logo
ಕನ್ನಡ ಸುದ್ದಿ  /  ಜೀವನಶೈಲಿ  /  ನಕಲಿ ಬಾಡಿಗೆ ರಸೀದಿ ಸಲ್ಲಿಸುವ ಮೊದಲು ಎಚ್ಚರ; ಆದಾಯ ತೆರಿಗೆ ಇಲಾಖೆ ನಿಮಗೆ ನೊಟೀಸ್‌ ಕಳುಹಿಸಬಹುದು

ನಕಲಿ ಬಾಡಿಗೆ ರಸೀದಿ ಸಲ್ಲಿಸುವ ಮೊದಲು ಎಚ್ಚರ; ಆದಾಯ ತೆರಿಗೆ ಇಲಾಖೆ ನಿಮಗೆ ನೊಟೀಸ್‌ ಕಳುಹಿಸಬಹುದು

HT Kannada Desk HT Kannada

Jan 28, 2024 09:00 AM IST

google News

ಸಾಂದರ್ಭಿಕ ಚಿತ್ರ

    • ITR Tips: ಆದಾಯ ತೆರಿಗೆ ಇಲಾಖೆಗೆ ಹೂಡಿಕೆಯ ದಾಖಲೆಗಳನ್ನು ನೀಡುವಾಗ, ಹೆಚ್ಚಿನ ತೆರಿಗೆ ಪಾವತಿಸುವುದನ್ನು ಉಳಿಸಲು ಕೆಲವರು ತಮ್ಮ ಮನೆಯ ನಕಲಿ ಒಪ್ಪಂದಪತ್ರ ಮತ್ತು ರಸೀದಿಗಳನ್ನು ಸಲ್ಲಿಸುತ್ತಿದ್ದಾರೆ. ನೀವೂ ಕೂಡಾ ಆ ರೀತಿ ಮಾಡುವ ಯೋಚನೆಯಲ್ಲಿದ್ದರೆ ಇದನ್ನೊಮ್ಮೆ ಓದಿ. ಆದಾಯ ತೆರಿಗೆ ಇಲಾಖೆಯು ಈ ರೀತಿಯಾಗಿ ನಿಮ್ಮ ಸುಳ್ಳನ್ನು ಕಂಡುಹಿಡಿಯಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT File Photo)

ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಜನವರಿ ತಿಂಗಳು ಬಹಳ ಮುಖ್ಯವಾಗಿದೆ. ಏಕೆಂದರೆ ಈ ತಿಂಗಳಲ್ಲಿ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅವರು ಮಾಡಿದ ಹೂಡಿಕೆಯ ದಾಖಲೆಗಳನ್ನು ಕೇಳುತ್ತದೆ. ELSS, LIC, ತೆರಿಗೆ ಉಳಿತಾಯ ಯೋಜನೆಗಳು, ಮಕ್ಕಳ ಟ್ಯೂಷನ್ ಫೀಸ್‌ ರಸೀದಿಗಳು ಅಥವಾ ಬಾಡಿಗೆ ರಸೀದಿ ಮುಂತಾದ ಉಳಿತಾಯದ ಪುರಾವೆಗಳನ್ನು ನೀಡಬೇಕಾಗುತ್ತದೆ. ಇವುಗಳ ಆಧಾರದ ಮೇಲೆಯೇ ಕಂಪನಿಯು ನಿಮ್ಮ ತೆರಿಗೆ ಲೆಕ್ಕಾಚಾರ ಮಾಡುತ್ತದೆ. ಅದು ಮುಂದಿನ ಮೂರು ತಿಂಗಳುಗಳವರೆಗೆ ನಿಮ್ಮ ಸಂಬಳದಿಂದ ಅದನ್ನು ಕಡಿತಗೊಳಿಸುತ್ತದೆ. ಆದರೆ ಅಂತಿಮ ಕಡಿತವನ್ನು ಆದಾಯ ತೆರಿಗೆ ಇಲಾಖೆ ಮಾಡುತ್ತದೆ. ಜೊತೆಗೆ ನಿಮಗೆ ತೆರಿಗೆ ಮರುಪಾವತಿಯ ಸೌಲಭ್ಯವನ್ನು ಸಹ ನೀಡುತ್ತದೆ. ಆದರೆ ಕೆಲವರು ತೆರಿಗೆ ಉಳಿಸಲು ಕೆಲವರು ನಕಲಿ ಬಾಡಿಗೆ ರಸೀದಿಗಳನ್ನು ಸಲ್ಲಿಸುತ್ತಿದ್ದಾರೆ. ನೀವೂ ಈ ರೀತಿ ಮಾಡಲು ಯೋಚಿಸುತ್ತಿದ್ದರೆ ಅದನ್ನು ಬಿಟ್ಟು ಬಿಡಿ. ಏಕೆಂದರೆ ಆದಾಯ ತೆರಿಗೆ ಇಲಾಖೆ ನಿಮ್ಮ ಸುಳ್ಳನ್ನು ಪತ್ತೆಹಚ್ಚಬಹುದು ಎಚ್ಚರ!

