Parenting Tips- ಕೆಲಸದ ಜೊತೆಗೆ ಮಕ್ಕಳ ಪೋಷಣೆಯ ನಡುವೆ ಒದ್ದಾಡುತ್ತಿದ್ದೀರಾ: ಒತ್ತಡ ನಿಭಾಯಿಸಲು ಇಲ್ಲಿದೆ ಪರಿಣಾಮಕಾರಿ ತಂತ್ರ-parenting tips how to reduce parenting stress 5 effective ways to reduce parenting stress prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips- ಕೆಲಸದ ಜೊತೆಗೆ ಮಕ್ಕಳ ಪೋಷಣೆಯ ನಡುವೆ ಒದ್ದಾಡುತ್ತಿದ್ದೀರಾ: ಒತ್ತಡ ನಿಭಾಯಿಸಲು ಇಲ್ಲಿದೆ ಪರಿಣಾಮಕಾರಿ ತಂತ್ರ

Parenting Tips- ಕೆಲಸದ ಜೊತೆಗೆ ಮಕ್ಕಳ ಪೋಷಣೆಯ ನಡುವೆ ಒದ್ದಾಡುತ್ತಿದ್ದೀರಾ: ಒತ್ತಡ ನಿಭಾಯಿಸಲು ಇಲ್ಲಿದೆ ಪರಿಣಾಮಕಾರಿ ತಂತ್ರ

ದೈನಂದಿನ ಜೀವನದ ಬೇಡಿಕೆಗಳನ್ನು ನಿರ್ವಹಿಸುವಾಗ ಮಕ್ಕಳನ್ನು ಬೆಳೆಸುವ ಸವಾಲುಗಳಿಂದ ಪೋಷಕರಿಗೆ ಒತ್ತಡ ಉಂಟಾಗುವುದು ಸಾಮಾನ್ಯ. ಇಂದಿನ ದಿನಗಳಲ್ಲಿ ಪೋಷಕರಿಗೆ ಕೆಲಸ ಹಾಗೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯಿಂದ ಒತ್ತಡ ಹೆಚ್ಚಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಯೋಗಕ್ಷೇಮವನ್ನು ಹೆಚ್ಚಿಸಲು ಇಲ್ಲಿದೆ ಸಲಹೆ.

ಒತ್ತಡವನ್ನು ಪೋಷಕರು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಇಲ್ಲಿ ಐದು ಸಲಹೆಗಳನ್ನು ನೀಡಲಾಗಿದೆ.
ಒತ್ತಡವನ್ನು ಪೋಷಕರು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಇಲ್ಲಿ ಐದು ಸಲಹೆಗಳನ್ನು ನೀಡಲಾಗಿದೆ. (pixabay)

ಮಕ್ಕಳನ್ನು ಪೋಷಿಸುವಲ್ಲಿ ಪೋಷಕರ ಜವಾಬ್ದಾರಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಮಕ್ಕಳನ್ನು ಪೋಷಿಸುವುದು ಎಂದರೆ ಅದು ಸುಲಭದ ಮಾತಲ್ಲ. ಇದು ಹಲವಾರು ಸವಾಲುಗಳನ್ನು ಹೊಂದಿದೆ. ಮಕ್ಕಳನ್ನು ಬೆಳೆಸುವಾಗ ಪೋಷಕರು ಹಲವಾರು ಒತ್ತಡ, ಆತಂಕಗಳನ್ನು ಎದುರಿಸುತ್ತಾರೆ. ಅದರಲ್ಲೂ ಪತಿ, ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವವರಾಗಿದ್ದರೆ, ಪೋಷಣೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿರುತ್ತದೆ. ಒಂದೆಡೆ ಕಚೇರಿ ಕೆಲಸ ಇನ್ನೊಂದೆಡೆ ಮಕ್ಕಳನ್ನು ನಿಭಾಯಿಸುವುದು ಎಂದರೆ ಅದು ಸುಲಭದ ವಿಷಯವಲ್ಲ. ಭಯ, ಆತಂಕ, ಅತಿಯಾದ ಒತ್ತಡದ ನಡುವೆ ಕೆಲಸ ಹಾಗೂ ಕುಟುಂಬ ಜೀವನವನ್ನು ಸಮತೋಲನಗೊಳಿಸುವುದು, ಮಕ್ಕಳ ಅಗತ್ಯಗಳನ್ನು ನಿರ್ವಹಿಸುವುದು ಅಗತ್ಯ. ಈ ಒತ್ತಡವನ್ನು ಪೋಷಕರು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಇಲ್ಲಿ ಐದು ಸಲಹೆಗಳನ್ನು ನೀಡಲಾಗಿದೆ.

