logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಕೈಚೀಲ ಅಥವಾ ಪರ್ಸ್ ಹಳೆಯದಾಗಿದ್ದರೆ ಅದನ್ನು ಎಸೆಯಬೇಡಿ, ನಿಮ್ಮ ಮನೆಯನ್ನು ಅದರಿಂದಲೇ ಅಲಂಕರಿಸಬಹುದು, ಇಲ್ಲಿದೆ ಐಡಿಯಾ

ನಿಮ್ಮ ಕೈಚೀಲ ಅಥವಾ ಪರ್ಸ್ ಹಳೆಯದಾಗಿದ್ದರೆ ಅದನ್ನು ಎಸೆಯಬೇಡಿ, ನಿಮ್ಮ ಮನೆಯನ್ನು ಅದರಿಂದಲೇ ಅಲಂಕರಿಸಬಹುದು, ಇಲ್ಲಿದೆ ಐಡಿಯಾ

Suma Gaonkar HT Kannada

Aug 23, 2024 08:21 AM IST

google News

ಕೈಚೀಲ

    • ನಿಮ್ಮ ಮನೆಯ ಅಂದವೂ ಹೆಚ್ಚಬೇಕು, ಖರ್ಚೂ ಆಗಬಾರದು ಎನ್ನುವ ಆಲೋಚನೆ ಇದ್ದವರು ಈ ರೀತಿ ನಿಮ್ಮ ಹಳೆಯ ಕೈಚೀಲ ಅಥವಾ ಪರ್ಸ್‌ ಬಳಸಿ ಒಂದು ಅಲಂಕಾರಿಕ ವಸ್ತುವನ್ನು ತಯಾರಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ಗಮನಿಸಿ. 
ಕೈಚೀಲ
ಕೈಚೀಲ

ಕೈಚೀಲ ಅಥವಾ ಪರ್ಸ್ ಹಳೆಯದಾದರೆ, ಅದನ್ನು ಎಷ್ಟೋಜನ ತಕ್ಷಣವೇ ಎಸೆದು ಬಿಡುತ್ತಾರೆ. ಅಥವಾ ಅದನ್ನು ಬಳಸಲು ಯಾರಿಗಾದರೂ ಬೇರೆಯವರಿಗೆ ಕೊಡುತ್ತಾರೆ. ಇನ್ನು ಕೆಲವರಿಗೆ ತುಂಬಾ ಹ್ಯಾಂಡ್‌ಬ್ಯಾಗ್‌ ಕೊಳ್ಳುವ ಒಂದು ಹವ್ಯಾಸ ಇರುತ್ತದೆ. ಆದರೆ ಕೊಂಡ ಬ್ಯಾಗ್‌ಗಳನ್ನೆಲ್ಲ ಎಲ್ಲಿ ಹೇಗೆ ಇಡೋದು ಎಂದು ಅವರಿಗೆ ಅರ್ಥ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಮಾಡಬೇಕಾಗಿರುವುದು ಇಷ್ಟೇ. ಇವುಗಳನ್ನೇ ತಮ್ಮ ಮನೆಯ ಅಲಂಕಾರಿಕ ವಸ್ತುಗಳನ್ನಾಗಿ ಮಾಡಿಕೊಳ್ಳುವುದು ಉತ್ತಮ. ಆಗ ನೀವು ಇವುಗಳನ್ನು ಕೈ ಬಿಡುವ ಅಗತ್ಯವೇ ಇಲ್ಲ. ನಿಮ್ಮ ವಸ್ತು ಯಾವತ್ತಿಗೂ ನಿಮ್ಮೊಂದಿಗೇ ಇರುತ್ತದೆ. ನಿಮ್ಮ ಅಗತ್ಯಗಳಿಗಾಗಿ ನೀವು ಅವುಗಳನ್ನು ಮತ್ತೆ ಬಳಸಬಹುದು. ಇದು ನಿಮ್ಮ ಹಣವನ್ನು ಉಳಿಸುವುದಲ್ಲದೆ, ಹಳೆಯ ವಾಲೆಟ್ ಅನ್ನು ಮರುಬಳಕೆ ಮಾಡಿದಂತಾಗುತ್ತದೆ.

ಟೇಬಲ್ ಮೇಲೆ ಪತ್ರಗಳನ್ನು ಹಾಕಿಡಿ

ಹಳೆಯ ಪರ್ಸ್ ಅಥವಾ ಕೈಚೀಲವು ಹಾಳಾದರೆ ಅದರ ಹಿಡಿಕೆಗಳನ್ನು ಕತ್ತರಿಸಿ. ಅಗತ್ಯ ಕಾಗದಗಳು ಅಂದರೆ ನಿಮ್ಮ ಬ್ಯುಸಿನೆಸ್‌ಗೆ ಸಂಬಂಧಿಸಿದ ಕಾಗದದ ಶೇಖರಣೆಗಾಗಿ ಬಳಸಿ. ದಾಖಲೆಗಳು, ನಕಲು ಪ್ರತಿಗಳು, ಗುರುತಿನ ಚೀಟಿಗಳು ಇತ್ಯಾದಿಗಳನ್ನು ಅದರಲ್ಲಿ ತುಂಬಿಡಿ. ಅವೆಲ್ಲವನ್ನೂ ಒಟ್ಟಿಗೆ ಇರಿಸಲು ಹಳೆಯ ಕೈಚೀಲವನ್ನು ಬಳಸಬಹುದು. ನೀವು ಹಳೆಯ ಪರ್ಸ್‌ನಲ್ಲಿ ಈ ಎಲ್ಲಾ ವಸ್ತುಗಳನ್ನು ಸುಲಭವಾಗಿ ಸಂಗ್ರಹಿಸಬಹುದು. ಇದನ್ನು ನೀವು ನಿಮ್ಮ ಟೇಬಲ್ ಮೇಲೆ ನೆಟ್ಟಗೆ ಇಟ್ಟರೆ ಇದು ಕಾಣಲೂ ತುಂಬಾ ಚೆನ್ನಾಗಿ ಕಾಣುತ್ತದೆ. ಯಾವುದೋ ಒಂದು ಹುಕ್‌ಗೆ ಇದನ್ನು ನೇತು ಹಾಕುವ ಬದಲು ಈ ರೀತಿ ಮಾಡಿ.