ಕಳೆದ ಹಲವು ವರ್ಷಗಳಿಂದ ಸಂಬಳ ಪಡೆಯುವ ಉದ್ಯೋಗಿಗಳು ತೆರಿಗೆ ಉಳಿಸಿಲು ನಕಲಿ ದಾಖಲೆಗಳನ್ನು ಪ್ರಸ್ತುತ ಪಡಿಸುತ್ತಿರುವುದನ್ನು ಆದಾಯ ತೆರಿಗೆ ಇಲಾಖೆಯು ಗಮನಿಸಿದೆ. ಅದಕ್ಕಾಗಿ ಇದೀಗ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ಕಳೆದ ವರ್ಷದಿಂದ ಆದಾಯ ತೆರಿಗೆ ಇಲಾಖೆಯು ನಕಲಿ ಬಾಡಿಗೆ ರಸೀದಿಗಳನ್ನು ಸಲ್ಲಿಸಿ ತೆರಿಗೆ ವಿನಾಯಿತಿ ಪಡೆಯುವವರಿಗೆ ನೋಟಿಸ್ (ಐಟಿ ನೋಟಿಸ್) ಕಳುಹಿಸಲು ಪ್ರಾರಂಭಿಸಿದೆ.

ಆದಾಯ ತೆರಿಗೆ ಇಲಾಖೆಗೆ ಹೇಗೆ ತಿಳಿಯುತ್ತದೆ?

ನಾವೀಗ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ಯುಗದಲ್ಲಿದ್ದೇವೆ. ಆದಾಯ ತೆರಿಗೆ ಇಲಾಖೆಯು ನಕಲಿ ಬಾಡಿಗೆ ರಸೀದಿಗಳನ್ನು ಪತ್ತೆ ಹಚ್ಚಲು AI ಅನ್ನು ಬಳಸುತ್ತಿದೆ. ಅದು AIS ಫಾರ್ಮ್ ಮತ್ತು ಫಾರ್ಮ್-26AS ಗಳನ್ನು ಫಾರ್ಮ್-16 ನೊಂದಿಗೆ ಹೊಂದಿಸಿ ನೋಡುತ್ತದೆ. ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಈ ನಮೂನೆಗಳಲ್ಲಿ ದಾಖಲಿಸಲಾಗುತ್ತದೆ. ಇದರಿಂದ ತೆರಿಗೆದಾರರು ಬಾಡಿಗೆ ರಶೀದಿಯ ಮೂಲಕ ಮನೆ ಬಾಡಿಗೆ ಭತ್ಯೆಯನ್ನು ಕ್ಲೈಮ್ ಮಾಡಿಕೊಂಡಾಗ, ಆದಾಯ ತೆರಿಗೆ ಇಲಾಖೆಯು ಈ ನಮೂನೆಗಳೊಂದಿಗೆ ಅವರು ಮಾಡಿದ ಕ್ಲೈಮ್‌ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವು ಕಂಡು ಬಂದರೆ ಆಗ ಇಲಾಖೆಯು ಎಚ್ಚೆತ್ತುಕೊಳ್ಳುತ್ತದೆ.

