logo
ಕನ್ನಡ ಸುದ್ದಿ  /  ಜೀವನಶೈಲಿ  /  Think Positive: ಪ್ರಯತ್ನವಿದ್ದರೆ ಪರಮಾತ್ಮನನ್ನೂ ಪಡೆಯಬಹುದು; ರಂಗಸ್ವಾಮಿ ಮೂಕನಹಳ್ಳಿ ಬರಹ

Think Positive: ಪ್ರಯತ್ನವಿದ್ದರೆ ಪರಮಾತ್ಮನನ್ನೂ ಪಡೆಯಬಹುದು; ರಂಗಸ್ವಾಮಿ ಮೂಕನಹಳ್ಳಿ ಬರಹ

Suma Gaonkar HT Kannada

Sep 09, 2024 12:49 PM IST

google News

ರಂಗಸ್ವಾಮಿ ಮೂಕನಹಳ್ಳಿ ಬರಹ

    • ದೊಡ್ಡ ಹಡಗು ಸಮುದ್ರದಲ್ಲಿ ಸಾಗುತ್ತಿರುತ್ತದೆ. ಅಷ್ಟೊಂದು ನೀರಿದ್ದು ಕೂಡ ಆ ನೀರು ಹಡಗನ್ನು ಮುಳುಗಿಸಲು ಸಾಧ್ಯವಿಲ್ಲ. ಆದರೆ ಒಂದು ಅತಿ ಸಣ್ಣ ರಂಧ್ರ ಆ ಹಡಗಿನಲ್ಲಿ ಮಾಡಿಬಿಟ್ಟರೆ ಸಾಕು ಹಡಗು ಇಂದಲ್ಲ ನಾಳೆ ಮುಳುಗುತ್ತದೆ. ನಮ್ಮ ಸುತ್ತಮುತ್ತಲಿನ ಯಾವ ಋಣಾತ್ಮಕತೆಯೂ ನಮಗೆ ತಟ್ಟುವುದಿಲ್ಲ ನಮ್ಮ ಕಿವಿ ಮುಚ್ಚಿದ್ದರೆ. 
 ರಂಗಸ್ವಾಮಿ ಮೂಕನಹಳ್ಳಿ ಬರಹ
ರಂಗಸ್ವಾಮಿ ಮೂಕನಹಳ್ಳಿ ಬರಹ

ಅದೊಂದು ಪುಟಾಣಿ ಹೊಂಡ, ಅಲ್ಲಿದ್ದದ್ದು ಕೇವಲ ಐದಾರು ಕಪ್ಪೆಗಳು ಮಾತ್ರ. ತಮ್ಮ ಪಾಡಿಗೆ ತಾವು ಸುಖವಾಗಿದ್ದವು. ಅಂದರೆ ಯಾವ ಕಪ್ಪೆಯೂ ಹೊಂಡದಿಂದ ಜಿಗಿದು ಆಚೆ ಹೋಗದಂತೆ ಒಂದರ ಕಾಲು ಒಂದು ಎಳೆದು ಕೊಂಡು ಆರಾಮಾಗಿದ್ದವು. ಇದನ್ನು ಕಂಡ ಮನುಷ್ಯ ಪ್ರಾಣಿ ಕಪ್ಪೆಗಳ ಮೇಲೆ ಒಂದು ಪ್ರಯೋಗ ಮಾಡಲು ನಿರ್ಧರಿಸುತ್ತಾನೆ.

