Lunch Box Ideas: ಆಫೀಸ್, ಕಾಲೇಜ್ ಹೋಗೋರಿಗೆ ಇಲ್ಲಿದೆ ಲಂಚ್ ಬಾಕ್ಸ್ ಐಡಿಯಾ, ಊಟದ ಡಬ್ಬಿಯಲ್ಲಿರಲಿ ರುಚಿ ಜೊತೆ ಆರೋಗ್ಯ
ಮಕ್ಕಳು ಮಾತ್ರವಲ್ಲ ಆಫೀಸ್‌ಗೆ ಹೋಗುವವರು ಪ್ರತಿದಿನ ಲಂಚ್ ಬಾಕ್ಸ್ ತೆಗೆದುಕೊಂಡು ಹೋಗುತ್ತಾರೆ. ಮಕ್ಕಳಿಗಷ್ಟೇ ಅಲ್ಲ ವಯಸ್ಕರಿಗೂ ಆರೋಗ್ಯಕರ ಆಹಾರ ಸೇವನೆ ಅತಿ ಅಗತ್ಯ, ಹಾಗಾದರೆ ಲಂಚ್ ಬಾಕ್ಸ್‌ಗೆ ತೆಗೆದುಕೊಂಡು ಹೋಗಲು ಸೂಕ್ತ ಎನ್ನಿಸುವ ಆರೋಗ್ಯಕರ ಆಹಾರಗಳ ಪಟ್ಟಿ ಇಲ್ಲಿದೆ.
ದಿನ ಕಚೇರಿ, ಕೆಲಸ ಎಂದು ಹೊರಗಡೆ ತಿರುಗಾಡುವವರು ಪ್ರತಿದಿನ ಹೊಟೇಲ್, ರೆಸ್ಟೊರೆಂಟ್, ಕ್ಯಾಂಟಿನ್‌ಗಳಲ್ಲಿ ತಿನ್ನಲು ಸಾಧ್ಯವಿಲ್ಲ. ಹೀಗೆ ತಿನ್ನುವುದರಿಂದ ಖರ್ಚಿನ ಜೊತೆಗೆ ಆರೋಗ್ಯವೂ ಕೆಡುವುದು ಪಕ್ಕಾ. ಹಾಗಾಗಿ ಹಲವರು ಮನೆಯಿಂದಲೇ ಲಂಚ್ ಬಾಕ್ಸ ತೆಗೆದುಕೊಂಡು ಹೋಗುತ್ತಾರೆ. ಆದರೆ ಮಕ್ಕಳಿಗೆ ಲಂಚ್ ಬಾಕ್ಸ್ ಕೊಡುವುದಕ್ಕಿಂತ ದೊಡ್ಡವರಿಗೆ ಲಂಚ್ ಬಾಕ್ಸ್ ಭಿನ್ನವಾಗಿರುತ್ತದೆ. ಇವರಿಗೂ ಪ್ರತಿದಿನ ಏನು ಕೊಡೋದಪ್ಪ ಎಂಬ ಚಿಂತೆ ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ಕಾಡೋದು ಸಹಜ.
ವಯಸ್ಕರು ಅಥವಾ ಕಚೇರಿಗೆ ಹೋಗುವವರಿಗೆ, ಕಾಲೇಜ್‌ಗೆ ಹೋಗುವವರ ಲಂಚ್ ಬಾಕ್ಸ್‌ಗೆ ಆರೋಗ್ಯಕರ ಆಹಾರಗಳನ್ನು ನೀವು ಐಡಿಯಾಗಳಿಗಾಗಿ ಹುಡುಕುತ್ತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.