ಪೋಷಕರ ಒತ್ತಡವನ್ನು ನಿಭಾಯಿಸಲು ಐದು ಪರಿಣಾಮಕಾರಿ ಮಾರ್ಗಗಳು

ಸ್ವ-ಆರೈಕೆಗೆ ಆದ್ಯತೆ ನೀಡಿ: ಒತ್ತಡವನ್ನು ನಿರ್ವಹಿಸಲು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ವ್ಯಾಯಾಮ, ಪುಸ್ತಕ ಓದುವುದು ಅಥವಾ ಇನ್ನಿತರೆ ಹವ್ಯಾಸ, ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಮೊದಲಿಗೆ ನಿಮಗೆ ನೀವೇ ಸಮಯ ನೀಡಿ. ಸಾಕಷ್ಟು ನಿದ್ದೆ ಪಡೆಯುವುದು, ಆರೋಗ್ಯಕರ ಆಹಾರ ಸೇವನೆ, ಧ್ಯಾನ, ಯೋಗ, ವ್ಯಾಯಾಮ ಆಳವಾದ ಉಸಿರಾಟದಂತಹ ವಿಶ್ರಾಂತಿ ತಂತ್ರಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಸಹಾಯ ಕೇಳಲು ಹಿಂಜರಿಯದಿರಿ: ಇತರೆ ಪೋಷಕರು ಅಥವಾ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದು ಉತ್ತಮ. ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳುವುದರಿಂದ ಪ್ರತ್ಯೇಕತೆಯ ಭಾವನೆ ಮೂಡುವುದಿಲ್ಲ. ನಿಮಗೆ ಅಗತ್ಯವಿರುವಾಗ ಸಹಾಯವನ್ನು ಕೇಳಲು ಹಿಂಜರಿಯಬೇಡಿ. ಅದು ಕುಟುಂಬವಾಗಿರಲಿ, ಸ್ನೇಹಿತರು ಅಥವಾ ಯಾರೇ ಆಗಿರಲಿ ಸಹಾಯ ಕೇಳಲು ಹಿಂಜರಿಯಬಾರದು.

ಸಾಧಿಸಬಹುದಾದ ಗುರಿಗಳತ್ತ ಗಮನ ಕೇಂದ್ರೀಕರಿಸಿ: ನೀವು ಏನು ಸಾಧಿಸಬೇಕು ಅಂತಾ ನಿಶ್ಚಯ ಮಾಡಿದ್ದೀರೋ ಆ ಗುರಿಯನ್ನು ಹೊಂದಲು ಗಮನ ಕೇಂದ್ರೀಕರಿಸಿ. ಹಾಗಂತ ಎಲ್ಲವನ್ನೂ ಒಟ್ಟಿಗೆ ಮಾಡಲು ಹೋಗಬೇಡಿ. ಹೆಚ್ಚು ಮುಖ್ಯವಾದುದರತ್ತ ಗಮನವನ್ನು ಕೇಂದ್ರೀಕರಿಸಿ.

ರಚನಾತ್ಮಕ ದಿನಚರಿ ರಚಿಸಿ: ಊಹಿಸಬಹುದಾದ ದೈನಂದಿನ ದಿನಚರಿಯನ್ನು ಹೊಂದಿರುವ ಪೋಷಕರು, ಮಕ್ಕಳ ಪೋಷಣೆಯ ಒತ್ತಡವನ್ನು ಕಡಿಮೆ ಮಾಡಬಹುದು. ಸ್ಥಿರವಾದ ಊಟದ ಸಮಯ, ಮಲಗುವ ಸಮಯ ಮತ್ತು ದೈನಂದಿನ ಚಟುವಟಿಕೆಗಳಿಗೆ ಪ್ರತಿದಿನ ಒಂದೇ ಸಮಯ ನಿಗದಿಗೊಳಿಸಿ. ಇದರಿಂದ ಒತ್ತಡವನ್ನು ಕಡಿಮೆ ಮಾಡಬಹುದು.

ಧನಾತ್ಮಕವಾಗಿರಿ: ಕುಟುಂಬದೊಳಗೆ ಸಣ್ಣ-ಪುಟ್ಟ ವಿಚಾರಕ್ಕೆ ನಡೆಯುವ ಮಾತು ಜಗಳಕ್ಕೆ ಕಾರಣವಾಗಬಹುದು. ಹೀಗಾಗಿ ನಿರಂತರ ಸಂವಹನ ನಡೆಸುತ್ತಿರಬೇಕು. ಇದರಿಂದ ಘರ್ಷಣೆಗಳನ್ನು ತಡೆಯಬಹುದು, ನಿಮ್ಮ ಸಂಗಾತಿ ಮತ್ತು ಮಕ್ಕಳೊಂದಿಗೆ ನಿಮ್ಮ ಅಗತ್ಯತೆಗಳು ಮತ್ತು ಕಾಳಜಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕು. ಇದರಿಂದ ಅವರು ನಿಮಗೆ ಬೆಂಬಲ ನೀಡಬಹುದು. ಧನಾತ್ಮಕ ಮಾತು ಮತ್ತು ಸಕ್ರಿಯ ಆಲಿಸುವಿಕೆ ಕುಟುಂಬ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮೇಲೆ ತಿಳಿಯಪಡಿಸಿದ ಎಲ್ಲಾ ತಂತ್ರಗಳನ್ನು ಕಾರ್ಯಗತಗೊಳಿಸುವ ಮೂಲಕ, ಪೋಷಕರು ಒತ್ತಡವನ್ನು ಉತ್ತಮವಾಗಿ ನಿರ್ವಹಿಸಬಹುದು. ಹಾಗೆಯೇ ಆರೋಗ್ಯಕರ, ಹೆಚ್ಚು ಸಮತೋಲಿತ ಕುಟುಂಬ ಜೀವನವನ್ನು ರಚಿಸಬಹುದು. ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದ ವಿಚಾರ ಏನಪ್ಪಾ ಅಂದ್ರೆ, ಸ್ವತಃ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬಹಳ ಮುಖ್ಯ.