Kitchen Hacks: ನಿಮ್ಮ ಮನೆಯಲ್ಲಿ ತರಕಾರಿ ಕಟ್ ಮಾಡಲು ಬಳಸುತ್ತಿರುವ ಮರದ ಬೋರ್ಡ್‌ ಕೊಳಕಾಗಿದ್ಯಾ? ಹಾಗಾದ್ರೆ ಈ ರೀತಿ ಕ್ಲೀನ್ ಮಾಡಿ-how to clean my wooden cutting board after chopping the vegetables kitchen hacks smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Hacks: ನಿಮ್ಮ ಮನೆಯಲ್ಲಿ ತರಕಾರಿ ಕಟ್ ಮಾಡಲು ಬಳಸುತ್ತಿರುವ ಮರದ ಬೋರ್ಡ್‌ ಕೊಳಕಾಗಿದ್ಯಾ? ಹಾಗಾದ್ರೆ ಈ ರೀತಿ ಕ್ಲೀನ್ ಮಾಡಿ

Kitchen Hacks: ನಿಮ್ಮ ಮನೆಯಲ್ಲಿ ತರಕಾರಿ ಕಟ್ ಮಾಡಲು ಬಳಸುತ್ತಿರುವ ಮರದ ಬೋರ್ಡ್‌ ಕೊಳಕಾಗಿದ್ಯಾ? ಹಾಗಾದ್ರೆ ಈ ರೀತಿ ಕ್ಲೀನ್ ಮಾಡಿ

Wooden Butting Board: ನೀವೂ ನಿಮ್ಮ ಮನೆಯಲ್ಲಿ ಇದೇ ರೀತಿಯ ಮರದ ಚಾಪಿಂಗ್ ಬೋರ್ಡ್‌ ಯೂಸ್‌ ಮಾಡುತ್ತಾ ಇದ್ದರೆ ನಿಮಗೆ ಅದನ್ನ ಯಾವ ರೀತಿ ಕ್ಲೀನ್ ಮಾಡಬೇಕು ಎಂಬ ಗೊಂದಲ ಇದ್ದಲ್ಲಿ ನಾವು ಇಲ್ಲಿ ನೀಡಿದ ಸಲಹೆಯನ್ನು ಗಮನಿಸಿ.

ಉಡನ್ ಬೋರ್ಡ್‌
ಉಡನ್ ಬೋರ್ಡ್‌

ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಇಳಿಗೆ ಮಣೆ ಇರುತ್ತಿತ್ತು. ಆದರೆ ಈಗ ಹಾಗಲ್ಲ ಎಲ್ಲ ಮನೆಗಳಲ್ಲೂ ಚಾಕು ಬಳಸಿ ತರಕಾರಿ ಕಟ್ ಮಾಡುವ ಪದ್ಧತಿ ಬೆಳೆದುಕೊಂಡು ಬಿಟ್ಟಿದೆ ಇಂತಹ ಸಂದರ್ಭದಲ್ಲಿ ಹಲವಾರು ಜನ ಪ್ಲಾಸ್ಟಿಕ್‌ ಚಾಪಿಂಗ್ ಬೋರ್ಡ್‌ ಬಳಸುತ್ತಾರೆ. ಆದರೆ ಅದರಲ್ಲಿನ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ದೇಗ ಸೇರಿಇ ಹಾನಿಯಾಗುತ್ತದೆ ಎಂದು ತಿಳಿದುಕೊಂಡವರೆಲ್ಲ ಈ ರೀತಿ ಮರದ ಚಾಪಿಂಗ್ ಬೋರ್ಡ್‌ ಬಳಸುತ್ತಾರೆ. ಈ ರೀತಿ ಬಳಕೆ ಮಾಡಿದ್ದನ್ನು ಹೇಗೆ ಕ್ಲೀನ್ ಮಾಡುವುದು ಎಂಬ ಪ್ರಶ್ನೆ ಹಲವರಿಗಿರುತ್ತದೆ.

ಯಾಕೆಂದರೆ ಚಾಕುವಿನಿಂದ ಈ ಬೋರ್ಡ್‌ಗೆ ಕಚ್ಚುಗಳು ಬಿದ್ದಿರುತ್ತದೆ. ಇದರ ನಡುವೆ ತರಕಾರಿಗಳ ರಸ ಹೋಗಿ ಕೊಳೆ ಆಗುವ ಮೂಲಕ ತುಂಬಾ ತೊಂದರೆ ಆಗುತ್ತದೆ. ಇದನ್ನು ಕ್ಲೀನ್ ಮಾಡಲು ಇಲ್ಲಿ ಕೆಲವು ಸಲಹೆಗಳಿದೆ ಗಮನಿಸಿ. ನಾವು ಬದುಕುತ್ತಿರುವ ಬ್ಯುಸಿ ಲೈಫ್‌ನಲ್ಲಿ ದಿನಾಲೂ ಚಾಪಿಂಗ್ ಬೋರ್ಡ್ ಕ್ಲೀನ್ ಮಾಡಲು ಯಾರಿಗೂ ಪುರುಸೊತ್ತೇ ಇರೋದಿಲ್ಲ. ಜಸ್ಟ್‌ ನೀರಿಗೆ ಒಂದು ಬಾರಿ ಹಿಡಿದು ಅದನ್ನು ಬದಿಗಿಡುತ್ತೇವೆ.