ಸೌತೆಕಾಯಿ ಸ್ಯಾಂಡ್‌ವಿಚ್
ಪ್ರತಿದಿನ ರೈಸ್, ಚಪಾತಿ ಅಂತ ಕೊಟ್ರೆ ತಿನ್ನೋರಿಗೆ ಖಂಡಿತ ಬೇಸರ ಆಗುತ್ತೆ, ಹಾಗಂತ ಪೂರಿ, ಬನ್ಸ್ ಎಂದುಕೊಂಡು ಎಣ್ಣೆಯಲ್ಲಿ ಕರಿದ ಪದಾರ್ಥ ನೀಡಿದ್ರೆ ಆರೋಗ್ಯ ಕೆಡೋದು ಖಂಡಿತ. ಅದಕ್ಕಾಗಿ ನೀವು ಸೌತೆಕಾಯಿ ಸ್ಯಾಂಡ್‌ವಿಚ್ ಮಾಡಿಕೊಡಬಹುದು. ಬ್ರೆಡ್, ಸೌತೆಕಾಯಿ, ಚೀಸ್, ಬೇಕಿದ್ದರೆ ಇತರ ತರಕಾರಿಯನ್ನೂ ಸೇರಿಸಬಹುದು. ಈ ಸ್ಯಾಂಡ್‌ವಿಚ್ ನಾಲಿಗೆಗೆ ಇಷ್ಟವಾಗೋದು ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ.
ಚಪಾತಿ, ಪನೀರ್ ಬಟರ್ ಮಸಾಲ
ಚಪಾತಿ ಪ್ರತಿದಿನ ಕೊಟ್ರೆ ಬೋರಾಗುತ್ತೆ ನಿಜ, ಆದರೆ ಚಪಾತಿ ಜೊತೆಗೆ ವಿವಿಧ ರೀತಿಯ ಗ್ರೇವಿ ತಯಾರಿಸಬೇಕು. ಇದರಿಂದ ಚಪಾತಿ ಖಂಡಿತ ಬೇಸರ ಎನ್ನಿಸೊಲ್ಲ. ಸಾಮಾನ್ಯವಾಗಿ ಪನೀರ್ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಚಪಾತಿ ಜೊತೆ ಪನೀರ್ ಬಟರ್ ಮಸಾಲ ಮಾಡಿಕೊಡಬಹುದು. ಇದರ ರುಚಿ ಸಖತ್ ಇರುತ್ತೆ.
ಪಾವ್ ಬಾಜಿ
ಪಾವ್ ಬಾಜಿ ಬೀದಿಬದಿ ಆಹಾರ ಆದ್ರೂ ಕೂಡ ಇದನ್ನು ಆರೋಗ್ಯಕರ ರೀತಿಯಲ್ಲಿ ಮನೆಯಲ್ಲೇ ತಯಾರಿಸಬಹುದು. ಇದರಿಂದ ರುಚಿ ಖಂಡಿತ ಎಲ್ಲರಿಗೂ ಹಿಡಿಸುತ್ತದೆ.
ಚನ್ನಾ ಪಲಾವ್
ಒಂದೇ ರೀತಿಯ ಪಲಾವ್ ಒಂದೇ ಎಂತಹ ಪಲಾವ್ ಪ್ರಿಯರಿಗೂ ಬೇಡ ಅನ್ನಿಸೋದು ಸಹಜ. ಅದಕ್ಕಾಗಿ ಪಲಾವ್‌ನಲ್ಲೇ ವೆರೈಟಿ ಮಾಡಲು ಪ್ರಯತ್ನಿಸಬೇಕು. ಚೆನ್ನಾ ಪಲಾವ್ ಟ್ರೈ ಮಾಡಿ. ಇದು ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ ರುಚಿಯೂ ಚೆನ್ನಾಗಿರುತ್ತೆ.
