 ಸಾವಿರ ರೂಗಿಂತ ಕಡಿಮೆ ದರದ 5 ಫೋನ್‌ಗಳು ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Best Smartphones: ಒಳ್ಳೆಯ ಕ್ಯಾಮೆರಾ ಇರೋ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ; 25 ಸಾವಿರ ರೂಗಿಂತ ಕಡಿಮೆ ದರದ 5 ಫೋನ್‌ಗಳು ಇಲ್ಲಿವೆ ನೋಡಿ

Best Smartphones: ಒಳ್ಳೆಯ ಕ್ಯಾಮೆರಾ ಇರೋ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ; 25 ಸಾವಿರ ರೂಗಿಂತ ಕಡಿಮೆ ದರದ 5 ಫೋನ್‌ಗಳು ಇಲ್ಲಿವೆ ನೋಡಿ

Best camera smartphones under ₹25,000: ಈ ನವೆಂಬರ್‌ ತಿಂಗಳಲ್ಲಿ 25 ಸಾವಿರ ರೂಪಾಯಿಗಿಂತ ಕಡಿಮೆ ದರದ ಒಳ್ಳೆಯ ಸ್ಮಾರ್ಟ್‌ಫೋನ್‌ ಖರೀದಿಸೋಣ ಎಂದುಕೊಳ್ಳುವವರಿಗೆ ವಿವಿಧ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. ಸ್ಯಾಮ್‌ಸ್ಯಾಂಗ್‌ ಗ್ಯಾಲಾಕ್ಸಿ ಎಂ34 5ಜಿ, ಐಕ್ಯು00 ಝಡ್‌7 ಪ್ರೊ 5 ಜಿ ಮತ್ತು ರಿಯಲ್‌ಮಿ ನಾರ್ಜೊ 60 ಪ್ರೊ ಫೋನ್‌ಗಳು ನಿಮಗೆ ಸೂಕ್ತವಾಗಬಹುದು.

Best Smartphones: 25 ಸಾವಿರ ರೂಗಿಂತ ಕಡಿಮೆ ದರದ 5 ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌
Best Smartphones: 25 ಸಾವಿರ ರೂಗಿಂತ ಕಡಿಮೆ ದರದ 5 ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌

Smartphones under 25,000: ಸ್ಮಾರ್ಟ್‌ಫೋನ್‌ ಖರೀದಿದಾರರಲ್ಲಿ ಬಹುತೇಕರು ಈಗ ಒಳ್ಳೆಯ ಕ್ಯಾಮೆರಾ ಇರುವ ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ. ಕ್ಯಾಮೆರಾ ಒಂದು ಚೆನ್ನಾಗಿದ್ದರೆ ಸಾಕು, ಮಿಕ್ಕೆಲ್ಲ ವಿವರ ನಮಗೆ ಬೇಕಿಲ್ಲ ಎನ್ನುವವರೂ ಇರುತ್ತಾರೆ. ಈಗಿನ ಇಂಟರ್‌ನೆಟ್‌ ಕಾಲದಲ್ಲಿ ಚೆನ್ನಾಗಿರೋ ಫೋಟೋ ತೆಗೆಯುವ ಮೊಬೈಲ್‌ ಬೇಕೆನ್ನುವ ಕನಸು ಕಾಣೋದು ತಪ್ಪಲ್ಲ. ಈಗ ಕಡಿಮೆ ದರದ ಫೋನ್‌ಗಳಲ್ಲಿಯೂ ಒಳ್ಳೊಳ್ಳೆಯ ಕ್ಯಾಮೆರಾಗಳಿವೆ. ಈ ಹಬ್ಬದ ಋತುವಿನ ಅವಧಿಯಲ್ಲಿ, ದೀಪಾವಳಿ ಕಳೆದರೂ ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ಮುಂದುವರೆದಿದೆ. ಈ ತಿಂಗಳು 25 ಸಾವಿರ ರೂಪಾಯಿಗಿಂತ ಕಡಿಮೆ ದರದ ಬಜೆಟ್‌ನಲ್ಲಿ ಒಳ್ಳೆಯ ಕ್ಯಾಮೆರಾ ಫೋನ್‌ ಖರೀದಿಸಬೇಕೆಂದು ಬಯಸುವವರು ಈ ಮುಂದಿನ ಆಯ್ಕೆಗಳನ್ನು ಗಮನಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ34 5ಜಿಬಿ (8 ಜಿಬಿ ರಾಮ್‌, 128 ಜಿಬಿ ರೋಮ್‌ ಇದೆ)