ಪತ್ತೆಹಚ್ಚಲು ಪ್ಯಾನ್ ಸಂಖ್ಯೆ ಬಳಕೆ

ಉದ್ಯೋಗಿಗಳು ಕಂಪನಿಯಿಂದ ಎಚ್‌ಆರ್‌ಎ ಪಡೆಯುತ್ತಿದ್ದರೆ ಮಾತ್ರ ಎಚ್‌ಆರ್‌ಎ ಕಡಿತವನ್ನು ಪಡೆಯಬಹುದಾಗಿದೆ. ಇದು ಮನೆ ಬಾಡಿಗೆ ಭತ್ಯೆಗೆ ಸಂಬಂಧಿಸಿದ ನಿಯಮವಾಗಿದೆ. ಉದ್ಯೋಗಿಯು ವಾರ್ಷಿಕ 1 ಲಕ್ಷಕ್ಕಿಂತ ಹೆಚ್ಚು ಬಾಡಿಗೆಯನ್ನು ಪಾವತಿಸಿದರೆ, ಆಗ ಅವರು ತಮ್ಮ ಮನೆ ಮಾಲಿಕರ ಪ್ಯಾನ್ ಸಂಖ್ಯೆಯನ್ನು ಸಹ ಒದಗಿಸಬೇಕಾಗುತ್ತದೆ. ಅದನ್ನು ಆದಾಯ ತೆರಿಗೆ ಇಲಾಖೆಯು ನಿಮ್ಮ HRA ಅಡಿಯಲ್ಲಿ ಕ್ಲೈಮ್ ಮಾಡಲಾದ ಮೊತ್ತವನ್ನು ನಿಮ್ಮ ಮನೆ ಮಾಲೀಕರ PAN ಸಂಖ್ಯೆಗೆ ಕಳುಹಿಸಿದ ಮೊತ್ತದೊಂದಿಗೆ ಹೋಲಿಸಿ ನೋಡುತ್ತದೆ. ಒಂದುವೇಳೆ ಎರಡರ ನಡುವೆ ವ್ಯತ್ಯಾಸ ಕಂಡುಬಂದರೆ ಆಗ ಐಟಿ ಇಲಾಖೆಯಿಂದ ನಿಮಗೆ ನೋಟಿಸ್ ಕಳುಹಿಸಲಾಗುತ್ತದೆ.

ನಿಮ್ಮ ಕಂಪನಿಯು ಎಚ್‌ಆರ್‌ಎ ನೀಡುತ್ತಿದ್ದು ಮತ್ತು ನೀವು 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಬಾಡಿಗೆಯನ್ನು ನೀಡುತ್ತಿದ್ದರೆ ಆಗ ನೀವು ನಿಮ್ಮ ಮನೆ ಮಾಲೀಕರ ಪ್ಯಾನ್ ಅನ್ನು ಒದಗಿಸಬೇಕಾಗಿಲ್ಲ. ಅಂದರೆ 1 ಲಕ್ಷದವರೆಗೆ ಪ್ಯಾನ್‌ ಸಂಖ್ಯೆ ಇಲ್ಲದೇ ನೀವು ಎಚ್‌ಆರ್‌ಎ ಕ್ಲೈಮ್ ಮಾಡಬಹುದು. ಇದನ್ನು ಐಟಿ ಇಲಾಖೆಯು ಪರಿಶೀಲಿಸುವುದಿಲ್ಲ.

ಬಾಡಿಗೆಯನ್ನು ನಗದು ರೂಪದಲ್ಲಿ ಪಾವತಿಸುತ್ತಿದ್ದರೆ?

