ಸಣ್ಣ ಉಳಿತಾಯ ಯೋಜನೆಗೆ ಅಂಚೆ ಕಚೇರಿಯ ಈ 10 ಯೋಜನೆಗಳು ಉತ್ತಮ; ಹೂಡಿಕೆದಾರರ ನೆಚ್ಚಿನ ಆಯ್ಕೆಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಸಣ್ಣ ಉಳಿತಾಯ ಯೋಜನೆಗೆ ಅಂಚೆ ಕಚೇರಿಯ ಈ 10 ಯೋಜನೆಗಳು ಉತ್ತಮ; ಹೂಡಿಕೆದಾರರ ನೆಚ್ಚಿನ ಆಯ್ಕೆಗಳಿವು

ಸಣ್ಣ ಉಳಿತಾಯ ಯೋಜನೆಗೆ ಅಂಚೆ ಕಚೇರಿಯ ಈ 10 ಯೋಜನೆಗಳು ಉತ್ತಮ; ಹೂಡಿಕೆದಾರರ ನೆಚ್ಚಿನ ಆಯ್ಕೆಗಳಿವು

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೂಲಕ ವರ್ಷಕ್ಕೆ ಶೇಕಡಾ 4 ರಿಂದ 8.2ರಷ್ಟು ಬಡ್ಡಿ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಹಲವು ಸಣ್ಣ ಉಳಿತಾಯ ಯೋಜನೆಗಳಿದ್ದು, ಹೆಚ್ಚು ಜನಪ್ರಿಯವಾಗಿರುವ ಸ್ಕೀಮ್‌ಗಳ ಕುರಿತ ಮಾಹಿತಿ ಇಲ್ಲದೆ.

ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಯೋಜನೆ; ಈ 10 ಯೋಜನೆಗಳು ನಿಮ್ಮ ಹಣದ ಹೂಡಿಕೆಗೆ ಬೆಸ್ಟ್
ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಯೋಜನೆ; ಈ 10 ಯೋಜನೆಗಳು ನಿಮ್ಮ ಹಣದ ಹೂಡಿಕೆಗೆ ಬೆಸ್ಟ್

ಉಳಿತಾಯ ಮಾಡಲು ಬ್ಯಾಂಕ್‌ಗಳನ್ನೇ ಅವಲಂಬಿಸಬೇಕಿಲ್ಲ. ಭಾರತದಲ್ಲಿ ಅಂಚೆ ಕಚೇರಿಗಳಲ್ಲೂ ಹಲವಾರು ಉಳಿತಾಯ ಯೋಜನೆಗಳು ಲಭ್ಯವಿದೆ. ಭಾರತದಲ್ಲಿ ಈಗಲೂ ಹಲವು ಸಂಪ್ರದಾಯವಾದಿ ಹೂಡಿಕೆದಾರರು ಪೋಸ್ಟ್‌ ಆಫೀಸ್‌ ಹೂಡಿಕೆಯನ್ನು ನೆಚ್ಚಿಕೊಂಡಿದ್ದಾರೆ. ಈಗಲೂ ಹಲವು ಸೀನಿಯರ್‌ ಸಿಟಿಜನ್‌ಗಳು ಸೇರಿದಂತೆ, ಉಳಿತಾಯ ವಿಚಾರವಾಗಿ ಸಂಪ್ರದಾಯ ಅನುಸರಿಸುವವರು ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಮಾತ್ರವೇ ಹೂಡಿಕೆ ಮಾಡಲು ಒಲವು ತೋರುತ್ತಾರೆ. ಆ ಮೂಲಕ ತಮ್ಮ ಹಣವು ಸುರಕ್ಷಿತವಾಗಿರುತ್ತದೆ, ಮಾತ್ರವಲ್ಲದೆ ಹೂಡಿಕೆಯ ಮೇಲೆ ಸ್ಥಿರ ಆದಾಯ ಬರುತ್ತದೆ ಎಂಬುದು ಅವರ ಒಲವು.