ಜೀರಾ ರೈಸ್
ಪುಳಿಯೋಗರೆ, ಚಿತ್ರಾನ್ನ ಅನ್ನೋದು ಭಾರತೀಯರ ಅದರಲ್ಲೂ ದಕ್ಷಿಣ ಭಾರತೀಯರ ಟ್ರೇಡ್ ಮಾರ್ಕ್ ಅನ್ನುವಂತಾಗಿದೆ. ಅವರ ಬದಲು ನೀವು ಜೀರಾ ರೈಸ್ ಟ್ರೈ ಮಾಡಬಹುದು. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಜೀರಿಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ, ಇದಕ್ಕೆ ಸ್ವಲ್ಪ ತುಪ್ಪ ಹಾಕಿದ್ರೆ ಅದರ ರುಚಿನೇ ಬೇರೆ.
ಚಪಾತಿ ರೋಲ್
ಚಪಾತಿ ತಿಂದು ಬೇಸರ ಆಗಿದೆ ಬೇರೆ ಏನಾದ್ರೂ ಮಾಡು ಎಂದು ನಿಮ್ಮ ಮನೆಯವರು ಬೇಸರ ವ್ಯಕ್ತಪಡಿಸಿದ್ರೆ ಚಪಾತಿ ರೋಲ್ ತಯಾರಿಸಿ. ಚಪಾತಿ ರೋಲ್ ಒಳಗೆ ಪನೀರ್, ತರಕಾರಿ ಸೇರಿಸಿ. ಇದು ರುಚಿಗೂ ಬೆಸ್ಟ್, ಆರೋಗ್ಯಕ್ಕೂ ಬೆಸ್ಟ್.
ಪಾಲಕ್ ಪರೋಟ
ಮೈದಾಹಿಟ್ಟಿನ ಪರೋಟ ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ಹಾಗಂತ ಗೋಧಿಹಿಟ್ಟಿನಿಂದ ಪರೋಟ ಮಾಡಲು ಸಾಧ್ಯವಿಲ್ಲ ಅಂತಲ್ಲ. ಗೋಧಿಹಿಟ್ಟಿನಿಂದಲೂ ಬಗೆ ಬಗೆಯ ಆರೋಗ್ಯಕರ ಪರೋಟ ತಯಾರಿಸಲು ಸಾಧ್ಯ. ಪಲಾವ್ ಪರೋಟ ಆರೋಗ್ಯ ಬಹಳ ಉತ್ತಮ.
ಓಟ್ಸ್ ಇಡ್ಲಿ
ಉದ್ದಿನ ಇಡ್ಲಿ ಎಷ್ಟು ಇಷ್ಟ ಅಂದ್ರು ಕೆಲವು ದಿನಗಳ ಕಾಲ ನಿರಂತರವಾಗಿ ತಿಂದ್ರೆ ನಾಲಿಗೆ ಒಲ್ಲೆ ಎನ್ನುತ್ತೆ. ಅದಕ್ಕಾಗಿ ನೀವು ಓಟ್ಸ್ ಇಡ್ಲಿ ಟ್ರೈ ಮಾಡಬಹುದು. ಇದರ ಜೊತೆ ಕೆಂಪು ಚಟ್ನಿ ಮಾಡಿದ್ರೆ ರುಚಿನೇ ಬೇರೆ.
ರಾಗಿರೊಟ್ಟಿ
ಅಕ್ಕಿ ರೊಟ್ಟಿ ಸಾಮಾನ್ಯವಾಗಿ ಎಲ್ಲರೂ ಮಾಡ್ತಾರೆ, ಅದರ ಬದಲು ನೀವು ರಾಗಿ ರೊಟ್ಟೆ ಟ್ರೈ ಮಾಡಬಹುದು. ರಾಗಿ ರೊಟ್ಟಿ ಆರೋಗ್ಯಕ್ಕೆ, ತೂಕ ಇಳಿಕೆ ಎಲ್ಲದ್ದಕ್ಕೂ ಉತ್ತಮ. ಕಾಯಿಸುವಾಗ ಕೊಂಚ ತುಪ್ಪ ಹಾಕಿ, ರುಚಿ ಸೂಪರ್ ಆಗಿರುತ್ತೆ.