ತೆರಿಗೆ ಉಳಿಸುವ ವಿಷಯ ಬಂದಾಗಲೆಲ್ಲಾ, ಮನಸ್ಸಿಗೆ ಬರುವ ಮೊದಲ ಆಲೋಚನೆ ಎಂದರೆ ನೀವು ನಗದು ವ್ಯವಹಾರಗಳನ್ನು ಮಾಡುತ್ತಿದ್ದರೆ ಆಗ ಏನಾಗುವುದು? ಅಂತಹ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಇಲಾಖೆಯು ಅವರ ಉತ್ತರವನ್ನು ಕೇಳಿ ಮನೆ ಮಾಲೀಕರಿಗೆ ನೋಟಿಸ್ ಕಳುಹಿಸಬಹುದು. ಮನೆ ಮಾಲೀಕರು ಸತ್ಯವನ್ನು ಹೇಳಿದರೆ ಆಗ ತೆರಿಗೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ಆಗ ವಂಚನೆಯ ಆರೋಪ ಸಹ ಕೇಳಿಬರಬಹುದು. ನಕಲಿ ಬಾಡಿಗೆ ರಸೀದಿಗಳನ್ನು ನೀಡುವುದನ್ನು ತಪ್ಪಿಸುವುದು ಉತ್ತಮವಾಗಿದೆ.

ಎಚ್‌ಆರ್‌ಎ ನಿಯಮವನ್ನು ಜನರು ಏಕೆ ಉಲ್ಲಂಘಿಸುತ್ತಾರೆ?

ಎಚ್‌ಆರ್‌ಎಗೆ ಸಂಬಂಧಿಸಲ್ಪಟ್ಟ ವಂಚನೆಗೆ ಬಹು ದೊಡ್ಡ ಕಾರಣವೆಂದರೆ, ಅದರ ಮೂಲಕ ಸಾಕಷ್ಟು ತೆರಿಗೆಯನ್ನು ಉಳಿಸಬಹುದಾಗಿದೆ. ಉದಾಹರಣೆಗೆ ನೀವು ತಿಂಗಳಿಗೆ 20,000 ರೂ. ದಂತೆ ವರ್ಷಕ್ಕೆ 2.40 ಲಕ್ಷ ರೂ.ಗೆ ನಿಮ್ಮ ಮನೆಯ ಬಾಡಿಗೆಯನ್ನು ತೋರಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ನೀವು ಕಂಪನಿಯಿಂದ ಕನಿಷ್ಠ 2.40 ಲಕ್ಷ ರೂ.ಗಳ ಎಚ್‌ಆರ್‌ಎ ಪಡೆಯುತ್ತಿದ್ದರೆ ಈ ಮೊತ್ತಕ್ಕೆ ನೇರವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ನೀವು ಕಡಿಮೆ ಪಾವತಿಸುತ್ತಿದ್ದರೆ ಆಗ ಅದಕ್ಕೆ ನೀವು ಸಂಪೂರ್ಣ ಕ್ಲೈಮ್‌ ಪಡೆದುಕೊಳ್ಳಲಾಗುವುದಿಲ್ಲ. ಹಾಗಾಗಿ ನಕಲಿ ಬಾಡಿಗೆ ರಶೀದಿ ನೀಡಿ ತೆರಿಗೆ ಉಳಿಸಬಹುದು ಎಂಬ ಹಲವರ ಆಲೋಚನೆ ತಪ್ಪಾಗಿದೆ. ಇದೀಗ ಆದಾಯ ತೆರಿಗೆ ಇಲಾಖೆಯು ಇಂತಹ ವಂಚನೆಗಳನ್ನು ಪತ್ತೆಹಚ್ಚಿ ಅವರಿಗೆ ನೋಟಿಸ್ ಕಳುಹಿಸುತ್ತಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