ಸ್ಥಿರ ಠೇವಣಿ ಅಥವಾ ಫಿಕ್ಸ್‌ಡ್‌ ಡೆಪಾಸಿಟ್‌ ಎಂಬ ಸಾಂಪ್ರದಾಯಿಕ ಹೂಡಿಕೆ ಆಯ್ಕೆಯ ಹೊರತಾಗಿ, ಸಣ್ಣ ಸಣ್ಣ ಹೂಡಿಕೆ ಆಯ್ಕೆಗಳು ಇವೆ. ನೀವೇನಾದರೂ ಚಿಲ್ಲರೆ ಹೂಡಿಕೆದಾರರಾಗಿದ್ದರೆ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ನಿಮಗೆ ಉತ್ತಮ. ಇವುಗಳು ವರ್ಷಕ್ಕೆ 4 ರಿಂದ 8.2 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತವೆ. ಪೋಸ್ಟ್ ಆಫೀಸ್ ನೀಡುವ ಕಡಿಮೆ ಬಡ್ಡಿಯೆಂದರೆ ಅದು ಶೇಕಡಾ 4. ಉಳಿತಾಯ ಖಾತೆಗೆ ಶೇಕಡಾ 4ರಷ್ಟು ಬಡ್ಡಿದರ ಇದ್ದರೆ, ಸುಕನ್ಯಾ ಸಮೃದ್ಧಿ ಖಾತೆಗೆ ಶೇಕಡಾ 8.2ರಷ್ಟು ಹೆಚ್ಚು ಪ್ರಮಾಣದ ಬಡ್ಡಿ ನೀಡುತ್ತದೆ.

ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಗಳ ಕುರಿತು ನೋಡೋಣ

ಪೋಸ್ಟ್ ಆಫೀಸ್ ಉಳಿತಾಯ ಖಾತೆ: ಗರಿಷ್ಠ ಠೇವಣಿ ಅಗತ್ಯವಿಲ್ಲದೆ ಕನಿಷ್ಠ 500 ರೂಪಾಯಿಗಳೊಂದಿಗೆ ಈ ಖಾತೆ ತೆರೆಯಬಹುದು. ತಿಂಗಳ 10ನೇ ತಾರೀಕಿನಿಂದ ಅಂತ್ಯದವರೆಗಿನ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.

ನ್ಯಾಷನಲ್‌ ಸೇವಿಂಗ್ಸ್‌ ರಿಕರಿಂಗ್‌ ಡೆಪಾಸಿಟ್‌ ಅಕೌಂಟ್: ಈ ಆರ್‌ಡಿ ಖಾತೆಯನ್ನು ಕನಿಷ್ಠ 100 ರೂಪಾಯಿ ಹೂಡಿಕೆಯೊಂದಿಗೆ ಆರಂಭಿಸಬಹುದು. ಅಥವಾ 10 ರೂಪಾಯಿಗಳ ಗುಣಿತಗಳಲ್ಲಿ ಯಾವುದೇ ಮೊತ್ತದೊಂದಿಗೆ ತೆರೆಯಬಹುದು. ಗರಿಷ್ಠ ಮಿತಿ ಇಲ್ಲ.

ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ: ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆಯು ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳದ್ದಾಗಿದೆ. ಖಾತೆ ತೆರೆಯಲು ಕನಿಷ್ಠ ಮೊತ್ತ 1,000 ರೂಪಾಯಿ ಹೂಡಿಕೆ ಮಾಡಬೇಕು. ಯಾವುದೇ ಗರಿಷ್ಠ ಮಿತಿ ಇಲ್ಲ.

ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ: ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆಯನ್ನು ಕನಿಷ್ಠ 1,000 ರೂ ಹೂಡಿಕೆಯೊಂದಿಗೆ ತೆರೆಯಬಹುದು. ಸಿಂಗಲ್‌ ಅಕೌಂಟ್‌ಗೆ ಗರಿಷ್ಠ ಹೂಡಿಕೆ ಮಿತಿ 9 ಲಕ್ಷ ರೂ. ಇದೇ ವೇಳೆ ಜಂಟಿ ಖಾತೆಯಾದರೆ 15 ಲಕ್ಷ ರೂ ಗರಿಷ್ಟ ಮೊತ್ತವಾಗಿರುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ: ಖಾತೆಯಲ್ಲಿ 1,000 ರೂಪಾಯಿಗಳ ಗುಣಿತಗಳಲ್ಲಿ ಕೇವಲ ಒಂದು ಠೇವಣಿ ಮಾತ್ರ ಮಾಡಬೇಕು. ಆದರೆ 30 ಲಕ್ಷ ರೂ ಮೀರುವಂತಿಲ್ಲ.

ಸಾರ್ವಜನಿಕ ಭವಿಷ್ಯ ನಿಧಿ ಖಾತೆ: ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್‌ಗಳಲ್ಲಿ ಕನಿಷ್ಠ ಹೂಡಿಕೆ 500 ರೂ ಮತ್ತು ಗರಿಷ್ಠ 1,50,000 ರೂ ಮಾಡಬಹುದು. ಈ ಠೇವಣಿಗಳನ್ನು ಏಕ-ಮೊತ್ತದಲ್ಲಿ ಅಥವಾ ಕಂತುಗಳಲ್ಲಿ ಮಾಡಬಹುದು.

ಸುಕನ್ಯಾ ಸಮೃದ್ಧಿ ಖಾತೆ: ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಠೇವಣಿ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ ಮಾಡಬಹುದು. ನಂತರದ ಠೇವಣಿಗಳನ್ನು 50 ರೂಪಾಯಿಗಳ ಗುಣಿತದಲ್ಲಿ ಮಾಡಬಹುದು. ಠೇವಣಿಯನ್ನು ಒಂದೇ ಮೊತ್ತದಲ್ಲಿಯೂ ಮಾಡಬಹುದು. ಒಂದು ತಿಂಗಳಲ್ಲಿ ಅಥವಾ ಹಣಕಾಸು ವರ್ಷದಲ್ಲಿ ಠೇವಣಿಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ಎನ್ಎಸ್‌ಸಿಯಲ್ಲಿ ಕನಿಷ್ಠ ಹೂಡಿಕೆ 1,000 ರೂ ಮತ್ತು 100 ರೂಪಾಯಿಗಳ ಗುಣಿತದಲ್ಲಿ ಮಾಡಬಹುದು. ಇಲ್ಲಿಯೂ ಗರಿಷ್ಠ ಮಿತಿಯಿಲ್ಲ.

ಕಿಸಾನ್ ವಿಕಾಸ್ ಪತ್ರ: ಕನಿಷ್ಠ 1,000 ರೂಪಾಯಿಗಳ ಹೂಡಿಕೆ ಮಾಡಬಹುದು. ಗರಿಷ್ಠ ಮಿತಿಯಿಲ್ಲದೆ 100ರ ಗುಣಿತದಲ್ಲಿ ಮಾಡಬಹುದು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ: ಖಾತೆಯಲ್ಲಿ ಗರಿಷ್ಠ 2 ಲಕ್ಷ ರೂಪಾಯಿ ಮಿತಿಯೊಂದಿಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಕನಿಷ್ಠ 1,000 ರೂ.ಗಳು ಮತ್ತು 100 ರೂಪಾಯಿ ಗುಣಿತದಲ್ಲಿ ಹೂಡಿಕೆ ಮಾಡಬಹುದು.

(ಈ ಸುದ್ದಿಯನ್ನು ಮಾಹಿತಿಯ ಉದ್ದೇಶದಿಂಧಾಗಿ ಸರಳವಾಗಿ ನೀಡಲಾಗಿದೆ. ಹೂಡಿಕೆಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ದಯವಿಟ್ಟು ಅಂಚೆ ಅಧಿಕಾರಿಗಳನ್ನು ಸಂಪರ್ಕಿಸಿ.

Whats_app_banner