ಮಾರನೆ ದಿನ ಹೊಂಡದ ಬಳಿ ಐದಾರು ಜನ ನಿಂತು ಋಣಾತ್ಮಕ ಮಾತುಗಳನ್ನು ಆಡಲು ಶುರು ಮಾಡುತ್ತಾರೆ. ಈ ಹೊಂಡದಿಂದ ಎದ್ದು ಬರಲು ನಿಮ್ಮಿಂದ ಸಾಧ್ಯವಿಲ್ಲ ಎನ್ನುವುದು ಆ ಎಲ್ಲಾ ಮಾತುಗಳ ಅರ್ಥ. ನಿತ್ಯವೂ ಹೊಂಡದಿಂದ ಹೊರಬಂದು ಹೊಸ ಜಗತ್ತನ್ನು ನೋಡಬೇಕೆಂದು ಆ ಕಪ್ಪೆಗಳು ಪೈಪೋಟಿ ನಡೆಸುತ್ತಿದ್ದವು. ಈ ಹಗ್ಗಜಗ್ಗಾಟದಲ್ಲಿ ಯಾವೊಂದು ಕಪ್ಪೆಯೂ ಮೇಲೇರದಂತೆ ಒಂದನ್ನೊಂದು ಕಾಲೆಯುವುದರಲ್ಲಿ ಅವು ಯಶಸ್ಸು ಕಂಡಿದ್ದವು. ಆದರೆ ಯಾವಾಗ ಈ ಮನುಷ್ಯ ಪ್ರಾಣಿ ಈ ರೀತಿ ಋಣಾತ್ಮಕ ಮಾತುಗಳನ್ನು ಹೇಳಲು ಶುರು ಮಾಡಿದ ಅಂದಿನಿಂದ ಅವು ನಮ್ಮ ಕೈಲಾಗೋದಿಲ್ಲ ಎಂದು ಪ್ರಯತ್ನವನ್ನು ಬಿಟ್ಟು ಕುಳಿತು ಬಿಟ್ಟವು.

ಈ ಮಧ್ಯೆ ಒಂದು ಕಪ್ಪೆ ಮಾತ್ರ ಜಿಗಿದು ಹೊಂಡದಿಂದ ಹೊರಬರುತ್ತದೆ. ಮನುಷ್ಯ ಪ್ರಾಣಿಗೆ ಆಶ್ಚರ್ಯ ! ಈ ಕಪ್ಪೆ ಹೇಗೆ ಇದನ್ನು ಸಾಧಿಸಲು ಸಾಧ್ಯವಾಯ್ತು ? ವಿಷಯ ಸರಳವಾಗಿತ್ತು. ಆ ಕಪ್ಪೆ ಮನುಷ್ಯ ಹೇಳಿದ ಯಾವ ಋಣಾತ್ಮಕ ಅಂಶವನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಕಾಲೆಳೆಯುವ ಕಪ್ಪೆಗಳಿಲ್ಲದ ಕಾರಣ ಪ್ರಯತ್ನದಲ್ಲಿ ಗೆಲುವು ಕೂಡ ಕಂಡಿತು.

ದೊಡ್ಡ ಹಡಗು ಸಮುದ್ರದಲ್ಲಿ ಸಾಗುತ್ತಿರುತ್ತದೆ. ಅಷ್ಟೊಂದು ನೀರಿದ್ದು ಕೂಡ ಆ ನೀರು ಹಡಗನ್ನು ಮುಳುಗಿಸಲು ಸಾಧ್ಯವಿಲ್ಲ. ಆದರೆ ಒಂದು ಅತಿ ಸಣ್ಣ ರಂಧ್ರ ಆ ಹಡಗಿನಲ್ಲಿ ಮಾಡಿಬಿಟ್ಟರೆ ಸಾಕು ಹಡಗು ಇಂದಲ್ಲ ನಾಳೆ ಮುಳುಗುತ್ತದೆ. ನಮ್ಮ ಸುತ್ತಮುತ್ತಲಿನ ಯಾವ ಋಣಾತ್ಮಕತೆಯೂ ನಮಗೆ ತಟ್ಟುವುದಿಲ್ಲ ನಮ್ಮ ಕಿವಿ ಮುಚ್ಚಿದ್ದರೆ ! ಪ್ರಯತ್ನದಿಂದ ಪರಮಾತ್ಮನನ್ನು ಪಡೆಯಬಹುದು.

(ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