ಈ ಸ್ಮಾರ್ಟ್‌ ಫೋನ್‌ ಈಗ ಆಫರ್‌ನಲ್ಲಿ 21,999 ರೂಪಾಯಿಗೆ ದೊರಕುತ್ತದೆ. ಆರೂವರೆ ಇಂಚಿನ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಇದರಲ್ಲಿದ್ದು, ಎಫ್‌ಎಚ್‌ಡಿ ಪ್ಲಸ್‌ ರೆಸಲ್ಯುಷನ್‌ ಒದಗಿಸುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗೊರಿಲ್ಲಾ ಗ್ಲಾಸ್‌ 5 ಇದ್ದು, ಫೋನ್‌ಗೆ ಹಾನಿಯಾಗದಂತೆ ಸುರಕ್ಷತೆ ಒದಗಿಸುತ್ತದೆ. ಕ್ಯಾಮೆರಾ ವಿಷಯ ಹೇಳಿ ಎನ್ನುವಿರಾ, ಇದರಲ್ಲಿ ಹಿಂಬದಿಯಲ್ಲಿ 50 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಇದೆ. ಬ್ಯಾಟರಿ ಸಾಮರ್ಥ್ಯ 6000 ಎಂಎಎಚ್‌ ಇದೆ. ಇದರಲ್ಲಿ ಸ್ಯಾಮ್‌ಸ್ಯಾಂಗ್‌ ಎಕ್ಸಿನೊಸ್‌ 1280 ಆಕ್ಟಾ ಕೋರ್‌ ಚಿಪ್‌ಸೆಟ್‌ ಇದೆ. ಇದನ್ನು ಓದಿ: Tech Tips: ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಸ್ಪೈವೇರ್‌ ಪರಿಶೀಲನೆ ಹೇಗೆ, ಮೊಬೈಲ್‌ ಫೋನ್‌ ಸುರಕ್ಷತೆಗೆ ಈ ಸರಳ ವಿಧಾನಗಳನ್ನು ಅನುಸರಿಸಿ

ಐಕ್ಯು00 ಝಡ್‌7 ಪ್ರೊ 5ಜಿ (8 ಜಿಬಿ ರಾಮ್‌, 128 ಜಿಬಿ ರೋಮ್‌)

ಈ ಐಕ್ಯು ಸ್ಮಾರ್ಟ್‌ಫೋನ್‌ ದರ 23,999 ರೂಪಾಯಿ ಇದೆ. ಡೈಮೆನ್‌ಸಿಟಿ 7200 5ಜಿ ಪ್ರೊಸೆಸರ್‌ ಇದೆ. ಇದು 6.78 ಇಂಚಿನ ಸ್ಮಾರ್ಟ್‌ಫೋನ್‌. 120ಎಚ್‌ಝಡ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದರ ಕ್ಯಾಮೆರಾ ಇನ್ನೂ ಭರ್ಜರಿಯಾಗಿದೆ. ಇದರಲ್ಲಿ 64 ಮೆಗಾಫಿಕ್ಸೆಲ್‌ನ ಔರ ಲೈಟ್‌ ಒಐಎಸ್‌ ಕ್ಯಾಮೆರಾ ಇದೆ. ಬ್ಯಾಟರಿ ಸಾಮರ್ಥ್ಯ 4600 ಎಂಎಎಚ್‌ ಇದೆ. 66 ಫ್ಲಾಸ್‌ಚಾರ್ಜ್‌ ಬೆಂಬಲವಿದೆ.

ರಿಯಲ್‌ಮಿ ನಾರ್ಜೊ 60 ಪ್ರೊ (8 ಜಿಬಿ ರಾಮ್‌, 128 ಜಿಬಿ ರೋಮ್‌)

ರಿಯಲ್‌ಮಿಯ ನಾರ್ಜೊ ಪ್ರೊ ಸ್ಮಾರ್ಟ್‌ಫೋನ್‌ ದರ 23,999 ರೂಪಾಯಿ ಇದೆ. ಇದರಲ್ಲಿ 120 ಡಿಗ್ರಿ ಕರ್ವ್‌ ಡಿಸ್‌ಪ್ಲೇ ಇದೆ. ಇದರ ಕ್ಯಾಮೆರಾ ಎಷ್ಟಿದೆ ಅಂತೀರಾ? ಇದರಲ್ಲಿ ಬರೋಬ್ಬರಿ 100 ಮೆಗಾಫಿಕ್ಸೆಲ್‌ನ ಒಐಎಸ್‌ ತಂತ್ರಜ್ಞಾನದ ಕ್ಯಾಮೆರಾ ಇದೆ. 12 ಜಿಬಿ + 12 ಜಿಬಿ ರಾಮ್‌ ಮತ್ತು 1 ಟಿಬಿ ಸ್ಟೋರೇಜ್‌ ಬಳಸಿಕೊಂಡು ಮಲ್ಟಿಟಾಸ್ಕ್‌ ಮಾಡಬಹುದಾಗಿದೆ. ಇದರ ವಿನ್ಯಾಸವೂ ಅದ್ಭುತವಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಾ ಕೋರ್‌ ಮೀಡಿಯಾಟೆಕ್‌ ಡೈಮೆನ್‌ಸಿಟಿ 7050 ಪ್ರೊಸೆಸರ್‌ ಇದೆ. 5,000 ಎಂಎಎಚ್‌ ಬ್ಯಾಟರಿ ಇದೆ. ಇದನ್ನು ಓದಿ: Phone battery life: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳ್ವಿಕೆ ಹೆಚ್ಚಿಸಬೇಕೆ? ಈ 15 ಅಮೂಲ್ಯ ಸಲಹೆಗಳನ್ನು ಪಾಲಿಸಿ