ಫಂಗಸ್‌ ಬೆಳೆಯಬಹುದು

ಚಾಪಿಂಗ್ ಬೋರ್ಡ್ ಆಹಾರ ತಯಾರಿಕೆಗೆ ಮತ್ತು ಆರೋಗ್ಯಕ್ಕೆ ಎರಡಕ್ಕೂ ತುಂಬಾ ಮುಖ್ಯವಾದ ವಸ್ತು. ಕೆಲವೊಮ್ಮೆ ಇದರಲ್ಲಿ ಫಂಗಸ್‌ ಬೆಳವಣಿಗೆ ಆಗುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕೆ ನೀವು ಆಗಾಗಲಾದರೂ ಸ್ವಚ್ಛ ಮಾಡಬೇಕು. ಯಾವುದೇ ಆಹಾರದ ಕಣಗಳನ್ನು ತೆಗೆದುಹಾಕಲು ತಕ್ಷಣವೇ ತೊಳೆಯಬೇಕು.

ಬಿಸಿ ನೀರಿನಲ್ಲಿ ನೆನೆಹಾಕಿ
ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ಇದನ್ನು ಬಿಸಿನೀರಿನಲ್ಲಿ ನೆನೆಹಾಕಬೇಕು. ಈ ರೀತಿ ಮಾಡುವುದರಿಂದ ಇದು ಸ್ವಚ್ಛವಾಗುತ್ತದೆ.

ಸೋಪ್‌ ಬಳಕೆ ಮಾಡಿ
ಆಗಾಗ ನೀವು ಪಾತ್ರೆ ತೊಳೆಯುವ ಸಾಬೂನು ಬಳಸಿ ಸ್ವಚ್ಛಮಾಡಿ. ಮೃದುವಾದ ಸಾಧನದಿಂದ ಮಾತ್ರ ಉಜ್ಜಿ. ಅಲ್ಯುಮಿನಿಯಂನ ಹಾರ್ಡ್‌ ಬ್ರಷ್‌ನಿಂದ ಇದನ್ನು ಉಜ್ಜಬೇಡಿ. ಹಾಗೆ ಮಾಡಿದಲ್ಲಿ ಅದರಿಂದಲೇ ಇನ್ನೊಂದಷ್ಟು ಗೀರುಗಳು ಈ ಬೋರ್ಡ್‌ ಮೇಲೆ ಬೀಳುತ್ತದೆ.

ಬ್ಲೀಚಿಂಗ್‌ ಪೌಡರ್ ಬಳಸಿ

ಒಂದು ಚಮಚ ಬ್ಲೀಚ್‌ ಪೌಡರ್ ಬಳಸಿ ತುಂಬಾ ಜಾಗ್ರತೆಯಿಂದ ಇದನ್ನು ಕ್ಲೀನ್ ಮಾಡಿ. ಇದರಿಂದ ಕೂಡ ಫಂಗಸ್‌ ಬೆಳೆದಿದ್ದಲ್ಲಿ ಅದು ಕಡಿಮೆ ಆಗುತ್ತದೆ.

ಬಿಸಿಲಲ್ಲಿ ಒಣಗಿಸಿ

ಬಿಸಿ ನೀರಿನಿಂದ ಸಂಪೂರ್ಣವಾಗಿ ಬೋರ್ಡ್ ಕ್ಲೀನ್ ಮಾಡಿ ಆ ನಂತರದಲ್ಲಿ ಕಟುವಾದ ಬಿಸಿಲಿಗೆ ಇದನ್ನು ಒಣಗಿಸಿ. ಈ ರೀತಿ ಮಾಡುವುದು ಒಂದು ಉತ್ತಮ ವಿಧಾನವಾಗಿದೆ. ಅದರ ಮಧ್ಯದಲ್ಲಿ ಇನ್ನು ಯಾವುದಾದರೂ ಒಂದು ತರಕಾರಿ ಕಣ ಉಳಿದುಕೊಂಡಿದ್ದರೆ ಅದನ್ನು ತೆಗೆದುಹಾಕಿ.

ಉಪ್ಪು, ಅಡುಗೆ ಸೋಡಾ ಮತ್ತು ಲಿಂಬುವನ್ನು ಬಳಸಿಕೂಡ ನೀವು ಇದನ್ನು ಕ್ಲೀನ್ ಮಾಡಬಹುದು. ಈ ಎಲ್ಲಾ ವಿಧಾನವನ್ನೂ ಟ್ರೈ ಮಾಡಿ ನೋಡಿ. ಅಥವಾ ನಿಮಗೆ ಯಾವುದು ಸೂಕ್ತ ಎನಿಸುತ್ತದೆಯೋ ಆ ವಿಧಾನವನ್ನು ಪಾಲಿಸುವ ಮೂಲಕ ಕ್ಲೀನ್ ಮಾಡಿ. ಆದರೆ ಆಗಾಗ ಇದನ್ನು ಕ್ಲೀನ್ ಮಾಡುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ನೀವು ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ ಈ ಚಾಪಿಂಗ್ ಬೋರ್ಡ್ ಆಗಿರುತ್ತದೆ.