ಕಾರ್ ಟೂಲ್ ಕಿಟ್

ಕಾರಿನಲ್ಲಿ ಅಗತ್ಯ ವಸ್ತುಗಳನ್ನು ಇಡಲು ನೀವು ಹಳೆಯ ಪರ್ಸ್ ಅನ್ನು ಬಳಸಬಹುದು. ವಿಶೇಷ ಟೂಲ್ ಕಿಟ್‌ಗಳನ್ನು ಹಾಕಿಡಲು ನೀವು ಚೀಲವನ್ನು ಖರೀದಿಸುವ ಅಗತ್ಯವಿಲ್ಲ. ಇರುವ ಈ ಹಳೆಯ ಬ್ಯಾಗ್‌ ಉಪಯೋಗಿಸಿ. ಇದನ್ನು ನಿಮ್ಮ ಕಾರ್‌ನ ಹಿಂಬಾಗದ ಸೀಟ್‌ನಲ್ಲಿ ಅಥವಾ ಕಾರಿನ ಮುಂಬಾಗದಲ್ಲಿ ಇಟ್ಟರೆ ತುಂಬಾ ಕ್ಯೂಟ್ ಆಗಿ ಕಾಣುತ್ತದೆ.

ಹ್ಯಾಂಗಿಂಗ್ ಆಗಿ ಬಳಸಿ

ಕೈಚೀಲ ಹಳೆಯದಾಗಿದ್ದರೆ, ಅದನ್ನು ಅಡುಗೆ ಮನೆ ಅಥವಾ ಹಾಲ್‌ನ ಗೋಡೆಗಳ ಮೇಲೆ ತೂಗಿಹಾಕಿ. ಇದರಲ್ಲಿ ನೀವು ಪ್ರತಿದಿನ ಬಳಸುವ ಯಾವುದೇ ಪೇಪರ್‌ಗಳು ಮತ್ತು ಇತರ ವಸ್ತುಗಳನ್ನು ಇರಿಸಬಹುದು. ಉದಾಹರಣೆಗೆ ಡೈರಿ, ಪೆನ್ನುಗಳು, ಬಿಲ್‌ಗಳು ಇತ್ಯಾದಿ. ಅಡುಗೆಮನೆಯಲ್ಲಿ ಚಮಚಗಳನ್ನು ಹಾಕಲು ಇದನ್ನು ಬಳಸಬಹುದು. ಹಳೆಯ ಮತ್ತು ಅತಿ ಹಳೆಯ ಮಾಡೆಲ್‌ನ ಹ್ಯಾಂಡ್‌ಬ್ಯಾಗ್‌ಗೆ ಈಗ ಉತ್ತಮ ಟ್ರೆಂಡ್‌ ಇದೆ. ಗೋಡೆಗೆ ಅಂಟಿಸಿ ಪ್ಲಾಸ್ಟಿಕ್ ಹೂಗಳನ್ನು ಹಾಕಿದರೆ ಮನೆಯ ಅಂದವನ್ನು ಹೆಚ್ಚಿಸಬಹುದು.

ಚೀಲದ ಹೊರ ಪದರದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತದೆ. ಅದು ಮುರಿದು ಬೀಳುತ್ತದೆ. ಈ ಕಾರಣದಿಂದಾಗಿ ನಾವು ಪರ್ಸ್ ಬಳಸುವುದನ್ನು ನಿಲ್ಲಿಸುತ್ತೇವೆ. ಈ ರೀತಿಯ ಪರ್ಸ್ ಅನ್ನು ಅಲಂಕರಿಸುವ ಮೂಲಕ ನೀವು ಹೊಸ ಪರ್ಸ್ ಅನ್ನು ತಯಾರಿಸಬಹುದು. ಮೇಲೆ ಗೋಟಾ, ಲೇಸ್, ನೆಟ್, ಬ್ರೈಟ್ ಫ್ಯಾಬ್ರಿಕ್ ಅಂಟಿಸಿ ಹೊಸ ಪರ್ಸ್ ತಯಾರಿಸಬಹುದು. ಅದೇ ರೀತಿ, ಪರ್ಸ್ ಅಥವಾ ಕೈಚೀಲವನ್ನು ಮಣಿಗಳಿಂದ ಅಲಂಕರಿಸಬಹುದು. ಪರ್ಸ್ಅನ್ನು ಹೊಸದಾಗಿ ಮಾಡಬಹುದು. ದುಬಾರಿ ಪಾರ್ಟಿ ವೇರ್ ಪರ್ಸ್‌ಗಳನ್ನು ಪ್ರತ್ಯೇಕವಾಗಿ ಖರೀದಿಸದೆಯೇ ನೀವು ಹಳೆಯ ಪರ್ಸ್‌ಗಳನ್ನು ಹೊಸದರ ರೀತಿ ರೆಡಿ ಮಾಡಿ ಬಳಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