ಇನ್‌ಫಿನಿಕ್ಸ್‌ ಝೀರೊ 30 5ಜಿ (8 ಜಿಬಿ ರಾಮ್‌, 256 ಜಿಬಿ ರೋಮ್‌)

ಇನ್‌ಫಿನಿಕ್ಸ್‌ ಝೀರೊ 30 5ಜಿ ದರ 23999 ರೂಪಾಯಿ ಇದೆ. ಇದು 8 ಜಿಬಿ ರಾಮ್‌, 256 ಜಿಬಿ ರೋಮ್‌ ಹೊಂದಿದ್ದು, 6.78 ಇಂಚು ಗಾತ್ರ ಹೊಂದಿದೆ. ಇದು ಫುಲ್‌ ಎಚ್ಡಿ ಪ್ಲಸ್‌ ಡಿಸ್‌ಪ್ಲೇ, ಡೈಮೆನ್‌ಸಿಟಿ 8020 ಪ್ರೊಸೆಸರ್‌, 5000 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದರ ಕ್ಯಾಮೆರಾ 108 ಮೆಗಾ ಫಿಕ್ಸೆಲ್‌ + 13 ಮೆಗಾ ಫಿಕ್ಸೆಲ್‌ + 2 ಮೆಗಾ ಫಿಕ್ಸೆಲ್‌ ಇದೆ. ಮುಂಭಾಗದಲ್ಲಿ 5 ಮೆಗಾಫಿಕ್ಸೆಲ್‌ನ ಕ್ಯಾಮೆರಾವಿದೆ.

ಒನ್‌ಪ್ಲಸ್‌ ನೋರ್ಡ್‌ ಸಿಇ 2 5ಜಿ (8 ಜಿಬಿ ರಾಮ್‌, 128 ಜಿಬಿ ರೋಮ್‌)

ಒನ್‌ಪ್ಲಸ್‌ ನೋರ್ಡ್‌ ಸಿಇ 2 5ಜಿ ದರ 24,999 ರೂಪಾಯಿ ಇದೆ. ಇದರಲ್ಲಿ 65 ವಾಲ್ಟೇಜ್‌ನ ಸೂಪರ್‌ವೂಕ್‌ ಚಾರ್ಜಿಂಗ್‌ ಸೌಲಭ್ಯವಿದೆ. ಇದು ಮೀಡಿಯಾಟೆಕ್‌ ಡೈಮೆನ್‌ಸಿಟಿ 900 ಚಿಪ್‌ಸೆಟ್‌ ಹೊಂದಿದೆ. ಇದು 6.43 ಇಂಚಿನ, ಅಮೊಲೆಡ್‌ ಡಿಸ್‌ಪ್ಲೇಯ ಸ್ಮಾರ್ಟ್‌ಫೋನ್‌ ಆಗಿದ್ದು, ಎಐ ಬೆಂಬಲಿತ ತ್ರಿವಳಿ ಕ್ಯಾಮೆರಾ ಸೆಟಪ್‌ ಹೊಂದಿದೆ. ಡ್ಯೂಯೆಲ್‌ ಸಿಮ್‌ ಕಾರ್ಡ್‌, ಮೈಕ್ರೊ ಎಸ್‌ಡಿ ಕಾರ್ಡ್‌ ಬೆಂಬಲ ಹೊಂದಿದೆ.

ಹೀಗೆ, 25 ಸಾವಿರ ರೂಪಾಯಿಯೊಳಗೆ ಒಳ್ಳೆಯ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಬಯಸುವವರು ಇವುಗಳನ್ನು ಪರಿಶೀಲಿಸಬಹುದು. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗ ಅತ್ಯುತ್ತಮವಾದ ಗ್ಯಾಡ್ಜೆಟ್‌ಗಳು ದೊರಕುತ್ತಿದ್ದು, ಸಾಕಷ್ಟು ರಿಸರ್ಚ್‌ ಮಾಡಿ ಖರೀದಿಸಲು ಆದ್ಯತೆ ನೀಡಿ.

Whats_app_banner