logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಲಂಚ್ ಬಾಕ್ಸ್‌ ಈ ರೀತಿ ಇರಲಿ, ಮನೆಯಲ್ಲೊಂದೇ ಅಲ್ಲ ನೀವು ಹೊರಗಡೆಯೂ ಡಯಟ್‌ ಮಾಡ್ಬೋದು

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಲಂಚ್ ಬಾಕ್ಸ್‌ ಈ ರೀತಿ ಇರಲಿ, ಮನೆಯಲ್ಲೊಂದೇ ಅಲ್ಲ ನೀವು ಹೊರಗಡೆಯೂ ಡಯಟ್‌ ಮಾಡ್ಬೋದು

Suma Gaonkar HT Kannada

Aug 30, 2024 09:41 AM IST

google News

ಲಂಚ್ ಬಾಕ್ಸ್‌

    • Healthy lunch box: ನೀವು ತೂಕ ಇಳಿಸಿಕೊಳ್ಳಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ನಾವು ಇಲ್ಲಿ ನೀಡಲಾದ ಊಟವನ್ನು ನಿಮ್ಮ ಲಂಚ್‌ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೋಗಿ. 
ಲಂಚ್ ಬಾಕ್ಸ್‌
ಲಂಚ್ ಬಾಕ್ಸ್‌

ತೂಕ ಇಳಿಕೆಗೆ ವ್ಯಾಯಾಮದ ಜೊತೆಗೆ ಆಹಾರ ಕ್ರಮವೂ ಬಹಳ ಮುಖ್ಯ. ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಲಂಚ್‌ ಬಾಕ್ಸ್‌ನಲ್ಲಿ ತೂಕ ಇಳಿಕೆಗೆ ಯಾವ ತಿಂಡಿ ಅಥವಾ ಊಟ ಉಪಯುಕ್ತವೋ ಅದನ್ನೇ ತೆಗೆದುಕೊಂಡು ಹೋಗಬೇಕು. ಈ ರೀತಿ ನೀವು ಪ್ರತಿನಿತ್ಯ ಆರೋಗ್ಯಕರವಾದ ಲಂಚ್‌ ಬಾಕ್ಸ್‌ ತೆಗೆದುಕೊಂಡು ಹೋಗುವುದರಿಂದ ಕಚೇರಿಯಲ್ಲೂ ನೀವು ನಿಮ್ಮ ಡಯಟ್‌ ಮೇಂಟೆಂನ್ ಮಾಡಬಹುದು. ಆಹಾರದ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ವಿಶೇಷವಾಗಿ ಕರಿದ ಆಹಾರಗಳನ್ನು ಲಂಚ್‌ ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗಬಾರದು. ಹಾಗಾದರೆ ಯಾವ ರೀತಿ ನಿಮ್ಮ ಲಂಚ್‌ ಬಾಕ್ಸ್‌ ಇರಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಮೊಳಕೆ ಕಾಳುಗಳು
ಬೆಳಗಿನ ಉಪಾಹಾರಕ್ಕಾಗಿ ನೆನೆಸಿದ ಮೊಳಕೆ ಕಾಳನ್ನು ತೆಗೆದುಕೊಂಡು ಹೋಗಿ. ಇದರ ನಂತರ ನೀವು ಪನೀರ್ ತಿನ್ನಬಹುದು ಹಾಗೇ ಎರಡು ಚಪಾತಿಯನ್ನು ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗಿ. ಇಷ್ಟನ್ನು ಮಾತ್ರ ತಿನ್ನಿ ಆಗ ನಿಮ್ಮ ಬೆಳಗಿನ ತಿಂಡಿ ಮುಕ್ತಾಯವಾಗುತ್ತದೆ. ಇನ್ನು ಯಾವುದಾದರೂ ಹಣ್ಣಿನ ಜ್ಯೂಸ್‌ ಸೇವನೆ ಮಾಡಬಹುದು. ಗೋಧಿ ಅಥವಾ ರಾಗಿ ಹೀಗೆ ಯಾವುದಾದರೂ ಒಂದು ಆರೋಗ್ಯಕರ ಧಾನ್ಯ ಬಳಸಿ ಈ ಚಪಾತಿ ಅಥವಾ ರೊಟ್ಟಿಯನ್ನು ರೆಡಿ ಮಾಡಿಕೊಂಡು ಹೋಗಿ.

ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟಕ್ಕೆ ವೆಜ್ ವೆಜ್ ಐಟಮ್‌ಗಳನ್ನು ಮಾತ್ರ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೋಗಿ. ಎರಡು ಚಪಾತಿ ಮತ್ತು ಸಾಕಷ್ಟು ಕ್ಯಾರೇಟ್ ಹಾಗೂ ಸವತೆ ಕಾಯಿ ತುಂಡುಗಳನ್ನು ತೆಗೆದುಕೊಂಡು ಹೋಗಿ. ಇನ್ನು ರೊಟ್ಟಿಯ ಜೊತೆ ತುಪ್ಪ ತಿನ್ನಬೇಡಿ. ಕಾಯಿಯಿಂದ ಮಾಡಿದ ಚಟ್ನಿ ತಿನ್ನುವುದು ಉತ್ತಮ.

ಈರುಳ್ಳಿ, ಟೊಮ್ಯಾಟೊ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಕಡಿಮೆ ಮಸಾಲೆ ಹಾಕಿ ನೀವು ಎಗ್‌ ಬುರ್ಜಿ ಅಥವಾ ಆಮ್ಲೇಟ್ ಕೂಡ ಮಾಡಿಕೊಂಡು ಹೋಗಬಹುದು. ಇದು ಕೂಡ ನಿಮ್ಮ ತೂಕ ಏರಿಕೆಗೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಇದನ್ನೂ ಬೇಕಿದ್ದರೆ ಒಮ್ಮೆ ಟ್ರೈ ಮಾಡಿ ನೋಡಿ.

ಸೊಪ್ಪು ಮತ್ತು ತರಕಾರಿ
ನೀವು ಹೆಚ್ಚಾಗಿ ಹಸಿರು ಸೊಪ್ಪುಗಳನ್ನು ಕತ್ತರಿಸಿಕೊಂಡು ಅದನ್ನು ಮತ್ತು ಹಸಿಯಾದ ತರಕಾರಿಗಳನ್ನು ನಿಮ್ಮ ಲಂಚ್‌ ಬಾಕ್ಸ್‌ನಲ್ಲಿ ಸೇರಿಸಿ ಇದು ನಿಮ್ಮ ತೂಕ ಇಳಿಕೆಗೆ ತುಂಬಾ ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೋರಿಗಳು, ಹೆಚ್ಚಿನ ಪೋಷಕಾಂಶಗಳು ಇರುವಂತ ಪದಾರ್ಥಗಳು ತುಂಬಾ ಉತ್ತಮ ಯಾಕೆಂದರೆ ನಿಮಗೆ ವೀಕ್‌ನೆಸ್‌ ಆಗಬಾರದು ಆದರೆ ತೂಕ ಇಳಿಕೆ ಆಗಬೇಕು ಎಂದಿರುತ್ತದೆ ಆ ಕಾರಣಕ್ಕಾಗಿ ಈ ರೀತಿ ವಿಧಾನವನ್ನು ಪಾಲಿಸಬೇಕಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